For Quick Alerts
ALLOW NOTIFICATIONS  
For Daily Alerts

ಬಾಯಲ್ಲಿ ನೀರೂರಿಸುವ ಬೋಟಿ ಕಬಾಬ್ ರೆಸಿಪಿ

|

ಅವಧಿ ಸಿಜ್ವನ್ ಆಹಾರಗಳ ಸ್ವರ್ಗ. ರುಚಿಕರವಾದ ಬಿರಿಯಾನಿ, ಕುಲ್ಚಾ, ಪರೋಟಾ, ಹಾಗೂ ವಿಶೇಷವಾಗಿ ಕಬಾಬ್ ಸ್ವಾದ ನಮ್ಮ ಬಾಯಿಯ ಸ್ವಾದವನ್ನು ಇನ್ನಷ್ಟು ಹೆಚ್ಚಿಸುವುದಂತೂ ಖಂಡಿತ. ಅವಧ್‌ನ ನವಾಬರು ತಮ್ಮ ವೈಭವ ಮತ್ತು ಆಹಾರದ ಬಗೆಗಿನ ಪ್ರೀತಿಯಲ್ಲಿ ಖ್ಯಾತಿವೆತ್ತವರು. ಇದರಿಂದಾಗಿಯೇ ಭಾರತೀಯ ಸಂಪ್ರದಾಯದ ಅಡುಗೆ ಮತ್ತು ತರಹೇವಾರಿ ತಿಂಡಿಗಳು ವಿಶ್ವದಾದ್ಯಂತ ಇಂದಿಗೂ ಪ್ರಸಿದ್ಧವಾಗಿರುವುದು.

ನಮ್ಮಲ್ಲಿನ ರುಚಿಕರ ಆಹಾರ ಮತ್ತು ಅದನ್ನು ಉಣಬಡಿಸುವ ವಿಧಾನ ಎಲ್ಲರಿಗೂ ಅಚ್ಚುಮೆಚ್ಚಿನದಾಗಿರುತ್ತದೆ. ಇಂದಿನ ಲೇಖನದಲ್ಲಿ ಕೂಡ ಇಂತಹ ಒಂದು ರುಚಿಕರ ಖಾದ್ಯವನ್ನು ನಿಮಗೆ ನಾವು ಉಣಬಡಿಸಲಿದ್ದು ಅವಧ್‌ನ ಕಬಾಬ್ ಟೇಸ್ಟ್ ನಿಮ್ಮ ಬಾಯಲ್ಲಿ ನೀರು ಬರಿಸುವುದಂತೂ ಖಂಡಿತ.

Mouthwatering Boti Kebab Recipe

ಅವಧ್‌ನ ಕಬಾಬ್ ಅದರ ತಯಾರಿ ವಿಧಾನದಲ್ಲೇ ಎತ್ತಿದ ಕೈ ಮತ್ತು ಹೆಸರನ್ನು ಗಳಸಿರುವಂಥದ್ದು. ಬಾಯಲ್ಲಿ ಬೆಣ್ಣೆಯಂತೆ ಕರಗುವ ಈ ಕಬಾಬ್ ನಿಮ್ಮ ಬಾಯಿಯ ರುಚಿಯನ್ನು ತಣಿಸುವುದರಲ್ಲಿ ಸಂಶಯವೇ ಇಲ್ಲ.

ಹಾಗಿದ್ದರೆ ನಿಮ್ಮ ದಿನವನ್ನು ವಿಶೇಷಗೊಳಿಸಲು ಈ ಬೋಟಿ ಕಬಾಬ್ ನಿಮಗೆ ಅತೀ ಅಗತ್ಯವಾದುದು. ಇದನ್ನು ತಯಾರಿಸಲು ನೀವು ತುಂಬಾ ಕಷ್ಟಪಡಬೇಕಾಗಿಲ್ಲ. ಆದರೆ ನೀವಿದನ್ನು ಸಿದ್ಧಪಡಿಸಿದ ನಂತರ ನಿಮ್ಮನ್ನು ಹಿಡಿಯುವವರು ಯಾರೂ ಇಲ್ಲ ಎಂದೇ ಹೇಳಬಹುದು. ಇದನ್ನು ತಯಾರಿಸುವ ಉತ್ಸಾಹ ನಿಮ್ಮಲ್ಲಿದ್ದರೆ ತಿಳಿಸಿಕೊಡುವಂತಹ ಪ್ರೀತಿ ಕೂಡ ನಮ್ಮದಾಗಿದೆ.

ಇದನ್ನು ತಯಾರಿಸುವಾಗ ಸ್ವಲ್ಪ ಹೆಚ್ಚು ತಯಾರಿಸಿ ಏಕೆಂದರೆ ನೀವು ಇದನ್ನು ತಯಾರಿಸಿ ಪ್ಲೇಟ್‌ಗೆ ಹಾಕುತ್ತಿರುವಾಗಲೇ ಅದು ಬರಿದಾಗುವುದು ನಿಮಗೇ ತಿಳಿಯಲಾರದು. ಹಾಗಿದ್ದರೆ ಕಬಾಬ್ ರೆಸಿಪಿಯನ್ನು ತಿಳಿದುಕೊಳ್ಳಲು ಮುಂದೆ ಓದಿ.

ಪ್ರಮಾಣ: 4
ಸಿದ್ಧತಾ ಸಮಯ: 4 ಗಂಟೆಗಳು
ಅಡುಗೆಗೆ ಬೇಕಾದ ಸಮಯ: 40 ನಿಮಿಷಗಳು

ಚಿಕನ್ ಪ್ರಿಯರ ಮನತಣಿಸುವ ಚಾಪ್ಲಿ ಕಬಾಬ್ ಸವಿದಿರುವಿರಾ?

ಸಾಮಾಗ್ರಿಗಳು:
*ಮಟನ್ - 1/2 ಕೆಜಿ (ಬೋನ್‌ಲೆಸ್, ಸಣ್ಣ ತುಂಡುಗಳು)
*ಹಸಿಯಾದ ಪಪ್ಪಾಯಿ ಪೇಸ್ಟ್ - 2 ಸ್ಪೂನ್
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಸ್ಪೂನ್
*ಹಸಿಮೆಣಸಿನ ಪೇಸ್ಟ್ - 1/2 ಸ್ಪೂನ್
*ಮೆಣಸಿನ ಹುಡಿ - 1/2 ಸ್ಪೂನ್
*ಗರಂ ಮಸಾಲಾ ಪೌಡರ್ - 1/2 ಸ್ಪೂನ್
*ಉಪ್ಪು - ರುಚಿಗೆ ತಕ್ಕಷ್ಟು
*ಬೆಣ್ಣೆ - 1/4 ಕಪ್ (ಕರಗಿಸಿದ್ದು)
*ಆನಿಯನ್ ರಿಂಗ್ಸ್ - ಅಲಂಕಾರಕ್ಕಾಗಿ

ಮಾಡುವ ವಿಧಾನ
1.ಮಟನ್ ತುಂಡುಗಳನ್ನು ಚೆನ್ನಾಗಿ ತೊಳೆಯಿರಿ.
2.ಪಪ್ಪಾಯಿ ಪೇಸ್ಟ್‌, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಪೇಸ್ಟ್, ಮೆಣಸಿನ ಹುಡಿ, ಉಪ್ಪು ಹಾಗೂ ಗರಂ ಮಸಾಲಾ ಪೌಡರ್‌ನಲ್ಲಿ ಈ ತುಂಡುಗಳನ್ನು ನೆನೆಸಿಡಿ.
3.ಹೀಗೆ ನೆನೆಸಿಟ್ಟ ಮಟನ್ ಅನ್ನು ಫ್ರಿಡ್ಜ್‌ನಲ್ಲಿ 3-4 ಗಂಟೆಗಳ ತೆಗೆದಿಡಿ.
4.ಇದರ ನಂತರ, ಕುಕ್ಕರ್‌ನಲ್ಲಿ ಎರಡು ಕಪ್ ನೀರಿನೊಂದಿಗೆ ಮಟನ್ ಬೇಯಿಸಿ. 4 ವಿಶಲ್ ಬರುವರೆಗೆ ಕಾಯಿರಿ.
5.ನಂತರ ಜಾಗರೂಕರಾಗಿ ವಿಶಲ್ ಅನ್ನು ಹೊರಬಿಡಿ.
6.ಕುಕ್ಕರ್‌ನಲ್ಲಿ ನೀರೇನಾದರೂ ಉಳಿದಿದೆಯೇ ಎಂಬುದನ್ನು ಪರಿಶೀಲಿಸಿ. ಹೌದಾದಲ್ಲಿ ನೀರು ಆವಿಯಾಗುವರೆಗೆ ಬೇಯಿಸಿ.
7.ಈಗ ಮಟನ್ ತುಂಡುಗಳನ್ನು ಪಾತ್ರೆಗೆ ವರ್ಗಾಯಿಸಿ. ಗ್ರಿಲ್ಲರ್ ಅಥವಾ ಪ್ಯಾನ್‌ನಲ್ಲಿ ಅವುಗಳನ್ನು ಗ್ರಿಲ್ ಮಾಡಿ.
8.ಬೆಣ್ಣೆಯನ್ನು ಎಲ್ಲಾ ಮಟನ್ ತುಂಡುಗಳಿಗೆ ಹಚ್ಚಿ ಮತ್ತು ಸಣ್ಣ ಉರಿಯಲ್ಲಿ 15-20 ನಿಮಿಷಗಳ ಕಾಲ ಬೇಯಿಸಿ ಇವುಗಳು ಚೆನ್ನಾಗಿ ಬೆಂದಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
9.ಒಮ್ಮೆ ಪೂರ್ತಿ ಆದ ನಂತರ ಕಬಾಬ್ ತುಂಡುಗಳನ್ನು ಪ್ಲೇಟ್‌ಗೆ ವರ್ಗಾಯಿಸಿ ಮತ್ತು ಆನಿಯನ್ ರಿಂಗ್‌ನೊಂದಿಗೆ ಅಲಂಕರಿಸಿ ಬಡಿಸಿ.

ಗ್ರೀನ್ ಚಟ್ನಿಯೊಂದಿಗೆ ಬೋಟಿ ಕಬಾಬ್ ಅನ್ನು ಸರ್ವ್ ಮಾಡಿ. ಬೋಟಿ ಕಬಾಬ್‍ನ ಈ ಸ್ವಾದವನ್ನು ಮಾತುಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ ಎಂಬುದು ಅದನ್ನು ಸವಿದ ನಂತರ ನಿಮಗೇ ತಿಳಿಯುತ್ತದೆ.

English summary

Mouthwatering Boti Kebab Recipe

Here is the recipe for the famous boti kebab. This recipe is easy and does not require too much of hard work. So, why not try something royal dishes Check out the recipe for boti kebabs
Story first published: Monday, June 9, 2014, 11:35 [IST]
X
Desktop Bottom Promotion