For Quick Alerts
ALLOW NOTIFICATIONS  
For Daily Alerts

ತಮಿಳುನಾಡಿನ ನಳಪಾಕ ವೈವಿಧ್ಯ: ಚಿಕನ್ ಚೆಟ್ಟಿನಾಡ್ ರೆಸಿಪಿ

|

ಚಿಕನ್ ಚೆಟ್ಟಿನಾಡ್ ರೆಸಿಪಿಯ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿಲ್ಲ. ತಮಿಳುನಾಡಿನ ಜನಪ್ರಿಯ ಚಿಕನ್ ಪದಾರ್ಥವಾಗಿರುವ ಈ ರೆಸಿಪಿ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಚಿಕನ್ ಅನ್ನು ಮೊದಲಿಗೆ ಹುರಿದು ನಂತರ ಗ್ರೇವಿಗೆ ಇದನ್ನು ಸೇರಿಸಿ ಈ ರೆಸಿಪಿಯನ್ನು ತಯಾರಿಸಲಾಗುತ್ತದೆ. ಇತರೆ ಚಿಕನ್ ಪದಾರ್ಥಗಳಿಗೆ ಹೋಲಿಸಿದಾಗ ಈ ಖಾದ್ಯ ತಯಾರಿಸಲು ಸ್ವಲ್ಪ ಕಾಲಾವಕಾಶವನ್ನು ತೆಗೆದುಕೊಳ್ಳುತ್ತಾದಾದರೂ ಇದರ ರುಚಿ ಮತ್ತು ಅದು ನೀಡುವ ಸುವಾಸನೆ ಮಾತ್ರ ಅಸದಳ.

ಇದನ್ನು ತಯಾರಿಸಲು ನಿಮಗೆ ಸ್ವಲ್ಪ ಸಮಯ ಹಿಡಿಯುತ್ತದೆ ಆದರೆ ಇದನ್ನು ತಯಾರಿಸಿದ ನಂತರ ನಿಮ್ಮ ಮನೆಯವರ ಮೆಚ್ಚುಗೆಯನ್ನು ನೀವು ಪಡೆದುಕೊಂಡಾಗ ಪಟ್ಟ ಶ್ರಮ ಸಾರ್ಥಕ ಎಂಬ ಹೆಮ್ಮೆ ನಿಮ್ಮಲ್ಲಿ ಉಂಟಾಗುತ್ತದೆ. ಹೋಟೆಲ್‌ಗಳಲ್ಲಿ ತಯಾರಾಗುವ ಈ ಚಿಕನ್ ಖಾದ್ಯವನ್ನು ಇಂದಿನ ಲೇಖನದಲ್ಲಿ ನಾವು ನೀಡಿರುವ ತಯಾರಿ ವಿಧಾನದ ಮೂಲಕ ಮನೆಯಲ್ಲೂ ನಿಮಗೆ ತಯಾರಿಸಬಹುದು.

ಆರೋಗ್ಯಕರವಾಗಿ ಮನೆಯಲ್ಲೇ ಮಾಡಬಹುದಾದ ಚಿಕನ್ ಚೆಟ್ಟಿನಾಡ್ ರೆಸಿಪಿ ತಮಿಳುನಾಡಿನ ಖಾದ್ಯ ವಿಧಾನದ ನಳಪಾಕ ಎಂಬುದರಲ್ಲಿ ಸಂಶಯವೇ ಇಲ್ಲ. ಅನ್ನ ಚಪಾತಿ, ರೋಟಿ, ಪರೋಟ ಹೀಗೆ ಪ್ರತಿಯೊಂದು ತಿಂಡಿಗೂ ಒಗ್ಗುವ ಈ ಕರಿ ಸ್ವಾದದ ವಿಭಿನ್ನ ಅನುಭವವನ್ನು ನಿಮಗೆ ಉಂಟುಮಾಡುತ್ತದೆ. ಹಾಗಿದ್ದರೆ ತಡ ಮಾಡದೇ ಕೆಳಗೆ ನಾವು ನೀಡಿರುವ ಚಿಕನ್ ಚೆಟ್ಟಿನಾಡ್ ತಯಾರಿ ವಿಧಾನವನ್ನು ತಿಳಿದುಕೊಂಡು ರೆಸಿಪಿ ತಯಾರಿಸಿ.

Easy Home Recipe For Chicken Chettinad

ಪ್ರಮಾಣ: 2
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು

ಯಮ್ಮೀ... ಈ ಮೆಂತೆ ಚಿಕನ್ ಗ್ರೇವಿ

ಸಾಮಾಗ್ರಿಗಳು
*ಚಿಕನ್ (ಕೋಳಿಮಾಂಸ) - ಅರ್ಧ ಕೆಜಿ
*ಟೊಮೇಟೊ ರಸ - 5-6 ಚಮಚ
*ಈರುಳ್ಳಿ - (ಕತ್ತರಿಸಿದ್ದು) 4
*ಕರಿಬೇವಿನೆಲೆ - 4-5
*ಸಾಸಿವೆ - 2 ಚಮಚ
*ಲವಂಗ - 4
*ಗಸಗಸೆ ಬೀಜ - 1 ಚಮಚ
*ದಾಲ್ಚೀನಿ - 1 ಇಂಚು
*ಹಸಿರು ಏಲಕ್ಕಿ - 3
*ಮೆಣಸಿನ ಪುಡಿ - 3 ಚಮಚ
*ಲಿಂಬೆ ರಸ - 1 ಚಮಚ
*ಎಣ್ಣೆ - 2 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು

ವಾವ್! ಮಂಗಳೂರು ಶೈಲಿಯ ರುಚಿಯಾದ ಸಿಗಡಿ ಫ್ರೈ

ಮಾಡುವ ವಿಧಾನ
*ಮೊದಲಿಗೆ ಗಸಗಸೆ ಬೀಜ, ದಾಲ್ಚೀನಿ, ಹಸಿರು ಏಲಕ್ಕಿ ಮತ್ತು ಲವಂಗವನ್ನು ಹುರಿದುಕೊಳ್ಳಿ ನಂತರ ಇವುಗಳನ್ನು ಪಾತ್ರೆಯಿಂದ ಹೊರತೆಗೆದು ತಣ್ಣಗಾದ ನಂತರ ಚೆನ್ನಾಗಿ ರುಬ್ಬಿಕೊಳ್ಳಿ
*ಇನ್ನು ದಪ್ಪ ತಳದ ಪಾತ್ರೆಯನ್ನು ಗ್ಯಾಸ್ ಮೇಲಿರಿಸಿ ಇದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿಕೊಂಡು ಚಿಕನ್ ತುಂಡುಗಳನ್ನು ಹುರಿದುಕೊಳ್ಳಿ
*ಚಿಕನ್ ತುಂಡುಗಳು ಪಾತ್ರೆಗೆ ಅಂಟಿಕೊಳ್ಳದಂತೆ ಎಚ್ಚರಿಕೆ ವಹಿಸಿ. ಚಿಕನ್ ಅನ್ನು ಹುರಿದು 5 ನಿಮಿಷಗಳ ತರುವಾಯ ಇದನ್ನು ತಟ್ಟೆಯಲ್ಲಿ ತೆಗೆದಿರಿಸಿಕೊಳ್ಳಿ
*ತದನಂತರ ಇದೇ ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆಯಿಂದ ಒಗ್ಗರಣೆ ಮಾಡಿಕೊಳ್ಳಿ.
*ಪಾತ್ರೆಗೆ ಈರುಳ್ಳಿ ಹಾಕಿ ಚಿನ್ನದ ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿದುಕೊಳ್ಳಿ
*ಇನ್ನು ಪಾತ್ರೆಗೆ ಟೊಮೇಟೊ ರಸವನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ ಮತ್ತು ಚಿಕನ್ ಚೆಟ್ಟಿನಾಡ್ ಗ್ರೇವಿಯನ್ನು 5 ನಿಮಿಷಗಳ ಕಾಲ ಮಂದ ಉರಿಯಲ್ಲಿ ಬೇಯಿಸಿಕೊಳ್ಳಿ.
*ಈಗಾಗಲೇ ಕಡೆದಿಟ್ಟುಕೊಂಡಿರುವ ಮಸಾಲೆಯನ್ನು ಪಾತ್ರೆಗೆ ಸೇರಿಸಿಕೊಳ್ಳಿ ಇದಕ್ಕೆ ಮೆಣಸಿನ ಪುಡಿ ಹಾಕಿ ಮಿಶ್ರ ಮಾಡಿ.
*ಸಣ್ಣ ಉರಿಯಲ್ಲಿ 2-3 ನಿಮಿಷಗಳ ಕಾಲ ಗ್ರೇವಿಯನ್ನು ಬೇಯಿಸಿಕೊಳ್ಳಿ. ಇದಕ್ಕೆ ಹುರಿದ ಚಿಕನ್ ತುಂಡುಗಳನ್ನು ಸೇರಿಸಿಕೊಳ್ಳಿ
* ನಂತರ ಇದಕ್ಕೆ ಉಪ್ಪು ಹಾಗೂ ಲಿಂಬೆ ರಸ ಸೇರಿಸಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಇದಕ್ಕೆ 1 ಕಪ್‌ನಷ್ಟು ನೀರನ್ನು ಹಾಕಿ ಸ್ವಲ್ಪ ಸಮಯ ಬೇಯಿಸಿಕೊಳ್ಳಿ. ಬಿಸಿ ಅನ್ನ ಅಥವಾ ಚಪಾತಿ ರೋಟಿಯೊಂದಿಗೆ ಚಿಕನ್ ಚೆಟ್ಟಿನಾಡ್ ಗ್ರೇವಿ ಸೂಪರ್ ಕಾಂಬಿನೇಶನ್ ಆಗಿದೆ.

English summary

Easy Home Recipe For Chicken Chettinad

There is hardly anyone who has not heard of the Chicken Chettinad recipe. You might have ordered this popular dish at restaurants But have you ever thought of making Chicken Chettinad at home? Most people perceive this special Tamil recipe to be a very tough one. But contrary to popular beliefs, it is rather easy to prepare.
Story first published: Friday, August 22, 2014, 12:24 [IST]
X
Desktop Bottom Promotion