For Quick Alerts
ALLOW NOTIFICATIONS  
For Daily Alerts

ಮೊಟ್ಟೆಯ ಬೋಂಡಾ ಮಾಡಲು ಸುಲಭ, ತಿನ್ನಲು ರುಚಿ

By Deepu
|

ಇಂದು ಉದ್ಯೋಗಸ್ಥ ವ್ಯಕ್ತಿಗಳು, ವಿದ್ಯಾರ್ಥಿಗಳು ಅಡುಗೆಗಾಗಿ ತಮ್ಮ ಸಮಯವನ್ನು ಹೆಚ್ಚು ವ್ಯಯಿಸಲು ಇಚ್ಛಿಸುವುದಿಲ್ಲ. ಇವರಿಗೆ ಅತಿ ಕಡಿಮೆ ಸಮಯದಲ್ಲಿ ತಯಾರಾಗುವ ಮತ್ತು ಉತ್ತಮ ಪೋಷಕಾಂಶಗಳುಳ್ಳ ಆಹಾರಗಳೇ ಇಷ್ಟ. ಇವರ ಪ್ರಥಮ ಆಯ್ಕೆಯೆಂದರೆ ಮೊಟ್ಟೆ. ಆಫೀಸ್ ಅಥವಾ ಉದ್ಯೋಗದ ಸ್ಥಳದಿಂದ ಹಿಂದಿರುಗಿದಾಗ ಫ್ರಿಜ್ ತೆರೆದು ಮೊದಲು ತೆಗೆಯುವುದೇ ಇವರು ಮೊಟ್ಟೆಯೊಂದನ್ನು! ಎಗ್‌ ಫ್ರೈಡ್‌ ರೈಸ್‌ ಎಲ್ಲರಿಗೂ ಪ್ರಿಯ!

ಮೊಟ್ಟೆಯನ್ನು ಹಸಿಯಾಗಿ ಸೇವಿಸುವುದು ಆರೋಗ್ಯಕರವಲ್ಲವಾದುದರಿಂದ ಇದನ್ನು ಫ್ರೈ, ಆಮ್ಲೆಟ್ ಅಥವಾ ಇತರ ಸುಲಭ ವಿಧಾನಗಳ ಮೂಲಕ ಕ್ಷಿಪ್ರಕಾಲದಲ್ಲಿಯೇ ತಯಾರಿಸಿ ಸೇವಿಸಬಹುದು. ಬಹುಜನರ ನೆಚ್ಚಿನ ಎಗ್ ಫ್ರೈ ಕೇವಲ ಹತ್ತು ನಿಮಿಷಗಳಲ್ಲಿ ತಯಾರಾಗುತ್ತದೆ. ಕೆಲವರು ಪರೋಟದ ಮೇಲೆ ಮೊಟ್ಟೆಯನ್ನು ಸವರಿ ಕಾವಲಿಯ ಮೇಲೆ ಬೇಯಿಸಿ ಎಗ್ ಪರೋಟಾ ಮಾಡುತ್ತಾರೆ. ಸಿಂಪಲ್ಲಾಗಿ ಒಂದು ಮೊಟ್ಟೆ ಸಾರು

ಇನ್ನೂ ಕೊಂಚ ಹೆಚ್ಚು ಸಮಯ ವ್ಯಯಿಸುವುದಾದರೆ ಮೊಟ್ಟೆಯಿಂದ ಬೋಂಡಾ, ಪಕೋಡಾ, ಮಸಾಲಾ, ಫ್ರೈಡ್ ರೈಸ್ ಮೊದಲಾದ ಖಾದ್ಯಗಳನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ಅದರಲ್ಲೂ ಸಂಜೆ ಆಫೀಸಿನಿಂದ ಮನೆಗೆ ಬಂದ ಬಳಿಕ ನಿಮ್ಮ ನೆಚ್ಚಿನ ಧಾರಾವಾಹಿಯನ್ನು ವೀಕ್ಷಿಸುವ ಹೊತ್ತಿನಲ್ಲಿ ಗರಂ ಗರಂ ಟೀ ಜೊತೆ ಬಿಸಿಬಿಸಿಯಾದ ಮೊಟ್ಟೆಯ ಬೋಂಡಾ ಜೊತೆಗೆ ಇದ್ದರೆ, ಸ್ವರ್ಗಕ್ಕೆ ಮೂರೇ ಗೇಣು! ಹಾಗಾದರೆ ಇನ್ನೇಕೆ ತಡ, ನೀವೂ ಒಮ್ಮೆ ಪ್ರಯತ್ನಿಸಿ ನೋಡಿ....

Egg Bonda

ಪ್ರಮಾಣ
ಒಟ್ಟು ಐದು ಬೋಂಡಾಗಳು (ಮೊಟ್ಟೆಗೊಂದು ಬೋಂಡಾದಂತೆ)
*ಸಿದ್ಧತಾ ಸಮಯ: ಐದು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತರಿಂದ ಮೂವತ್ತು ನಿಮಿಷಗಳು.

ಅಗತ್ಯವಿರುವ ಸಾಮಾಗ್ರಿಗಳು
*ಮೊಟ್ಟೆಗಳು: ಐದು (ಮಧ್ಯಮ ಗಾತ್ರ)
*ಕಡ್ಲೆಹಿಟ್ಟು: - ½ ಕಪ್
*ಕೆಂಪು ಮೆಣಸಿನ ಪುಡಿ - 1 ಚಿಕ್ಕ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಎರಡು ಚಿಕ್ಕ ಚಮಚ)
*ಉಪ್ಪು: ರುಚಿಗೆ ತಕ್ಕಂತೆ
*ಎಣ್ಣೆ: ಎರಡು-ಮೂರು ಕಪ್ - ಹುರಿಯಲು

ವಿಧಾನ
* ಮೊದಲು ಮೊಟ್ಟೆಗಳನ್ನು ಸುಮಾರು ಒಂದೂವರೆಯಿಂದ ಎರಡು ನಿಮಿಷ ಕುದಿಯುವ ನೀರಿನಲ್ಲಿಟ್ಟು ಹೊರತೆಗೆದ ಬಳಿಕ ಐದು ನಿಮಿಷ ತಣಿಯಲು ಬಿಡಿ. ಬಳಿಕ ಸಿಪ್ಪೆ ಸುಲಿಯಿರಿ. (ದೊಡ್ಡ ಮೊಟ್ಟೆಗಳಾದರೆ ಮೂರು ನಿಮಿಷ ಬೇಕು) ಒಟ್ಟಾರೆ, ಒಳಗಿನ ಹಳದಿ ಭಾಗ ಕಪ್ಪಾಗಬಾರದು. ಈ ಮೊಟ್ಟೆಗಳನ್ನು ಎರಡು ಭಾಗವಾಗಿ ಕತ್ತರಿಸಿ ಅಥವಾ ಇಡಿಯಾಗಿ ನಿಮ್ಮಿಷ್ಟದಂತೆ ಬೋಂಡಾ ಮಾಡಬಹುದು.
* ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ನೀರು, ಮೆಣಸಿನ ಪುಡಿ ಉಪ್ಪು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
* ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಇದು ಕುದಿಯಲು ಪ್ರಾರಂಭವಾಗುತ್ತಲೇ ಬೇಯಿಸಿದ ಮೊಟ್ಟೆಗಳನ್ನು ಕಡ್ಲೆಹಿಟ್ಟಿನಲ್ಲಿ ಮುಳುಗಿಸಿ ಪೂರ್ಣ ಆವರಿಸುವಂತೆ ಮಾಡಿ ಎಣ್ಣೆಯಲ್ಲಿ ನಿಧಾನವಾಗಿ ಇಳಿಬಿಡಿ.
* ಒಂದರ ಹಿಂದೊಂದರಂತೆ ಬಾಣಲೆಯಲ್ಲಿ ಹಿಡಿಸುವಷ್ಟು ಬೋಂಡಾಗಳಲ್ಲು ಇಳಿಸಿ.
* ನಡುನಡುವೆ ತಿರುವುತ್ತಾ ಎಲ್ಲಾ ಬೋಂಡಾಗಳು ಚಿನ್ನದ ಹಳದಿ ಬಣ್ಣಕ್ಕೆ ತಿರುಗುವಷ್ಟು ಹುರಿಯಿರಿ.
* ಅಂಚುಗಳು ಕೊಂಚ ಕಪ್ಪಾಗತೊಡಗಿದಾಕ್ಷಣ ಎಣ್ಣೆಯಿಂದ ಹೊರತೆಗೆದು ಎಣ್ಣೆಯನ್ನು ಬಸಿಯುವ ಪಾತ್ರೆಯಲ್ಲಿಡಿ ಅಥವಾ ತೂತುಗಳುಳ್ಳ ಚಮಚದಲ್ಲಿ ಎಣ್ಣೆ ಇಳಿಯುವಂತೆ ಮಾಡಿ.
* ಬಳಿಕ ಎಣ್ಣೆ ಹೀರುವ ಬಿಳಿಯ ಕಾಗದದ ಮೇಲೆ ಇವನ್ನು ಹರಡಿ, ಇವುಗಳ ಮೇಲೂ ಕೆಲವು ಕಾಗದಗಳನ್ನು ಹರಡಿ ಹೆಚ್ಚುವರಿ ಎಣ್ಣೆಯನ್ನು ಹೀರುವಂತೆ ಮಾಡಿ.
* ಬಿಸಿಬಿಸಿ ಇದ್ದಂತೆಯೇ ಟೊಮೆಟೊ ಕೆಚಪ್ ಅಥವಾ ನಿಮ್ಮ ನೆಚ್ಚಿನ ಕೊತ್ತಂಬರಿ ಚಟ್ನಿಯೊಂದಿಗೆ ಸೇವಿಸಿ.

English summary

Egg Bonda: Yummy Snack Recipe

You can always find eggs in the refrigerator of any house. It is one of the easy-to-cook food that is filling as well as healthy. If you have just returned from college or office and want to have some easy snack, then try your hands on egg. You do not even need too many ingredients to prepare egg bonda. Check out the recipe to prepare crisp snack, egg bonda....
Story first published: Monday, January 9, 2017, 13:33 [IST]
X
Desktop Bottom Promotion