For Quick Alerts
ALLOW NOTIFICATIONS  
For Daily Alerts

ರುಚಿಯಾದ ಕೇರಳ ಫಿಶ್ ಕರಿ ಮೀನ್ ಮೌಲಿ!

|

ಕೇರಳದ ತೀರಗಳಲ್ಲಿ ಮೀನ್ ಮೌಲಿ ಅಥವಾ ಫಿಶ್ ಕರಿ ತುಂಬಾ ಹೆಸರುವಾಸಿ. ಇಲ್ಲಿ ಮೀನ್ ಎಂದರೆ ಮೀನು ಮತ್ತು ಕರಿ ಅಂದರೆ ಪದಾರ್ಥವಾಗಿದೆ. ತೆಂಗಿನ ಕಾಯಿಯನ್ನು ಬಳಸಿ ಈ ಯಮ್ಮೀ ಮೀನು ಕರಿಯನ್ನು ತಯಾರಿಸಲಾಗುತ್ತದೆ. ಇದು ತುಂಬಾ ಟೇಸ್ಟಿಯಾಗಿದ್ದು ಖಂಡಿತ ನಿಮಗೆ ಮೀನು ಕರಿಯ ಸ್ವಾದವನ್ನು ಉಣಬಡಿಸುತ್ತದೆ.

ಈ ಮೀನು ಕರಿಗೆ ನೀವು ಬಳಸಬೇಕಾಗಿರುವ ಸೋಲೆ ಅಥವಾ ಕಿಂಗ್‌ಫಿಶ್ ಆಗಿದೆ. ಎಲ್ಲಾ ಮೀನು ಪ್ರಿಯರಿಗೆ ಈ ಫಿಶ್ ಕರಿ ಒಳ್ಳೆಯ ರಸದೌತಣವಾಗಲಿದೆ. ಈ ಮೀನು ಕರಿ ಬೇರೆ ಮೀನು ಪದಾರ್ಥಕ್ಕಿಂತ ಭಿನ್ನವಾಗಿದ್ದು ನಿಮ್ಮ ಬಾಯಿ ರುಚಿಯನ್ನು ತಣಿಸುತ್ತದೆ.

Meen Moilee: Kerala Fish Curry

ಹಾಗಿದ್ದರೆ ಈ ಸೊಗಸಾದ ಮೀನು ಮೌಲಿಯನ್ನು ಸಿದ್ಧಪಡಿಸಲು ಯಾಕೆ ಆಲೋಚಿಸುತ್ತಿದ್ದೀರಾ ಇಂದಿನ ಲೇಖನದಲ್ಲಿ ಇದರ ತಯಾರಿ ಕ್ರಮವನ್ನು ಬಿಟ್ಟೂ ಬಿಡದೆ ನಾವಿಲ್ಲಿ ನೀಡಿದ್ದು ಖಂಡಿತ ಇದು ನಿಮಗೆ ಮೆಚ್ಚುಗೆಯಾಗುತ್ತದೆ.

ರುಚಿಕರವಾಗಿರುವ ಮಂಗಳೂರು ಶೈಲಿಯ ಮೀನು ಕರಿ

ಪ್ರಮಾಣ: 4
ಸಿದ್ಧತಾ ಸಮಯ: 30 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು:
*ಮೀನು - 4
*ಈರುಳ್ಳಿ - 1 (ಮಧ್ಯಮ ಗಾತ್ರದ್ದು, ಹೆಚ್ಚಿದ್ದು)
*ಹಸಿಮೆಣಸು - 2 (ಸೀಳಿದ್ದು)
*ಶುಂಠಿ - ಬೆಳ್ಳುಳ್ಳಿ ಪೇಸ್ಟ್ - 2 ಸ್ಪೂನ್
*ಪೆಪ್ಪರ್ ಪೌಡರ್ - 1 ಸ್ಪೂನ್
*ಉಪ್ಪು - ರುಚಿಗೆ ತಕ್ಕಷ್ಟು
*ತೆಂಗಿನ ಕಾಯಿ ಹಾಲು - 1 ಕಪ್
*ಕರಿಬೇವಿನೆಲೆ - 10
*ಸಾಸಿವೆ ಬೀಜಗಳು - 1 ಸ್ಪೂನ್
*ಅರಶಿನ ಹುಡಿ - 1/2 ಸ್ಪೂನ್
*ಲಿಂಬೆ ರಸ - 1 ಸ್ಪೂನ್
*ಎಣ್ಣೆ - 1 ಸ್ಪೂನ್
*ಕೊತ್ತಂಬರಿ ಎಲೆಗಳು - 2 ಸ್ಪೂನ್ (ಕತ್ತರಿಸಿದ್ದು)

ಯಮ್ಮೀ ಚೈನೀಸ್ ಸ್ಟಿರ್ ಫ್ರೈಡ್ ಚಿಕನ್ ಲೆಗ್ಸ್

ಮಾಡುವ ವಿಧಾನ:
1. ಮೀನಿನ ತುಂಡುಗಳನ್ನು ಲಿಂಬೆ ರಸ, ಉಪ್ಪು ಮತ್ತು ಶುಂಠಿ - ಬೆಳ್ಳುಳ್ಳಿ ಪೇಸ್ಟ್‌ನಲ್ಲಿ 30 ನಿಮಿಷಗಳ ಕಾಲ ಮುಳುಗಿಸಿಡಿ.

2. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಸಾಸಿವೆ, ಕರಿಬೇವಿನೆಲೆಗಳನ್ನು ಹಾಕಿ ಮತ್ತು ಸ್ವಲ್ಪ ನಿಮಿಷ ಹುರಿಯಿರಿ.

3. ಈಗ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಮತ್ತು 3-4 ನಿಮಿಷಗಳ ಕಾಲ ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ.

4.ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಅರಶಿನ ಹುಡಿ, ಉಪ್ಪು, ತೆಂಗಿನ ಹಾಲನ್ನು ಹಾಕಿ ಚೆನ್ನಾಗಿ ಕಲಸಿ.

5.ಈಗ ಮೀನನ್ನು ಸೇರಿಸಿ ಮತ್ತು ಸಣ್ಣ ಉರಿಯಲ್ಲಿ 7-8 ನಿಮಿಷಗಳ ಕಾಲ ಬೇಯಿಸಿ.

6.ಸ್ವಲ್ಪ ನೀರು ಹಾಕಿ ಮತ್ತು ಮುಚ್ಚಳ ಮುಚ್ಚಿ ಬೇಯಿಸಿ.

7.ಒಮ್ಮೆ ಆದ ನಂತರ, ಮುಚ್ಚಳವನ್ನು ತೆಗೆಯಿರಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ.

ಮೀನ್ ಮೌಲಿ ಬಡಿಸಲು ಸಿದ್ಧವಾಗಿದೆ. ಆಪ್ಪಂನೊಂದಿಗೆ ಈ ರುಚಿಕರ ಡಿಶ್ ಅನ್ನು ಸವಿಯಿರಿ.

English summary

Meen Moilee: Kerala Fish Curry

Meen Moilee or fish Moilee is a famous fish curry from the coasts of Kerala. The word Meen means fish and Moilee is the stew. The fish is cooked in a coconut milk stew with very little spices so that the flavour of the fish dominates the dish.
Story first published: Tuesday, June 3, 2014, 10:16 [IST]
X
Desktop Bottom Promotion