For Quick Alerts
ALLOW NOTIFICATIONS  
For Daily Alerts

ಚಿಕನ್ ಪ್ರಿಯರ ಮನತಣಿಸುವ ಚಾಪ್ಲಿ ಕಬಾಬ್ ಸವಿದಿರುವಿರಾ?

|

ಚಿಕನ್‌ನಿಂದ ಅನೇಕ ಬಗೆಯ ಸವಿರುಚಿಯ ಅಡುಗೆ ತಯಾರಿಸಬಹುದು. ಅದರಲ್ಲೂ ಇದರಿಂದ ತಯಾರಿಸುವ ಕಬಾಬ್ ತುಂಬಾ ರುಚಿಕರವಾಗಿರುತ್ತದೆ. ನಾನ್ ವೆಜ್ ಪ್ರಿಯರಿಗೆ ನಾಲಿಗೆಯನ್ನು ತಣಿಸುವಂತೆ ಮನವನ್ನು ಮುದಗೊಳಿಸುವಂತೆ ಕಬಾಬ್ ರೆಸಿಪಿ ಪ್ರಿಯವಾಗಿರುತ್ತದೆ.

ಈ ಮೃದುವಾದ ಮಾಂಸ ನಾಲಿಗೆಯಲ್ಲಿ ಕರಗುವ ಅನುಭವವೇ ಆಹಾ ಎಷ್ಟೊಂದು ಆಹ್ಲಾದಕರ. ಮೊಘಲರು ನವಾಬರು ಎಲ್ಲರೂ ಕಬಾಬ್ ಪ್ರಿಯರಾಗಿದ್ದರು. ಮುಗಲೈ ಸಿಝ್ವನ್ನಲ್ಲಿ ಕಬಾಬ್ ಹೆಸರು ತುಂಬಾ ಪ್ರಸಿದ್ಧವಾಗಿದೆ.

 Delicious Chapli Kebab Recipe

ಇದರಿಂದ ವಿಧ ವಿಧದ ಡಿಶ್‌ಗಳನ್ನು ತಯಾರಿಸಬಹುದಾಗಿದ್ದು ನಿಮ್ಮ ನಾಲಗೆಯ ಹಸಿವನ್ನು ಇಂಗಿಸುವುದು ಖಂಡಿತ. ಗಲ್ವಾಟಿ, ಶೇಕ್, ಹೀಗೆ ಕಬಾಬ್ ಡಿಶ್ ಬೇರೆ ಬೇರೆ ಹೆಸರುಗಳಿಂದ ಪ್ರಸಿದ್ಧವಾಗಿದೆ.

ಅದೇ ರೀತಿ ಚಾಪ್ಲಿ ಕಬಾಬ್ ಕೂಡ ಒಂದು ಸ್ವಾದಿಷ್ಟ ಕಬಾಬ್ ಡಿಶ್ ಆಗಿದೆ. ಅಪ್‌ಘಾನ್‌ನಿಂದ ಬಂದ ಈ ಅದ್ಭುತ ರೆಸಿಪಿ ನಿಮ್ಮ ಕಬಾಬ್ ಟೇಸ್ಟ್ ಅನ್ನು ಪರಿಪೂರ್ಣಗೊಳಿಸುವುದು ಖಂಡಿತ. ದಾಳಿಂಬೆ ಬೀಜಗಳನ್ನು ಈ ಕಬಾಬ್ ತಯಾರಿಸುವಾಗ ಮುಖ್ಯವಾಗಿ ಬಳಸುತ್ತಾರೆ. ಹಾಗಿದ್ದರೆ ಇದರ ತಯಾರಿ ವಿಧಾನವನ್ನು ನೀವು ತಿಳಿದುಕೊಂಡು ಒಮ್ಮೆ ಖಂಡಿತ ಟ್ರೈ ಮಾಡಲೇಬೇಕು ಅಲ್ಲವೇ

ರುಚಿಕರವಾದ ಹೈದ್ರಾಬಾದೀ ಕಬಾಬ್ ರೆಸಿಪಿ!

ಪ್ರಮಾಣ:5
ಸಿದ್ಧತಾ ಸಮಯ: 30 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು:
*ಮಾಂಸದ ತುಂಡು (ಬೀಟ್ ಅಥವಾ ಮಟನ್) - 500 ಗ್ರಾಮ್ಸ್
* ಪೂರ್ಣ ಗೋಧಿ ಹಿಟ್ಟು - 4 ಸ್ಪೂನ್
* ಮೊಟ್ಟೆ - 1 ಬೀಟನ್ ಮಾಡಿದ್ದು
* ಈರುಳ್ಳಿ - 1 (ಸಣ್ಣದಾಗಿ ಹೆಚ್ಚಿದ್ದು)
* ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಸ್ಪೂನ್
* ಟೊಮೇಟೋ - 2 (ಸಣ್ಣಗೆ ಹೆಚ್ಚಿದ್ದು)
* ಜೀರಿಗೆ ಹುಡಿ - 1 ಸ್ಪೂನ್
* ಕೊತ್ತಂಬರಿ ಹುಡಿ - 1 ಸ್ಪೂನ್
* ಮೆಣಸಿನ ಹುಡಿ - 1 ಸ್ಪೂನ್
* ಅನಾರ್ದನ (ಒಣಗಿದ ದಾಳಿಂಬೆ ಬೀಜ) - 1 ಸ್ಪೂನ್
* ಗರಂ ಮಸಾಲಾ ಹುಡಿ - 1 ಸ್ಪೂನ್
* ಉಪ್ಪು - ರುಚಿಗೆ ತಕ್ಕಷ್ಟು
* ಬೇಕಿಂಗ್ ಪೌಡರ್- 1/2 ಸ್ಪೂನ್
* ಕೊತ್ತಂಬರಿ ಎಲೆ - 4 ಸ್ಪೂನ್
* ಎಣ್ಣೆ - ಹುರಿಯಲು

ಚಿಕನ್ ರೇಷ್ಮಿ ಕಬಾಬ್-ಸ್ಟಾಟರ್ಸ್

ಮಾಡುವ ವಿಧಾನ:
1. ಮಾಂಸವನ್ನು ಮೊದಲು ಚೆನ್ನಾಗಿ ನೀರಿನಲ್ಲಿ ತೊಳೆದುಕೊಳ್ಳಿ.
2. ಎಣ್ಣೆಯನ್ನು ಬಿಟ್ಟು ಉಳಿದ ಸಾಮಾಗ್ರಿಗಳನ್ನು ಪಾತ್ರೆಯಲ್ಲಿ ಮಿಶ್ರ ಮಾಡಿಕೊಳ್ಳಿ.
3. ಈ ಮಿಶ್ರಣವನ್ನು ಅರ್ಧ ಗಂಟೆಗಳವರೆಗೆ ರೆಫ್ರಿಜರೇಟ್ ಮಾಡಿ.
4. ಅರ್ಧ ಗಂಟೆಯ ನಂತರ, ಫ್ರಿಡ್ಜ್‌ನಿಂದ ಮಿಶ್ರಣವನ್ನು ಹೊರತೆಗೆದು ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ.
5. ನಿಮ್ಮ ಅಂಗೈಯಿಂದ ಉಂಡೆಗಳನ್ನು ಒತ್ತಿ ಮಧ್ಯಮ ಗಾತ್ರವನ್ನಾಗಿ ಮಾಡಿಕೊಳ್ಳಿ.
6. ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ ಈ ಮಧ್ಯಮ ಗಾತ್ರದ ಉಂಡೆಯನ್ನು ಫ್ರೈ ಮಾಡಿಕೊಳ್ಳಿ ಮತ್ತು ಇದು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದ ನಂತರ ಎಣ್ಣೆಯಿಂದ ಹೊರತೆಗೆಯಿರಿ.
7. ಒಮ್ಮೆ ಚೆನ್ನಾಗಿ ಕರಿದ ನಂತರ ಪ್ಲೇಟ್‌ಗೆ ಫ್ರೈ ಮಾಡಿದ ಕಬಾಬ್ ಅನ್ನು ವರ್ಗಾಯಿಸಿ.

ಸ್ವಾದಿಷ್ಟ ಚಾಪ್ಲಿ ಕಬಾಬ್ ಬಡಿಸಲು ಸಿದ್ಧವಾಗಿದೆ. ನಾನ್ ಅಥವಾ ಮೊಸರಿನೊಂದಿಗೆ ಈ ಕಬಾಬ್ ಅನ್ನು ಸವಿಯಿರಿ.

English summary

Delicious Chapli Kebab Recipe

Kebab is a heavenly food for the non vegetarian foodies. The feeling of the soft meat melting in the mouth, giving out robust flavours, is simply divine and matchless. Kebab was a specialty of the royal kitchens of the Nawabs and the Nizams.
Story first published: Saturday, May 17, 2014, 11:04 [IST]
X
Desktop Bottom Promotion