For Quick Alerts
ALLOW NOTIFICATIONS  
For Daily Alerts

ಆಂಧ್ರಾ ಸ್ಪೆಶಲ್ ರೆಸಿಪಿ ಮಟನ್ ಪೆಪ್ಪರ್

|

ಭಾರತೀಯರು ಖಾರ ಪ್ರಿಯರು. ಯಾವ ಸೀಸನ್‌ನಲ್ಲೂ ಖಾರ ತಿನ್ನುವುದನ್ನು ಬಿಡರು, ರಸ್ತೆ ಬದಿಯ ಆಹಾರದಿಂದ ಹಿಡಿದು ಫೈವ್‌ಸ್ಟಾರ್ ಹೋಟೆಲ್‌ವರೆಗೆ ಈ ಖಾರದ ಜನಪ್ರಿಯತೆ ಅಚ್ಚೊತ್ತಿದಂತಿರುತ್ತದೆ. ಇಂದಿನ ಲೇಖನದಲ್ಲಿ ಅತಿ ವಿಶೇಷವಾದ ಮಟನ್ ಪೆಪ್ಪರ್ ಫ್ರೈ ರೆಸಿಪಿಯನ್ನು ಪ್ರಸ್ತುತಪಡಿಸುತ್ತಿದ್ದು ನೀವು ಇದನ್ನು ಖಂಡಿತ ಇಷ್ಟಪಡುತ್ತೀರಿ.

ಆಂಧ್ರಾ ಸ್ಪೆಶಲ್ ರೆಸಿಪಿಯಾದ ಇದು ನಿಮ್ಮ ಬಾಯಿಗೆ ರಸಗವಳವಾಗುವುದು ಖಂಡಿತ. ಖಾರ ಮತ್ತು ಸ್ವಾದ ಭರಿತ ರುಚಿಯಿಂದ ಕೂಡಿದ ಈ ಮಟನ್ ಪೆಪ್ಪರ್ ಎಲ್ಲಾ ಸೀಸನ್‌ಗೂ ಖಂಡಿತ ಇಷ್ಟವಾಗುವಂಥದ್ದು. ಅತ್ಯಂತ ರುಚಿಕರವಾದ ಈ ರೆಸಿಪಿಯನ್ನು ತಿಳಿಸಿಕೊಡಲು ನಾವು ರೆಡಿ ಮಾಡಲು ನೀವು ರೆಡಿನಾ?

ಹರಿಯಾಲಿ ಮಟನ್-ಬಕ್ರೀದ್ ಸ್ಪೆಷಲ್

Mutton Pepper Fry: Andhra Spl Recipe

ಪ್ರಮಾಣ:4
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು

ಸಾಮಾಗ್ರಿಗಳು:
*ಮಟನ್ - 500 ಗ್ರಾಮ್
*ಅರಶಿನ - 1/2 ಸ್ಪೂನ್
*ಈರುಳ್ಳಿ - 3 (ಕತ್ತರಿಸಿದ್ದು)
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಸ್ಪೂನ್
*ಟೊಮೇಟೊ - 2 (ಕತ್ತರಿಸಿದ್ದು)
*ಮೆಣಸಿನ ಹುಡಿ - 1 ಸ್ಪೂನ್
*ಕರಿಮೆಣಸಿನ ಹುಡಿ - 2 ಸ್ಪೂನ್
*ಕರಿಬೇವು - 6-7 ಎಸಳು
*ಕೊತ್ತಂಬರಿ ಸೊಪ್ಪು - 2 ಎಸಳು (ಕತ್ತರಿಸಿದ್ದು)
*ಫೆನಲ್ ಬೀಜಗಳು - 1/2 ಸ್ಪೂನ್
*ಪೆಪ್ಪರ್ ಕೋರ್ನ್ಸ್ - 1 ಸ್ಪೂನ್
*ಪೂಪ್ಪಿ ಸೀಡ್ಸ್ - 1/2 ಸ್ಪೂನ್
*ಜೀರಿಗೆ - 1 ಸ್ಪೂನ್
*ದಾಲ್ಚೀನಿ - 1 ಇಂಚು
*ಲವಂಗ - 2-4
*ಏಲಕ್ಕಿ - 2
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - 3 ಸ್ಪೂನ್

ಕ್ಯಾಪ್ಸಿಕಂ ಮಟನ್ ಮಿನ್ಸ್-ರಂಜಾನ್ ಸ್ಪೆಷಲ್

ಮಾಡುವ ವಿಧಾನ:
1. ಮಟನ್ ಅನ್ನು ಅರಶಿನ ಉಪ್ಪು ಹಾಗೂ 3 ಕಪ್‌ನಷ್ಟು ನೀರು ಸೇರಿಸಿ 15 ನಿಮಿಷಗಳ ಕಾಲ ಮಂದ ಉರಿಯಲ್ಲಿ ಬೇಯಿಸಿ.

2. ಗ್ಯಾಸ್‌ನಲ್ಲಿ ಫ್ಲಾಟ್ ಪ್ಯಾನ್ ಇಡಿ ಇದಕ್ಕೆ ಎಣ್ಣೆ ಹಾಕಿ ಮತ್ತು ಎಣ್ಣೆ ಬಿಸಿಯಾದೊಡನೆ ಫೆನ್ನಲ್ ಬೀಜಗಳು, ಜೀರಿಗೆ, ಪೂಪ್ಪಿ ಸೀಡ್ಸ್, ಪೆಪ್ಪರ್ ಕೋರ್ನ್ಸ್, ಲವಂಗ ಮತ್ತು ಏಲಕ್ಕಿಯನ್ನು ಫ್ರೈ ಮಾಡಿ

3. ನಂತರ ಅವುಗಳನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ.

4. ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಮತ್ತು ಕರಿಬೇವಿನೆಸಳಿನಿಂದ ಒಗ್ಗರಣೆ ನೀಡಿ.

5. ಅದರಲ್ಲಿ ಈರುಳ್ಳಿಯನ್ನು ಕೆಂಪಗಾಗುವಂತೆ ಹುರಿದುಕೊಳ್ಳಿ.

6. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಬೇಯಿಸಿ.

7. ಬೇಯಿಸಿದ ಮಟನ್ ತುಂಡುಗಳನ್ನು ಸೇರಿಸಿ ಮತ್ತು ಅದರ ರಸ ಬರುವವರೆಗೆ ಹುರಿಯಿರಿ.

8. ಈಗ ಟೊಮೇಟೊ, ಮೆಣಸಿನ ಹುಡಿ ಮತ್ತು ಹುಡಿ ಮಾಡಿದ ಮಸಾಲೆಯನ್ನು ಸೇರಿಸಿ.

9. ಮಸಾಲಾ ಚೆನ್ನಾಗಿ ಮಟನ್‌ನೊಂದಿಗೆ ಕವರ್ ಆಗಿರುವಂತೆ ನೋಡಿಕೊಳ್ಳಿ

10. ಕಾಳುಮೆಣಸಿನ ಹುಡಿಯನ್ನು ಮೇಲ್ಭಾಗಕ್ಕೆ ಚಿಮುಕಿಸಿ ಮತ್ತು 2 ರಿಂದ 3 ನಿಮಿಷಗಳ ಕಾಲ ಬೇಯಿಸಿ.

ಕೊನೆಗೆ ನೀವು ಮಟನ್ ಪೆಪ್ಪರ್ ಫ್ರೈ ಅನ್ನು ಆನಿಯನ್ ರಿಂಗ್, ಹಸಿಮೆಣಸು ಮತ್ತು ಕೊತ್ತಂಬರಿ ಎಲೆಯೊಂದಿಗೆ ಅಲಂಕರಿಸಬಹುದು.

English summary

Mutton Pepper Fry: Andhra Spl Recipe

Indians never stop craving for hot and spicy food irrespective of the season.This particular mutton pepper fry recipe is inspired from the Andhra style of cooking.
Story first published: Wednesday, May 28, 2014, 9:57 [IST]
X
Desktop Bottom Promotion