For Quick Alerts
ALLOW NOTIFICATIONS  
For Daily Alerts

ಮಟನ್ ಸಾಗುವಾಲಾ ರೆಸಿಪಿ

|

ಮಟನ್ ಸಾಗುವಾಲಾ ಸಾರಿನ ವಿಶೇಷತೆಯೆಂದರೆ ಇದನ್ನು ಪಾಲಾಕ್ ಸೊಪ್ಪಿನ ಜೊತೆ ಹಾಕಿ ತಯಾರಿಸಲಾಗುವುದು. ಈ ಸಾರನ್ನು ಗಟ್ಟಿಯಾಗಿ ಮಾಡಿದರನೇ ಹೆಚ್ಚು ರುಚಿಕರ. ದಿನಾ ಒಂದೇ ರುಚಿಯಲ್ಲಿ ಮಟನ್ ಸಾರು ಮಾಡುವ ಬದಲು ಈ ರೀತಿಯಲ್ಲಿ ಮಟನ್ ಸಾರು ಮಾಡಿ ನೋಡಿ, ಇದರ ರುಚಿ ಖಂಡಿತ ನಿಮಗೆ ಇಷ್ಟವಾಗುವುದು.

ಇದರ ರೆಸಿಪಿಯನ್ನು ಈ ಕೆಳಗೆ ನೀಡಲಾಗಿದೆ ನೋಡಿ:

Mutton Saagwala Recipe

ಬೇಕಾಗುವ ಸಾಮಾಗ್ರಿಗಳು

ಮಟನ್ ಅರ್ಧ ಕೆಜಿ
ಪಾಲಾಕ್ 2 ಕಟ್ಟು
ಈರುಳ್ಳಿ 2
ಬೆಳ್ಳುಳ್ಳಿ 5 ಎಸಳು
ಟೊಮೆಟೊ 1(ಕತ್ತರಿಸಿದ್ದು)
ಹಸಿ ಮೆಣಸಿನಕಾಯಿ 3
ಮೊಸರು 2 ಚಮಚ
ಫ್ರೆಶ್ ಕ್ರೀಮ್ 1 ಚಮಚ ( ಬೇಕಿದ್ದರೆ ಹಾಕಬಹುದು)
ಚಿಟಕೆಯಷ್ಟು ಇಂಗು
ಖಾರದ ಪುಡಿ 1 ಚಮಚ (ಖಾರಕ್ಕೆ ತಕ್ಕಷ್ಟು)
ಗರಂ ಮಸಾಲ 1 ಚಮಚ
ಕರಿಬೇವಿನ ಎಲೆ
ಎಣ್ಣೆ 2 ಚಮಚ
ತುಪ್ಪ 1 ಚಮಚ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಪಾಲಾಕ್ ಸೊಪ್ಪನ್ನು ಬೇಯಿಸಿ. ತುಂಬಾ ಬೇಯಿಸಲು ಹೋಗಬೇಡಿ. ನಂತರ ಅದರ ನೀರು ಬಸಿದು, ಹಸಿ ಮೆಣಸಿನಕಾಯಿ ಜೊತೆ ಹಾಕಿ ರುಬ್ಬಿ ಪೇಸ್ಟ್ ರೀತಿ ಮಾಡಿಟ್ಟುಕೊಳ್ಳಿ.

* ಎಣ್ಣೆಯನ್ನು ಕುಕ್ಕರ್ ನಲ್ಲಿ ಹಾಕಿ ಬಿಸಿ ಮಾಡಿ, ಅದಕ್ಕೆ ಕರಿಬೇವಿನ ಎಲೆ ಹಾಕಿ ನಂತರ ಇಂಗು ಹಾಕಿ. ಈಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

* ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಬೆಳ್ಳುಳ್ಳಿ ಹಾಕಿ 2 ನಿಮಿಷ ಹುರಿಯಿರಿ. ನಂತರ ಮಟನ್ ತುಂಡುಗಳನ್ನು ಹಾಕಿ, ಕಡಿಮೆ ಉರಿಯಲ್ಲಿ ಮಟನ್ ತುಂಡುಗಳನ್ನು 5-6 ನಿಮಿಷ ಹುರಿಯಿರಿ. ಈಗ ಟೊಮೆಟೊ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮತ್ತೆ 5 ನಿಮಿಷ ಹುರಿಯಿರಿ.

* ಈಗ ಪಾಲಾಕ್ ಪೇಸ್ಟ್ ಸೇರಿಸಿ 2 ನಿಮಿಷ ಹುರಿದು, ಈಗ ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ, ಮೆಂತೆ ಸೊಪ್ಪು ಹಾಕಿ 2 ಕಪ್ ನೀರು ಸೇರಿಸಿ, ಕುಕ್ಕರ್ ನ ಬಾಯಿ ಮುಚ್ಚಿ 3-4 ವಿಶಲ್ ಬರುವವರೆಗೆ ಬೇಯಿಸಿ.

* ನಂತರ 10 ನಿಮಿಷ ಬಿಟ್ಟು ಕುಕ್ಕರ್ ನ ಮುಚ್ಚಳ ತೆಗೆದು ಫ್ರೆಶ್ ಕ್ರೀಮ್ ಮತ್ತು ತುಪ್ಪ ಹಾಕಿ ಮಿಕ್ಸ್ ಮಾಡಿದರೆ ಮಟನ್ ಸಾಗುವಾಲಾ ರೆಡಿ.

X
Desktop Bottom Promotion