For Quick Alerts
ALLOW NOTIFICATIONS  
For Daily Alerts

ರಂಜಾನ್ ವಿಶೇಷ: ಬೆಣ್ಣೆ ಮಿಶ್ರಿತ ಖೀಮಾ ಮಸಾಲ ರೆಸಿಪಿ

By Super
|

ರಂಜಾನ್ ತಿಂಗಳ ಇಫ್ತಾರ್ ಹೊತ್ತಿನಲ್ಲಿ ರೊಟ್ಟಿಯೊಡನೆ ಸೇವಿಸಲು ಹೆಚ್ಚಿನ ಪೌಷ್ಟಿಕಾಂಶಗಳಿಂದ ಕೂಡಿದ ಖಾದ್ಯದ ಅಗತ್ಯವಿದೆ. ಕುರಿಮಾಂಸದಲ್ಲಿ ಪ್ರೋಟೀನ್ ಮತ್ತು ಇತರ ಪೋಷಕಾಂಶಗಳು ಹೇರಳವಾಗಿದ್ದು ಇದರೊಡನೆ ಮೊಸರು ಮತ್ತು ಬೆಣ್ಣೆ ಕೂಡಿದರಂತೂ ಇಡಿಯ ದಿನದ ಉಪವಾಸದಿಂದ ಬಳಲಿದ ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ದೊರಕುತ್ತದೆ.

ವಿವಿಧ ಮಸಾಲೆಗಳಿಂದ ಹೆಚ್ಚುವ ರುಚಿ ರಂಜಾನ್ ತಿಂಗಳಲ್ಲಿ ತಯಾರಿಸಬಹುದಾದ ವಿಶೇಷ ಖಾದ್ಯಗಳ ಪಟ್ಟಿಯಲ್ಲಿ ಬಟರ್ ಖೀಮಾ ಮಸಾಲವನ್ನೂ ಸೇರಿಸಿದೆ. ಖೀಮಾ ಮಸಾಲಾ ಇಡಿಯ ಭಾರತದಲ್ಲಿ ಒಂದು ಜನಪ್ರಿಯ ಖಾದ್ಯವಾಗಿದ್ದು ಇದರೊಂಗಿದೆ ಸೇರಿಸಿರುವ ಬೆಣ್ಣೆ ಇದಕ್ಕೆ ವಿಶೇಷ ಪಟ್ಟವನ್ನು ನೀಡಿದೆ.

Ramazan Special: Butter Keema Masala

ಇದು ಖಾದ್ಯಕ್ಕೆ ಕ್ರೀಂನ ಸ್ವಾದವನ್ನು ನೀಡುವುದರ ಜೊತೆಗೇ ಮೊಸರಿನ ಕೊಂಚ ಹುಳಿಯಾದ ರುಚಿ ಮಸಾಲೆಗಳ ಖಾರವನ್ನು ಕಡಿಮೆಗೊಳಿಸಿ ನಾಲಿಗೆಗೆ ವಿಶಿಷ್ಟ ರುಚಿಯನ್ನು ನೀಡುತ್ತದೆ. ಇಂದೇ ಈ ವಿಶೇಷ ಖಾದ್ಯವನ್ನು ತಯಾರಿಸಿ, ಅತಿಥಿಗಳ ಜಿಹ್ವಾಚಾಪಲ್ಯವನ್ನು ತಣಿಸಿ.

ಪ್ರಮಾಣ: ಆರು ಜನರಿಗೆ, ಒಂದು ಹೊತ್ತಿಗಾಗಿ
ಸಿದ್ದತಾ ಸಮಯ:
ಹದಿನೈದು ನಿಮಿಷಗಳು
ತಯಾರಿಕಾ ಸಮಯ:
ನಲವತ್ತು ನಿಮಿಷಗಳು ರಂಜಾನ್ ಸ್ಪೆಷಲ್: ಕಾಶ್ಮೀರ ಶೈಲಿಯ ಮಿರ್ಚಿ ಕುರ್ಮಾ!


ಅಗತ್ಯವಿರುವ ಸಾಮಾಗ್ರಿಗಳು:
*ಕುರಿಮಾಂಸದ ಖೀಮಾ : ಒಂದು ಕೇಜಿ (ಇದರ ಬದಲಿಗೆ ಗೋಮಾಂಸವನ್ನೂ ಆಯ್ದುಕೊಳ್ಳಬಹುದು)
*ಬೆಣ್ಣೆ: ಒಂದು ಕಪ್
*ಘನೀಕರಿಸಿದ ಮೊಸರು: ಐನೂರು ಗ್ರಾಂ
*ಹಸಿಶುಂಠಿ-ಬೆಳ್ಳುಳ್ಳಿಯ ಪೇಸ್ಟ್: 3 ಚಿಕ್ಕಚಮಚ
*ಈರುಳ್ಳಿ: 3 (ಮಧ್ಯಮ ಗಾತ್ರದ್ದು)
*ಟೊಮೇಟೊ : 2 (ಮಧ್ಯಮ ಗಾತ್ರದ್ದು)-ಚೆನ್ನಾಗಿ ಹಣ್ಣಾಗಿರಬೇಕು. ಸ್ವಲ್ಪ ಕಾಯಿ ಇದ್ದರೂ ಖಾದ್ಯ ಹುಳಿಯಾಗುತ್ತದೆ.
*ಲವಂಗ: 5 ರಿಂದ 7
*ಚೆಕ್ಕೆ: 1-ಇಂಚು
*ಕರಿ ಏಲಕ್ಕಿ: 2 ಇಡಿಯ ಕಾಳು
*ಹಸಿರು ಏಲಕ್ಕಿ: 2 ಇಡಿಯ ಕಾಳು
*ಹಸಿಮೆಣಸು: 6-7
*ದಾಲ್ಚಿನ್ನಿ ಎಲೆಗಳು: 2
*ಉಪ್ಪು: ರುಚಿಗನುಸಾರ
*ಮೆಣಸಿನ ಪುಡಿ: 3 ಚಿಕ್ಕ ಚಮಚ (ಬ್ಯಾಡಗಿ ಮೆಣಸು ಅತ್ಯುತ್ತಮ, ಇಲ್ಲದಿದ್ದರೆ 4 ಚಮಚ ಕಾಶ್ಮೀರಿ ಚಿಲ್ಲಿ ಪೌಡರ್ ಉಪಯೋಗಿಸಿ)
*ಕೊತ್ತಂಬರಿ ಸೊಪ್ಪು: ಒಂದು ಕಟ್ಟು
*ಎಣ್ಣೆ: ನಾಲ್ಕು ದೊಡ್ಡ ಚಮಚ

ತಯಾರಿಕಾ ವಿಧಾನ:
1) ದಪ್ಪತಳದ ಬಾಣಲೆಯಲ್ಲಿ ಎರಡು ದೊಡ್ಡ ಚಮಚ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಕೊಂಚ ಬಿಸಿಯಾದ ಬಳಿಕ ಲವಂಗ, ಚೆಕ್ಕೆ, ಕರಿ ಮತ್ತು ಹಸಿರು ಏಲಕ್ಕಿ, ದಾಲ್ಚಿನ್ನಿ ಎಲೆ, ಹಸಿಮೆಣಸು ಮತ್ತು ಚಿಕ್ಕದಾಗಿ ಹೆಚ್ಚಿದ್ದ ಈರುಳ್ಳಿಯನ್ನು ಹಾಕಿ ನೀರುಳ್ಳಿ ಕಂದುಬಣ್ಣಬರುವವರೆಗೆ ತಿರುವುತ್ತಾ ಇರಿ.
2) ಈಗ ಹಸಿಶುಂಠಿ-ಬೆಳ್ಳುಳ್ಳಿಯ ಪೇಸ್ಟ್ ಹಾಕಿ ಕೊಂಚ ತಿರುವಿ.
3) ಈಗ ಒಂದು ಕಪ್ ನೀರು ಹಾಕಿ ಚೆನ್ನಾಗಿ ಕಲಕಿ ಕುದಿಯಲು ಪ್ರಾರಂಭವಾದ ಒಲೆಯಿಂದ ಇಳಿಸಿ ಬದಿಯಲ್ಲಿಡಿ.
4) ಇನ್ನೊಂದು ಪಾತ್ರೆಯಲ್ಲಿ ಉಳಿದ ಎರಡು ಚಮಚ ಎಣ್ಣೆ ಹಾಕಿ ಚಿಕ್ಕ ಉರಿಯಲ್ಲಿ ಬಿಸಿಮಾಡಿಕೊಳ್ಳಿ
5) ಇದಕ್ಕೆ ಖೀಮಾ ಹಾಕಿ ಆಗಾಗ ತಿರುವುತ್ತಾ ಹುರಿಯಿರಿ. ಸುಮಾರು ಅರ್ಧದಷ್ಟು ಬೆಂದಿದೆ ಎನ್ನುವಾಗ ಸಣ್ಣದಾಗಿ ಹೆಚ್ಚಿದ ಟೊಮೇಟೊ ಹಾಕಿ ತಿರುವಿರಿ
6) ಬಳಿಕ ಬೆಣ್ಣೆ ಹಾಕಿ ಇನ್ನೂ ಕೊಂಚ ಕಾಲ ಹುರಿಯಿರಿ


7) ಸುಮಾರು ತೊಂಬತ್ತು ಭಾಗ ಬೆಂದಿದೆ ಎಂದಾಗ ಮೊದಲು ಒಲೆಯಿಂದ ಇಳಿಸಿದ್ದ ಮಸಾಲೆಯಲ್ಲಿ ಹಾಕಿ ಮಿಶ್ರಣ ಮಾಡಿ.
8) ಮಿಶ್ರಣವನ್ನು ಮತ್ತೆ ಒಲೆಯ ಮೇಲಿಟ್ಟು ಕೊಂಚ ಬಿಸಿಯಾಗುತ್ತಿದ್ದಂತೆಯೇ ಮೆಣಸಿನ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ತಿರುವಿ. (ಮೆಣಸು ತಳಹತ್ತಲು ಬಿಡಬಾರದು, ಬಿಟ್ಟರೆ ರುಚಿ ಕಹಿಯಾಗುತ್ತದೆ)
9) ನಂತರ ಮೊಸರು ಹಾಕಿ ಉರಿಯನ್ನು ಕನಿಷ್ಟಕ್ಕಿಳಿಸಿ. ಈ ಪಾತ್ರೆಯ ಮುಚ್ಚಳ ಕೊಂಚವೇ ತೆರೆದಿರುವಂತಿಟ್ಟು ಕೊಂಚ ಕಾಲ ಹಾಗೇ ಬಿಡಿ (ಚಿಕ್ಕ ತೂತು ಇರುವ ಗಾಜಿನ ಮುಚ್ಚಳ ಇರುವ ಪಾತ್ರೆ ಇದಕ್ಕೆ ಅತ್ಯುತ್ತಮವಾಗಿದೆ)
10) ಖೀಮಾ ಪೂರ್ಣವಾಗಿ ಬೆಂದಿದೆ ಎಂದು ಖಾತ್ರಿಪಡಿಸಿಕೊಂಡ ಬಳಿಕ ಚಿಕ್ಕದಾಗಿ ಹೆಚ್ಚಿದ ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
11) ಬಿಸಿಯಿದ್ದಂತೆಯೇ ನಾನ್, ರೊಟ್ಟಿ, ಚಪಾತಿ, ಕುಲ್ಛಾ, ಪರೋಟಾಗಳೊಂದಿಗೆ ಸೇವಿಸಲು ಅತಿಥಿಗಳಿಗೆ ಬಡಿಸಿ.

ಸಲಹೆ:
1) ಎಣ್ಣೆ ಆಯ್ಕೆ ಮಾಡುವುದಾದರೆ ಆಲಿವ್ ಎಣ್ಣೆ ಆರೋಗ್ಯದ ದೃಷ್ಟಿಯಿಂದ ಉತ್ತಮ
2) ತೂಕ ಕಳೆದುಕೊಳ್ಳುವ ಕಾರ್ಯಕ್ರಮದಲ್ಲಿರುವವರಿಗೆ ಈ ಖಾದ್ಯ ತಕ್ಕುದಲ್ಲ. ಆದರೆ ರುಚಿಗಾಗಿ ಸ್ವಲ್ಪ ಸೇವಿಸಬಹುದು.
3) ಒಂದು ವೇಳೆ ಅತಿಥಿಗಳ ಸಂಖ್ಯೆ ಹೆಚ್ಚಿದ್ದು ಖೀಮಾ ಕಡಿಮೆ ಇದ್ದರೆ ಕಡಿಮೆಯಿದ್ದಷ್ಟು ಪ್ರಮಾಣದ ಬಟಾಣಿಕಾಳುಗಳನ್ನು ಬೇಯಿಸಿ ಸೇರಿಸಬಹುದು, ರುಚಿಯಲ್ಲೇನೂ ವ್ಯತ್ಯಾಸ ಬರುವುದಿಲ್ಲ. ಆದರೆ ಅಂತಿಮ ಹಂತದಲ್ಲಿ ಸೇರಿಸಿ.

English summary

Ramazan Special: Butter Keema Masala

Butter keema masala recipe is one of the most nutritious recipes as its main ingredients are butter, yoghurt and mutton. Yogurt is rich in calcium and other nutrients, while meat contains all the essential proteins. It is a complete diet and tasty as well. Have a look at yummy butter keema recipe.
X
Desktop Bottom Promotion