For Quick Alerts
ALLOW NOTIFICATIONS  
For Daily Alerts

ಪಾಲಾಕ್ ಚಿಕನ್ ಪಲ್ಯ

|

ಈ ಋತುವಿನಲ್ಲಿ ನೀವು ಹಲವು ರೀತಿಯ ತರಕಾರಿಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು. ಹೂ ಕೋಸು, ಗಡ್ಡೆಕೋಸು, ಹಲವು ರೀತಿಯ ಸೊಪ್ಪುಗಳು ಮಾರುಕಟ್ಟೆಯನ್ನು ಹಸಿರಾಗಿಸಿದೆ. ಪಾಲಾಕ್ ಸೊಪ್ಪನ್ನು ಹಲವು ಭಾರತೀಯ ಅಡುಗೆಗಳಲ್ಲಿ ಬಳಸುತ್ತಾರೆ.
ಸೊಪ್ಪಿನಲ್ಲಿ ಪೌಷ್ಟಿಕಾಂಶಗಳು ಹೆಚ್ಚಿದ್ದು ಆರೋಗ್ಯಕ್ಕೆ ಒಳ್ಳೆಯದು. ನೀವು ಮಾಂಸಾಹಾರಿಗಳಾಗಿದ್ದಲ್ಲಿ ನಿಮಗೆ ಈ ಪಲ್ಯ ಇಷ್ಟವಾಗುತ್ತದೆ. ಇದರಲ್ಲಿ ನಿಂಬೆ, ಶುಂಠಿ, ಬೆಳ್ಳುಳ್ಳಿ ಸುವಾಸನೆಯನ್ನು ಕಾಣಬಹುದು. ಇವೆಲ್ಲವೂ ಚಿಕನ್ ನೊಂದಿಗೆ ಬೆರೆತು ಪಲ್ಯವನ್ನು ರುಚಿಕರವಾಗಿಸುತ್ತದೆ. ಇದನ್ನು ಮಾಡುವ ವಿಧಾನವನ್ನು ಕೊಟ್ಟಿದ್ದೇವೆ ನೋಡಿ.

ಬೇಕಾಗುವ ಸಾಮಗ್ರಿಗಳು
ಚಿಕನ್- 250 ಗ್ರಾಂ (ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ)
ಪಾಲಾಕ್- 500 ಗ್ರಾಂ (ಬೇಯಿಸಿಕೊಳ್ಳಿ)
ಈರುಳ್ಳಿ- 2
ಮೊಸರು- 1 ಟೀಚಮಚ
ಹಸಿಮೆಣಸಿನಕಾಯಿ- 3-4
ಅರಿಶಿನ ಪುಡಿ- 1 ಟೀಚಮಚ
ಧನಿಯ ಪುಡಿ- 1 ಟೀಚಮಚ
ಸಕ್ಕರೆ- ಒಂದು ಚಿಟಿಕೆ
ನಿಂಬೆ ರಸ- 1 ಟೀ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- 2 ಟೀಚಮಚ
ಜೀರಿಗೆ- 1 ಟೀಚಮಚ
ಬೇ ಎಲೆಗಳು- 1
ಕ್ರೀಂ - 1 ಟೀಚಮಚ
ಮಾಡುವ ವಿಧಾನ
1.ಚಿಕನ್ ತುಂಡುಗಳನ್ನು ಉಪ್ಪು, ನಿಂಬೆ ರಸ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ನಲ್ಲಿ 30 ನಿಮಿಷಗಳವರೆಗೆ ನೆನೆಸಿಡಿ.
2. ಸೊಪ್ಪು ಮತ್ತು ಹಸಿಮೆಣಸಿನಕಾಯಿ ಪೇಸ್ಟ್ ತಯಾರಿಸಿಟ್ಟುಕೊಳ್ಳಿ
3. ಈರುಳ್ಳಿ ಪೇಸ್ಟ್ ತಯಾರಿಸಿಕೊಳ್ಳಿ
4. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾಯಿಸಿಕೊಂಡು ಜೀರಿಗೆ ಮತ್ತು ಬೇ ಎಲೆ ಹಾಕಿ
5. ಸೊಪ್ಪಿನ ಪೇಸ್ಟ್ ಹಾಕಿ 3-4 ನಿಮಿಷ ಬೇಯಿಸಿ. ಅರಿಶಿನ ಪುಡಿಯನ್ನು ಹಾಕಿ ಕಲಸಿ
6. ನಿಧಾನವಾಗಿ ಚಿಕನ್ ತುಂಡುಗಳನ್ನು ಹಾಕಿ ಕಲಸಿ. 20-25 ನಿಮಿಷಗಳವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಮುಚ್ಚಳವನ್ನು ಮುಚ್ಚಿಡಿ.
7. ಮೊಸರು ಮತ್ತು ಸಕ್ಕರೆಯನ್ನು ಹಾಕಿ 2 ನಿಮಿಷಗಳವರೆಗೆ ಬೇಯಿಸಿ
8. ಉಪ್ಪು, ಧನಿಯ ಪುಡಿಯನ್ನು ಹಾಕಿ ಕಲಸಿ. ನೀರನ್ನು ಬೆರೆಸಿ ಕುದಿಸಿ.
9. ಕುದ್ದ ನಂತರ ತಾಜಾ ಕ್ರೀಂ ಹಾಕಿ ಕಲಸಿ.
ಇದನ್ನು ಅನ್ನ ಮತ್ತು ರೋಟಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

English summary

Palak Chicken: Side Dish Recipe

Palak chicken is one of the lip smacking dishes which has the flavour of lemon, ginger and garlic which is mixed with marinated chicken pieces. If you want, you can make it a thick gravy or try the dry palak chicken recipe as well. Here is the palak chicken gravy recipe for main course.
Story first published: Wednesday, November 27, 2013, 9:43 [IST]
X
Desktop Bottom Promotion