For Quick Alerts
ALLOW NOTIFICATIONS  
For Daily Alerts

ಸುಲಭವಾಗಿ ತಯಾರಿಸಿ ಆಂಧ್ರ ಶೈಲಿಯ ಮೊಟ್ಟೆ ಕರಿ ರೆಸಿಪಿ

|

ಆಂಧ್ರ ರೆಸಿಪಿ ತಮ್ಮ ಖಾರ ಮತ್ತು ಮಸಾಲೆಗಳಿಗೆ ಭಾರೀ ಜನಪ್ರಿಯವಾಗಿವೆ. ಒಂದು ವೇಳೆ ನೀವು ಮಸಾಲೆ, ಖಾರ ಪ್ರಿಯರಾಗಿದ್ದಲ್ಲಿ, ಈ ತೆಲುಗು ಶೈಲಿಯ ರೆಸಿಪಿಗಳನ್ನು ಖಂಡಿತ ಇಷ್ಟಪಡುತ್ತೀರಿ. ಆಂಧ್ರ ರೆಸಿಪಿಗಳು ತಮ್ಮದೇ ಆದ ಅನುಪಮವಾದ ಸ್ವಾದಕ್ಕೆ ಹೆಸರಾಗಿವೆ. ಇಂದು ನಾವು ವಿಶೇಷವಾದ ಆಂಧ್ರ ಶೈಲಿಯ ಮೊಟ್ಟೆ ಕರಿಯನ್ನು ಮಾಡುವುದನ್ನು ತಿಳಿಸಿಕೊಡುತ್ತೇವೆ. ಇದನ್ನು ಸ್ಥಳೀಯವಾಗಿ ಕೋಡಿ ಗುಡ್ಡು ಪುಲುಸು ಎಂದು ತೆಲುಗಿನಲ್ಲಿ ಕರೆಯುತ್ತಾರೆ.

ಈ ರೆಸಿಪಿಯು ಮಾಡುವುದು ಸುಲಭ ಮತ್ತು ಇದನ್ನು ಶೀಘ್ರವಾಗಿ ಮಾಡಬಹುದು. ಕೆಲಸ ಮಾಡುತ್ತ ಒಂಟಿಯಾಗಿರುವವರಿಗೆ ಈ ಖಾದ್ಯವು ಹೇಳಿ ಮಾಡಿಸಿದ ಆಯ್ಕೆಯಾಗಿರುತ್ತದೆ. ಇದಕ್ಕೆ ಬೇಕಾಗಿರುವ ಮುಖ್ಯ ಪದಾರ್ಥದಲ್ಲಿ ಹುಣಸೆಕಾಯಿ ಸಹ ಸೇರಿರುತ್ತದೆ. ಇದು ಮೊಟ್ಟೆ ಕರ್ರಿಗೆ ಒಂದು ಬಗೆಯ ಹುಳಿಯ ಸ್ವಾದವನ್ನು ನೀಡುತ್ತದೆ. ಇದರ ಜೊತೆಗೆ ಮಸಾಲೆಗಳು ಇರುತ್ತವೆ. ಬನ್ನಿ ತಡಮಾಡದೆ ಕೋಡಿ ಗುಡ್ಡು ಪುಲುಸು ಮಾಡುವುದನ್ನು ತಿಳಿದುಕೊಳ್ಳೋಣ. ಮನಸ್ಸಿಗೆ ಮುದವನ್ನು ನೀಡುವ ಸ್ವಾದಿಷ್ಟಕರ ಮೊಟ್ಟೆಯ ರೆಸಿಪಿ!

Quick & Easy Andhra Style Egg Curry Recipe

*ಪ್ರಮಾಣ: 3 ಜನರಿಗೆ ಬಡಿಸಬಹುದು.
*ತಯಾರಿಕೆಗೆ ತಗುಲುವ ಸಮಯ: 15 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 20 ನಿಮಿಷಗಳು

ಪದಾರ್ಥಗಳು
*ಬೇಯಿಸಿದ ಮೊಟ್ಟೆ- 3
*ಈರುಳ್ಳಿ - 1 (ಕತ್ತರಿಸಿದಂತಹುದು)
*ಬೆಳ್ಳುಳ್ಳಿ - 5-6 ತುಂಡು (ಕತ್ತರಿಸಿದಂತಹುದು)
*ಹಸಿ ಮೆಣಸಿನ ಕಾಯಿ- 3-4 (ಕತ್ತರಿಸಿದಂತಹುದು)
*ಟೊಮೇಟೊ - 2 (ಕತ್ತರಿಸಿದಂತಹುದು)


*ಅರಿಶಿಣ ಪುಡಿ - 1 ಟೀ . ಚಮಚ
*ಖಾರದ ಪುಡಿ - 2 ಟೀ. ಚಮಚ
*ಕೊತ್ತೊಂಬರಿ ಪುಡಿ - 1 ಟೀ. ಚಮಚ
*ಹುಣಸೆ - 1/2 ಕಪ್
*ಬೆಲ್ಲ - 1 ಟೀ. ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ಸಾಸಿವೆ - 1 ಟೀ.ಚಮಚ
*ಜೀರಿಗೆ - 1 ಟೀ. ಚಮಚ
*ಕರಿ ಬೇವು - 1 ಕಟ್ಟು
*ಎಣ್ಣೆ - 2 ಟೀ. ಚಮಚ
*ಕೊತ್ತಂಬರಿ ಸೊಪ್ಪು - 2 ಟೀ. ಚಮಚ (ಕತ್ತರಿಸಿದಂತಹುದು)

ವಿಧಾನ
1. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ ಮತ್ತು ಅದರಲ್ಲಿ ಸಾಸಿವೆ ಬೀಜಗಳನ್ನು ,ಜೀರಿಗೆ ಮತ್ತು ಕರಿಬೇವು ಸೊಪ್ಪನ್ನು ಹಾಕಿ. ಕೆಲವು ಸೆಕೆಂಡ್‍ಗಳ ಕಾಲ ಉರಿಯಿರಿ.
2. ಇದಕ್ಕೆ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಕತ್ತರಿಸಿದ ಈರುಳ್ಳಿಯನ್ನು ಹಾಕಿ 4-5 ನಿಮಿಷಗಳ ಕಾಲ ಉರಿಯಿರಿ.
3. ನಂತರ ಇದಕ್ಕೆ ಹಸಿ ಮೆಣಸು, ಅರಿಶಿಣ ಪುಡಿ, ಖಾರದ ಪುಡಿ ಮತ್ತು ಧನಿಯಾ ಪುಡಿಗಳನ್ನು ಹಾಕಿ. 2-3 ನಿಮಿಷಗಳ ಕಾಲ ಬೇಯಿಸಿ.
4. ನಂತರ ಇದಕ್ಕೆ ಕತ್ತರಿಸಿದ ಟೊಮೇಟೊ ಮತ್ತು ಹುಣಸೆಯನ್ನು ಹಾಕಿ. 3-4 ನಿಮಿಷಗಳ ಕಾಲ ಬೇಯಿಸಿ.
5. ಆಮೇಲೆ ಬೆಲ್ಲ ಮತ್ತು ಉಪ್ಪನ್ನು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ, ಮತ್ತೆ 4-5 ನಿಮಿಷಗಳ ಕಾಲ ಬೇಯಿಸಿ.


6. ಈಗ ಇದಕ್ಕೆ ಬೇಯಿಸಿದ ಮೊಟ್ಟೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
7. ಇದೆಲ್ಲ ಮುಗಿದ ಮೇಲೆ, ಉರಿಯನ್ನು ಆರಿಸಿ. ಕರಿಯ ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಈಗ ನಿಮ್ಮ ಮುಂದೆ ಕೋಡಿ ಗುಡ್ಡು ಪುಲುಸು ಅಥವಾ ಆಂಧ್ರ ಮೊಟ್ಟೆ ಕರಿ ಸಿದ್ಧವಾಗಿದೆ. ಇದನ್ನು ಅನ್ನದ ಜೊತೆಗೆ ಬಡಿಸಿ, ಕುಟುಂಬದವರ ಜೊತೆಗೆ ಸೇವಿಸುತ್ತ ಆನಂದಿಸಿ.

ಪೋಷಕಾಂಶಗಳ ಪ್ರಮಾಣ
*ಮೊಟ್ಟೆ ಕರಿಯು ಇತರೆ ಮಾಂಸಾಹಾರಿ ಖಾದ್ಯಗಳಿಗೆ ಹೋಲಿಸಿದರೆ, ಹೆಚ್ಚಿನ ಆರೋಗ್ಯಕಾರಿಯಾಗಿರುತ್ತದೆ. ಈ ಖಾದ್ಯದಲ್ಲಿ ಆದಷ್ಟು ಕಡಿಮೆ ಕ್ಯಾಲೊರಿಗಳು ಇರುತ್ತವೆ ಮತ್ತು ಒಳ್ಳೆಯ ಪ್ರೋಟೀನ್‍ಗಳು ಇರುತ್ತವೆ. ಇದಕ್ಕೆ ಆದಷ್ಟು ಕಡಿಮೆ ಎಣ್ಣೆಯನ್ನು ಹಾಕಿ, ಅಧಿಕ ಕ್ಯಾಲೋರಿಗಳನ್ನು ನಿಮ್ಮದಾಗಿಸಿಕೊಳ್ಳಿ.

ಸಲಹೆಗಳು
ಆದಷ್ಟು ಬೆಂದ ಮೊಟ್ಟೆಗಳನ್ನು ಕತ್ತರಿಸಿ ಈ ಗ್ರೇವಿಗೆ ಹಾಕಿ. ಇದರಿಂದ ಮೊಟ್ಟೆಯು ಸಹ ಗ್ರೇವಿಯನ್ನು ಹೀರಿಕೊಳ್ಳಲು ಸಹಕಾರಿಯಾಗಿ ಗ್ರೇವಿ ಮತ್ತಷ್ಟು ರುಚಿಕರವಾಗಿರುತ್ತದೆ.

English summary

Quick & Easy Andhra Style Egg Curry Recipe

Andhra recipes are one of a kind. Andhra recipes have a reputation for being super hot and spicy. So if you like your food to be spicy and rich, then you should certainly try some. Today we have a special Andhra style egg curry which is locally known as kodi guddu pulusu.
Story first published: Friday, December 12, 2014, 9:11 [IST]
X
Desktop Bottom Promotion