For Quick Alerts
ALLOW NOTIFICATIONS  
For Daily Alerts

ಸುಲಭವಾಗಿ ತಯಾರಿಸಬಹುದಾದ ಪೆಪ್ಪರ್ ಚಿಕನ್ ಡ್ರೈ ರೆಸಿಪಿ

|

ಮೆಣಸಿನಿಂದ ಮಾಡಬಹುದಾದ ಪೆಪ್ಪರ್ ಚಿಕನ್ ಖಾದ್ಯಗಳು ಈಗ ಎಲ್ಲೆಡೆಯು ಭಾರೀ ಜನಪ್ರಿಯಗೊಂಡಿವೆ. ನಾವಿಲ್ಲಿ ಹೇಳ ಹೊರಟಿರುವುದು ಅತ್ಯಂತ ರುಚಿಕರವಾದ ಮತ್ತು ತಯಾರಿಸಲು ಅತ್ಯಂತ ಸುಲಭವಾದ ಚಿಕನ್ ಖಾದ್ಯವನ್ನು. ಇನ್ನೇಕೆ ತಡ ಸಿದ್ದರಾಗಿ, ಈ ಸುಲಭವಾದ, ರುಚಿ ರುಚಿಯಾದ, ಖಾರವಾದ ಪೆಪ್ಪರ್ ಚಿಕನ್ ಡ್ರೈಯನ್ನು ತಯಾರಿಸಿ.

ಭಾರತೀಯ ಮಸಾಲೆಗಳ ಸುವಾಸನೆಯು ನಿಮ್ಮ ನಾಲಿಗೆಯಲ್ಲಿರುವ ರುಚಿ ಗ್ರಂಥಿಗಳಲ್ಲಿ ಲಾಲಾರಸವನ್ನು ಉಕ್ಕಿಸಿ ಬಿಡುತ್ತವೆ. ಈ ಪೆಪ್ಪರ್ ಚಿಕನ್ ಖಾದ್ಯವನ್ನು ವಾರದ ದಿನಗಳಲ್ಲಿ ಹೇಳಿ ಮಾಡಿಸಿದಂತಿರುತ್ತದೆ. ಅಪರೂಪವಾದ ಪೆಪ್ಪರ್ ಚಿಕನ್ ಸವಿಯುವುದು, ಅದರಲ್ಲೂ ನೈಜವಾದ ಭಾರತೀಯ ಖಾದ್ಯವನ್ನು ಸವಿಯುವುದರ ರುಚಿಯನ್ನು ನಿಜಕ್ಕೂ ಭೋಜನಪ್ರಿಯರಿಗೆ ಹೇಳಿಕೊಡಬೇಕೆ! ನೀವು ಈ ಪೆಪ್ಪರ್ ಚಿಕನ್ ಅನ್ನು ಸೈಡ್ ಡಿಶ್ ಮತ್ತು ಮೈನ್ ಡಿಶ್ ಆಗಿ ಸಹ ಸವಿಯಬಹುದು. ಈ ಕೋಳಿ ಖಾದ್ಯದಲ್ಲಿರುವ ಕರಿ ಮೆಣಸು ನಿಜಕ್ಕೂ ನಿಮ್ಮ ನಾಲಿಗೆಯ ಮೇಲೆ ಲಾಲಾ ರಸವನ್ನು ಉಕ್ಕಿಸುವುದರಲ್ಲಿ ಅನುಮಾನವೇ ಇಲ್ಲ. ಮೊಘಲ್ ಮಟನ್ ಬಿರಿಯಾನಿ ರೆಸಿಪಿ

*ಪ್ರಮಾಣ: 3-4 ಜನರು
*ಸಿದ್ಧಗೊಳಿಸಲು ತಗುಲುವ ಅವಧಿ: 30 ನಿಮಿಷಗಳು
*ಅಡುಗೆ ಮಾಡಲು ತಗುಲುವ ಸಮಯ: 20 ನಿಮಿಷ

ಬೇಕಾಗುವ ಪದಾರ್ಥಗಳು
*ಮೆಣಸು ಪುಡಿ - 1 ಟೀ ಚಮಚ
*ನಿಂಬೆ ರಸ - 5 ಟೀ ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಅರಿಶಿಣ ಪುಡಿ -1/2 ಟೀ ಚಮಚ
*ಮಸಾಲೆ ಚಿಕನ್‍ಗೆ - ಅರ್ಧ ಕೆ.ಜಿ (ಕತ್ತರಿಸಿದಂತಹುದು)
*ಈರುಳ್ಳಿ - 3 (ಕತ್ತರಿಸಿದಂತಹುದು)
*ಹಸಿ ಮೆಣಸಿನ ಕಾಯಿಗಳು - 5 (ಉದ್ದಕ್ಕೆ ಕತ್ತರಿಸಿದಂತಹುದು)
*ಬೆಳ್ಳುಳ್ಳಿ - 1 (ಜಜ್ಜಿದಂತಹುದು)
*ಶುಂಠಿ - 1 (ಜಜ್ಜಿದಂತಹುದು)
*ಕರಿಮೆಣಸಿನ ಕಾಳುಗಳು - 2 ಟೀ ಚಮಚ
*ಗರಂ ಮಸಾಲ - 1 ಟೀ ಚಮಚ
*ಜೀರಿಗೆ ಪುಡಿ - 1 ಟೀ ಚಮಚ
*ತೆಂಗಿನಕಾಯಿ ಎಣ್ಣೆ - 5 ಟೀ ಚಮಚ
*ಕರಿ ಬೇವಿನ ಎಲೆಗಳು
*ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ-
1. ಕೋಳಿ ಮಾಂಸವನ್ನು ಕುಕ್ಕರಿನಲ್ಲಿ ಹಾಕಿ ಮೂರು ನಾಲ್ಕು ವಿಷಲ್ ಕೇಳುವವರೆಗು ಬೇಯಿಸಿ.
2. ಕೋಳಿ ಮಾಂಸ ಬೆಂದ ನಂತರ ಅದು ತಂಪಗಾಗಲು ಸ್ವಲ್ಪ ಹೊತ್ತು ಪಕ್ಕದಲ್ಲಿರಿಸಿ.
3. ನಂತರ, ಕೋಳಿ ಮಾಂಸದ ತುಂಡುಗಳನ್ನು ಮೆಣಸಿನ ಪುಡಿ,ನಿಂಬೆ ರಸ, ಉಪ್ಪು ಮತ್ತು ಅರಿಶಿಣ ಪುಡಿಯ ಜೊತೆಗೆ ಕಲೆಸಿ, ಹಾಗು ಇದನ್ನು 30 ನಿಮಿಷ ಹಾಗೆಯೇ ನೆನೆಸಿ.
4. ಇನ್ನು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿ, ಇದಕ್ಕೆ ಕತ್ತರಿಸಿದ ಈರುಳ್ಳಿಗಳನ್ನು, ಕರಿ ಬೇವಿನ ಎಲೆಗಳನ್ನು ಮತ್ತು ಹಸಿ ಮೆಣಸಿನ ಕಾಯಿಗಳ ಜೊತೆಗೆ ಜಜ್ಜಿದ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಬೆರೆಸಿ.
5. ಈ ಮಿಶ್ರಣವನ್ನು ಪದಾರ್ಥಗಳ ಸುವಾಸನೆ ನಿಮಗೆ ತಿಳಿಯುವವರೆಗು ಚೆನ್ನಾಗಿ ಕಲೆಸಿ ಕೊಡಿರಿ. ಈರುಳ್ಳಿಗಳು ಹೊಂಬಣ್ಣಕ್ಕೆ ತಿರುಗಬೇಕು.
6. ಇದಕ್ಕೆ ಕರಿ ಮೆಣಸಿನ ಕಾಳುಗಳನ್ನು, ಗರಂ ಮಸಾಲ ಮತ್ತು ಜೀರಿಗೆ ಪುಡಿಯನ್ನು ಹಾಕಿ ಒಂದು ನಿಮಿಷದವರೆಗೆ ಕಲೆಸಿಕೊಡಿ.
7. ಪಾತ್ರೆಯಲ್ಲಿರುವ ಈ ಮಿಶ್ರಣಕ್ಕೆ ಮೆರಿನೇಟ್ ಮಾಡಿರುವ ಕೋಳಿ ಮಾಂಸದ ತುಂಡುಗಳನ್ನು ಹಾಕಿ, ಚೆನ್ನಾಗಿ ಈ ಮಿಶ್ರಣವನ್ನು ಕಲೆಸಿ ಕೊಡಿ.
8. ಈಗ ಉರಿಯನ್ನು ಕಡಿಮೆ ಮಾಡಿ, ಮುಚ್ಚಳದಿಂದ ಬಾಣಲೆಯನ್ನು ಮುಚ್ಚಿ. ಈ ಮಿಶ್ರಣವನ್ನು ಮತ್ತೆ 20 ನಿಮಿಷಗಳ ಕಾಲ ಹಾಗೆಯೆ ಬಿಡಿ. ಆದರೆ ಪ್ರತಿ ಐದು ನಿಮಿಷಗಳಿಗೆ ಒಮ್ಮೆ ಈ ಮಿಶ್ರಣವನ್ನು ಕಲೆಸಿ ಕೊಂಡಿರಿ (ಇದರಿಂದ ಕೋಳಿ ಮಾಂಸವು ತಳಕ್ಕೆ ಅಂಟುವುದಿಲ್ಲ).
9. ಒಮ್ಮೆ ಈ ಕೋಳಿ ಮಾಂಸದ ಖಾದ್ಯವು ತಯಾರಾದ ಮೇಲೆ, ಈ ಮಿಶ್ರಣವು ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಒಮ್ಮೆ ಖಾದ್ಯದ ರುಚಿಯನ್ನು ಪರೀಕ್ಷಿಸಿ, ನಂತರ ಬಡಿಸಬಹುದು.

ಈ ರುಚಿಕರವಾದ ಕೋಳಿ ಮಾಂಸದ ಖಾದ್ಯವು ಅಡುಗೆ ಮಾಡುವ ಅನುಭವವಿಲ್ಲದವರಿಗೆ ಹೇಳಿ ಮಾಡಿಸಿದ ಖಾದ್ಯವಾಗಿದೆ. ಏಕೆಂದರೆ ಇದಕ್ಕೆ ಹೆಚ್ಚಿನ ಸಮಯವು ಬೇಕಾಗಿಲ್ಲ, ಮತ್ತು ಕ್ಲಿಷ್ಟಕರವಾದ ಹಂತಗಳು ಇಲ್ಲ. ಈ ಖಾದ್ಯವನ್ನು ರೋಟಿ, ಅನ್ನ ಮತ್ತು ಬ್ರೆಡ್ ಜೊತೆಗೆ ಬಡಿಸಬಹುದು.

English summary

Easy To Make Pepper Chicken Dry

Pepper chicken recipes are flooded everywhere. But here is something all chicken-lovers would love to try out. This is one of the easiest and tastiest dishes to make if you are craving for some spicy chicken.
Story first published: Monday, October 27, 2014, 12:48 [IST]
X
Desktop Bottom Promotion