ತಂದೂರಿ ಮಸಾಲ ಫಿಶ್ ಕರಿ-ಪಂಜಾಬಿ ರೆಸಿಪಿ

Posted by:
Updated: Thursday, December 13, 2012, 17:29 [IST]
 

ತಂದೂರಿ ಮಸಾಲ ಫಿಶ್ ಕರಿ ಪಂಜಾಬಿ ಶೈಲಿಯ ಅಡುಗೆಯಾಗಿದೆ. ಈ ತಂದೂರಿ ಮಸಾಲ ಫಿಶ್ ಕರಿಯನ್ನು ಮೀನನ್ನು ಫ್ರೈ ಮಾಡಿ ಅಥವಾ ಗ್ರಿಲ್ಡ್ ಮಾಡಿ ತಯಾರಿಸಬಹುದು.

ಹೆಚ್ಚಿನವರಿಗೆ ಮೀನಿನ ಸಾರಿನ ವಾಸನೆ ಇಷ್ಟವಾಗುವುದಿಲ್ಲ, ಆದರೆ ಫ್ರೈ ಮಾಡಿದ್ದನ್ನು ತಿನ್ನುತ್ತಾರೆ. ಅಂತಹವರು ಈ ಮೀನಿನ ಕರಿಯನ್ನು ತಿನ್ನಬಹುದು. ಏಕೆಂದರೆ ಇದು ತಂದೂರಿ ವಾಸನೆಯನ್ನು ಹೊಂದಿರುತ್ತದೆ, ಇದರ ವಾಸನೆ ಹೊಟ್ಟೆ ಹಸಿವನ್ನು ಹೆಚ್ಚಿಸುವಂತೆ ಇರುತ್ತದೆ, ತಿನ್ನಲೂ ತುಂಬಾ ರುಚಿಕರವಾಗಿರುತ್ತದೆ. ಈ ತಂದೂರಿ ಮಸಾಲ ಫಿಶ್ ಕರಿ ರೆಸಿಪಿ ನೋಡಿ ಇಲ್ಲಿದೆ.

ತಂದೂರಿ ಮಸಾಲ ಫಿಶ್ ಕರಿ-ಪಂಜಾಬಿ ರೆಸಿಪಿ

ಬೇಕಾಗುವ ಸಾಮಾಗ್ರಿಗಳು
ಮೀನಿನ ತುಂಡುಗಳು7-8
ತಂದೂರಿ ಮಸಾಲ 3 ಚಮಚ
ಮೊಸರು 1/2 ಕಪ್
ಹಸಿ ಮೆಣಸಿನ ಕಾಯಿ 1-2
ಖಾರದ ಪುಡಿ (ಖಾರಕ್ಕೆ ತಕ್ಕಷ್ಟು) ಮತ್ತು ಅರ್ಧ ಚಮಚ ಕೊತ್ತಂಬರಿ ಪುಡಿ
ನಿಂಬೆ ರಸ 1 ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು
ಎಣ್ಣೆ 2 ಚಮಚ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

1. ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನ ಕಾಯಿಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು.

2. ಈಗ ಅದನ್ನು 2 ಚಮಚ ಮೊಸರು ಹಾಕಿ ಮಿಶ್ರ ಮಾಡಿಕೊಳ್ಳಬೇಕು.

3. ಈಗ ಶುಚಿಗೊಳಿಸಿದ ಮೀನನ್ನು ಈ ಮಿಶ್ರಣದಲ್ಲಿ ಹಾಕಿ 30 ನಿಮಿಷ ಕಾಲ ಇಡಬೇಕು.

4. ನಂತರ ತವಾವನ್ನು ಬಿಸಿ ಮಾಡಿ ಅದರಲ್ಲಿ 1 ಚಮಚ ಎಣ್ಣೆ ಹಾಕಿ ಮೀನನ್ನು ಫ್ರೈ ಮಾಡಬೇಕು.

5. ನಂತರ 2 ಚಮಚ ತಂದೂರಿ ಮಸಾಲ, ರುಚಿಗೆ ತಕ್ಕ ಉಪ್ಪು, ಮೊಸರು ಹಾಕಿ ಚೆನ್ನಾಗಿ ಕದಡಬೇಕು.

6. ಈಗ ಸ್ವಲ್ಪ ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಬಿಸಿ ಮಾಡಬೇಕು. ನಂತರ ಅದರಲ್ಲಿ 1 ಚಮಚ ಎಣ್ಣೆ ಹಾಕಿ ಕತ್ತರಿಸಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ. ನಂತರ ಮೊಸರು ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿ. ಈಗ ಅರ್ಧ ಚಮಚ ಕೊತ್ತಂಬರಿ ಪುಡಿ, ಖಾರದ ಪುಡಿ ಹಾಕಬೇಕು.

7. ನಂತರ ಫ್ರೈ ಮಾಡಿದ ಮೀನನ್ನು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಬಿಸಿ ಮಾಡಿ, ನಿಂಬೆ ರಸ ಹಿಂಡಿದರೆ  ತಂದೂರಿ ಮಸಾಲ ಫಿಶ್ ಕರಿ ರೆಡಿ.

Story first published:  Thursday, December 13, 2012, 17:25 [IST]
English summary

Fish Tandoori Masala From Punjab | Variety Of Fish Recipe | ಪಂಜಾಬಿ ಶೈಲಿಯ ತಂದೂರಿ ಮಸಾಲ ಫಿಶ್ ಕರಿ | ಅನೇಕ ಬಗೆಯ ಮೀನಿನ ರೆಸಿಪಿ

Fish tandoori masala is actually a Punjabi recipe. Traditionally, the fish is first marinated with tandoori masala and then cooked in the tandoor. But few people have a tandoor in their modern homes. So you can grill the fish on an open barbecue or grill it in the microwave.
Write Comments

Subscribe Newsletter
Boldsky ಈ-ಮಳಿಗೆ