For Quick Alerts
ALLOW NOTIFICATIONS  
For Daily Alerts

ಚೈನೀಸ್ ಸ್ಪೆಷಲ್: ಸವಿಯಿರಿ ಗರಿಗರಿಯಾದ ಮೊಟ್ಟೆ ಚಿಲ್ಲಿ ರೆಸಿಪಿ!

|

ಮನೆಯಲ್ಲಿ ಆಪರೂಪಕ್ಕೆ ಒಮ್ಮೆಯಾದರೂ ಚೈನೀಸ್ ಆಹಾರವನ್ನು ತಯಾರಿಸುವುದು ನಿಜಕ್ಕೂ ಒಂದು ಒಳ್ಳೆಯ ಆಲೋಚನೆಯಾಗಿರುತ್ತದೆ. ಇದು ನಿಮಗೆ ಪ್ರತಿದಿನದ ಆಹಾರದಿಂದ ಒಂದು ರುಚಿಕರವಾದ ಬ್ರೇಕ್ ನೀಡುತ್ತದೆ. ಇನ್ನು ಮನೆಯಲ್ಲಿನ ಮಕ್ಕಳು ಸಹ ಬೇರೆ ಆಹಾರಗಳಿಗಿಂತ ಹೆಚ್ಚಾಗಿ ಚೈನೀಸ್ ಆಹಾರವನ್ನು ಇಷ್ಟಪಡುತ್ತಾರೆ.

ಹಾಗಾದರೆ ಆಲೋಚಿಸುವುದು ಏತಕ್ಕೆ, ಚೈನೀಸ್ ರೆಸಿಪಿಯನ್ನು ನಿಮ್ಮ ಮಕ್ಕಳಿಗಾಗಿಯಾದರು ತಯಾರಿಸಬಹುದಲ್ವ. ಬನ್ನಿ ನಿಮಗಾಗಿ ನಾವು ಸುಲಭವಾಗಿ ಮಾಡಬಹುದಾದ ಮೊಟ್ಟೆ (ಎಗ್) ರೆಸಿಪಿಯನ್ನು ನೀಡುತ್ತಿದ್ದೇವೆ. ಈ ಮೊಟ್ಟೆ ರೆಸಿಪಿಯು ನಿಮ್ಮ ಮನೆಯವರ ಬಾಯಿಯಲ್ಲಿ ನೀರೂರಿಸುವಂತಹ ಮೊಟ್ಟೆ ರೆಸಿಪಿಯಾಗಿದೆ. ಇದೊಂದು ಪರಸ್ಪರ ವಿರುದ್ಧವಾದ ರುಚಿಗಳನ್ನು ಹೊಂದಿರುವ ಒಂದು ಖಾದ್ಯವಾಗಿದೆ.

ಇದರಲ್ಲಿ ಸಿಹಿ ಮತ್ತು ಖಾರ ಎರಡೂ ಒಟ್ಟಿಗೆ ಇರುತ್ತದೆ. ಹನಿ ಚಿಲ್ಲಿ ಸಾಸ್ ಮತ್ತು ಮೆಣಸಿನಕಾಯಿಯಿಂದ ಮಾಡಲಾಗುವ ಈ ಖಾದ್ಯವು ಒಮ್ಮೆ ತಿಂದರೆ ಮತ್ತೊಮ್ಮೆ ನೆನೆಸಿಕೊಳ್ಳಬೇಕು ಅಂತಹ ರುಚಿಯನ್ನು ಹೊಂದಿರುತ್ತದೆ. ಮೊಟ್ಟೆಯನ್ನು ಬಹುತೇಕ ಮಕ್ಕಳು ಇಷ್ಟಪಡುವುದರಿಂದ ಹಾಗು ಇದರಲ್ಲಿ ಉತ್ತಮ ಮಟ್ಟದ ಪೋಷಕಾಂಶಗಳು ಇರುವುದರಿಂದ ನಿಮ್ಮ ಮಕ್ಕಳಿಗೆ ಇದನ್ನು ಮಾಡಿಕೊಡಲು ಯಾವುದೇ ಅಡ್ಡಿಯಿಲ್ಲ. ಬನ್ನಿ ಈ ಗರಿಗರಿಯಾದ ಹನಿ ಚಿಲ್ಲಿ ಎಗ್ ರೆಸಿಪಿಯನ್ನು ಹೇಗೆ ತಯಾರಿಸುವುದು ಎಂದು ಒಮ್ಮೆ ಪ್ರಯತ್ನಿಸಿ ನೋಡಿ. 10 ಬಗೆಯ ಸ್ವಾದಿಷ್ಟಕರ ಮೊಟ್ಟೆಯ ರೆಸಿಪಿ

How to make crispy honey chilli Eggs recipe?

ಮೂವರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ : 10 ನಿಮಿಷಗಳು
*ಅಡುಗೆಗೆ ತಗುಲುವ ಸಮಯ : 20 ನಿಮಿಷಗಳು

ಬೇಕಾಗುವ ಪದಾರ್ಥಗಳು
*ಮೊಟ್ಟೆಗಳು - 4 (ಬೇಯಿಸಿ, ನಾಲ್ಕು ಭಾಗ ಮಾಡಿಕೊಂಡಿರಬೇಕು)
*ಕಾರ್ನ್‌ಫ್ಲೋರ್ (ಜೋಳದ ಹಿಟ್ಟು) - 2 ಟೀ. ಚಮಚ
*ಒಣ ಮೆಣಸಿನಕಾಯಿ - 2


*ಶುಂಠಿ - 1 ಸಣ್ಣ ತುಂಡು (ಕತ್ತರಿಸಿದಂತಹುದು)
*ಬೆಳ್ಳುಳ್ಳಿ - 4-5 (ಕತ್ತರಿಸಿದಂತಹುದು)
*ಈರುಳ್ಳಿ ಹೂವು (ಸ್ಪ್ರಿಂಗ್ ಆನಿಯನ್) - 4-5 ಕಡ್ಡಿಗಳು (ಕತ್ತರಿಸಿದಂತಹುದು)
*ರೆಡ್ ಚಿಲ್ಲಿ ಸಾಸ್- 2 ಟೀ. ಚಮಚ
*ಸೋಯಾ ಸಾಸ್ - 1/2 ಟೀ. ಚಮಚ
*ನಿಂಬೆ ರಸ - 1 ಟೀ. ಚಮಚ
*ಜೇನು ತುಪ್ಪ- 1 ಟೀ. ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ- ಹುರಿಯಲು ಬೇಕಾಗುವಷ್ಟು ಡಾಬಾ ಶೈಲಿಯಲ್ಲಿ ಖಾರವಾದ ಮೊಟ್ಟೆ ಕರಿ ರೆಸಿಪಿ

ತಯಾರಿಸುವ ವಿಧಾನ
1. ಬಾಣಲೆಯಲ್ಲಿ ಫ್ರೈ ಮಾಡಲು ಬೇಕಾಗುವಷ್ಟು ಎಣ್ಣೆಯನ್ನು ಹಾಕಿ.
2. ಮೂರು ಟೇಬಲ್ ಚಮಚ ನೀರಿನೊಂದಿಗೆ ಎರಡು ಟೇಬಲ್ ಚಮಚ ಕಾರ್ನ್‌ಫ್ಲೊರ್ ಮಿಶ್ರಣವನ್ನು ಹಾಕಿ ಬಜ್ಜಿ ಹಿಟ್ಟಿನ ರೀತಿ ಮಾಡಿಕೊಳ್ಳಿ.
3. ನಾಲ್ಕು ಭಾಗಗಳಾಗಿ ಕತ್ತರಿಸಿದ ಮೊಟ್ಟೆಯ ಮೇಲೆ ಎರಡು ಟೀ. ಚಮಚ ಕಾರ್ನ್‍ಫ್ಲೋರ್ ಚಿಮುಕಿಸಿ.
4. ಈಗ ತಯಾರಿಸಿಟ್ಟಿರುವ ಹಿಟ್ಟಿನಲ್ಲಿ ಮೊಟ್ಟೆಗಳನ್ನು ಅದ್ದಿ ಚೆನ್ನಾಗಿ ಹುರಿದುಕೊಳ್ಳಿ. ಮೊಟ್ಟೆಗಳು ಬಜ್ಜಿಯ ರೀತಿ ಹೊಂಬಣ್ಣಕ್ಕೆ ಬರುವವರೆ ಬಿಡಿ. ಇದನ್ನು ಆದಷ್ಟು ಮಧ್ಯಮ ಗಾತ್ರದ ಉರಿಯಲ್ಲಿ ಬೇಯಿಸಿ.


5. ಇದೆಲ್ಲ ಮುಗಿದ ಮೇಲೆ ಹುರಿಯಲಾಗಿರುವ ಮೊಟ್ಟೆಗಳನ್ನು ಒಂದು ಪೇಪರ್ ಟಿಶ್ಯೂಗೆ ವರ್ಗಾಯಿಸಿಕೊಂಡು, ಪಕ್ಕದಲ್ಲಿಡಿ.
6. ಇನ್ನು ಎರಡು ಟೇಬಲ್ ಚಮಚದಷ್ಟು ಎಣ್ಣೆಯನ್ನು ಬಾಣಲೆಯ ಮೇಲೆ ಹಾಕಿ ಕಾಯಿಸಿ, ಇದಕ್ಕೆ ಕೆಂಪು ಮೆಣಸಿನ ಕಾಯಿಯನ್ನು ಹಾಕಿ ಹುರಿದುಕೊಳ್ಳಿ. ಒಂದು ನಿಮಿಷ ಇದನ್ನು ಉರಿಯಿರಿ.
7. ಇದಾದ ನಂತರ ಇದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಹಾಕಿ. ಒಂದು ನಿಮಿಷದವರೆಗೆ ಹುರಿಯಿರಿ.
8. ಇದಕ್ಕೆ ಕತ್ತರಿಸಿದ ಈರುಳ್ಳಿ ಹೂವು, ರೆಡ್ ಚಿಲ್ಲಿಸಾಸ್, ಸೋಯಾ ಸಾಸ್, ಉಪ್ಪು, ಜೇನು ತುಪ್ಪ ಮತ್ತು ನಿಂಬೆರಸವನ್ನು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ, 3-4 ನಿಮಿಷಗಳ ಕಾಲ ಮಧ್ಯಮ ಗಾತ್ರದ ಉರಿಯಲ್ಲಿ ಹುರಿದುಕೊಳ್ಳಿ.
9. ಈಗ ಇದಕ್ಕೆ ಉರಿದ ಮೊಟ್ಟೆ ತುಂಡುಗಳನ್ನು ಹಾಕಿ ಮೆಲ್ಲಗೆ ಕಲೆಸಿಕೊಡಿ.
10. ಈಗ ಹಿಟ್ಟಿಗೆ ಒಂದು ಟೇಬಲ್ ಚಮಚ ಕಾರ್ನ್‌ಫ್ಲೋರ್ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ. 2-3 ನಿಮಿಷಗಳ ಕಾಲ ಬೇಯಿಸಿ. ನಂತರ ಹುರಿಯನ್ನು ಆರಿಸಿ.
11. ಇದಾದ ಮೇಲೆ, ಗರಿಗರಿಯಾದ ಹನಿ ಚಿಲ್ಲಿ ಮೊಟ್ಟೆಗಳನ್ನು ಬಡಿಸುವ ತಟ್ಟೆಗೆ ಹಾಕಿಕೊಳ್ಳಿ. ಈರುಳ್ಳಿ ಹೂವಿನಿಂದ ಅಲಂಕರಿಸಿ.
ಈಗ ನಿಮ್ಮ ಮುಂದೆ ಹನಿ ಚಿಲ್ಲಿ ಎಗ್ಸ್ ಖಾದ್ಯ ಸಿದ್ಧವಾಗಿದೆ. ನೀವು ಇದನ್ನು ಸೈಡ್ ಡಿಷ್ ಆಗಿ ಅಥವಾ ಹಸಿವಿನ ಪ್ರಚೋಧಕವಾಗಿ ಬಳಸಿಕೊಳ್ಳಬಹುದು.

ಸಲಹೆ
ನಿಮಗೆ ಅಗತ್ಯವಿದ್ದಲ್ಲಿ ಮೊಟ್ಟೆಗಳ ಬದಲಿಗೆ ಪನ್ನೀರ್ ಅಥವಾ ಚಿಕನ್ ಜೊತೆಗೆ ಸಹ ಈ ರೆಸಿಪಿಯನ್ನು ನೀವು ತಯಾರಿಸಿಕೊಳ್ಳಬಹುದು.

English summary

How to make crispy honey chilli Eggs recipe?

Here is an easy and lip-smacking egg recipe to suit everyone's taste at home. Crispy honey chilli eggs is prepared using two contradicting flavours. It is sweet and spicy at the same time.Check out the recipe for crispy honey chilli eggs. Do give it a try.
X
Desktop Bottom Promotion