For Quick Alerts
ALLOW NOTIFICATIONS  
For Daily Alerts

ಬ್ರೆಡ್ ಸ್ಯಾಂಡ್‌ವಿಚ್ ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

|

ರಂಜಾನ್ ಮಾಸದಲ್ಲಿ ಇಫ್ತಾರ್ ಸಮಯ ಹತ್ತಿರಾದಂತೆ ಎಲ್ಲಾ ಮನೆಗಳಲ್ಲಿ ವಿವಿಧ ಭಕ್ಷ್ಯಗಳು ತಯಾರಾಗಿರುತ್ತವೆ. ಇಡಿಯ ದಿನವಿದ್ದ ಹಸಿವೆ ಊಟದ ಪ್ರಮಾಣವನ್ನು ಕೊಂಚ ಹೆಚ್ಚಾಗಿಯೇ ಕಬಳಿಸಲು ಕಾರಣವಾಗುತ್ತದೆ. ಅದರಲ್ಲೂ ಫಫ್ಸ್, ಬ್ರೆಡ್ ಸ್ಯಾಂಡ್‌ವಿಚ್, ಸಮೋಸಾ ಮೊದಲಾದ ತಿಂಡಿಗಳನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಮಕ್ಕಳಂತೂ ತಿಂಡಿಗಳಲ್ಲಿ ಮೊದಲು ಕೈ ಹಾಕುವುದೇ ಸ್ಯಾಂಡ್‌ವಿಚ್‌ಗಳಿಗೆ.

ಮಾರುಕಟ್ಟೆಯಿಂದ ತರುವ ಸ್ಯಾಂಡ್‌ವಿಚ್‌ನಲ್ಲಿ ಯಾವ ಪದಾರ್ಥಗಳನ್ನು ಉಪಯೋಗಿಸಿರುತ್ತಾರೋ ಎಂಬ ಅನುಮಾನವಿರುವುದರಿಂದ ಸ್ವಾದಿಷ್ಟವಾದ ಸ್ಯಾಂಡ್‌ವಿಚ್ ಮನೆಯಲ್ಲೇ ಮಾಡಿಕೊಳ್ಳುವುದು ಉತ್ತಮ. ಇಂದು ಬ್ರೆಡ್ ಪುಡಿ (bread crumbs) ಉಪಯೋಗಿಸಿ ಮಾಡುವ ಸ್ಯಾಂಡ್‌ವಿಚ್ ಮಾಡುವುದು ಹೇಗೆ ಎಂಬುದನ್ನು ಕಲಿಯೋಣ.

ಇದಕ್ಕೆ ಹೂರಣದ ಆಯ್ಕೆಯಲ್ಲಿ ವೈವಿಧ್ಯತೆ ಇರುವುದರಿಂದ ಪ್ರತಿ ಬಾರಿ ಮಾಡುವಾಗಲೂ ಕೋಳಿಮಾಂಸ, ಮೀನು, ಮೊಟ್ಟೆ, ಬೇಯಿಸಿದ ಮೊಟ್ಟೆ ಮುಂತಾದ ಬೇರೆಬೇರೆ ಸಾಮಾಗ್ರಿಗಳನ್ನು ಬಳಸುವ ಮೂಲಕ ಭಿನ್ನವಾದ ರುಚಿಯನ್ನು ಪಡೆಯಬಹುದು. ಇಂದಿನ ಆಯ್ಕೆಯಲ್ಲಿ ಹುರಿದಿರುವ ಕೊಳಿ ಮಾಂಸದ ತುಂಡುಗಳನ್ನು ಆಯ್ಕೆಮಾಡಿಕೊಳ್ಳಲಾಗಿದೆ. ಇದು ಕ್ಯಾಲೋರಿಗಳಲ್ಲಿ ಕಡಿಮೆ ಇದ್ದರೂ ರುಚಿಯಲ್ಲಿ ಶ್ರೀಮಂತವಾಗಿದೆ. ಜೊತೆಗೆ, ಉಪವಾಸದಿಂದ ಬಳಲಿದ ದೇಹಕ್ಕೆ ಪರಿಪೂರ್ಣವಾದ ಪೋಷಕಾಂಶಗಳನ್ನು ನೀಡುವ ಆಹಾರವಾಗಿದೆ. ಅದರಲ್ಲೂ ಮಕ್ಕಳಂತೂ ಇದನ್ನು ತಿನ್ನಲು ಮುಗಿಬೀಳುತ್ತಾರೆ. ಬನ್ನಿ ಈ ರೆಸಿಪಿ ಮಾಡುವ ವಿಧಾನ ಹೇಗೆ ಎಂಬುದನ್ನು ನೋಡೋಣ.. ರುಚಿಕರವಾದ ಮಂಡಕ್ಕಿ ಬ್ರೆಡ್ ಸ್ಯಾಂಡ್‌ವಿಚ್ ರೆಸಿಪಿ

Ramzan Special: Yummy Breaded Sandwich

ಪ್ರಮಾಣ: ಇಬ್ಬರಿಗೆ ಒಂದು ಹೊತ್ತಿಗಾಗುವಷ್ಟು
ಸಿದ್ಧತಾ ಸಮಯ: ಹದಿನೈದು ನಿಮಿಷಗಳು
ತಯಾರಿಕಾ ಸಮಯ: ಐದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು
*ಕತ್ತರಿಸಿದ ಬ್ರೆಡ್ ತುಂಡುಗಳು - 6 (ಇದರ ಬದಲಿಗೆ ಸ್ಯಾಂಡ್ವಿಚ್ ಬನ್ ಸಹಾ ಉಪಯೋಗಿಸಬಹುದು, ಮೂರು ಬನ್ ಗಳನ್ನು ಅಡ್ಡ ಕತ್ತರಿಸಿಟ್ಟುಕೊಳ್ಳಿ)
*ಮೊಟ್ಟೆ- 1
*ಬ್ರೆಡ್ ಪುಡಿ- 50 ಗ್ರಾಂ

ಹೂರಣಕ್ಕೆ ಅಗತ್ಯವಿರುವ ಸಾಮಾಗ್ರಿಗಳು
*ಚಿಕನ್ ಸಾಸೇಜ್ - 150 ಗ್ರಾಂ
*ಕೋಳಿಯ ಎದೆಯಭಾಗದ ಮಾಂಸ (ಮೂಳೆಯಿಲ್ಲದ್ದು) - 150 ಗ್ರಾಂ
*ಟೊಮೇಟೊ - 1 (ದೊಡ್ಡದ್ದು, ಚಿಕ್ಕದಾದರೆ ಎರಡು ಬಳಸಿ) ಅಡ್ಡಲಾಗಿ ಕತ್ತರಿಸಿ ಬಿಲ್ಲೆಗಳನ್ನಾಗಿಸಿದ್ದು
*ಲೆಟ್ಯೂಸ್ ಎಲೆಗಳು - ಬ್ರೆಡ್ ತುಂಡುಗಳನ್ನು ಆವರಿಸುವಷ್ಟು
*ಮಾಯೋನ್ನೀಸ್ - ಒಂದು ಚಮಚ

ವಿಧಾನ
1) ಚಿಕನ್ ಸಾಸೇಜ್ ಮತ್ತು ಕೋಳಿಮಾಂಸವನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಸುಮಾರು ತೊಂಬತ್ತು ಭಾಗದಷ್ಟು ಗ್ರಿಲ್‌ನಲ್ಲಿ ಹುರಿಯಿರಿ.
2) ಬ್ರೆಡ್ ತುಣುಕು (ಅಥವಾ ಬನ್) ಗಳನ್ನು ಮೇಜಿನ ಮೇಲೆ ಹರಡಿ ಮೇಲೆ ಒಂದು ಚಮಚದಿಂದ ಮಾಯೋನ್ನೀಸ್ ಅನ್ನು ಎಲ್ಲಾ ತುಣುಕುಗಳಿಗೆ ಸವರಿ.
3) ಇದರ ಮೇಲೆ ಕೋಳಿಮಾಂಸ ಮತ್ತು ಸಾಸೇಜ್ ತುಂಡುಗಳನ್ನು ಹರಡಿ.
4) ಇನ್ನು ಈ ಪದರದ ಮೇಲೆ ಟೊಮೇಟೊ ಸ್ಲೈಡ್‌ಗಳನ್ನು ಹರಡಿ ಅದರ ಮೇಲೆ ಇನ್ನೂ ಕೊಂಚ ಕೋಳಿಮಾಂಸ, ಲೆಟ್ಯೂಸ್ ಮತ್ತು ಸಾಸೇಜ್ ತುಂಡುಗಳನ್ನು ಹರಡಿ.
5) ನಿಮ್ಮ ಆಯ್ಕೆಯಂತೆ ಎರಡು ಅಥವಾ ಮೂರು ಪದರಗಳನ್ನು ಮಾಡಿ.
6) ಬಳಿಕ ಇನ್ನೊಂದು ಬ್ರೆಡ್ ತುಣುಕನ್ನು ಇದರ ಮೇಲಿಟ್ಟು ಮೃದುವಾಗಿ ಒತ್ತಿ, ಒತ್ತಡ ಒಳಗಣ ಹೂರಣ ಹೊರಬರದಂತಿರಲಿ.
7) ಮೊಟ್ಟೆಯನ್ನು ಗೊಟಾಯಿಸಿ ಆ ದ್ರವದಲ್ಲಿ ಈ ಇಡಿಯ ತುಣುಕನ್ನು ಮುಳುಗಿಸಿ ಹೊರತೆಗೆಯಿರಿ.
8) ತದನಂತರ ಒಂದು ತಟ್ಟೆಯಲ್ಲಿ ಬ್ರೆಡ್ ತುಣುಕುಗಳನ್ನು ಹರಡಿ, ಇದರ ಮೇಲೆ ಮೊಟ್ಟೆ ಲೇಪಿಸಿದ ಸ್ಯಾಂಡ್‌ವಿಚ್ ಹೊರಳಾಡಿಸಿ ಬ್ರೆಡ್ ತುಣುಕುಗಳು ಹೊರಮೈಗೆ ಅಂಟಿಕೊಳ್ಳುವಂತೆ ಮಾಡಿ. (ಈ ಹಂತದಲ್ಲಿ ಸ್ಯಾಂಡ್‌ವಿಚ್ ಕೈಯಿಂದ ಜಾರಬಾರದು, ಅಗತ್ಯವಿದ್ದರೆ ಎರಡು ಅಗಲದ ಮಗಚುವ ಕೈಗಳ ನಡುವೆ ಇಟ್ಟು ಹೊರಳಾಡಿಸಿ)
9) ಎಲ್ಲಾ ತುಣುಕುಗಳು ತಯಾರಾದ ಮೇಲೆ ಕಾವಲಿಯ ಮೇಲಿಟ್ಟು ಚಿಕ್ಕ ಉರಿಯಲ್ಲಿ ಕೊಂಚ ಹೊತ್ತು ಬಿಸಿಮಾಡಿ. ಕೊಂಚ ಕಂದುಬಣ್ಣ ಬರುತ್ತಿದ್ದಂತೆಯೇ ಕೆಳಗಿಳಿಸಿ.
10) ಬಿಸಿ ಬಿಸಿಯಿದ್ದಂತೆಯೇ ಅತಿಥಿಗಳಿಗೆ ಬಡಿಸಿ.

ಸಲಹೆ
*ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ ತೂಕ ಕಳೆದುಕೊಳ್ಳಲು ವ್ಯಾಯಾಮ ನಡೆಸುತ್ತಿರುವವರೂ ಇದನ್ನು ಸೇವಿಸಬಹುದು. ಆದರೆ ಇದರ ಪ್ರಮಾಣ ಒಂದಕ್ಕಿಂತ ಹೆಚ್ಚಿರದಿರಲಿ.
*ಕಾವಲಿಯಲ್ಲಿ ಹುರಿಯುವ ಬದಲು ಎಣ್ಣೆಯಲ್ಲಿ ಕರಿಯಲೂ ಬಹುದು. ಕರಿಯಬೇಕಾದರೆ ಮೊಟ್ಟೆಯ ಪ್ರಮಾಣವನ್ನು ಹೆಚ್ಚಿಸಬೇಕು ಹಾಗೂ ಮೊಟ್ಟೆಯಲ್ಲಿ ಎರಡು ಅಥವಾ ಮೂರು ಬಾರಿ ಮುಳುಗಿಸಿ ಒಣಗಿಸಿದ ಬಳಿಕ ಹುರಿಯಬೇಕು.

English summary

Ramzan Special: Yummy Breaded Sandwich

Today we are here to share a quick and easy to make Ramzan special recipe: Yummy breaded sandwiches. After an all day long fast your body craves for good food.Check out our ramzan special: Yummy breaded sandwiches recipe and enjoy.
X
Desktop Bottom Promotion