For Quick Alerts
ALLOW NOTIFICATIONS  
For Daily Alerts

ತಾಯಂದಿರ ದಿನಕ್ಕಾಗಿ ವಿಶೇಷ ಕೊಂಬ್ಡಿ ವಡೆ ರೆಸಿಪಿ!

|

ನಮ್ಮ ಮನೆಯಲ್ಲಿ ಅಮ್ಮ ಮಾಡುವ ಕೈ ರುಚಿಗೆ ವಿಶೇಷ ವಾತ್ಸಲ್ಯದ ಬೆರಕೆ ಇರುತ್ತದೆ. ಆದ್ದರಿಂದಲೇ ಅವರು ಮಾಡುವ ಪ್ರತಿ ಅಡುಗೆಯೂ ಸ್ವಾದ ಮತ್ತು ಆರೋಗ್ಯಭರಿತವಾಗಿರುತ್ತದೆ. ಆ ರುಚಿ ನಾವು ಮಾಡುವ ಅಡುಗೆಯಲ್ಲಿ ನಮಗೆ ದೊರೆಯುವುದೇ ಇಲ್ಲ. ಅಂತಹ ಅಮೂಲ್ಯ ಪ್ರೀತಿಗೆ ಬೆಲೆಕಟ್ಟಲಾಗುವುದಿಲ್ಲ.

ಆದರೆ ತಾಯಂದಿರ ದಿನದಂದು ಅವರು ನಿಮಗಾಗಿ ಖುಷಿಯಾಗುವಂತೆ ಮಾಡಬಹುದು. ರುಚಿಯಾದ ಕೊಂಬ್ಡಿ ವಡೆಯ ಮೂಲಕ ನಿಮ್ಮ ಅಮ್ಮನಿಗೆ ನೀವು ಧನ್ಯವಾದವನ್ನು ತಿಳಿಸಬಹುದು.

ಕೊಂಕಣಿ ಡಿಶ್ ಆದ ಇದು ಚಿಕನ್ ಕರಿಯೊಂದಿಗೆ ಚೆನ್ನಾಗಿ ಹೋಲುತ್ತದೆ. ಹಾಗಿದ್ದರೆ ಇನ್ನೇಕೆ ತಡ ಕೊಂಬ್ಡಿ ರೆಸಿಪಿ ತಯಾರಿ ವಿಧಾನವನ್ನು ನಾವು ಇಲ್ಲಿ ಕೆಳಗೆ ನೀಡಿದ್ದು ಟ್ರೈ ಮಾಡಿ ಅಮ್ಮನ ಪ್ರೀತಿ ಗಳಿಸಿ.

Kombdi Vade: Mother’s Day 2014 Spl

ಅಮ್ಮನಿಗೆ ಸ್ಪೆಷಲ್ ಅಡುಗೆ ಮಾಡಲು ನೀವು ರೆಡಿನಾ?

ಪ್ರಮಾಣ: 4
ಸಿದ್ಧತಾ ಸಮಯ: 30 - 40 ನಿಮಿಷ
ಅಡುಗೆಗೆ ಬೇಕಾದ ಸಮಯ: 1 ಗಂಟೆ

ಚಿಕನ್ ಕರಿಗೆ ಬೇಕಾದ ಸಾಮಾಗ್ರಿಗಳು:
*ಚಿಕನ್ 500 ಗ್ರಾಂ
*ಕೊತ್ತಂಬರಿ ಸೊಪ್ಪು - 4 ಎಸಳು (ಕತ್ತರಿಸಿದ್ದು)
*ಶುಂಠಿ - 2 ಇಂಚುಗಳು
*ಬೆಳ್ಳುಳ್ಳಿ - 10 ಎಸಳು
*ಹಸಿಮೆಣಸು - 5
*ಒಣ ಕೆಂಪು ಮೆಣಸು - 5
*ಒಣ ಕೊಬ್ಬರಿ - 1 ಕಪ್ (ತುರಿದದ್ದು)
*ಕೊತ್ತಂಬರಿ ಹುಡಿ - 1 ಸ್ಪೂನ್
*ಈರುಳ್ಳಿ - 2 (ಕತ್ತರಿಸಿದ್ದು)
*ಎಣ್ಣೆ - 3 ಸ್ಪೂನ್
*ಉಪ್ಪು - ರುಚಿಗೆ ತಕ್ಕಷ್ಟು

ವಡೆಗೆ ಬೇಕಾದ ಸಾಮಾಗ್ರಿಗಳು:
.ಗೋಧಿ ಹುಡಿ - 2 ಕ‌ಪ್‌ಗಳು
.ಅರಶಿನ ಹುಡಿ - 1 ಸ್ವಲ್ಪ
.ಮೆಣಸಿನ ಹುಡಿ - 1/2 ಸ್ಪೂನ್
.ಉಪ್ಪು - ರುಚಿಗೆ ತಕ್ಕಷ್ಟು
.ಎಣ್ಣೆ - 3 ಕಪ್‌ಗಳು

ಆರೋಗ್ಯಕರ ಮೊಳಕೆ ಕಾಳು ಪಲಾವ್ ರೆಸಿಪಿ

ಮಾಡುವ ವಿಧಾನ:
1. ಶುಂಠಿ ಬೆಳ್ಳುಳ್ಳಿ ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪಿನ ಪೇಸ್ಟ್ ಅನ್ನು ತಯಾರಿಸಿ.
2. ಚಿಕನ್‌ಗೆ ಉಪ್ಪನ್ನು ಸವರಿ ಸ್ವಲ್ಪ ಹೊತ್ತು ಅದರಲ್ಲಿ ನೆನೆಸಿಡಿ.
3. ಈ ಸಮಯದಲ್ಲಿ ಕೆಂಪು ಮೆಣಸನ್ನು ಕೊಬ್ಬರಿ ಹಾಗೂ ಈರುಳ್ಳಿಯೊಂದಿಗೆ ಹುರಿಯಿರಿ.
4. 5-6 ನಿಮಿಷಗಳ ಕಾಲ ಕೊಬ್ಬರಿಯನ್ನು ಹುರಿಯಿರಿ. ಸ್ವಲ್ಪ ಹೊತ್ತಿನ ನಂತರ ಕೊಬ್ಬರಿ ಬಣ್ಣ ಬದಲಾಗುತ್ತದೆ.
5 .ಈ ಮಿಶ್ರಣ ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಸ್ವಲ್ಪ ನೀರು ಹಾಕಿ ಅದನ್ನು ಅರೆಯಿರಿ.
6. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಲು ಇಡಿ. ಉಪ್ಪು ಬೆರೆಸಿ ನೆನೆಸಿದ ಚಿಕನ್ ಅನ್ನು ಅದಕ್ಕೆ ಹಾಕಿ. 4-5 ನಿಮಿಷಗಳ ಕಾಲ ಅದನ್ನು ಬೇಯಿಸಿ.
7. ನಂತರ ಈರುಳ್ಳಿ, ಕೆಂಪು ಮೆಣಸು ಹಾಗೂ ಕೊಬ್ಬರಿ ಪೇಸ್ಟ್ ಅನ್ನು ಪ್ಯಾನ್‌ಗೆ ಹಾಕಿ. 3-4 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಅದನ್ನು ಬೇಯಿಸಿ.
8. ಕೊತ್ತಂಬರಿ ಹುಡಿ ಉಪ್ಪು ಮತ್ತು ನೀರನ್ನು ಸೇರಿಸಿ.
9. ಮುಚ್ಚಿ 20 ನಿಮಿಷಗಳ ಕಾಲ ಬೇಯಿಸಿ.
10. ಕರಿ ತುಂಬಾ ಗಟ್ಟಿಯಾಗಿಲ್ಲ ಮತ್ತು ಒಣಗಿಲ್ಲ ಎಂಬುದನ್ನ ಖಾತ್ರಿ ಪಡಿಸಿಕೊಳ್ಳಿ.
11. ಶುದ್ಧವಾದ ಕೊತ್ತಂಬರಿ ಸೊಪ್ಪಿನಿಂದ ಕರಿಯನ್ನು ಅಲಂಕರಿಸಿ.
12. ವಡೆಗಾಗಿ, ಗೋಧಿ ಹುಡಿ, ಉಪ್ಪು, ಅರಶಿನ ಮತ್ತು ಕೆಂಪು ಮೆಣಸಿನಿಂದ ಹಿಟ್ಟು ತಯಾರಿಸಿ.
13. ಅದನ್ನು ಒದ್ದೆ ಬಟ್ಟೆಯಲ್ಲಿ ಸುತ್ತಿ 30 ನಿಮಿಷಗಳ ಕಾಲ ತೆಗೆದಿಡಿ.
14. ಸಣ್ಣ ಉಂಡೆಗಳನ್ನಾಗಿ ತಯಾರಿಸಿ ಪೂರಿ ಆಕಾರದಲ್ಲಿ ಲಟ್ಟಿಸಿ.
15. ಪ್ಯಾನ್‌ನಲ್ಲಿ 3 ಕಪ್‌ಗಳಷ್ಟು ಎಣ್ಣೆಯನ್ನು ಬಿಸಿ ಮಾಡಿ ನಂತರ ವಡೆಯನ್ನು ಅದರಲ್ಲಿ ಕರಿಯಿರಿ.

ಕೊಂಬ್ಡಿ ವಡೆಯನ್ನು ಹಸಿ ಈರುಳ್ಳಿ ಮತ್ತು ಉಪ್ಪಿನಕಾಯಿ ಜೊತೆಗೆ ಬಡಿಸಿ.

English summary

Kombdi Vade: Mother’s Day 2014 Spl

No matter how health conscious we become, the smell of food cooking in our mum's kitchen always has a welcoming feeling of home attached to it. That is why mothers are so special. And for Mother's Day 2014, you must cook a dish that is your mum's specialty.
X
Desktop Bottom Promotion