For Quick Alerts
ALLOW NOTIFICATIONS  
For Daily Alerts

ವೀಕೆಂಡ್ ಸ್ಪೆಷಲ್-ಕೊಹಿನೂರ್ ಚಿಕನ್

By Herman Vaz
|

ಈ ವೀಕೆಂಡ್ ನಲ್ಲಿ ಸಮ್ ಥಿಂಗ್ ಸ್ಪೆಷಲ್ ಅಡುಗೆ ಮಾಡಬೇಕೆಂದಿರುವಿರಾ? ಹಾಗಾದರೆ ಈ ಕೊಹಿನೂರ್ ಚಿಕನ್ ಏಕೆ ಟ್ರೈ ಮಾಡಬಾರದು? ತುಂಬಾ ರುಚಿಕರವಾದ ಈ ಚಿಕನ್ ಡ್ರೈಯನ್ನು ಮಾಡುವ ವಿಧಾನ ಕೂಡ ಸುಲಭವಾಗಿದೆ.

ಸಾಮಾನ್ಯವಾಗಿ ಚಿಕನ್ ಮಾಡುವಾಗ ಬಳಸುವ ಅಡುಗೆ ಸಾಮಾಗ್ರಿಗಳನ್ನು ಬಳಸಿಯೇ ಈ ಹೊಸ ರುಚಿಯ ಚಿಕನ್ ಅಡುಗೆ ಮಾಡಬಹುದು. ಇದನ್ನು ಮಾಡುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ ನೋಡಿ:

Kohinoor Chicken Recipe

ಬೇಕಾಗುವ ಸಾಮಾಗ್ರಿಗಳು
* ಚಿಕನ್ 1 ಕೆಜಿ
* ಈರುಳ್ಳಿ 2
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಟೊಮೆಟೊ ಪೇಸ್ಟ್ ಅರ್ಧ ಕಪ್
* ಖಾರದ ಪುಡಿ1/4 ಚಮಚ
* ಕರಿ ಮೆಣಸಿನ ಪುಡಿ 1/4 ಚಮಚ
* ರುಚಿಗೆ ತಕ್ಕ ಉಪ್ಪು
* ಕೇಸರಿ(ಚಿಟಿಕೆಯಷ್ಟು)
* 2 ಟೇಬಲ್ ಸ್ಪೂನ್ ಮೈದಾ
* ಸ್ವಲ್ಪ ಪುದೀನಾ ಸೊಪ್ಪು
* ಸ್ವಲ್ಪ ಕರಿ ಬೇವಿನ ಎಲೆ
* ಒಣ ಮೆಣಸು 3-4
* ಎಣ್ಣೆ 2 ಚಮಚ
* ಫ್ರೆಶ್ ಕ್ರೀಮ್ 2 ಚಮಚ (ಬೇಕಿದ್ದರೆ ಹಾಕಬಹುದು)

ತಯಾರಿಸುವ ವಿಧಾನ:

* ಚಿಕನ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ನಿಂಬೆ ರಸ, ಗರಂ ಮಸಾಲ ಮತ್ತು ಕೇಸರಿ ಹಾಕಿ ಮಿಕ್ಸ್ ಮಾಡಿ ಇಡಿ ಅರ್ಧ ಗಂಟೆ ಇಡಿ.

* ಬಾಣಲೆಗೆ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ.

* ನಂತರ ಮೈದಾ ಹಿಟ್ಟಿಗೆ ಸ್ವಲ್ಪ ನೀರು ಹಾಕಿ ಕಲೆಸಿ, ಅದರಲ್ಲಿ ಚಿಕನ್ ಪೀಸ್ ಗಳನ್ನು ಹಾಕಿ ಮಿಕ್ಸ್ ಮಾಡಿ, ನಂತರ ಕಾದ ಎಣ್ಣೆಗೆ ಹಾಕಿ ಫ್ರೈ ಮಾಡಿ, ಅದು ಕಂದು ಬಣ್ಣಕ್ಕೆ ಬಂದಾಗ ಒಂದು ಪಾತ್ರೆಯಲ್ಲಿ ಹಾಕಿಡಿ.

* ಈಗ ಪ್ಯಾನ್ ಗೆ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾದಾಗ , ಒಣ ಮೆಣಸನ್ನು ಮುರಿದು ಹಾಕಿ, ನಂತರ ಪುದೀನಾ ಎಲೆಯನ್ನು ಹಾಕಿ ಫ್ರೈ ಮಾಡಿ, ನಂತರ ಒಂದು ಬಟ್ಟಲಿನಲ್ಲಿ ಹಾಕಿಡಿ.

* ಈಗ ಅದೇ ಎಣ್ಣೆಗೆ ಕರಿಬೇವಿನ ಎಲೆ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಟೊಮೆಟೊ ಪೇಸ್ಟ್ ಹಾಕಿ, ಫ್ರೆಶ್ ಕ್ರೀಮ್ ಇದ್ದರೆ ಅದನ್ನು ಹಾಕಿ, ನಂತರ ಚಿಕನ್ ಪೀಸ್ ಹಾಕಿ ರುಚಿಗೆ ತಕ್ಕ ಉಪ್ಪು ಮತ್ತು ಕರಿ ಮೆಣಸನ್ನು ಹಾಕಿ ಮಿಕ್ಸ್ ಮಾಡಿ ಬೇಯಿಸಿ. ಗ್ರೇವಿಯನ್ನು ಚಿಕನ್ ಪೀಸ್ ಹೀರಿಕೊಳ್ಳುವಷ್ಟು ಹೊತ್ತು ಬೇಯಿಸಿ.

* ನಂತರ ಫ್ರೈ ಮಾಡಿದ ಪುದೀನಾ ಎಲೆ ಹಾಕಿ ಮಿಕ್ಸ್ ಮಾಡಿದರೆ ಕೊಹಿನೂರ್ ಚಿಕನ್ ಡ್ರೈ ರೆಡಿ.
ಇದನ್ನು ಬಟರ್ ನಾನ್ ಅಥವಾ ಪಲಾವ್ ಜೊತೆ ತಿನ್ನಲು ಸ್ವಾದಿಷ್ಟಕರವಾಗಿರುತ್ತದೆ.

English summary

Kohinoor Chicken Recipe

It's weekend and it's the time for cooking up something innovative. The same old recipes can get extremely boring after a time. So, to provide a welcome change to your taste-buds, you need to experiment with your regular food. Weekend is the perfect time to start with the experiments.
X
Desktop Bottom Promotion