For Quick Alerts
ALLOW NOTIFICATIONS  
For Daily Alerts

ಆಮ್ಲೆಟ್ ಗ್ರೇವಿ ರೆಸಿಪಿ

|

ಆಮ್ಲೆಟ್ ಗ್ರೇವಿಯ ರುಚಿ ನೋಡಿದ್ದೀರಾ? ಬರೀ ಆಮ್ಲೆಟ್ ಮಾಡಿ ತಿನ್ನುವ ಬದಲು ಅದರಿಂದ ಗಟ್ಟಿಯಾದ ಗ್ರೇವಿ ತಯಾರಿಸಿದರೆ ಅನ್ನ, ರೊಟ್ಟಿ, ಚಪಾತಿ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.

ಆಮ್ಲೆಟ್ ಗ್ರೇವಿಯ ರುಚಿ ನೋಡಲು ನೀವು ರೆಡಿನಾ? ಹಾಗಾದರೆ ರೆಸಿಪಿ ನೋಡಿ ಇಲ್ಲಿದೆ:

Omelette Gravy Recipe

ಬೇಕಾಗುವ ಸಾಮಾಗ್ರಿಗಳು
* ಮೊಟ್ಟೆ 4
* ಎಣ್ಣೆ 3 ಚಮಚ
* ಈರುಳ್ಳಿ 2
* ರುಚಿಗೆ ತಕ್ಕ ಉಪ್ಪು
* ಖಾರದ ಪುಡಿ ಒಂದರಿಂದ ಒಂದೂವರೆ ಚಮಚ(ನಿಮ್ಮ ರುಚಿಗೆ ತಕ್ಕಷ್ಟು)
* ಹಸಿ ಮೆಣಸಿನಕಾಯಿ 2
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಅರಿಶಿಣ ಪುಡಿ ಅರ್ಧ ಚಮಚ
* ಕೊತ್ತಂಬರಿ ಪುಡಿ 2 ಚಮಚ
* ಜೀರಿಗೆ ಪುಡಿ 1 ಚಮಚ
* ಟೊಮೆಟೊ ಪೇಸ್ಟ್ ಅರ್ಧ ಕಪ್(2-3 ಟೊಮೆಟೊ)
* ರುಚಿಗೆ ತಕ್ಕ ಉಪ್ಪು
* ತೆಂಗಿನ ಹಾಲು 1 ಕಪ್
* ಗರಂ ಮಸಾಲ ಅರ್ಧ ಚಮಚ
* ಸ್ವಲ್ಪ ಕೊತ್ತಂಬರಿ ಸೊಪ್ಪು
* ಸಾಸಿವೆ
* ಕರಿಬೇವಿನ ಎಲೆ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಮೊಟ್ಟೆಯನ್ನು ಬಟ್ಟಲಿಗೆ ಹಾಕಿ, 1 ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಗೂ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕದಡಿ, ಆಮ್ಲೆಟ್ ತಯಾರಿಸಿ.

* ನಂತರ ಅದನ್ನು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿಡಿ.

* ಈಗ ಪ್ಯಾನ್ ಬಿಸಿ ಮಾಡಿ 2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಮತ್ತು ಕರಿಬೇವಿನ ಎಲೆ ಹಾಕಿ ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ 1 ನಿಮಿಷ ಫ್ರೈ ಮಾಡಿ, ನಂತರ ಅರ್ಧ ಕಪ್ ಟೊಮೆಟೊ ಪೇಸ್ಟ್ ಹಾಕಿ 5 ನಿಮಿಷ ಸೌಟ್ ನಿಂದ ಆಡಿಸುತ್ತಾ ಬಿಸಿ ಮಾಡಿ, ನಂತರ ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ಅರಿಶಿಣ ಪುಡಿ, ಖಾರದ ಪುಡಿ ಹಾಕಿ 2 ನಿಮಿಷ ಫ್ರೈ ಮಾಡಿ, ನಂತರ ತೆಂಗಿನ ಹಾಲು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಗಟ್ಟಿ ಗ್ರೇವಿಯಾಗುವವರೆಗೆ ಕುದಿಸಿ.

* ನಂತರ ಕತ್ತರಿಸಿಟ್ಟ ಆಮ್ಲೆಟ್ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಉರಿಯಿಂದ ಇಳಿಸಿದರೆ ಆಮ್ಲೆಟ್ ಗ್ರೇವಿ ರೆಡಿ.

English summary

Omelette Gravy Recipe

Do you you can prepare delicious gravy by using omlette. This very easy to to prepare and best combination to chapathi, roti and rice. If you want to prepare this gravy, here is a recipe.
X
Desktop Bottom Promotion