ಬಾಳೆ ಎಲೆಯಲ್ಲಿ ಸುತ್ತಿ ಮಾಡುವ ಮೀನಿನ ಅಡುಗೆ

By:
Subscribe to Boldsky

ಆವಿಯಲ್ಲಿ ಬೇಯಿಸಿ ತಯಾರಿಸಿದ ಮೀನಿನ ಅಡುಗೆಯ ರುಚಿ ನೋಡಿದ್ದೀರಾ? ಈ ಮೀನಿನ ಅಡುಗೆ ಡ್ರೈ ರೀತಿಯಲ್ಲಿದ್ದು ತುಂಬಾ ರುಚಿಕರವಾಗಿರುತ್ತದೆ. ಫ್ರೈ ಮಾಡಿ ಮೀನನ್ನು ತಿನ್ನುವುದಕ್ಕಿಂತ ಈ ರೀತಿಯಲ್ಲಿ ತಿನ್ನುವುದು ತುಂಬಾ ಆರೋಗ್ಯಕರ.

ಈ ಅಡುಗೆಯನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

Recipe Of Fish Rapped In Banana Leaf

ಬೇಕಾಗುವ ಸಾಮಾಗ್ರಿಗಳು:

* ಮೀನಿನ ತುಂಡುಗಳು 8-10 ( ದೊಡ್ಡ ತುಂಡುಗಳು)
* ದೊಡ್ಡ ಸಾಸಿವೆ 2 ಚಮಚ (ಬಿಸಿ ನೀರಿನಲ್ಲಿ ನೆನೆ ಹಾಕಿರಬೇಕು)
* ಚಿಕ್ಕ ಸಾಸಿವೆ 1 ಚಮಚ (ಬಿಸಿ ನೀರಿನಲ್ಲಿ ನೆನೆ ಹಾಕಿರಬೇಕು)
* ತುರಿದ ತೆಂಗಿನಕಾಯಿ ಅರ್ಧ ಕಪ್
* ಅರಿಶಿಣ ಪುಡಿ 1 ಚಮಚ
* ಹಸಿ ಮೆಣಸಿನ ಕಾಯಿ 3-4
* ಸಕ್ಕರೆ 1 ಚಮಚ
* ನಿಂಬೆ ರಸ 1 ಚಮಚ
* ಸಾಸೆವೆಯೆಣ್ಣೆ 1 ಚಮಚ
* ಬಾಳೆ ಎಲೆ

ತಯಾರಿಸುವ ವಿಧಾನ:

* ಮೀನಿನ ತುಂಡುಗಳನ್ನು ಚೆನ್ನಾಗಿ ತೊಳೆದಿಡಬೇಕು.

* ಈಗ ತೆಂಗಿನ ಕಾಯಿ, ಸಾಸಿವೆ, ಉಪ್ಪು, ಹಸಿ ಮೆಣಸಿನಕಾಯಿ ಅದಕ್ಕೆ ಅದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣನೆ ರುಬ್ಬಬೇಕು.

* ನಂತರ ಸಕ್ಕರೆ, ನಿಂಬೆ ರಸ ಮತ್ತು ಅರಿಶಿಣ ಪುಡಿ ಮತ್ತೊಮ್ಮೆ ರುಬ್ಬಬೇಕು.

* ನಂತರ ರುಬ್ಬಿದ ಮಿಶ್ರಣವನ್ನು ಒಂದು ಬಟ್ಟಲಿನಲ್ಲಿ ಹಾಕಿ ಮೀನಿನ ತುಡುಗಳನ್ನು ಅದರಲ್ಲಿ ಒಂದೂವರೆ ಗಂಟೆಗಳ ಕಾಲ ಇಡಬೇಕು.

* ನಂತರ ಬಾಳೆ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ಅದನ್ನು 8-10 ತುಂಡುಗಳಾಗಿ ಕತ್ತರಿಸಿ.

* ಬಾಳೆ ಎಲೆಗೆ ಸ್ವಲ್ಪ ಎಣ್ಣೆ ಹಚ್ಚಿ ನಂತರ ಮಸಾಲೆ ಜೊತೆ ಮಿಶ್ರಣ ಮಾಡಿದ್ದ ಮೀನಿನ ತುಂಡು ತೆಗೆದು ಎಲೆ ಮೇಲೆ ಹಾಕಿ ಮಡಚಬೇಕು. ಈ ರೀತಿ ಉಳಿದ ತುಂಡುಗಳನ್ನು ಬಾಳೆ ಎಲೆಯಲ್ಲಿ ಹಾಕಿ ಮಡಚಬೇಕು.

* ನಂತರ ಒಂದು ಪಾತ್ರೆಯಲ್ಲಿ ಅರ್ಧದಷ್ಟು ನೀರು ಹಾಕಿ ಕುದಿಸಬಕು. ನಂತರ ಅದರ ಮೇಲೆ ಒಂದು ತಟ್ಟೆ ಇಡಬೇಕು, ತಟ್ಟೆ ನೀರಿನಲ್ಲಿ ಮುಳುಗಬಾರದು. ಆ ತಟ್ಟೆಯ ಮೇಲೆ ಬಾಳೆ ಎಲೆಯಲ್ಲಿ ಮಡಚಿದ ಮೀನಿನ ತುಂಡುಗಳನ್ನು ಇಟ್ಟು ಪಾತ್ರೆಯ ಬಾಯಿಯನ್ನು ಮುಚ್ಚಬೇಕು. ಮೀನು ಆವಿಯಲ್ಲಿ ಬೇಯಬೇಕು. ಹೀಗೆ ಬೇಯಿಸಿದ ಮೀನನ್ನು ಬಿಸಿ ಅನ್ನದ ಜೊತೆ ತಿಂದರೆ ತುಂಬಾ ರುಚಿಯಾಗಿರುತ್ತದೆ.

Story first published: Friday, November 23, 2012, 12:04 [IST]
English summary

Recipe Of Fish Rapped In Banana Leaf | Variety Of Fish Recipe | ಬಾಳೆಯಲ್ಲಿ ಸುತ್ತಿ ತಯಾರಿಸು ಮೀನಿನ ಅಡುಗೆ | ಅನೇಕ ಬಗೆಯ ಮೀನಿನ ರೆಸಿಪಿ

This is a special Bengali dish that is made with fish. The dish is steamed and wrapped in banana leaf. The best aroma of comes from the mustard sauce that is used to prepare this recipe. When you unwrap the fish from the banana leaf, you will get the strong aroma of mustard.
Please Wait while comments are loading...
Subscribe Newsletter