For Quick Alerts
ALLOW NOTIFICATIONS  
For Daily Alerts

ವಿಶೇಷ ಬೆಂಗಾಲಿ ರೆಸಿಪಿ ಫಿಶ್ ಕಬಿರಾಜಿ ಕಟ್ಲೇಟ್

|

ಭಾರತದಲ್ಲಿ ಎಲ್ಲಾ ಪ್ರಕಾರದ ಖಾದ್ಯಗಳು ರುಚಿಯಾಗಿರುತ್ತವೆ ಆದ್ದರಿಂದಲೇ ನಾವು ಎಲ್ಲಾ ಪ್ರಕಾರದ ಖಾದ್ಯಗಳನ್ನು ಇಷ್ಟಪಡುತ್ತೇವೆ ಮತ್ತು ಅವುಗಳ ಆರಾಧಕರಾಗಿರುತ್ತೇವೆ. ಇಲ್ಲಿನ ಕಾಲಮಾನಕ್ಕಣುವಾಗಿ ಖಾದ್ಯಗಳು ದೊರೆಯುವುದರಿಂದ ಅವುಗಳ ಪ್ರೇಮಿಗಳು ನಾವಾಗಿರುತ್ತೇವೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದೇವೆ ಸ್ಪೆಶಲ್ ಬೆಂಗಾಲಿ ರೆಸಿಪಿಯಾದ ಫಿಶ್ ಕಟ್ಲೇಟ್! ಹೌದು ನಿಮ್ಮ ಸಂಜೆಯ ಚಹಾ ವೇಳೆಯಲ್ಲಿ ಇದು ನಿಜವಾಗಿ ಉತ್ತಮ ಕಾಂಬಿನೇಶನ್ ಆಗಿರುತ್ತದೆ. ಕ್ರಂಚಿ ಮತ್ತು ಟೇಸ್ಟೀಯಾಗಿರುವ ಈ ಮೀನು ಕಟ್ಲೇಟ್ ನಿಮ್ಮ ನಾಲಗೆಯ ಹಸಿವನ್ನು ತಣಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Fish Kabiraji Cutlet: Special Bengali Recipe

ಬಂಗಾಳದ ಎಲ್ಲಾ ಖಾದ್ಯಗಳೂ ರುಚಿಯಾಗಿರುತ್ತವೆ ಮತ್ತು ಅದರದ್ದೇ ಆದ ವಿಶೇಷತೆಯನ್ನು ಒಳಗೊಂಡಿರುತ್ತದೆ. ಈ ಫಿಶ್ ಕಬಿರಾಜಿ ಕಟ್ಲೇಟ್ ಬಂಗಾಳಿ ಖಾದ್ಯದಂತೆಯೇ ವಿಶೇಷವಾಗಿರುವುದರಿಂದ ಇದು ನಿಮಗೆ ಖಂಡಿತ ಇಷ್ಟವಾಗಿರುತ್ತದೆ. ಮಾಂಸ ಮತ್ತು ಮೀನನ್ನು ಬಳಸಿ ಈ ಕಟ್ಲೇಟ್ ಅನ್ನು ತಯಾರಿಸಲಾಗುತ್ತದೆ.

ಹಾಗಿದ್ದರೆ ಮತ್ತೇಕೆ ತಡ ಈ ವಿಶೇಷವಾದ ಬೆಂಗಾಳಿ ಡಿಶ್ ಅನ್ನು ನಿಮ್ಮದಾಗಿಸಿಕೊಳ್ಳಲು ಹಿಂದೆ ಮುಂದೆ ನೋಡದಿರಿ. ಈ ಯಮ್ಮಿ ಡಿಶ್ ಅನ್ನು ಕ್ಷಣದಲ್ಲೇ ತಯಾರಿಸಿ ನಿಮ್ಮ ಮನೆಯವರ ಮೆಚ್ಚುಗೆಯನ್ನು ಗಳಿಸಿ.

ಪ್ರಮಾಣ: 2
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು

ರುಚಿಕರವಾಗಿರುವ ಮಂಗಳೂರು ಶೈಲಿಯ ಮೀನು ಕರಿ

ಸಾಮಾಗ್ರಿಗಳು:
1. ಫಿಶ್ ಫಿಲ್ಲೆಟ್‌ಗಳು (ಬೇಟ್ಕಿ) - 2 (100 ಗ್ರಾಮ್‌ಗಳು)
2. ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಸ್ಪೂನ್
3. ಹಸಿಮೆಣಸು - 2 (ಹೆಚ್ಚಿದ್ದು)
4. ವಿನೇಗರ್ - 2 ಸ್ಪೂನ್
5. ಕಾಳು ಮೆಣಸಿನ ಹುಡಿ - 1/2 ಸ್ಪೂನ್
6. ಕೊತ್ತಂಬರಿ ಎಲೆಗಳು - 1 ಕಟ್ಟು (ಕತ್ತರಿಸಿದ್ದು)
7. ಕಾರ್ನ್ ಫ್ಲೋರ್ - 1/2 ಕಪ್
8. ಬ್ರೆಡ್ ಕ್ರಂಬ್ಸ್ - 1 ಕಪ್
9. ಮೊಟ್ಟೆಗಳು - 4 (ಬೀಟನ್)
10. ಎಣ್ಣೆ - 1 ಕಪ್
11. ಉಪ್ಪು - ರುಚಿಗೆ ತಕ್ಕಷ್ಟು

ಮೀನು ಪ್ರಿಯರಿಗಾಗಿ-ಮೀನಿನ ಫ್ರೈ

ಮಾಡುವ ವಿಧಾನ:
*ಮೊದಲಿಗೆ ಫಿಶ್ ವಿಲ್ಲೆಟ್‌ ಅನ್ನು ವಿನೇಗರ್, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸನಲ್ಲಿ ಮುಳುಗಿಸಿಡಿ. ಇದನ್ನು 10 ನಿಮಿಷಗಳ ಕಾಲ ಹಾಗೆಯೇ ಬಿಡಿ.

*ಇದನ್ನು ನೀವು ಕೆಲವು ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಕೂಡ ತೆಗೆದಿರಿಸಬಹುದು.

*ಈಗ ಫಿಶ್ ಫಿಲ್ಲೆಟ್‌‌ಗಳನ್ನು ಕರಿಮೆಣಸಿನ ಹುಡಿ ಮತ್ತು ಕೊತ್ತಂಬರಿ ಎಲೆಗಳೊಂದಿಗೆ ಒಗ್ಗರಣೆ ಮಾಡಿಕೊಳ್ಳಿ

*ಇದೇ ಸಮಯದಲ್ಲಿ, ಕಾರ್ನ್‌ಫ್ಲೋರ್, 2 ಸ್ಪೂನ್ ನೀರು, ಉಪ್ಪು ಮತ್ತು ಕೆಲವು ಹಸಿಮೆಣಸನ್ನು ಸೇರಿಸಿಕೊಂಡು ಹಿಟ್ಟನ್ನು ತಯಾರಿಸಿಕೊಳ್ಳಿ.

*ಈ ಹಿಟ್ಟಿನಲ್ಲಿ ಫಿಲ್ಲೆಟ್ಸ್ ಅನ್ನು ಮುಳುಗಿಸಿ, ಬ್ರೆಡ್ ಕ್ರಂಬ್‌ಗಳಲ್ಲಿ ಇದನ್ನು ಉರುಳಿಸಿ ಮತ್ತು ಬೀಟನ್ ಮೊಟ್ಟೆಗಳಲ್ಲಿ ಇದನ್ನು ಮುಳುಗಿಸಿ.

*ಇನ್ನು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ

*ಈ ಬಿಸಿಯಾದ ಎಣ್ಣೆಯಲ್ಲಿ ಫಿಶ್ ಫಿಲ್ಲೆಟ್‌ಗಳನ್ನು ಹುರಿದುಕೊಳ್ಳಿ.

*ಉರಿಯನ್ನು ಕಡಿಮೆ ಮಾಡಿಕೊಳ್ಳಿ ಮತ್ತು 10 ನಿಮಿಷಗಳ ಕಾಲ ಕಂದು ಬಣ್ಣಕ್ಕೆ ಬರುವವರೆಗೆ ಈ ಮೀನುಗಳನ್ನು ಹುರಿದುಕೊಳ್ಳಿ.

*ಈ ಫಿಶ್ ಕಬಿರಾಜಿ ಕಟ್ಲೇಟ್ ಅನ್ನು ಸಾಸಿವೆ ಸಾಸ್ ಹಾಗೂ ತಾಜಾ ಆನಿಯನ್ ರಿಂಗ್‌ಗಳೊಂದಿಗೆ ಬಿಸಿ ಬಿಸಿಯಾಗಿ ಸರ್ವ್ ಮಾಡಿ.

English summary

Fish Kabiraji Cutlet: Special Bengali Recipe

Fish kabiraji cutlet is like the ultimate thing to eat in this season. It is crisp, its is crunchy and it is fish! But unfortunately, you cannot find fish kabiraji cutlet anywhere easily except in Bengal.
Story first published: Monday, June 2, 2014, 10:49 [IST]
X
Desktop Bottom Promotion