For Quick Alerts
ALLOW NOTIFICATIONS  
For Daily Alerts

ಬಾಯಲ್ಲಿ ನೀರೂರಿಸುವ ಚಿಕನ್ ಚಾಟ್ ರೆಸಿಪಿ

|

ಸಾಮಾನ್ಯವಾಗಿ ನಾವು ಚಾಟ್ ಅನ್ನು ಆರೋಗ್ಯಕರ ಎಂದು ಪರಿಗಣಿಸುವುದಿಲ್ಲ ಅದಕ್ಕಾಗಿಯೇ ನೀವು ಅದರಲ್ಲಿ ಆರೋಗ್ಯಕರ ಸಾಮಾಗ್ರಿಗಳನ್ನು ಬೆರೆಸಿ ತಯಾರಿಸುತ್ತೀರಿ. ಇಲ್ಲಿ ನಾವು ನೀಡುತ್ತಿರುವ ಈ ಡಿಶ್ ಒಂದು ಆರೋಗ್ಯಕರ ರೆಸಿಪಿಯಾಗಿದೆ. ಭಾರತೀಯ ಡಿಶ್ ಆಗಿರುವ ಚಿಕನ್ ಚಾಟ್ ನಿಮಗೆ ತೂಕವನ್ನು ಇಳಿಸುವಲ್ಲಿ ಸಹಕಾರಿಯಾಗಿದೆ.

ನಿಮ್ಮ ಹಸಿವನ್ನು ತಣಿಸುವ ಶಕ್ತಿ ಈ ಚಿಕನ್ ಚಾಟ್‌ನಲ್ಲಿದೆ. ನಿಮಗೆ ಈ ಡಿಶ್ ತಯಾರಿಸಲು ಬೇಕಾಗಿರುವುದು ಬೇಯಿಸಿದ ಚಿಕನ್, ಚಾಟ್ ಮಸಾಲಾ, ಮತ್ತು ಇದನ್ನು ಇನ್ನಷ್ಟು ರುಚಿಕರವನ್ನಾಗಿಸಲು ಸ್ವಲ್ಪ ತರಕಾರಿಗಳು.

ನಿಮ್ಮ ರಾತ್ರಿಯೂಟಕ್ಕೆ ಖಂಡಿತ ಇದು ಭಾರೀ ಎಂದೆನಿಸುವುದಿಲ್ಲ. ಆದ್ದರಿಂದಲೇ ನಿಮ್ಮ ಕುಟುಂಬದೊಡನೆ ಕುಳಿತು ಸವಿಯಲು ಇದೊಂದು ಆರೋಗ್ಯಪೂರ್ಣ ಸ್ನಾಕ್ಸ್ ಆಗಿದೆ. ಹಾಗಿದ್ದರೆ ಈ ರುಚಿಯಾದ ಚಿಕನ್ ಚಾಟ್ ತಯಾರಿಸಲು ಪ್ರಯತ್ನಿಸಿ.

Healthy Chicken Chaat Recipe

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಟೇಸ್ಟ್ ಮಾಡಿ ಕೂರ್ಗಿಗಳ ಸ್ಪೆಶಲ್ ಫ್ರೈ ಚಿಕನ್!

ಪ್ರಮಾಣ:2
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 5 ನಿಮಿಷಗಳು

ಸಾಮಾಗ್ರಿಗಳು:
.ಚಿಕನ್ (ಬೋನ್‌ಲೆಸ್) - 250 ಗ್ರಾಮ್
.ಈರುಳ್ಳಿ - 1 (ಕತ್ತರಿಸಿದ್ದು)
.ಕ್ಯಾರೇಟ್ - 1 (ಸಣ್ಣದಾಗಿ ಕತ್ತರಿಸಿದ್ದು)
.ಬ್ರಕೋಲಿ - 100 ಗ್ರಾಂ (ಕತ್ತರಿಸಿದ್ದು)
.ಲಿಂಬೆ ರಸ - 2 ಸ್ಪೂನ್
.ಹಸಿ ಮೆಣಸು - 2 (ಕತ್ತರಿಸಿದ್ದು)
.ಕೊತ್ತಂಬರಿ ಸೊಪ್ಪು - 2 (ಕತ್ತರಿಸಿದ್ದು)
.ಬಿಳಿ ಕರಿಮೆಣಸು - 1/2 ಸ್ಪೂನ್
.ಚಾಟ್ ಮಸಾಲಾ - 1 ಸ್ಪೂನ್
.ಹುರಿದ ಜೀರಿಗೆ ಹುಡಿ - 1/2 ಸ್ಪೂನ್
. ಕಪ್ಪು ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
1.ಚಿಕನ್ ಮತ್ತು ಬ್ರಕೋಲಿಯನ್ನು ಕುಕ್ಕರ್‌ನಲ್ಲಿ ಎರಡು ವಿಶಲ್ ಬರುವವರೆಗೆ ಬೇಯಿಸಿ.

2.ಚಿಕನ್ ಹಾಗೂ ಬ್ರಕೋಲಿಯಲ್ಲಿದ್ದ ನೀರು ಬಸಿಯಿರಿ.

3.ಸ್ಟೀವ್ ಸಿದ್ಧಪಡಿಸಲು ಈ ಸ್ಟಾಕ್ ಅನ್ನು ತೆಗೆದಿಡಿ.

4.ಚಿಕನ್ ಬೆಂದ ಕೂಡಲೇ, ತರಕಾರಿಗಳು ಮತ್ತು ಮಸಾಲೆ ಸಾಮಾಗ್ರಿಗಳನ್ನು ಕತ್ತರಿಸಿ.

5.ಸಲಾಡ್ ಪ್ಲೇಟ್ ಅನ್ನು ತೆಗೆದುಕೊಂಡು ಅದರಲ್ಲಿ ಚಿಕನ್ ಮತ್ತು ಬ್ರಕೋಲಿ ತುಂಡುಗಳನ್ನಿಡಿ. ಈರುಳ್ಳಿ, ಕ್ಯಾರೇಟ್ ಮತ್ತು ಟೊಮೇಟೋಗಳನ್ನು ಮೇಲ್ಭಾಗದಲ್ಲಿ ಸೇರಿಸಿ.

6.ಚಿಕನ್ ತರಕಾರಿಗಳ ಮೇಲೆ ಲಿಂಬೆ ರಸವನ್ನು ಹಿಂಡಿ.

7.ಬಿಳಿ ಕಾಳುಮೆಣಸು, ಕಪ್ಪು ಉಪ್ಪು ಮತ್ತು ಚಾಟ್ ಮಸಾಲಾದ ಒಗ್ಗರಣೆಯನ್ನು ಡಿಶ್‌ಗೆ ನೀಡಿ.

8.ನಿಮ್ಮ ಬೆರಳುಗಳಿಂದ ಮಿಶ್ರಗೊಳಿಸಿ.

9.ಚಿಕನ್ ಚಾಟ್ ಅನ್ನು ಅಲಂಕರಿಸಲು ಕತ್ತರಿಸಿದ ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳಿ.

10.ನಿಮ್ಮ ಸಂಜೆಯ ಟೀ ಅಥವಾ ಜ್ಯೂಸ್‌ನೊಂದಿಗೆ ಚಿಕನ್ ಚಾಟ್ ಅನ್ನು ಸೇವಿಸಬಹುದು.

English summary

Healthy Chicken Chaat Recipe

Usually, we do not consider chaats as healthy snacks. However, you can always make a dish healthy by using the right ingredients in it. That is why, this chicken chaat recipe, which we are discussing today, can actually be a low fat snacks for weight watchers
Story first published: Monday, April 14, 2014, 10:32 [IST]
X
Desktop Bottom Promotion