For Quick Alerts
ALLOW NOTIFICATIONS  
For Daily Alerts

ಸುಲಭವಾದ ಮತ್ತು ಗರಿಗರಿಯಾದ ಕೇರಳ ಚಿಕನ್ ಫ್ರೈ ರೆಸಿಪಿ

|

ಕೇರಳ ಶೈಲಿಯ ಚಿಕನ್ ಫ್ರೈಯನ್ನು ನೀವು ನಿಮ್ಮ ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟಕ್ಕೆ ಮಾಡಿಕೊಳ್ಳಬಹುದು. ಈ ಭಾರತೀಯ ಖಾದ್ಯವನ್ನು ನೀವು ಕೆಲವೊಂದು ಮಸಾಲೆ ಪದಾರ್ಥಗಳನ್ನು ಮತ್ತು ತೆಂಗಿನ ಎಣ್ಣೆಯ ಸಹಾಯದಿಂದ ಮಾಡಿಕೊಳ್ಳಬಹುದು. ನಿಸ್ಸಂಶಯವಾಗಿ ಈ ಖಾದ್ಯವನ್ನು ನೀವು ಅತಿ ಸುಲಭವಾಗಿ ತಯಾರಿಸಿಕೊಳ್ಳಬಹುದು.

ಮಲೆಯಾಳಿಗಳಷ್ಟೇ ಅಲ್ಲದೆ ಇಡೀ ದಕ್ಷಿಣ ಭಾರತದ ಜನರು ಈ ಕೇರಳ ಶೈಲಿಯ ಚಿಕನ್ ಫ್ರೈಯನ್ನು ಇಷ್ಟಪಡುತ್ತಾರೆ. ಕೇರಳದಲ್ಲಿ ಇದನ್ನು "ನಡನ್" ಚಿಕನ್ ಫ್ರೈ ಎಂದು ಕರೆಯುತ್ತಾರೆ. ಕೇರಳದ ರೆಸಿಪಿಗಳು ತಮ್ಮದೇ ಆದ ವಿಶೇಷ ಬಗೆಯ ಮಸಾಲೆ ಪದಾರ್ಥಗಳನ್ನು ಒಳಗೊಂಡಿರುತ್ತವೆ. ಈ ಕೇರಳದ ಕೋಳಿ ಖಾದ್ಯವನ್ನು ತಯಾರಿಸುವುದು ಸುಲಭ ಮತ್ತು ಇದರ ರುಚಿಯು ಅದ್ಭುತ. ಬನ್ನಿ ಇದನ್ನು ತಯಾರಿಸುವ ಬಗೆ ಹೇಗೆ ಎಂಬುದನ್ನು ತಡ ಮಾಡದೆ ತಿಳಿದುಕೊಳ್ಳೋಣ. ರುಚಿರುಚಿಯಾದ ಖಾರ ಚಿಕನ್ ಪೆಪ್ಪರ್ ಫ್ರೈ

Easy and Crisp Kerala Chicken Fry Recipe

ಪ್ರಮಾಣ: 3-4 ಜನರಿಗೆ ಬಡಿಸಬಹುದು
ತಯಾರಿಸಲು ಬೇಕಾಗುವ ಸಮಯ - 1 ಗಂಟೆ
ಅಡುಗೆಗೆ ತಗುಲುವ ಸಮಯ - 10 ನಿಮಿಷ

ನಿಮಗೆ ಬೇಕಾಗಿರುವುದು
*ಕೋಳಿ ಮಾಂಸ - 1/2 ಕೆ.ಜಿ (ಕತ್ತರಿಸಿದ ಮತ್ತು ಬೇಯಿಸಿದ)
*ಜೀರಿಗೆ ಪುಡಿ = 2 ಟೇಬಲ್ ಸ್ಪೂನ್
*ಕೆಂಪು ಮೆಣಸಿನ ಕಾಯಿ- 5-6 (ಕತ್ತರಿಸಿದಂತಹುದು)
*ಬೆಳ್ಳುಳ್ಳಿ - 6-7 ತುಂಡುಗಳು
*ಕರಿ ಬೇವು ಮತ್ತು ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
1.ಜೀರಿಗೆ ಪುಡಿ, ಕೆಂಪು ಮೆಣಸಿನ ಕಾಯಿ, ಬೆಳ್ಳುಳ್ಳಿ, ಉಪ್ಪು ಮತ್ತು ಕರಿ ಬೇವುಗಳನ್ನು ಸ್ವಲ್ಪ ನೀರಿನ ಜೊತೆಗೆ ಚೆನ್ನಾಗಿ ರುಬ್ಬಿಕೊಳ್ಳಿ, ಅಲ್ಲದೆ ಇದನ್ನು ಪೇಸ್ಟ್ ರೀತಿ ತಯಾರಿಸಿಕೊಳ್ಳಿ.
2.ಇದಾದ ಮೇಲೆ, ಈ ಪೇಸ್ಟಿನಲ್ಲಿ ಕೋಳಿ ಮಾಂಸವನ್ನು ಚೆನ್ನಾಗಿ ಅದ್ದಿ, ನೆನೆಸಿ.
3.ತದನಂತರ ಒಂದು ಗಂಟೆಯವರೆಗೆ ಇದನ್ನು ನೆನೆಯಲು ಬಿಡಿ.
4.ಈ ಮಸಾಲೆಯು ಚೆನ್ನಾಗಿ ಕೋಳಿ ಮಾಂಸಕ್ಕೆ ಹಿಡಿದ ಮೇಲೆ, ಅದನ್ನು ತೆಂಗಿನ ಕಾಯಿ ಎಣ್ಣೆಯಲ್ಲಿ 10 ನಿಮಿಷಗಳ ಕಾಲ ಹೊಂಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿಕೊಂಡರೆ, ರುಚಿ ರುಚಿಯಾದ ಕೇರಳ ಚಿಕನ್ ಫ್ರೈ ರೆಸಿಪಿ ರೆಡಿ!
ಈ ಕೇರಳ ಶೈಲಿಯ ಚಿಕನ್ ಫ್ರೈಯನ್ನು ಅನ್ನ ಅಥವಾ ರೋಟಿಗಳ ಜೊತೆಗೆ ಸೇವಿಸಬಹುದು. ಆದರೆ ಇದನ್ನು ಬಡಿಸುವಾಗ ಕತ್ತರಿಸಿದ ಈರುಳ್ಳಿ ಮತ್ತು ನಿಂಬೆ ತುಂಡುಗಳು ಇಡುವುದನ್ನು ಮರೆಯಬೇಡಿ.

ಪೋಷಕಾಂಶಗಳ ಮಾಹಿತಿ
*ನೀವು ಒಂದು ವೇಳೆ ಡಯಟ್ ಮಾಡುವವರಾಗಿದ್ದಲ್ಲಿ, ಕೇರಳ ಶೈಲಿಯ ಚಿಕನ್ ಫ್ರೈ ನಿಮಗಲ್ಲ ಕ್ಷಮಿಸಿ! ಆದರೆ ನೀವು ಡಯಟ್ ಮಾಡದೆ ಇರುವವರಾಗಿದ್ದಲ್ಲಿ ಅಥವಾ ಒಂದು ದಿನದ ಮಟ್ಟಿಗೆ ಡಯಟ್ ಜೊತೆಗೆ ರಾಜಿ ಮಾಡಿಕೊಳ್ಳುವವರಾಗಿದ್ದಲ್ಲಿ, ಖಂಡಿತವಾಗಿ ಒಮ್ಮೆ ರುಚಿ ನೋಡಿ! ಮುಂದೆ ಇದನ್ನು ನೆನೆಸಿಕೊಂಡಾಗಲೆಲ್ಲ ಬಾಯಿಯಲ್ಲಿ ನೀರೂರುವುದು. ಕೋಳಿ ಮಾಂಸದಲ್ಲಿ ಕಡಿಮೆ ಕೊಬ್ಬು ಇರುವ ಪ್ರೋಟಿನ್‍ಗಳು ಇರುತ್ತವೆ. ಈ ಪ್ರೋಟಿನ್‍ಗಳು ಸ್ನಾಯುಗಳ ಬೆಳವಣಿಗೆಗೆ ಅತ್ಯಾವಶ್ಯಕವಾಗಿ ಬೇಕಾಗುತ್ತವೆ.

#ಸಲಹೆ
ತೆಂಗಿನ ಎಣ್ಣೆಯಲ್ಲಿ ನೀವು ಇದನ್ನು ಡೀಪ್ ಫ್ರೈ ಮಾಡುವಾಗ, ಅದಕ್ಕೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ. ಇದು ಕೇರಳ ಶೈಲಿಯ ಚಿಕನ್ ಫ್ರೈನ ರುಚಿಯನ್ನು ಇಮ್ಮಡಿಗೊಳಿಸುತ್ತದೆ.

English summary

Easy and Crisp Kerala Chicken Fry Recipe

Kerala style chicken fry is something you would love to try out for lunch or dinner. It is an Indian dish that is prepared with few spices, and is deep fried in coconut oil. Kerala fried chicken is that it is very easy to make and it tastes delicious as well. Read on to know the recipe of Kerala style chicken fry.
Story first published: Friday, October 31, 2014, 18:31 [IST]
X
Desktop Bottom Promotion