For Quick Alerts
ALLOW NOTIFICATIONS  
For Daily Alerts

ವಾವ್! ಮಂಗಳೂರು ಶೈಲಿಯ ರುಚಿಯಾದ ಸಿಗಡಿ ಫ್ರೈ

|

ಸಿಗಡಿಯನ್ನು ತುಪ್ಪದಲ್ಲಿ ಹುರಿದು ತಯಾರಿಸುವ ಖಾದ್ಯ ಮಂಗಳೂರಿನಲ್ಲಿ ಅತೀ ಹೆಚ್ಚು ಜನಪ್ರಿಯ. ಕರಾವಳಿಯ ಪ್ರತಿಯೊಂದು ಮಾಂಸದೂಟ ವಿಭಿನ್ನ ರುಚಿ, ಪರಿಮಳ, ಸ್ವಾದಿಷ್ಟತೆಯನ್ನು ಹೊಂದಿ ಪಾಕ ಪ್ರಪಂಚದಲ್ಲೇ ಅದ್ಭುತ ಎನಿಸಿದೆ. ಸರಳ ಮಾಂಸಹಾರಿ ಅಡುಗೆಯಲ್ಲೂ ಕಂಡುಬರುವ ರುಚಿ ಮಂಗಳೂರಿನ ಮಸಾಲೆಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರುಚಿಕರವಾದ ತೆಂಗಿನಕಾಯಿ ರೆಸಿಪಿಗಳು

ಸಿಗಡಿ ಫ್ರೈ ಚಿಕನ್ ಫ್ರೈಗಿಂತಲೂ ಹೆಚ್ಚು ಜನಪ್ರಿಯ ಖಾದ್ಯವಾಗಿದ್ದು ಎಲ್ಲೆ ಮನ ಗೆಲ್ಲುತ್ತದೆ. ಇದರ ರುಚಿ ಪ್ರತ್ಯೇಕವಾಗಿದ್ದು ಅನ್ನ ಚಪಾತಿ ರೋಟಿ ಹೀಗೆ ಪ್ರತಿಯೊಂದಕ್ಕೂ ಸೈಡ್‌ಡಿಶ್ ಆಗಿ ಮ್ಯಾಚ್ ಆಗುತ್ತದೆ. ಇದನ್ನು ಸುಲಭವಾಗಿ ತಯಾರಿಸಬಹುದು. ಈ ಸಾಂಪ್ರದಾಯಿಕ ಸಿಗಡಿ ಫ್ರೈಗಾಗಿ ನೀವು ಜಂಬೊ ಸಿಗಡಿಗಳನ್ನು ಖರೀಸಬೇಕು.

Prawn Ghee Roast Recipe From Mangalore

ಇದು ನಿಮಗೆ ದೊರೆಯದಿದ್ದರೆ ಸಾಮಾನ್ಯ ಆಕಾರದ ಸಿಗಡಿಯನ್ನು ಕೂಡ ಈ ಡಿಶ್ ತಯಾರಿಗಾಗಿ ಬಳಸಬಹುದು. ಮಂಗಳೂರಿನ ನೀರೂರಿಸುವ ಖಾದ್ಯಕ್ಕೆ ಅಸಲಿ ತುಪ್ಪವನ್ನೇ ನೀವು ಬಳಸಬೇಕು. ಮನೆಯಲ್ಲೇ ತಯಾರಿಸಿದ ದನದ ತುಪ್ಪ ಸಿಗಡಿ ಫ್ರೈಗೆ ಸುವಾಸನೆ ಮತ್ತು ಸೊಗಸಾದ ರುಚಿಯನ್ನು ನೀಡುತ್ತದೆ. ಹಾಗಿದ್ದರೆ ಇನ್ನೇಕೆ ತಡ, ರುಚಿಯಾದ ಸಿಗಡಿ ಫ್ರೈ ಡಿಶ್ ತಯಾರಿ ಹೀಗಿದೆ ನೋಡಿ ಪ್ರಯತ್ನಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಾವ್! ಸವಿಯಾದ ಮಾವಿನಕಾಯಿ ಚಟ್ನಿ

ಪ್ರಮಾಣ: 4 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 8 ಗಂಟೆಗಳು
ಅಡುಗೆಗೆ ತಗಲುವ ಸಮಯ: 40 ನಿಮಿಷಗಳು

ಸಾಮಾಗ್ರಿಗಳು
.ಜಂಬೋ ಸಿಗಡಿ
.ಲಿಂಬೆ ರಸ - 3 ಟೇಸ್ಪೂನ್
.ಉಪ್ಪು - ರುಚಿಗೆ ತಕ್ಕಷ್ಟು
.ಬಿಳಿ ಕಾಳುಮೆಣಸು -1ಟೇಸ್ಪೂನ್
.ಮೊಸರು - 2ಕಪ್‌ಗಳು
.ಕೆಂಪು ಮೆಣಸು - 20 (ಹುರಿದದ್ದು)
.ಕೊತ್ತಂಬರಿ ಬೀಜ - 1ಟೇಸ್ಪೂನ್
.ಮೆಂತೆ ಬೀಜ - 1 ಟೇಸ್ಪೂನ್
.ಜೀರಿಗೆ - 1ಟೇಸ್ಪೂನ್
.ಬೆಳ್ಳುಳ್ಳಿ ಎಸಳು - 10
.ಹುಳಿ ನೀರು - 1 ಕಪ್
.ತುಪ್ಪ - 3ಟೇಸ್ಪೂನ್
.ಎಣ್ಣೆ - 2ಟೇಸ್ಪೂನ್

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೀನು ಪ್ರಿಯರಿಗಾಗಿ-ಮೀನಿನ ಫ್ರೈ

ಮಾಡುವ ವಿಧಾನ:
1. ಉಪ್ಪು, ಬಿಳಿ ಕಾಳುಮೆಣಸು, ಹಳದಿ ಮತ್ತು ಲಿಂಬೆ ರಸವನ್ನು ಸಿಗಡಿಗೆ ಲೇಪಿಸಿ

2.ಈ ಸಿಗಡಿಯನ್ನು ರಾತ್ರಿ ಪೂರ್ತಿ ರೆಫ್ರಜರೇಟರ್‌ನಲ್ಲಿ ಹಾಗೆಯೇ ಇಡಿ.

3.ಪ್ಯಾನ್ ಬಿಸಿ ಮಾಡಿ ಮತ್ತು ನೆನೆದ ಸಿಗಡಿಯನ್ನು 3-4 ನಿಮಿಷಗಳಷ್ಟು ಕಾಲ ಸ್ವಲ್ಪ ಫ್ರೈ ಮಾಡಿ.

4.ಇದೇ ಸಮುದಲ್ಲಿ ಕೆಂಪು ಮೆಣಸು, ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಬೀಜಗಳು, ಬೆಳ್ಳುಳ್ಳಿ ಮತ್ತು ಹುಳಿಯನ್ನು ಒಟ್ಟಿಗೆ ದಪ್ಪಗೆ ಕಡೆಯಿರಿ.

5.ಪ್ಯಾನ್‌ನಿಂದ ಹುರಿದ ಸಿಗಡಿಯನ್ನು ಹೊರತೆಗೆದು ಬದಿಗಿರಿಸಿ.

6.ಕಡೆದ ಮಸಾಲೆಯನ್ನು ಈ ಪ್ಯಾನ್‌ನಲ್ಲಿರುವ ಎಣ್ಣೆಯಲ್ಲಿ ಹಸಿ ಪರಿಮಳ ಹೋಗುವವರೆಗೆ 3-5 ನಿಮಿಷಗಳ ಕಾಲ ಬೇಯಿಸಿ.

7.ನೆನೆಸಿದ ಸಿಗಡಿ, ತುಪ್ಪವನ್ನು ಪ್ಯಾನ್‌ಗೆ ಹಾಕಿ.

8.ಅಗತ್ಯವಿದ್ದಷ್ಟು ಉಪ್ಪು ಬಳಸಿ.

9.ಚೆನ್ನಾಗಿ ಮಿಶ್ರ ಮಾಡಿಕೊಂಡು ಕಡಿಮೆ ಉರಿಯಲ್ಲಿ 10 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಿಸಿ.

10.ಕೊತ್ತಂಬರಿ ಎಲೆಗಳಿಂದ ಅಲಂಕೃತ ಸಿಗಡಿ ತುಪ್ಪ ರೋಸ್ಟ್ ಅನ್ನು ಬಿಸಿ ಬಿಸಿಯಾಗಿ ಬಳಸಿ.

Read more about: cookery ಅಡುಗೆ
English summary

Prawn Ghee Roast Recipe From Mangalore

Prawn ghee roast is a very typical Mangalorean dish. The original dish uses chicken instead of prawns. But eventually, the prawn ghee roast recipe became more popular than the actual recipe using chicken. 
Story first published: Wednesday, February 19, 2014, 11:19 [IST]
X
Desktop Bottom Promotion