For Quick Alerts
ALLOW NOTIFICATIONS  
For Daily Alerts

ಬಾಯಲ್ಲಿ ನೀರೂರಿಸುವ ಮೀನಿನ ಸಾರು

|

ಈ ಸಾರನ್ನು 'ಮೀನ್ ಪುಳಿ ಮೊಳಗ್' ಎಂದು ಕರೆಯುತ್ತಾರೆ. ಇದು ಕೇರಳ ಶೈಲಿಯ ರೆಸಿಪಿಯಾಗಿದ್ದು, ನೀವು ಖಾರ ಪ್ರಿಯರಾಗಿದ್ದರೆ ಈ ಸಾರು ನಿಮ್ಮ ನಾಲಗೆಯ ರುಚಿ ಹೆಚ್ಚಿಸುವುದು. ಅನ್ನದ ಜೊತೆ ಕಲೆಸಿ ತಿನ್ನಲು ಈ ಮೀನು ಸಾರು ತುಂಬಾ ರುಚಿಕರವಾಗಿರುತ್ತದೆ.

ಈ ಸಾರನ್ನು ಟ್ರೈ ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
ಮೀನು 1 ಕೆಜಿ
ಒಣ ಮೆಣಸು8-10 ಅಥವಾ ನಿಮ್ಮ ಖಾರಕ್ಕೆ ತಕ್ಕಷ್ಟು
ಕೊತ್ತಂಬರಿ 1 ಚಮಚ
ಅರಿಶಿಣ
ಮೆಂತೆ ಅರ್ಧ ಚಮಚ
ಜೀರಿಗೆ ಅರ್ಧ ಚಮಚ
ಬೆಳ್ಳುಳ್ಳಿ 2-3 ಎಸಳು
ಸ್ವಲ್ಪ ಶುಂಠಿ
ಉಪ್ಪು
ಹುಳಿ
ಎಣ್ಣೆ 2 ಚಮಚ
ಕರಿ ಬೇವಿನ ಎಲೆ ಮತ್ತು ಸಾಸಿವೆ

ತಯಾರಿಸುವ ವಿಧಾನ:

* ಮೀನನ್ನು ಶುಚಿ ಮಾಡಿ ತುಂಡುಗಳಾಗಿ ಕತ್ತರಿಸಿ ಉಪ್ಪು, ಅರಿಶಿಣ ಹಾಕಿ.

* ಈಗ ಮೆಣಸು ಮತ್ತು ಕೊತ್ತಂಬರಿಯನ್ನು ಬಾಣಲೆಯನ್ನು ಹಾಕಿ ಕೊತ್ತಂಬರಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ.

* ಜೀರಿಗೆ ಮತ್ತು ಮೆಂತೆಯನ್ನು ಹುರಿಯಿರಿ.

* ಈಗ ಇವೆಲ್ಲಾವನ್ನು ಹಾಕಿ ಹುಣಸೆ ಹಣ್ಣು, ಶುಂಠಿ, ಬೆಳ್ಳುಳ್ಳಿ ಸೇರಿಸಿ ರುಬ್ಬಿ.

* ಈಗ ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ 2 ಚಮಚ ಎಣ್ಣೆ ಹಾಕಿ ಸಾಸಿವೆ ಹಾಕಿ, ನಂತರ ಕರಿ ಬೇವಿನ ಎಲೆ ಹಾಕಿ ರುಬ್ಬಿದ ಮಿಶ್ರಣ ಹಾಕಿ ಅರ್ಧ ಕಪ್ ನೀರು ಸೇರಿಸಿ ಕುದಿಸಿ. ನಂತರ ಮೀನನ್ನು ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ10-15 ನಿಮಿಷ ಬೇಯಿಸಿದರೆ ರುಚಿಯಾದ ಮೀನಿನ ಸಾರು ರೆಡಿ.

English summary

Kerala Fish Curry Recipe | Variety Of Fish Curry | ಕೇರಳ ಶೈಲಿಯಲ್ಲಿ ಮೀನಿನ ಸಾರು | ಅನೇಕ ಬಗೆಯ ಮೀನಿನ ಅಡುಗೆ

This is a Kerala style fish curry recipe. Without adding coconut will prepare this delicious recipe. Spicy with sour taste will add unique taste to this. If you want to try these have look at recipe.
X
Desktop Bottom Promotion