For Quick Alerts
ALLOW NOTIFICATIONS  
For Daily Alerts

ಸ್ಪೆಷಲ್ ರುಚಿಯ ಕಬಾಬ್ ರೆಸಿಪಿ

|

ನೀವು ಕಬಾಬ್ ಪ್ರಿಯರಾಗಿದ್ದರೆ ವಿಭಿನ್ನ ರುಚಿಯ ಕಬಾಬ್ ಟೇಸ್ಟ್ ಮಾಡಿರಬಹುದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಬಾಬ್ ತಯಾರಿಸುತ್ತಾರೆ, ಮತ್ತೆ ಕೆಲವರು ಕಬಾಬ್ ಪೌಡರ್ ಹಾಕಿ ಕಬಾಬ್ ತಯಾರಿಸುತ್ತಾರೆ. ಇಲ್ಲಿ ನಾವು ನೀಡಿರುವ ಕಬಾಬ್ ಅನ್ನು ಸಾಮಾನ್ಯವಾಗಿ ಬಳಸುವ ಮಸಾಲೆ ಹಾಕಿ ಮಾಡಿದರೂ ಇದರ ರುಚಿ ಮಾತ್ರ ನೀವು ಇದುವರೆಗೆ ಟೇಸ್ಟ್ ಮಾಡಿದ ಕಬಾಬ್ ಗಿಂತ ಭಿನ್ನವಾಗಿರುತ್ತದೆ.

ಈ ಕಬಾಬ್ ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

Kebab Mourgh Recipe

ಬೇಕಾಗುವ ಪದಾರ್ಥಗಳು
ಬೋನ್ ಲೆಸ್ ಚಿಕನ್ ಅರ್ಧ ಕೆಜಿ
ನಿಂಬೆ ರಸ 3 ಚಮಚ
ರುಚಿಗೆ ತಕ್ಕ ಉಪ್ಪು
ಗರಂ ಮಸಾಲ 1/2 ಚಮಚ
ಖಾರದ ಪುಡಿ 1 ಚಮಚ
ಮೊಸರು 2 ಚಮಚ
ಚಿಟಿಕೆಯಷ್ಟು ಕೇಸರಿ
ಎಣ್ಣೆ 3 ಚಮಚ
ದುಂಡು ಮೆಣಸು 1
ಈರುಳ್ಳಿ 1

ತಯಾರಿಸುವ ವಿಧಾನ

* ಒಂದು ಬಟ್ಟಲಿನಲ್ಲಿ ಚಿಕನ್, ನಿಂಬೆ ರಸ, ರುಚಿಗೆ ತಕ್ಕ ಉಪ್ಪು, ಗರಂ ಮಸಾಲ, ಖಾರದ ಪುಡಿ, 2 ಚಮಚ ಎಣ್ಣೆ ಮೊಸರು ಹಾಕಿ ಮಿಕ್ಸ್ ಮಾಡಿ 5 ಗಂಟೆ ಕಾಲ ಇಡಿ.

* ಒಂದು ಬಟ್ಟಲಿನಲ್ಲಿ ಬೆಣ್ಣೆ ಹಾಕಿ ಕರಗಿಸಿ, ಅದಕ್ಕೆ 1 ಚಮಚ ಎಣ್ಣೆ ಮತ್ತು ಕೇಸರಿ ಹಾಕಿ.

* ಸ್ವಲ್ಪ ದೊಡ್ಡ ಪೀಸ್ ಗಳಾಗಿ ದುಂಡು ಮೆಣಸಿನಕಾಯಿಯನ್ನು ಕತ್ತರಿಸಿ.

* ಈಗ ತಂತಿಗೆ ಚಿಕನ್, ದುಂಡು ಮೆಣಸಿನಕಾಯಿ ಮತ್ತು ಈರುಳ್ಳಿಯನ್ನು ಚುಚ್ಚಿ, ಅದಕ್ಕೆ ಕೇಸರಿ ಹಾಕಿದ ಬೆಣ್ಣೆಯನ್ನು ಸವರಿ ಗ್ರಿಲ್ಡ್ ಮಾಡಿ, ನಿಂಬೆ ರಸ ಹಿಂಡಿದರೆ ಕಬಾಬ್ ರೆಡಿ.

English summary

Kebab Mourgh Recipe

This kebab recipe for the ardent chicken lovers. It's called the Kebab Mourgh and it tastes absolutely delicious.
Story first published: Monday, November 11, 2013, 11:39 [IST]
X
Desktop Bottom Promotion