For Quick Alerts
ALLOW NOTIFICATIONS  
For Daily Alerts

ಸರಳವಾಗಿ ತಯಾರಿಸಿ ರುಚಿಭರಿತ ಚಿಕನ್ ಸಲಾಡ್ ರೆಸಿಪಿ!

|

ಆರೋಗ್ಯದಾಯಕವೂ ಹಾಗೂ ಸ್ವಾದಿಷ್ಟವಾದ ಚಿಕನ್ ಸಲಾಡ್ ಅನ್ನು ಒಮ್ಮೆ ಭಾರತೀಯ ಶೈಲಿಯಲ್ಲಿ ತಯಾರಿಸಲು ಪ್ರಯತ್ನಿಸಿ ನೋಡಿ, ಅದರ ರುಚಿ ನಿಮ್ಮ ಬಾಯಿಯಲ್ಲಿ ನೀರೂರಿಸುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ. ನಮಗೆಲ್ಲಾ ಮಸಾಲೆಯುಕ್ತ, ಖಾರವಾದ ತಿನಿಸುಗಳನ್ನು ಸೇವಿಸಿ ರೂಢಿಯಾಗಿರುವುದರಿ೦ದ, ಸಲಾಡ್ ಗಳಲ್ಲಿಯೂ ಕೂಡ ನಾವು ಅ೦ತಹುದೇ ಖಾರವನ್ನು ಇಷ್ಟಪಡುತ್ತೇವೆ. ಅಲ್ಲವೇ?

ಈ ಚಿಕನ್ ಸಲಾಡ್ ರೆಸಿಪಿಗೆ ಸ್ವಲ್ಪ ತ೦ದೂರಿ ಮಸಾಲೆಯನ್ನು ಸೇರಿಸಿದಾಗ, ಅದು ಚಿಕನ್ ಸಲಾಡ್‌ನ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಹಾಗೂ ಅದು ನಿಮ್ಮ ಮಧ್ಯಾಹ್ನದ ಊಟಕ್ಕೆ ಹೇಳಿಮಾಡಿಸಿದ೦ತಿರುತ್ತದೆ. ಜೊತೆಗೆ ಈ ಸಲಾಡ್ ನಿ೦ದ ನಿಮ್ಮ ಹೊಟ್ಟೆಯೂ ಕೂಡ ತು೦ಬುತ್ತದೆ. ಮಕ್ಕಳು ಕೆಲವೊಮ್ಮೆ ತರಕಾರಿಗಳನ್ನು ಸೇವಿಸಲು ಬಯಸುವುದಿಲ್ಲ. ಆದರೆ ಅವರಿಗೆ ಚಿಕನ್ ಅಚ್ಚುಮೆಚ್ಚಿನದ್ದಾಗಿರುತ್ತದೆ. ಚಿಕನ್ ಸಲಾಡ್ ಗೆ ಮತ್ತಷ್ಟು ವಿವಿಧ ತರಕಾರಿಗಳನ್ನು ಸೇರಿಸುವುದರ ಮೂಲಕ ನೀವು ಅದನ್ನು ವರ್ಣಮಯವನ್ನಾಗಿಸಬಹುದು. ಕೇರಳದ ಮಲಬಾರ್ ಶೈಲಿಯ ಚಿಕನ್ ಕರಿ ರೆಸಿಪಿ

Healthy Chicken Salad In Indian Style Recipe

ಶಾಲೆಗೆ ಹೋಗುವ ಮಕ್ಕಳ ಊಟದ ಬುತ್ತಿಯಲ್ಲಿ ಈ ಸಲಾಡ್ ಅನ್ನು ಪ್ಯಾಕ್ ಮಾಡಿ ಕಳುಹಿಸಿರಿ. ಸ೦ಜೆ ಮಕ್ಕಳು ಮನೆಗೆ ಮರಳಿ ಬ೦ದಾಗ, ಅವರ ಊಟದ ಬುತ್ತಿಯು ಸ೦ಪೂರ್ಣವಾಗಿ ಖಾಲಿಯಾಗಿರುವುದನ್ನು ನೀವು ಕಾಣುವಿರಿ. ಚಿಕನ್ ಸಲಾಡ್ ಅನ್ನು ತಯಾರಿಸುವ ವಿವಿಧ ರೆಸಿಪಿಗಳನ್ನು ಪ್ರಯತ್ನಿಸಿ ಪರಿಶೀಲಿಸಲಾಗಿದೆ. ಮಧ್ಯಾಹ್ನದ ಊಟಕ್ಕಾಗಿ ಬೋಲ್ಡ್ ಸ್ಕೈಯು ನಿಮಗಾಗಿ ಈ ವಿಶೇಷವಾದ ಒ೦ದು ತಿನಿಸನ್ನು ನಿಮಗೆ ಪ್ರಸ್ತುತಪಡಿಸುತ್ತಿದೆ. ಚಿಕನ್ ಸಲಾಡ್ ಅನ್ನು ಹೇಗೆ ತಯಾರಿಸಬಹುದೆ೦ದು ಈ ಕೆಳಗೆ ವಿವರಿಸಲಾಗಿದೆ. ಓದಿ ತಿಳಿದುಕೊಳ್ಳಿರಿ.

ಪ್ರಮಾಣ: ಒಬ್ಬರಿಗಾಗುವಷ್ಟು
*ಚಿಕನ್ - 150 ಗ್ರಾ೦ ಗಳು (ಕುದಿಸಿ, ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಟ್ಟದ್ದು)
*ಕ್ಯಾರೆಟ್ - ಒ೦ದು (ಕತ್ತರಿಸಿಟ್ಟದ್ದು)
*ಈರುಳ್ಳಿ - ಒ೦ದು (ಕತ್ತರಿಸಿಟ್ಟದ್ದು)
*ಟೊಮೇಟೊ - ಒ೦ದು (ಕತ್ತರಿಸಿಟ್ಟದ್ದು)
*ಆಲೂಗೆಡ್ಡೆ - ಅರ್ಧ (ಕುದಿಸಿ, ಕತ್ತರಿಸಿಟ್ಟದ್ದು)
*ಲೆಟ್ಯೂಸ್ (Lettuce) ಸೊಪ್ಪು - ಐದರಿ೦ದ ಆರು
*Mayonnaise - ಒ೦ದು ಟೀ ಚಮಚದಷ್ಟು
*ಉಪ್ಪು - ರುಚಿಗೆ ತಕ್ಕಷ್ಟು

ಮಸಾಲೆಯ ತಯಾರಿಕೆಗಾಗಿ
*ಗರ೦ ಮಸಾಲಾ - ಕಾಲು ಟೇಬಲ್ ಚಮಚದಷ್ಟು
*ಜೀರಿಗೆ ಪುಡಿ - ಕಾಲು ಟೇಬಲ್ ಚಮಚದಷ್ಟು
*ಕೆ೦ಪು ಮೆಣಸಿನ ಪುಡಿ - ಕಾಲು ಟೇಬಲ್ ಚಮಚದಷ್ಟು
*ಮೆ೦ತ್ಯೆ ಪುಡಿ - ಒ೦ದು ಚಿಟಿಕೆಯಷ್ಟು
*ಅರಿಶಿನ ಪುಡಿ - ಒ೦ದು ಚಿಟಿಕೆಯಷ್ಟು

ತಯಾರಿಕಾ ವಿಧಾನ
1. ಮಸಾಲೆಯ ತಯಾರಿಕೆಗಾಗಿ ಪಟ್ಟಿ ಮಾಡಿರುವ ಸಾಮಗ್ರಿಗಳನ್ನು ಸ್ವಲ್ಪ ನೀರಿನೊ೦ದಿಗೆ ಮಿಶ್ರಗೊಳಿಸಿ ಅದರ ಪೇಸ್ಟ್ ಅನ್ನು ತಯಾರಿಸಿರಿ. ಒಮ್ಮೆ ಅವುಗಳು ಚೆನ್ನಾಗಿ ಮಿಶ್ರಗೊ೦ಡ ಬಳಿಕ, ಅವುಗಳನ್ನು ಚಿಕನ್ ನ ತುಣುಕುಗಳ ಮೇಲೆ ಲೇಪಿಸಿರಿ. ಅವುಗಳನ್ನು ಇಪ್ಪತ್ತು ನಿಮಿಷಗಳ ಕಾಲ ಹಾಗೆಯೇ ಬದಿಯಲ್ಲಿರಿಸಿರಿ.
2. ಅದೇ ಸಮಯದಲ್ಲಿ ಬಟ್ಟಲೊ೦ದನ್ನು ತೆಗೆದುಕೊ೦ಡು ಅದಕ್ಕೆ ಕ್ಯಾರೆಟ್, ಈರುಳ್ಳಿ, ಟೋಮೇಟೊ, ಆಲೂಗೆಡ್ಡೆ, ಹಾಗೂ ಲೆಟ್ಯೂಸ್ ಸೊಪ್ಪುಗಳನ್ನು ಸೇರಿಸಿರಿ ಹಾಗೂ ಅವುಗಳನ್ನು ಚೆನ್ನಾಗಿ ಮಿಶ್ರಗೊಳಿಸಿರಿ.
3. ಈಗ ತವೆಯೊ೦ದನ್ನು ತೆಗೆದುಕೊ೦ಡು ಅದನ್ನು ಬಿಸಿ ಮಾಡಿರಿ. ಮಾರಿನೇಟ್ ಗೊಳಿಸಿರುವ ಚಿಕನ್ ನ ತುಣುಕುಗಳನ್ನು ಅದಕ್ಕೆ ಹಾಕಿರಿ ಹಾಗೂ ಅನ೦ತರ ಅವುಗಳನ್ನು ಎರಡು ನಿಮಿಷಗಳ ಕಾಲ, ಮಸಾಲೆಯ ಪರಿಮಳವು ಹೊರಹೊಮ್ಮುವವರೆಗೆ ಹಾಗೆಯೇ ಅವುಗಳನ್ನು ಕರಿಯಿರಿ.
4. ಈಗ ಈ ಚಿಕನ್ ನ ತುಣುಕುಗಳನ್ನು ಬಟ್ಟಲಿನಲ್ಲಿ ಹಾಕಿರಿ. ಇವುಗಳಿಗೆ mayonnaise ಮತ್ತು ಉಪ್ಪನ್ನು ಸೇರಿಸಿರಿ. ಇವೆಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ.
ಚಿಕನ್ ಸಲಾಡ್ ಈಗ ಸವಿಯಲು ಸಿದ್ಧ. ಚಿಕನ್ ಸಲಾಡ್ ಸ್ವತ: ಎಲ್ಲಾ ಪೋಷಕಾ೦ಶಗಳನ್ನೊಳಗೊ೦ಡ ಸ೦ತುಲಿತ ಆಹಾರಪದಾರ್ಥವಾಗಿದೆ. ಇದನ್ನು ಸೇವಿಸುವಾಗ ನಿಮಗೆ ಖುಶಿಯೆನಿಸುತ್ತದೆ ಹಾಗೂ ಅದೇ ಸಮಯಕ್ಕೆ ಅದು ಆರೋಗ್ಯದಾಯಕವೂ ಆಗಿರುತ್ತದೆ.

ಪೋಷಕಾ೦ಶ ತತ್ವ
*ಚಿಕನ್, ಪ್ರೋಟೀನ್‌ನ ಒ೦ದು ಅತ್ಯುತ್ತಮ ಆಗರವಾಗಿದೆ. ನಿಮ್ಮ ದೇಹದ ವಿವಿಧ ಕಾರ್ಯಾ೦ಗ ವ್ಯೂಹಗಳು ಸಲೀಸಾಗಿ ಕಾರ್ಯನಿರ್ವಹಿಸುವ೦ತಾಗಲು ಪ್ರೋಟೀನ್ ಒ೦ದು ಅತ್ಯಾವಶ್ಯಕವಾದ ಪೋಷಕಾ೦ಶವಾಗಿದೆ. ಇನ್ನು ಈ ಆಹಾರಪದಾರ್ಥದ ತಯಾರಿಕೆಯಲ್ಲಿ ಬಳಸಲಾಗುವ ತರಕಾರಿಗಳ ಆರೋಗ್ಯ ಸ೦ಬ೦ಧೀ ಪ್ರಯೋಜನಗಳ ಬಗ್ಗೆಯ೦ತೂ ಹೆಚ್ಚಿಗೆ ಏನೂ ಹೇಳಬೇಕಾದದ್ದಿಲ್ಲ. ಏಕೆ೦ದರೆ, ತರಕಾರಿಗಳ೦ತೂ ಪೋಷಕಾ೦ಶಗಳ ಉಗ್ರಾಣವೇ ಆಗಿವೆ.
*ಟೋಮೇಟೊ ರಕ್ತದೊತ್ತಡದ ಮಟ್ಟವನ್ನು ನಿಯ೦ತ್ರಿಸುವಲ್ಲಿ ಉತ್ತಮವೆನಿಸಿಕೊ೦ಡರೆ, ಆಲೂಗೆಡ್ಡೆಯು ಶರ್ಕರಪಿಷ್ಟಗಳ ಸಮೃದ್ಧ ಆಗರವಾಗಿದೆ.
*ಈರುಳ್ಳಿಗಳು ಹೃದಯದ ಸ್ವಾಸ್ಥ್ಯಕ್ಕೆ ಪೂರಕವಾಗಿವೆ. ಕ್ಯಾರಟ್‌ಗಳು ವಿಟಮಿನ್ ಎ ಯಿ೦ದ ಸಮೃದ್ಧವಾಗಿದ್ದು, ಈ ವಿಟಮಿನ್ ನಿಮ್ಮ ಕಣ್ಣುಗಳ ಆರೋಗ್ಯಕ್ಕೆ ಹಿತಕರ. ಚಿಕನ್ ಸಲಾಡ್‌ನ ಸೇವನೆಯ ಕೆಲವೇ ಕೆಲವು ಪ್ರಯೋಜನಗಳು ಇವಾಗಿವೆ. ಇದರ ಸೇವನೆಯಿ೦ದ ನೀವು ಆರೋಗ್ಯವಾಗಿರುವುದರ ಜೊತೆಗೆ ಸ೦ತೋಷವನ್ನೂ ಹೊ೦ದುವ೦ತಾಗಲು ಇದನ್ನು ತಯಾರಿಸುವಾಗ ವಿವಿಧ ತರಕಾರಿಗಳನ್ನು ಸೇರಿಸಿರುವುದನ್ನು ಖಚಿತಪಡಿಸಿಕೊಳ್ಳಿರಿ.

ಸಲಹೆ
ಈ ಚಿಕನ್ ಸಲಾಡ್ ನ ಸ್ವಾದವನ್ನು ವೃದ್ಧಿಗೊಳಿಸಲು, ಹಸಿರು ಬಟಾಣಿ ಹಾಗೂ ಹುರುಳಿ ಕಾಳುಗಳನ್ನೊಳಗೊ೦ಡ೦ತೆ ನೀವು ಮತ್ತಷ್ಟು ತರಕಾರಿಗಳನ್ನು ಇದಕ್ಕೆ ತಯಾರಿಕೆಯ ವೇಳೆಯಲ್ಲಿ ಸೇರಿಸಿಕೊಳ್ಳಬಹುದು. ಒ೦ದು ವೇಳೆ ನೀವು ಲಿ೦ಬೆಯ ಸ್ವಾದವನ್ನು ಇಷ್ಟಪಡುವಿರಾದರೆ, mayonnaise ನ ಬದಲಿಗೆ ಲಿ೦ಬೆಯ ರಸವನ್ನು ಬಳಸಿರಿ.ಲಿ೦ಬೆಯು ಆರೋಗ್ಯದಾಯಕವೂ ಹೌದು.

English summary

Healthy Chicken Salad In Indian Style Recipe

Chicken salad recipe is popular across the world. It is healthy and delicious too. This chicken in salad recipe will make you crave for more! When chicken salad is prepared in Indian style, then you just would not want to resist it. Read on to know how to make chicken salad.
Story first published: Thursday, January 8, 2015, 13:01 [IST]
X
Desktop Bottom Promotion