For Quick Alerts
ALLOW NOTIFICATIONS  
For Daily Alerts

ನಾಲಿಗೆಯ ರುಚಿ ತಣಿಸುವ ಗ್ರೀನ್ ಚಿಲ್ಲಿ ಚಿಕನ್ ರೆಸಿಪಿ

|

ಒಂದು ವೇಳೆ ನೀವು ಕೋಳಿ ಮಾಂಸದ ಪ್ರಿಯರಾಗಿದ್ದಲ್ಲಿ, ನಿಸ್ಸಂಶಯವಾಗಿ ನಿಮ್ಮ ಜೀವನದಲ್ಲಿ ಒಮ್ಮೆಯಾದರು ಚಿಲ್ಲಿ ಚಿಕನ್ ಅನ್ನು ಒಮ್ಮೆಯಾದರು ರುಚಿ ನೋಡಿರುತ್ತೀರಿ. ಇದು ಎಷ್ಟು ರುಚಿಕರವಲ್ಲವೇ? ಆದರೆ ನಮ್ಮಲ್ಲಿ ಬಹುತೇಕ ಮಂದಿ ಸಾಸ್ ಮತ್ತು ಕೆಂಪು ಮೆಣಸಿನಕಾಯಿಯಲ್ಲಿ ಮಾಡಿದ ರೆಡ್ ಚಿಲ್ಲಿ ಚಿಕನ್ ಸವಿದಿರುತ್ತಾರೆ. ಆದರೆ ನೀವು ಎಂದಾದರು ಗ್ರೀನ್ ಚಿಲ್ಲಿ ಚಿಕನ್ ರುಚಿ ನೋಡಿದ್ದೀರಾ? ಗ್ರೀನ್ ಚಿಲ್ಲಿ ಚಿಕನ್ ಎಂದರೆ ಹಸಿ ಮೆಣಸಿನಕಾಯಿಗಳಿಂದ ಮಾಡುವ ಚಿಕನ್, ಖಂಡಿತವಾಗಿ ಚಿಕನ್ ಸವಿಯಲು ಹಾತೊರೆಯುವ ಭೋಜನ ಪ್ರಿಯರಿಗೆ ರಸದೌತಣವನ್ನು ನೀಡುವುದರಲ್ಲಿ ಸಂಶಯವಿಲ್ಲ.

ಇದೇ ವೇಳೆಯಲ್ಲಿ ನೀವು ಒಂದು ವಿಷಯವನ್ನು ಗಮನಿಸಬೇಕು, ಈ ಖಾದ್ಯವನ್ನು ತಯಾರಿಸಲು ತುಂಬಾ ಹಸಿ ಮೆಣಸಿನಕಾಯಿಗಳನ್ನು ಬಳಸಲಾಗುತ್ತದೆ. ಅಪ್ಯಾಯಮಾನವಾದ ಹಸಿ ಮೆಣಸಿನಕಾಯಿಗಳ ಸುವಾಸನೆಯು ಈ ಗ್ರೀನ್ ಚಿಲ್ಲಿ ಚಿಕನ್ ಖಾದ್ಯವನ್ನು ಮೋಡಿ ಮಾಡುವ ಸ್ವಾದಕ್ಕೆ ತೆಗೆದುಕೊಂಡು ಹೋಗುತ್ತದೆ. ರುಚಿ ಹೆಚ್ಚಿಸುವ ಖಾರವಾದ ಚಿಕನ್ ಮಂಚೂರಿಯನ್ ರೆಸಿಪಿ

Hot & Spicy Green Chilli Chicken Recipe

ಹಾಗಾದರೆ ಬನ್ನಿ ಈ ಚಳಿಗಾಲದಲ್ಲಿ ನಿಮ್ಮ ನಾಲಿಗೆಗೆ ಕಿಚ್ಚು ಹಚ್ಚುವಂತಹ ಖಾರ ಮತ್ತು ಮಸಾಲೆಗಳಿಂದ ಕೂಡಿದ ಗ್ರೀನ್ ಚಿಲ್ಲಿ ಚಿಕನ್ ಖಾದ್ಯವನ್ನು ಮಾಡುವುದನ್ನು ತಿಳಿದುಕೊಳ್ಳೋಣ. ಇದು ತುಂಬಾ ವಿಭಿನ್ನವಾಗಿರುತ್ತದೆ, ಮಸಾಲೆಗಳಿಂದ ಕೂಡಿರುತ್ತದೆ ಮತ್ತು ರುಚಿಯು ಸಹ ಅಮೋಘವಾಗಿರುತ್ತದೆ. ಬನ್ನಿ ಒಮ್ಮೆ ಪ್ರಯತ್ನಿಸೋಣ.

*ಪ್ರಮಾಣ : ನಾಲ್ವರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ : 30 ನಿಮಿಷಗಳು
*ಅಡುಗೆಗೆ ತಗುಲುವ ಸಮಯ : 30 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ಕೋಳಿ ಮಾಂಸ - 1 ಕೆ.ಜಿ
*ಹಸಿ ಮೆಣಸಿನಕಾಯಿಗಳು- 1 ಕಪ್ (ಸಣ್ಣದು)
*ಈರುಳ್ಳಿ - 2 (ಸೀಳಾಗಿ ಕತ್ತರಿಸಿದಂತಹುದು)
*ಬೆಳ್ಳುಳ್ಳಿ - 10 ತುಂಡು

*ಶುಂಠಿ - 1 ಮಧ್ಯಮ ಗಾತ್ರದ್ದು
*ತಾಜಾ ಕೊತ್ತಂಬರಿ ಸೊಪ್ಪು - 1/2 ಕಪ್ (ಕತ್ತರಿಸಿದಂತಹುದು)
*ರುಚಿಗೆ ತಕ್ಕಷ್ಟು ಉಪ್ಪು
*ಅರಿಶಿಣ ಪುಡಿ - 1 ಟೀ. ಚಮಚ
*ಕೊತ್ತೊಂಬರಿ ಪುಡಿ- 2 ಟೀ. ಚಮಚ

*ಜೀರಿಗೆ ಪುಡಿ- 1 ಟೀ. ಚಮಚ
*ಗರಂ ಮಸಾಲ ಪುಡಿ- 1ಟೀ. ಚಮಚ
*ಜೀರಿಗೆ - 1 ಟೀ. ಚಮಚ
*ಎಣ್ಣೆ- 3 ಟೀ. ಚಮಚ

ತಯಾರಿಸುವ ವಿಧಾನ
1. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿಗಳನ್ನು ಸ್ವಲ್ಪ ನೀರು ಮತ್ತು ಉಪ್ಪಿನ ಜೊತೆಗೆ ಪೇಸ್ಟ್ ರೀತಿ ರುಬ್ಬಿಕೊಳ್ಳಿ.
2. ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದುಕೊಳ್ಳಿ ಮತ್ತು ಅವುಗಳನ್ನು ಅರ್ಧ ಗಂಟೆಗಳ ಕಾಲ ಈ ಮಿಶ್ರಣದಲ್ಲಿ ನೆನೆಸಿ ಅಂದರೆ ಮೆರಿನೇಟ್ ಮಾಡಿ.
3. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ ಮತ್ತು ಅದರಲ್ಲಿ ಜೀರಿಗೆಯನ್ನು ಹಾಕಿ ಕೆಲ ನಿಮಿಷಗಳ ಕಾಲ ಉರಿಯಿರಿ.
4. ಇದಕ್ಕೆ ಎಲ್ಲಾ ಹಸಿ ಮೆಣಸಿನ ಕಾಯಿಗಳನ್ನು ಹಾಕಿ, ಮೇಲೆ ಸ್ವಲ್ಪ ಉಪ್ಪು ಹಾಕಿ ಮತ್ತು ಮೆಣಸಿನಕಾಯಿಯ ಬಣ್ಣವು ಬದಲಾಗುವವರೆಗೆ ಉರಿಯಿರಿ.

5. ಈಗ ಕೋಳಿ ಮಾಂಸವನ್ನು ಮಧ್ಯಮ ಗಾತ್ರದ ಉರಿಯಲ್ಲಿ 6-7 ನಿಮಿಷಗಳ ಕಾಲ ಉರಿಯಿರಿ.
6. ನಂತರ ಇದಕ್ಕೆ ಕೊತ್ತೊಂಬರಿ ಪುಡಿ, ಉರಿದ ಜೀರಿಗೆ ಪುಡಿ, ಅರಿಶಿಣ ಪುಡಿ ಮತ್ತು ಗರಂ ಮಸಾಲ ಪುಡಿಯನ್ನು ಹಾಕಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, 3-4 ನಿಮಿಷಗಳ ಕಾಲ ಬೇಯಿಸಿ.
7. ಈಗ ಕೋಳಿ ಮಾಂಸವಿರುವ ಪಾತ್ರೆಯನ್ನು ಒಂದು ಮುಚ್ಚಳದ ನೆರವಿನಿಂದ ಮುಚ್ಚಿ, ಕಡಿಮೆ ಉರಿಯಲ್ಲಿ 10-15 ನಿಮಿಷಗಳ ಕಾಲ ಬೇಯಿಸಿ. ಆಗಾಗ ಇದನ್ನು ತಿರುವಿ ಕೊಡಿ.
8. ಇದೆಲ್ಲ ಮುಗಿದ ಮೇಲೆ, ಮುಚ್ಚಳವನ್ನು ತೆಗೆಯಿರಿ, ಉರಿಯನ್ನು ಆರಿಸಿ ಮತ್ತು ನಿಮ್ಮ ಮನೆ ಮಂದಿಗೆ ಬಡಿಸಿ.
ಇದೀಗ ನಿಮ್ಮ ಮುಂದೆ ಖಾರವಾದ ಮತ್ತು ಮಸಾಲೆಯುತವಾದ ಗ್ರೀನ್ ಚಿಲ್ಲಿ ಚಿಕನ್ ರೆಸಿಪಿಯು ಸಿದ್ಧವಾಗಿದೆ. ಇದನ್ನು ಅನ್ನ ಮತ್ತು ರೋಟಿಗಳ ಜೊತೆಗೆ ಸವಿದು ಆನಂದಿಸಿ.

#ಪೋಷಕಾಂಶಗಳ ಪ್ರಮಾಣ
*ಕೆಂಪು ಮೆಣಸಿನಕಾಯಿಗಳ ಜೊತೆಗೆ ಹೋಲಿಸಿದರೆ ಹಸಿ ಮೆಣಸಿನಕಾಯಿಗಳು ಅಷ್ಟೇನು ಅಪಾಯಕಾರಿಯಲ್ಲ. ಇವು ಕ್ಯಾನ್ಸರ್ ವಿರುದ್ಧ ನಿಮ್ಮನ್ನು ಕಾಪಾಡುತ್ತವೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇದರಲ್ಲಿರುವ ಕ್ಯಾಲೊರಿಗಳ ಪ್ರಮಾಣ ಶೂನ್ಯ. ಆದ್ದರಿಂದ ಈ ಬಗೆಯ ಕೋಳಿ ಮಾಂಸದ ಖಾದ್ಯವನ್ನು ಆರೋಗ್ಯಕರ ಎಂದು ಹೇಳಬಹುದು.

English summary

Hot & Spicy Green Chilli Chicken Recipe

Undoubtedly, if you eat chicken then you must have tasted chilli chicken at least once in your lifetime. It's simply delicious, isn't it? So, this winter set your tongue on fire with this hot and spicy green chilli chicken recipe. It is different, spicy and tastes amazing. Do give it a try.
Story first published: Wednesday, December 17, 2014, 11:30 [IST]
X
Desktop Bottom Promotion