For Quick Alerts
ALLOW NOTIFICATIONS  
For Daily Alerts

ಸುಲಭವಾಗಿ ತಯಾರಿಸಿ ಗರಿಗರಿಯಾದ ಮೀನಿನ ಫ್ರೈ!

By Super
|

ಮೀನಿನ ಫ್ರೈ (ಫಿಶ್ ಫ್ರೈ) ಎಂಬುದು ಭಾರತದ ಅತ್ಯಂತ ಜನಪ್ರಿಯವಾದ ಖಾದ್ಯವಾಗಿದೆ. ಇದನ್ನು ಮಸಾಲೆಗಳ ಮಿಶ್ರಣದ ಜೊತೆಗೆ ತಯಾರಿಸಲಾಗುತ್ತದೆ. ಫಿಶ್ ಫ್ರೈ ರೆಸಿಪಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಭಾರತದ ಈ ಬಗೆಯ ಫಿಶ್ ಫ್ರೈ ಗರಿ ಗರಿಯಾಗಿರುತ್ತದೆ ಮತ್ತು ರುಚಿಕರವಾಗಿರುತ್ತದೆ. ಫಿಶ್ ಫ್ರೈ ಸಾಮಾನ್ಯವಾಗಿ ಮೆಣಸು, ಕೆಂಪು ಮೆಣಸಿನ ಕಾಯಿಪುಡಿ ಮತ್ತು ಅರಿಶಿಣದ ಜೊತೆಗೆ ಮಾಡುವ ಫಿಶ್ ಫ್ರೈ ಮಸಾಲದಿಂದ ತಯಾರಿಸಲಾಗುತ್ತದೆ!

ಹೌದು, ಫಿಶ್ ಫ್ರೈ ಮಾಡಲು ಈ ಎಲ್ಲಾ ಅಂಶಗಳು ಬೇಕಾಗುತ್ತದೆ. ಈ ವಾರಂತ್ಯದಲಿ ಮನೆಯಲ್ಲಿ ಏನು ಮಾಡುವುದು ಎಂಬ ಆಲೋಚನೆಯಲ್ಲಿ ನೀವಿದ್ದೀರಾ? ಹಾಗಾದರೆ ಏಕೆ ನೀವು ಈ ಫಿಶ್ ಪ್ರೈಯನ್ನು ಪ್ರಯತ್ನಿಸಿ ನೋಡಬಾರದು. ಈ ಫಿಶ್ ಫ್ರೈ ನಿಮ್ಮ ನಾಲಿಗೆಯಲ್ಲಿ ನೀರೂರಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಬನ್ನಿ ಇನ್ನು ತಡ ಮಾಡದೆ ಇದನ್ನು ತಯಾರಿಸುವ ವಿಧಾನವನ್ನು ತಿಳಿದುಕೊಳ್ಳೋಣ. ಮೀನು ಪ್ರಿಯರಿಗಾಗಿ 8 ಬಗೆಯ ಮೀನಿನ ರೆಸಿಪಿ

Quick And Crispy Fish Fry Recipe

ಪ್ರಮಾಣ- 2 ಮಂದಿಗೆ ಸಾಕಾಗುವಷ್ಟು
ತಯಾರಿಕೆಗೆ ತಗುಲುವ ಸಮಯ - 30 ನಿಮಿಷಗಳು
ಅಡುಗೆ ಮಾಡಲು ತಗುಲುವ ಸಮಯ - 10-15 ನಿಮಿಷಗಳು

ಅಗತ್ಯವಾದ ವಸ್ತುಗಳು
*ಮೀನು - 1/2 ಕೆಜಿ
*ಕೆಂಪು ಮೆಣಸಿನಕಾಯಿ ಪುಡಿ - 1 1/2 ಟೇ.ಚಮಚ
*ಅರಿಶಿಣ ಪುಡಿ- 1 1/2 ಟೇ.ಚಮಚ
*ಮೆಣಸು ಪುಡಿ- 1 1/2 ಟೇ.ಚಮಚ
*ಶುಂಠಿ - 5-6 ತುಂಡು
*ಬೆಳ್ಳುಳ್ಳಿ- 1/2
*ರುಚಿಗೆ ತಕ್ಕಷ್ಟು ಉಪ್ಪು
*ತೆಂಗಿನ ಎಣ್ಣೆ ಸುಲಭವಾಗಿ ತಯಾರಿಸಬಹುದಾದ ಪೆಪ್ಪರ್ ಚಿಕನ್ ಡ್ರೈ ರೆಸಿಪಿ

ತಯಾರಿಸುವ ವಿಧಾನ
1. ಕೆಂಪು ಮೆಣಸಿನಕಾಯಿ ಪುಡಿ, ಅರಿಶಿಣ ಪುಡಿ, ಮೆಣಸು ಪುಡಿ, ಉಪ್ಪು, ಶುಂಠಿ ಮತ್ತು ಬೆಳ್ಳುಳ್ಳಿಗಳ ಜೊತೆಗೆ 2-3 ಟೀ, ಚಮಚ ತೆಂಗಿನಎಣ್ಣೆ ಜೊತೆಗೆ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
2. ಇದನ್ನು ಪೇಸ್ಟ್ ರೀತಿ ಬರುವಂತೆ ರುಬ್ಬಿಕೊಳ್ಳಿ.
3. ಈಗ, ಈ ಮಸಾಲೆ ಪೇಸ್ಟನ್ನು ಮೀನಿನ ಮೇಲೆ ಲೇಪಿಸಿ, ಹಾಗು 30 ನಿಮಿಷಗಳ ಕಾಲ ಇದು ನೆನೆಯಲು ಬಿಡಿ.
4. ನಂತರ, ಒಂದು ಬಾಣಲೆಯನ್ನು ತೆಗೆದುಕೊಂಡು, ಅದರ ಮೇಲೆ ತೆಂಗಿನ ಎಣ್ಣೆಯನ್ನು ಹಾಕಿ ಕಾಯಿಸಿ. ಇದರ ಮೇಲೆ ಮಸಾಲೆಯಲ್ಲಿ ನೆಂದ ಮೀನನ್ನು ಹಾಕಿ, ಡೀಪ್ ಫ್ರೈ ಮಾಡಿ. ಮೀನು ಹೊಂಬಣ್ಣಕ್ಕೆ ತಿರುಗುವವರೆಗು ಇದನ್ನು ಬೇಯಿಸಿ. ಈ ರುಚಿಕರವಾದ ಮೀನಿನ ಖಾದ್ಯವನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ.

ಪೋಷಕಾಂಶದ ಪ್ರಮಾಣ
*ಈ ಮೀನಿನ ಫ್ರೈನ ರೆಸಿಪಿಯನ್ನು ಅತ್ಯಂತ ಸುಲಭವಾಗಿ ತಯಾರಿಸಿಕೊಳ್ಳಬಹುದು. ಆದರೂ ನೀವು ಡಯಟ್ ಮಾಡುವವರಾಗಿದ್ದಲ್ಲಿ, ಇದು ನಿಮಗೆ ಸೂಕ್ತವಲ್ಲ ಎಂಬುದು ನೆನಪಿರಲಿ. ಇದನ್ನು ತೆಂಗಿನ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಲಾಗುತ್ತದೆ! ಆದರೆ ಮೀನಿನಲ್ಲಿ ಕಡಿಮೆ ಕೊಬ್ಬಿನ ಅಂಶ ಹಾಗು ಅಧಿಕ ಗುಣ ಮಟ್ಟದ ಪ್ರೋಟೀನ್‍ಗಳು ಇರುತ್ತವೆ ಎಂಬುದನ್ನು ಮರೆಯಬಾರದು.
*ಮೀನನ್ನು ಸೇವಿಸುವುದರಿಂದ ನಿಮ್ಮ ಹೃದಯದ ಆರೋಗ್ಯ ಸುಧಾರಿಸುತ್ತದೆ ಎಂದು ಅಧ್ಯಯನಗಳು ಸಾಭೀತು ಮಾಡಿವೆ. ಒಂದು ವೇಳೆ ನೀವು ಮೀನು ಸೇವಿಸುವವರಾಗಿದ್ದಲ್ಲಿ, ನಿಮಗೆ ಹೃದ್ರೋಗಗಳು ಭಾದಿಸುವ ಸಂಭವ ತೀರಾ ಕಡಿಮೆಯಿರುತ್ತದೆ.

#ಸಲಹೆಗಳು
*ಒಂದು ವೇಳೆ ನಿಮಗೆ ಸಮಯಾವಕಾಶವಿದ್ದಲ್ಲಿ, ಮೀನನ್ನು ಮಸಾಲೆಯಲ್ಲಿ ತುಂಬಾ ಹೊತ್ತು ನೆನೆ ಹಾಕಿ. ಮೀನು ಚೆನ್ನಾಗಿ ಮಸಾಲೆಯನ್ನು ಹಿಡಿಯಲು ಅವಕಾಶ ಮಾಡಿಕೊಡಿ. ಇದರಿಂದ ಮೀನಿನ ರುಚಿಯು ದ್ವಿಗುಣವಾಗುತ್ತದೆ ಮತ್ತು ಮೀನಿನ ಮಸಾಲೆಯ ಸ್ವಾದವು ಹೆಚ್ಚಾಗುತ್ತದೆ. ಈ ಮೀನು ಇನ್ನೂ ಸ್ವಲ್ಪ ಖಾರವಾಗಿರಬೇಕು ಎಂದು ನಿಮಗೆ ಅನಿಸಿದಲ್ಲಿ, ಇದಕ್ಕೆ ಹಸಿ ಮೆಣಸಿನ ಕಾಯಿಗಳನ್ನು ಮಸಾಲೆಯ ಜೊತೆಗೆ ಮಿಕ್ಸರಿನಲ್ಲಿ ಹಾಕಿಕೊಳ್ಳಿ.
*ಒಂದು ವೇಳೆ ನೀವು ಆರೋಗ್ಯದ ಕುರಿತು ಕಾಳಜಿಯಿರುವವರಾಗಿದ್ದಲ್ಲಿ, ಎಣ್ಣೆಯನ್ನು ಕಡಿಮೆ ಬಳಸುವವರಾಗಿದ್ದಲ್ಲಿ, ಡೀಪ್ ಫ್ರೈ ಮಾಡುವ ಬದಲಿಗೆ ಹೆಂಚಿನ ಮೇಲೆ ಫ್ರೈ ಮಾಡಿಕೊಳ್ಳಿ. ಕಿಂಗ್ ಮೀನು, ಸಾರ್ಡಿನ್ ಮತ್ತು ಮ್ಯಾಕ್ರೆಲ್ ಮೀನುಗಳು ಈ ಬಗೆಯ ಫ್ರೈಗೆ ಹೇಳಿ ಮಾಡಿಸಿದ ಮೀನುಗಳಾಗಿವೆ.

English summary

Quick And Crispy Fish Fry Recipe

Fish fry is a popular dish in India, and it is made with mixing spices in the right ratio. Recipe for fish fry is simple and can be made easily at home. This fish fry in Indian style will blow you away as it is crispy and tasty
X
Desktop Bottom Promotion