For Quick Alerts
ALLOW NOTIFICATIONS  
For Daily Alerts

ಸರಳವಾದ ಫಿಶ್ ಬಿರಿಯಾನಿ ರೆಸಿಪಿ

|

ಫಿಶ್ ಬಿರಿಯಾನಿಯನ್ನು ಮಾಡರ್ನ್ ಅಡುಗೆ ಸ್ಟೈಲ್ ಗಿಂತ ಅಂದರೆ ಅನ್ನವನ್ನು ಕುಕ್ಕರ್ ಬದಲು ಪಾತ್ರೆಯಲ್ಲಿ ಬೇಯಿಸಿ ಮಾಡಿದರೆ ಹೆಚ್ಚು ರುಚಿಯಾಗಿರುತ್ತದೆ.

ಇಲ್ಲಿ ನೀಡಿರುವ ಫಿಶ್ ಬಿರಿಯಾನಿ ಸರಳವಾಗಿರುವುದರಿಂದ ಹೊಸದಾಗಿ ಅಡುಗೆ ಕಲಿಯುತ್ತಿರುವವರು ಟ್ರೈ ಮಾಡಿದರೂ ಬಿರಿಯಾನಿ ಅಚ್ಚುಕಟ್ಟಾಗಿ, ರುಚಿಯಾಗಿ ಬರುತ್ತದೆ. ಸರಳವಾದ ಫಿಶ್ ಬಿರಿಯಾನಿ ರೆಸಿಪಿಗಾಗಿ ಹುಡುಕುತ್ತಿದ್ದರೆ ಇದರತ್ತ ಕಣ್ಣಾಡಿಸಿ.

Simple Fish Biriyani

ಬೇಕಾಗುವ ಸಾಮಾಗ್ರಿಗಳು
ಮೀನು ಅರ್ಧ ಕೆಜಿ (ಮುಳ್ಳಿಲ್ಲದ ಮೀನಿನ ತುಂಡುಗಳು)
ಈರುಳ್ಳಿ 6
ಟೊಮೆಟೊ 4
ಬೆಳ್ಳುಳ್ಳಿ ಪೇಸ್ಟ್ 2 ಚಮಚ
ಶುಂಠಿ ಪೇಸ್ಟ್ 2 ಚಮಚ
ಹಸಿ ಮೆಣಸಿನಕಾಯಿ ಪೇಸ್ಟ್ 1 ಚಮಚ
ಗರಂ ಮಸಾಲ ಪುಡಿ 1 ಚಮಚ
ಮೊಸರು 4 ಚಮಚ
ಗರಂ ಮಸಾಲ 1 ಚಮಚ
ಕೊತ್ತಂಬರಿ ಸೊಪ್ಪು 1 ಕಟ್ಟು
ಪುದೀನಾ ಅರ್ಧ ಕಪ್
ತುಪ್ಪ ಅರ್ಧ ಕಪ್
ನಿಂಬೆ ರಸ 4 ಚಮಚ

ಮೀನಿಗೆ ಮಿಕ್ಸ್ ಮಾಡಲು
ಅರಿಶಿಣ 1 ಚಮಚ
ಖಾರದ ಪುಡಿ 2 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ
ಜೀರಿಗೆ ಪುಡಿ ಅರ್ಧ ಚಮಚ

ಅನ್ನ ಮಾಡಲು
ಬಾಸುಮತಿ ಅಕ್ಕಿ ಎರಡೂವರೆ ಕಪ್
ಚಿಟಿಕೆಯಷ್ಟು ಅರಿಶಿಣ
ಸ್ವಲ್ಪ ಚಕ್ಕೆ
ಲವಂಗ 3-4
ತುಪ್ಪ 1 ಚಮಚ

ತಯಾರಿಸುವ ವಿಧಾನ:
* ಮೀನಿನ ತುಂಡುಗಳನ್ನು ಚೆನ್ನಾಗಿ ತೊಳೆದು ಅರಿಶಿಣ ಪುಡಿ, ಖಾರದ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ , ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ 1 ಗಂಟೆ ಕಾಲ ಇಡಿ.

* ನಂತರ ಬಾಣಲೆಗೆ ತುಪ್ಪ ಹಾಕಿ ಅದರಲ್ಲಿ ಮೀನಿನ ತುಂಡುಗಳನ್ನು ಹಾಕಿ ಫ್ರೈ ಮಾಡಿ.

* ಈಗ ಅದೇ ಬಾಣಲಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ.

* ನಂತರ ಟೊಮೆಟೊ , ಗರಂ ಮಸಾಲ, ರುಚಿಗೆ ತಕ್ಕ ಉಪ್ಪು, ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ, ಈಗ ಮೊಸರು ಸೇರಿಸಿ, ಫ್ರೈ ಮಾಡಿದ ಮೀನನ್ನು ಆ ಮಸಾಲೆಗೆ ಹಾಕಿ, 2 ನಿಮಿಷ ಫ್ರೈ ಮಾಡಿ ಉರಿಯಿಂದ ಇಳಿಸಿ ಬದಿಯಲ್ಲಿಡಿ.

* ಈಗ ಒಂದು ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಉಪ್ಪು, ಅರಿಶಿಣ ಪುಡಿ, ಚಕ್ಕೆ, ಲವಂಗ, ತುಪ್ಪ ಹಾಕಿ ನೀರನ್ನು ಕುದಿಸಿ. ಈಗ ಅಕ್ಕಿಯನ್ನು ತೊಳೆದು ಬೇಯಿಸಿ. ತುಂಬಾ ಬೇಯಿಸಬೇಡಿ. ಅನ್ನ ಮುಕ್ಕಾಲು ಭಾಗದಷ್ಟು ಬೆಂದ ಮೇಲೆ ಅದರ ನೀರು ಬಸಿಯಿರಿ.

* ಈಗ ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿ , ಅದರಲ್ಲಿ ಬೇಯಿಸಿದ ಮೀನಿನ ಮಸಾಲ 2 ಚಮಚ ಹಾಕಿ ಹರಡಿ, ಅದರ ಮೇಲೆ ಸ್ವಲ್ಪ ಅನ್ನ ಹಾಕಿ ಮತ್ತೆ ನಿಂಬೆ ರಸ ಹಿಂಡಿ, ಮೀನಿನ ಮಸಾಲೆ ಹಾಕಿ ನಂತರ ಅನ್ನ ಹಾಕಿ, ಈ ರೀತಿ ಅನ್ನವನ್ನು ಪದರ-ಪದರವಾಗಿ ಹಾಕಿ ಅದರ ಮೇಲೆ ಉಳಿದ ಮಸಾಲೆಯನ್ನು ಮೇಲ್ಭಾಗದಲ್ಲಿ ಹಾಕಿ, ನಿಂಬೆ ರಸ ಹಿಂಡಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ ಮತ್ತೆ 5 ನಿಮಿಷ ಬೇಯಿಸಿ.

* ನಂತ ಉರಿಯಿಂದ ಇಳಿಸಿ, ಬಿರಿಯಾನಿಯನ್ನು ಒಮ್ಮೆ ಮಿಕ್ಸ್ ಮಾಡಿದರೆ ಫಿಶ್ ಬಿರಯಾನಿ ರೆಡಿ. ಇದನ್ನು ಮೊಸರು ಬಜ್ಜಿಯ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

English summary

Simple Fish Biriyani | Variety Of Fish Recipe

This is a Fish Biriyani rice recipe that is made with a blend of spices. We think prepare fish biriyani little tough than chicken biriyani. But this Biriyani you can prepare easily, wanna to try?
X
Desktop Bottom Promotion