For Quick Alerts
ALLOW NOTIFICATIONS  
For Daily Alerts

ಬ್ರೆಡ್ ಎಗ್ ಟೋಸ್ಟ್ ಮಾಡುವುದು ಹೇಗೆ?

By ಲೇಖಕ
|
 How To Make Bread Egg Toast,
ಈ ಅಡುಗೆಯ ವಿಧಾನ ವಿಶಿಷ್ಟವಾದುದಾಗಿದೆ. ಮೊಟ್ಟೆಯನ್ನು ಪ್ರೈ ಮಾಡಿ, ಬ್ರೆಡ್‌ ತುಂಡುಗಳ ನಡುವೆ ಇರಿಸಿ ತಿನ್ನುವುದು. ಇದು ಹತ್ತಾರು ಹೆಸರಿನಿಂದ ಕರೆಸಿಕೊಳ್ಳುತ್ತದೆ. ತನ್ನನ್ನು ತಾನು ವಿಭಿನ್ನ ನಾಮಾಂಕಿತದೊಂದಿಗೆ ಗುರುತಿಸಿಕೊಂಡಿದೆ (ಉದಾಹರಣೆಗೆ ಟಿಪ್ಸ್‌ ನೋಡಿ) ಕರೆಯುವ ಹೆಸರು, ರೀತಿ ಏನೇ ಇರಲಿ, ಇದರ ರುಚಿ ಹಾಗೂ ನೀಡುವ ಉಲ್ಲಾಸ ಬೆಳಗಿನ ಉಪಹಾರವನ್ನು ಅತ್ಯಂತ ಸತ್ವ ಭರಿತ ಹಾಗೂ ಸ್ವಾಧಿಷ್ಟವಾಗಿಸುವಲ್ಲಿ ಸಂಶಯವಿಲ್ಲ. ಬೆಳಗಿನ ಉಪಹಾರವನ್ನು ಇಷ್ಟಪಡದ ಮಕ್ಕಳು ಕೂಡ ಇದನ್ನು ಆಸೆಯಿಂದ ತಿನ್ನುತ್ತಾರೆ.

ಬೇಕಾದ ವಸ್ತು

ಎಲ್ಲಾ ವಸ್ತುಗಳೂ ಒಂದು ಸುತ್ತಿನ ಬಳಕೆಗೆ

1 ಮೊಟ್ಟೆ

1 ಬ್ರೆಡ್‌ ಸ್ಲೈಸ್‌. ಎರಡು ತುಂಡು ಬಳಸಿ ಸ್ಯಾಂಡ್‌ವಿಚ್‌ ಕೂಡ ಮಾಡಿಕೊಳ್ಳಬಹುದು.

1 ಚಮಚೆ ಎಣ್ಣೆ ಅಥವಾ ಬೆಣ್ಣೆ.

ಒಂದು ತುಂಡು ಕಿತ್ತಳೆ ಹಣ್ಣು ಅಥವಾ ತಾಜಾ ಸ್ಟ್ರಾಬೆರಿ (ಇದು ಉಪ ಆಯ್ಕೆ. ಆದರೆ ಇದರಲ್ಲಿರುವ ವಿಟಮಿನ್‌ ಸಿ ಅಂಶ ಆರೋಗ್ಯಕಾರಿ ಹಾಗೂ ಆಹಾರದ ರುಚಿ ಹೆಚ್ಚಿಸುತ್ತದೆ.)

ಸಿದ್ಧಪಡಿಸುವ ಹಂತಗಳು

1. ಬೇಯಿಸುವ ಪ್ಯಾನ್‌ (ಪಾತ್ರೆ)ಗೆ ಎತ್ತಿಟ್ಟುಕೊಂಡ ಎಣ್ಣೆ ಅಥವಾ ಬೆಣ್ಣೆ ಸುರಿಯಿರಿ.

2. ಬ್ರೆಡ್‌ ತುಂಡಿನ ಮಧ್ಯ ಭಾಗದಲ್ಲಿ ಒಂದು ರಂಧ್ರ ಕೊರೆಯಿರಿ. ಅಥವಾ ಎರಡು ಬ್ರೆಡ್‌ ಇದ್ದರು ಒಂದೊಂದಕ್ಕೆ ಒಂದೊಂದು ರಂಧ್ರವನ್ನು ಕೊರೆಯಿರಿ. ಕತ್ತರಿಸುವ ಸೂಕ್ತ ವಿಧಾನವೆಂದರೆ ಗಾಜಿನ ಲೋಟದ ಮೇಲ್ಭಾಗ ಬಳಸಿ ಕತ್ತರಿಸುವುದು. ಬ್ರೆಡ್‌ ಮೇಲೆ ಗಾಜಿನ ಲೋಟವನ್ನು ತಿರುವಿ ಇಟ್ಟು ಒತ್ತಬೇಕು. ಈ ಸೂತ್ರ ಅನುಸರಿಸಿದರೆ ಸುಲಭವಾಗಿ ರಂಧ್ರ ಕೊರೆಯಬಹುದು.

3. ಕತ್ತರಿಸಿದ ಬ್ರೆಡ್‌ ತುಂಡನ್ನು ಪ್ಯಾನ್‌ ಒಳಗೆ ಹಾಕಿ. ಒಂದಿದ್ದರೆ ಒಂದು ಅಥವಾ ಎರಡಿದ್ದರೆ ಎರಡು. ರಂಧ್ರ ಕೊರೆದಾದ ನಂತರ ಉಳಿದ ಬ್ರೆಡ್‌ ತುಂಡನ್ನು ಕೂಡ ಇದರೊಂದಿಗೆ ಹಾಕಿ ಬೆಣ್ಣೆಯಲ್ಲಿ ಫ್ರೈ ಮಾಡಬಹುದು. ಇದು ಹೆಚ್ಚುವರಿ ರುಚಿ ನೀಡುತ್ತದೆ.

4. ಬ್ರೆಡ್‌ನ ಒಂದು ಅಥವಾ ಎರಡು ತುಂಡನ್ನುಕೆಂಪಾಗುವವರೆಗೂ ಫ್ರೈ ಮಾಡಿ. ಅದಾದನಂತರ ತಿರುವಿ ಹಾಕಿ ಇನ್ನೊಂದು ಭಾಗದ ಬ್ರೆಡ್‌ನ್ನು ಕೂಡ ಅದೇ ರೀತಿ ಕೆಂಪಾಗಿಸಿ.

5. ಒಮ್ಮೆ ಎರಡೂ ಭಾಗವೂ ಕೆಂಪಾದ ನಂತರ ತಾವು ಎರಡು ತುಂಡನ್ನು ಸ್ಯಾಂಡ್‌ವಿಚ್‌ ಮಾಡಿಕೊಳ್ಳಲು ಬಯಸುತ್ತೀರಿ ಎಂದಾದರೆ ಒಂದು ತುಂಡನ್ನು ಪ್ಯಾನ್‌ನಿಂದ ಆಚೆ ತೆಗೆಯಿರಿ. ರಂಧ್ರ ಕೊರೆದ ಭಾಗದಲ್ಲಿ ಇನ್ನಷ್ಟು ಎಣ್ಣೆ ಅಥವಾ ಬೆಣ್ಣೆ ಹಚ್ಚಿ. ನಿಧಾನವಾಗಿ ಮೊಟ್ಟೆಯನ್ನು ಒಡೆದು ಈ ರಂಧ್ರ ಇರುವ ಭಾಗದಲ್ಲಿ ಸುರಿಯಿರಿ.

6. ಇನ್ನೂ ಒಂದೆರಡು ನಿಮಿಷ ಬ್ರೆಡ್‌ ಹಾಗೂ ಮೊಟ್ಟೆ ಎರಡನ್ನೂ ಸೇರಿಸಿ ಬೇಯಿಸಿರಿ. ತಿರುವಿ ಹಾಕಿ ಇನ್ನೊಂದು ಭಾವನ್ನೂ ಅದೇ ರೀತಿ ಬೇಯಿಸಿ. ಬೇಯಿಸುವ ಸಂದರ್ಭದಲ್ಲಿ ಒಂದು ಭಾಗ ಬೇಯಿಸುತ್ತಿರುವಾಗ ಬೇಯದ ಇನ್ನೊಂದು ಭಾಗ ಮೇಲ್ಭಾಗದಲ್ಲಿರುತ್ತದೆ. ಅದನ್ನು ತಿರುವಿ ಹಾಕುವ ಮುನ್ನವೇ ಅದರ ಮೇಲೆ ಕುಕ್ಕಿಂಗ್‌ ಸ್ಟ್ರೇಗಳನ್ನು ಬಳಸಿ. ಇದರಿಂದ ತಿರುವಿ ಹಾಕಿದ ಸಂದರ್ಭದಲ್ಲಿ ಬ್ರೆಡ್‌ ಹಾಗೂ ಮೊಟ್ಟೆ ಭಾಗ ಪ್ಯಾನ್‌ಗೆ ಅಂಟಿಕೊಳ್ಳುವುದಿಲ್ಲ.

7. ತಿರುವಿ ಹಾಕಿ ಮತ್ತೆ ಒಂದೆರಡು ನಿಮಿಷ ಬೇಯಿಸಿ. ಪ್ಲೇಟ್‌ ಮೇಲೆ ಸಿದ್ಧವಾದ "ಬಾಸ್ಕೆಟ್‌ ಎಗ್‌' ಇರಿಸಿ. ನಿಮಗಿಷ್ಟವಾಗುವ ಬೆಳಗ್ಗಿನ ಬ್ರೇಕ್‌ಫಾಸ್ಟ್‌ ಸಿದ್ಧ. ಇಷ್ಟಪಟ್ಟು ತಿನ್ನಿ. ಎಂಜಾಯ್‌.

ಟಿಪ್ಸ್‌

ಪಕ್ಕದಲ್ಲೇ ಹೆಚ್ಚುವರಿಯಾಗಿ ಒಂದಿಷ್ಟು ಬೆಣ್ಣೆಯನ್ನು ಇಟ್ಟುಕೊಂಡಿರಿ. ನೀವು ಹಚ್ಚಿನ ಬೆಣ್ಣೆ ಅಥವಾ ಎಣ್ಣೆಯನ್ನು ಒಂದು ಭಾಗದ ಬ್ರೆಡ್‌ ಹೆಚ್ಚಾಗಿ ಹೀರಿಕೊಂಡು ಬಿಡುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಇದು ಸದುಪಯೋಗವಾಗುತ್ತದೆ. ಬ್ರೆಡ್‌ ಬೇಯಿಸುವಾಗ ಕೊಂಚ ಬೆಣ್ಣೆ ಕಡಿಮೆ ಆದರೂ ತಕ್ಷಣ ಹುಡುಕುವ ಪ್ರಮೇಯ ಎದುರಾಗದು. ಇದರಿಂದ ನಿಮ್ಮ ಬ್ರೇಕ್‌ ಫಾಸ್ಟ್‌ ಕೂಡ ಆತಂಕವಿಲ್ಲದೇ ಸಿದ್ಧವಾಗುವುದು.

ಕೊಂಚ ಆರೋಗ್ಯಕ್ಕೆ ಸಹಕಾರಿಯಾಗಿರುವ (ಆದರೆ ಕೊಂಚ ರುಚಿ ಕಡಿಮೆ) ವಿಭಾಗದಲ್ಲಿ ಇದನ್ನು ಮಾಡುವುದಾದರೆ ಬ್ರೆಡ್‌ ಟೋಸ್ಟ್‌ ಮಾಡಿಕೊಂಡ ನಂತರ ಮೂರನೇ ಹಂತದ ನಂತರ ನೇರವಾಗಿ ಆರನೇ ಹಂತಕ್ಕೆ ಜಂಪ್‌ ಆಗಬೇಕು. ಈ ಆಹಾರಕ್ಕೆ ನೀವು ಕೆಲ ಹೊಸ ಸಾಮಗ್ರಿ ಸೇರಿಸುವ ಮೂಲಕ ವಿನೂತನ ಸ್ವರೂಪ ನೀಡಲು ಸಾಧ್ಯ. ಇದಕ್ಕೆ ತುಪ್ಪ, ಬಿಸಿ ಸಾಸ್‌, ಬೆಳ್ಳುಳ್ಳಿ ಪೇಸ್ಟ್‌, ತೆಳುವಾಗಿ ಕತ್ತರಿಸಿದ ಟೊಮೆಟೊ, ಹಣ್ಣುಗಳು, ಸಿರಫ್‌ ಇತ್ಯಾದಿ ಬಳಸಿದರೆ ರುಚಿ ಹೆಚ್ಚುತ್ತದೆ.

ಮೊಟ್ಟೆ ಬೇಯಿಸಲು ಬ್ರೆಡ್‌ ಕತ್ತರಿಸಿ ಉಳಿದಿರುವ ತುಂಡುಗಳನ್ನು ಮೊಟ್ಟೆಯ ಯೋಲ್ಕಾ ಒಳಗೆ ಅದ್ದಿ ತಿನ್ನಲು ಬಳಸಬಹುದು. ಅದರ ರುಚಿಯೂ ಅಪಾರ ಸ್ವಾಧಿಷ್ಟವಾಗಿರುತ್ತದೆ.

ಎಚ್ಚರಿಕೆ

ಸಿದ್ಧಪಡಿಸುವ ಆಹಾರದ ಬಗ್ಗೆ ವಿಪರೀತ ತಾಳ್ಮೆ ಇರಲೇಬೇಕು. ಒಮ್ಮೆ ನೀವು ಬ್ರೆಡ್‌ ರಂಧ್ರದಲ್ಲಿ ಮೊಟ್ಟೆಯನ್ನು ಸಿರುವಿದ ನಂತರ ಅದು ಹರಡಿಕೊಳ್ಳಲು ಕೊಂಚ ಕಾಲಾವಕಾಶ ನೀಡಬೇಕು. ಬ್ರೆಡ್‌ ಮೇಲೆ ಅದು ಹರಡಿಕೊಳ್ಳಲು ಸಹಕರಿಸಬೇಕು. ತಿರುವಿ ಹಾಕಲು ಅನಗತ್ಯ ಅವಸರ ಬೇಡ. ಒಂದೊಮ್ಮೆ ಅವಸರಿಸಿ ಎತ್ತಲು ಮುಂದಾದರೆ ಬ್ರೆಡ್‌ನ ರಂಧ್ರದಿಂದ ಜಾರಿ ಮೊಟ್ಟೆ ಪ್ಯಾನ್‌ನಲ್ಲಿಯೇ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಸಿದ್ಧಪಡಿಸಲು ಕೈಗೊಂಡ ಸಿದ್ಧತೆ ಮಣ್ಣುಪಾಲಾಗುತ್ತದೆ. ಇದರ ತಳ ಗಡ್ಡಿಯಾಗಿ ಅಂಟಿಕೊಳ್ಳುವವರೆಗೂ ತಿರುವಿ ಹಾಕುವ ಗೊಡವೆ ಬೇಡ. ಮೊದಲು ಸುತ್ತಲಿನ ಅಂಚನ್ನು ಬಿಡಿಸಿಕೊಂಡು ಮಧ್ಯಭಾಗದತ್ತ ಬಿಡಿಸಬೇಕು. ಈ ಮಾರ್ಗ ಅನುಸರಿಸಿದರೆ ಉತ್ತಮ ಆಹಾರ ಸಿದ್ಧಪಡಿಸಿಕೊಳ್ಳಲು ಸಾಧ್ಯ.

English summary

How To Make Bread Egg Toast | Variety Of Snacks Recipe | ಬ್ರೆಡ್ ಎಗ್ ಟೋಸ್ಟ್ ಮಾಡುವುದು ಹೇಗೆ? | ಅನೇಕ ಬಗೆಯ ತಿಂಡಿಯ ರೆಸಿಪಿ

Eggs in a basket is a nifty way to fry your egg by containing it inside a piece of bread. This recipe is known by many different names (see Tips for examples) but whatever you call it, this is a tasty and fun way to get your breakfast protein fix, and even picky eaters will enjoy this one!
X
Desktop Bottom Promotion