For Quick Alerts
ALLOW NOTIFICATIONS  
For Daily Alerts

ಅಡುಗೆಮನೆಯಲ್ಲಿ ಘಮ್ಮೆನ್ನುವ ಮೊಟ್ಟೆ ಮಸಾಲ ರೆಸಿಪಿ

By Manu
|

ಇಂದು ಶುಕ್ರವಾರ. ನಾಳೆ ನಾಡಿದ್ದು ರಜಾ, ಕೋಳಿ ಮಜಾ! ಆದರೆ ಇಂದಿನ ಮಜಾವನ್ನು ಕೋಳಿಯಿಂದ ಬೇಡ, ಕೋಳಿಮೊಟ್ಟೆಯೊಡನೆ ಆಚರಿಸೋಣ. ಏಕೆಂದರೆ ಕೋಳಿ ಪದಾರ್ಥ ಮಾಡಲು ಹೆಚ್ಚಿನ ಸಮಯ ಬೇಕು. ಹೋಟೆಲಿನಿಂದ ತರುವುದು ಆರೋಗ್ಯಕರವಲ್ಲ. ಹಾಗಿದ್ದಾಗ ಮೊಟ್ಟೆಯ ಮಸಾಲೆ ಫ್ರೈ ಮಾಡಿದರೆ ಕೋಳಿಮಾಂಸಕ್ಕಿಂತಲೂ ರುಚಿಕರವಾದ ಖಾದ್ಯವನ್ನು ಸವಿಯಬಹುದು. ಇದಕ್ಕಾಗಿ ಹೆಚ್ಚು ಅಲೆಯುವುದೂ ಅಗತ್ಯವಿಲ್ಲ. ಮನೆಯಲ್ಲಿಯೇ ಇರುವ ಸುಲಭ ಸಾಮಾಗ್ರಿಗಳಿಂದ ಇದನ್ನು ತಯಾರಿಸಬಹುದು.

ಈ ಖಾದ್ಯದ ಉತ್ತಮ ಗುಣವೆಂದರೆ ಇದನ್ನು ಊಟಕ್ಕೂ ಮೊದಲು ಸ್ಟಾರ್ಟರ್ ಆಗಿ ಬಡಿಸಬಹುದು ಅಥವಾ ಅನ್ನ, ಚಪಾತಿಯೊಡನೆ ಸೇವಿಸುವ ಮುಖ್ಯ ಖಾದ್ಯದ ರೂಪದಲ್ಲಿಯೂ ಬಡಿಸಬಹುದು. ಇದರೊಂದಿಗೆ ಇತರ ಪಾನೀಯಗಳೂ ಚೆನ್ನಾಗಿ ಒಪ್ಪುತ್ತವೆ. ಇದರ ರುಚಿ ಕಂಡವರು ಇದನ್ನು ಬರೆಯ ವಾರಾಂತ್ಯಕ್ಕೆ ಮಾತ್ರವಲ್ಲ, ವಾರದ ಎಲ್ಲಾ ದಿನವೂ ತಯಾರಿಸಿ ತಿನ್ನಲು ಮನಸ್ಸು ಮಾಡಬಹುದು. ಇದು ಆರೋಗ್ಯಕರವೂ, ಹಾಗೂ ಕಡಿಮೆ ಸಮಯದಲ್ಲಿ ತಯಾರಿಸುವಂತಹದ್ದೂ ಆಗಿರುವ ಕಾರಣ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಇಷ್ಟಪಡುವ ಪದಾರ್ಥವಾಗಿದೆ. ಬನ್ನಿ ಇದನ್ನು ತಯಾರಿಸುವ ಬಗೆಯನ್ನು ಕಲಿಯೋಣ: ಸರಳ ತಯಾರಿಕೆಯ ಹರಿಕಾರ-ಮೊಟ್ಟೆ ಮಸಾಲ ರೆಸಿಪಿ!

*ಪ್ರಮಾಣ: ನಾಲ್ವರಿಗೆ ಒಂದು ಹೊತ್ತಿಗಾಗಿ
*ಸಿದ್ದತಾ ಸಮಯ: ಹದಿನೈದು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು

Special Masala Egg Fry Recipe

ಅಗತ್ಯವಿರುವ ಸಾಮಾಗ್ರಿಗಳು:
*ಮೊಟ್ಟೆ (ಬೇಯಿಸಿದ್ದು) - 4 (ಚಿಕ್ಕದಾಗಿ ತುಂಡರಿಸಿದ್ದು)
*ಈರುಳ್ಳಿ - 1 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಟೊಮೇಟೊ - 1 ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಈರುಳ್ಳಿ ದಂಟು (Spring onions) - 1 ಕಪ್
*ಹಸಿಮೆಣಸು - 5 ರಿಂದ 6
*ಕೆಂಪು ಮೆಣಸಿನ ಪುಡಿ (ಬ್ಯಾಡಗಿ) - 1/2 ಚಿಕ್ಕ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಒಂದು ಚಿಕ್ಕ ಚಮಚ)
*ಜೀರಿಗೆ ಪುಡಿ- 1/2 ಚಿಕ್ಕ ಚಮಚ
*ಕೊತ್ತೊಂಬರಿ ಪುಡಿ - 1/2 ಚಿಕ್ಕ ಚಮಚ
*ಬೆಳ್ಳುಳ್ಳಿ - 4 ರಿಂದ 5 ಎಸಳು (ಭಾರತದ ಬೆಳ್ಳುಳ್ಳಿ, ಚೀನಾದ ಬೆಳ್ಳುಳ್ಳಿ ಬೇಡ)
*ಉಪ್ಪು - ರುಚಿಗನುಸಾರ
*ಎಣ್ಣೆ : ಅಗತ್ಯಕ್ಕೆ ತಕ್ಕಂತೆ
*ಕೊತ್ತಂಬರಿ ಸೊಪ್ಪು: ಅರ್ಧ ಕಟ್ಟು ಹೊಸ ರುಚಿಯಲ್ಲಿ 6 ಬಗೆಯ ಮೊಟ್ಟೆಯ ರೆಸಿಪಿ

ತಯಾರಿಕಾ ವಿಧಾನ:
1) ಮಿಕ್ಸಿಯ ದೊಡ್ಡ ಜಾರ್‌ನಲ್ಲಿ ಟೊಮೇಟೊ, ಬೆಳ್ಳುಳ್ಳಿ ಮತ್ತು ಕೊಂಚವೇ ನೀರು ಹಾಕಿ ಅರೆದು ನುಣ್ಣಗಾಗಿಸಿ.
2) ಒಂದು ದಪ್ಪತಳದ ಪಾತ್ರೆಯನ್ನು ಮಧ್ಯಮ ಉರಿಯ ಮೇಲಿರಿಸಿ ಕೊಂಚ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಈರುಳ್ಳಿ, ಹಸಿಮೆಣಸು ಹಾಕಿ ಈರುಳ್ಳಿ ಕೊಂಚ ಕಂದು ಬಣ್ಣ ಬರುವವರೆಗೆ ಹುರಿಯಿರಿ.
3) ಇದಕ್ಕೆ ಅರೆದ ಟೊಮೇಟೊ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಬಿಡದೇ ತಿರುವುತ್ತಾ ಇರಿ. ತಳ ಹಿಡಿಯಲು ಆಸ್ಪದ ನೀಡಬಾರದು. ತಳ ಕೊಂಚ ಹಿಡಿದರೂ ರುಚಿ ಕಹಿಯಾಗಿಬಿಡುತ್ತದೆ.
4) ಇನ್ನು ಇದಕ್ಕೆ ಜೀರಿಗೆ ಪುಡಿ, ಕೆಂಪುಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ ಸೌಟು ಆಡಿಸಿ. ಸುಮಾರು ಅರ್ಧ ನಿಮಿಷದ ಬಳಿಕ ಮೊಟ್ಟೆಯ ತುಂಡುಗಳನ್ನು ಹಾಕಿ ಸತತವಾಗಿ ತಿರುವುತ್ತಿರಿ.
5) ಮೊಟ್ಟೆಯ ಕತ್ತರಿಸಿದ ಅಂಚುಗಳು ಕೊಂಚವೇ ಕಂದು ಬಣ್ಣ ಬರುತ್ತಿದ್ದಂತೆ ಕೆಳಗಿಸಿಳಿ. ಬಳಿಕ ಕೊತ್ತಂಬರಿ ಸೊಪ್ಪಿನ ದಂಟು ನಿವಾರಿಸಿ ಎಲೆಗಳಿಂದ ಅಲಂಕರಿಸಿ. ಅನ್ನ, ಚಪಾತಿ, ರೊಟ್ಟಿ ಮೊದಲಾದವುಗಳೊಂದಿಗೆ ಬಡಿಸಿ.ಈ ರೆಸಿಪಿ ಹೇಗಿನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ. ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಬಳಸಿ.

English summary

Special Masala Egg Fry Recipe

Thank god it's Friday! Yes, it's that time of the week to sit back and relax for the weekend! Well, most of us want to just do nothing and enjoy some really good food. So, are you planning on spending your weekend with your loved ones? Let's take a look at how to prepare the egg masala fry.
Story first published: Friday, May 20, 2016, 13:00 [IST]
X
Desktop Bottom Promotion