For Quick Alerts
ALLOW NOTIFICATIONS  
For Daily Alerts

ರುಚಿಕರವಾದ ಸಿಗಡಿ ಫ್ರೈಡ್ ರೈಸ್ ರೆಸಿಪಿ

|

ಸೀಫುಡ್ (ಸಮುದ್ರ ಜೀವಿಗಳನ್ನು) ಇಷ್ಟಪಡದವರು ಯಾರಿದ್ದಾರೆ ಹೇಳಿ? ಮಾಂಸಾಹಾರಿಗಳು ಹೆಚ್ಚಾಗಿ ಇಷ್ಟಪಡುವ ಆಹಾರ ಸೀಫುಡ್‌ನಿಂದ ತಯಾರು ಮಾಡಲಾದ ಭಕ್ಷ್ಯಗಳಾಗಿವೆ. ಮೀನಿನಿಂದ ಹಿಡಿದು ಸಿಗಡಿಗಳವರೆಗೆ ವಿಧ ವಿಧದ ಸಮುದ್ರ ಜೀವಿಗಳ ತಿನಿಸುಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ನಿಮಗೆ ಸೇರಿಸಿಕೊಳ್ಳಬಹುದು.

ಸೀಫುಡ್ ರುಚಿಕಾರಕ ಮಾತ್ರವಲ್ಲದೆ ಆರೋಗ್ಯಕಾರಿಯೂ ಹೌದು. ಉದಾಹರಣೆಗೆ ಸಿಗಡಿಗಳು ಪ್ರೋಟೀನ್‌ ಭರಿತವಾಗಿದ್ದು ಕಡಿಮೆ ಕೊಬ್ಬಿನಂಶದಿಂದ ಕೂಡಿದೆ ಇವುಗಳಲ್ಲಿರುವ ಕ್ಯಾಲೋರಿಗಳು ಆಹಾರವನ್ನು ಆರೋಗ್ಯವಂತವಾಗಿ ಮಾಡಿವೆ. ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ ಹೃದಯಾಘಾತ ಮತ್ತು ಹೃದಯಸ್ತಂಭನ ಮುಂತಾದ ಹೃದಯ ರೋಗಗಳನ್ನು ದೂರವಿಡಲು ಸಹಕಾರಿಯಾಗಿದೆ.

Shrimps Fried Rice Recipe

ಅನ್ನದೊಂದಿಗೆ ಇದು ತುಂಬಾ ಸುಲಭವಾಗಿ ಹೊಂದಿಕೆಯಾಗಿ ಊಟವನ್ನು ಪೋಷಕಾಂಶಭರಿತವಾಗಿಸುತ್ತದೆ. ಸಿಗಡಿ ಮತ್ತು ಅನ್ನವನ್ನು ಜೊತೆಯಾಗಿ ಇಷ್ಟಪಡುವವರಿಗಾಗಿ ಇದೊಂದು ವಿಶೇಷ ರೆಸಿಪಿಯಾಗಿದೆ. ಇದೊಂದು ಭಾರತೀಯ ಶೈಲಿಯ ಫ್ರೈಡ್‌ರೈಸ್ ಆಗಿದ್ದು ಮಾಡಲು ತುಂಬಾ ಸರಳವಾಗಿದೆ.

ಇನ್ನಷ್ಟು ಲೇಖನಗಳಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕ್ರಿಸ್ ಮಸ್ ಸ್ಪೆಷಲ್: ಪ್ರವನ್ ಆ್ಯಂಬೊಟ್ ಟಿಕ್

ಈ ರೈಸ್ ರೆಸಿಪಿಯ ಒಂದು ವಿಶಿಷ್ಟ ಗುಣವೆಂದರೆ ಇಲ್ಲಿ ಸಿಗಡಿಗಳನ್ನು ಫ್ರೈ ಮಾಡಿ ಅನ್ನದೊಂದಿಗೆ ಮಿಶ್ರಗೊಳಿಸಲಾಗುತ್ತದೆ. ಹಾಗಿದ್ದರೆ ಇನ್ನೇಕೆ ತಡ, ಈ ರೆಸಿಪಿಯನ್ನು ಟ್ರೈ ಮಾಡಿ.

ಪ್ರಮಾಣ: 3-4 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆ ಮಾಡುವ ಸಮಯ: 20 ನಿಮಿಷಗಳು

ಸಾಮಾಗ್ರಿಗಳು
1.ಬೇಯಿಸಿದ ಅನ್ನ 2 (ಕಪ್‌ಗಳು) ತಣಿದದ್ದು
2.ಸಿಗಡಿ - 250 ಗ್ರಾಂ (ಸಣ್ಣ ಗಾತ್ರದ್ದು)
3.ಕ್ಯಾರೇಟ್ - 3-4 ತುಂಡರಿಸಿದ್ದು
4.ಬೀನ್ಸ್ - 6-7 ಕತ್ತರಿಸಿದ್ದು
5.ಕ್ಯಾಪ್ಸಿಕಂ- 1 (ಕತ್ತರಿಸಿದ್ದು)
6.ಸ್ಪ್ರಿಂಗ್ ಆನಿಯನ್ - 2 (ತುಂಡರಿಸಿದ್ದು)
7.ಕಾಳುಮೆಣಸು - 4-5 ಹುಡಿಮಾಡಿದ್ದು
8.ಉಪ್ಪು - ರುಚಿಗೆ ತಕ್ಕಷ್ಟು
9.ಎಣ್ಣೆ - 1ಟೇಸ್ಪೂನ್

ಮಾಡುವ ವಿಧಾನ
1. ಸಿಗಡಿಗಳನ್ನು ಚೆನ್ನಾಗಿ ತೊಳೆದು ಅದನ್ನು ಉಪ್ಪು ಮತ್ತು ಲಿಂಬೆ ರಸದೊಂದಿಗೆ ಮಿಶ್ರ ಮಾಡಿ 25-30 ನಿಮಿಷಗಳವರೆಗೆ ಹಾಗೆಯೇ ಇಡಿ.

2. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಸಣ್ಣ ಉರಿಯಲ್ಲಿ ಸಿಗಡಿಗಳನ್ನು 7-8 ನಿಮಿಷಗಳವರೆಗೆ ಹುರಿದುಕೊಳ್ಳಿ. ಆಗಾಗ್ಗೆ ಇದನ್ನು ತಿರುಗಿಸುತ್ತಿರಿ.

3. ಹುರಿದ ಸಿಗಡಿಗಳ ಎಣ್ಣೆ ತೆಗೆದು ಒಂದು ಬದಿಯಲ್ಲಿರಿಸಿ.

4. ಅದೇ ಬಾಣಲೆಯಲ್ಲಿ, ಕತ್ತರಿಸಿದ ಸ್ಪ್ರಿಂಗ್ ಆನಿಯನ್ ಹಾಕಿ ಹೆಚ್ಚಿನ ಉರಿಯಲ್ಲಿ ಬೇಯಿಸಿಕೊಳ್ಳಿ.

5. ಉಳಿದ ತರಕಾರಿಗಳಾದ ಅಂದರೆ ಕ್ಯಾರೇಟ್, ಬೀನ್ಸ್, ಕ್ಯಾಪ್ಸಿಕಂ ಅನ್ನು ಹಾಕಿ ಮಿಶ್ರ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ 4-5 ನಿಮಿಷಗಳವರೆಗೆ ಬೇಯಿಸಿಕೊಳ್ಳಿ.

6. ಉಪ್ಪು ಮತ್ತು ಕಾಳುಮೆಣಸನ್ನು ಪ್ಯಾನ್‌ಗೆ ಹಾಕಿ. ನಂತರ ಹುರಿದ ಸಿಗಡಿ ಮತ್ತು ಟೋಸ್ ಸೇರಿಸಿ.

7. ಬೇಯಿಸಿ ಸ್ವಲ್ಪ ಸಮಯದ ನಂತರ, ಬೇಯಿಸಿದ ಅನ್ನ ಮತ್ತು ಪ್ಯಾನ್‌ನಲ್ಲಿರುವ ಎಲ್ಲಾ ಸಾಮಾಗ್ರಿಗಳನ್ನು ಸರಿಯಾಗಿ ಮಿಶ್ರ ಮಾಡಿಕೊಳ್ಳಿ.

8. ಸ್ವಲ್ಪ ಹೊತ್ತು ಇದನ್ನೆಲ್ಲಾ ಬೇಯಿಸಿ ನಂತರ ಗ್ಯಾಸ್ ಆಫ್ ಮಾಡಿ.

ಸಿಗಡಿ ಫ್ರೈಡ್ ರೈಸ್ ಸವಿಯಲು ಸಿದ್ಧವಾಗಿದೆ. ಬಿಸಿ ಬಿಸಿಯಾಗಿ ಅದನ್ನು ಬಡಿಸಿ.

Read more about: sea food ಸೀ ಫುಡ್
English summary

Shrimps Fried Rice Recipe

There are many non-vegetarians who are a big fan of seafood. There are many seafood dishes that can tempt you and make you salivate. From fish to shrimps, there are many seafood that you can include in your diet.
X
Desktop Bottom Promotion