For Quick Alerts
ALLOW NOTIFICATIONS  
For Daily Alerts

ಈ ರೀತಿಯೆಲ್ಲಿ ಚಿಕನ್ ಅಡುಗೆ ಟ್ರೈ ಮಾಡಿ ನೋಡಿ

|

ಪ್ರತೀಬಾರಿ ಚಿಕನ್ ಅಡುಗೆ ಮಾಡುವಾಗ ಒಂದೇ ರುಚಿಯಲ್ಲಿ ಮಾಡಿ ಬೋರಾಗಿದೆಯೇ? ಹಾಗಾದರೆ ಈ ಕೂಲ್ ಸೌತೆಕಾಯಿ ಚಿಕನ್ ಅಡುಗೆ ಟ್ರೈ ಮಾಡಬಾರದೇಕೆ?

ಚಿಕನ್ ಅಡುಗೆಗೆ ಸೌತೆಕಾಯಿ ಸೇರಿಸಿದರೆ ವಿಶಿಷ್ಟವಾದ ಸ್ವಾದ ಹೊಂದಿರುತ್ತದೆ. ಈ ಸ್ಪೆಷಲ್ ಚಿಕನ್ ಅಡುಗೆ ಸೂಪರ್ ಟೇಸ್ಟ್ ಹೊಂದಿದ್ದು, ಇದನ್ನು ಮಾಡುವ ವಿಧಾನವನ್ನು ಇಲ್ಲಿ ಹೇಳಿದ್ದೇವೆ ನೋಡಿ:

Cucumber Chicken Recipe

ಬೇಕಾಗುವ ಸಾಮಾಗ್ರಿಗಳು
ಚಿಕನ್ 1 ಕೆಜಿ
ಆಲೂಗಡ್ಡೆ 2(ಸಿಪ್ಪೆ ಸುಲಿದು ಚೌಕಾಕಾರದಲ್ಲಿ ಕತ್ತರಿಸಿದ್ದು)
ಸೌತೆಕಾಯಿ 1-2(ದೊಡ್ಡದಾತ್ರದ ಸೌತೆಕಾಯಿ ಆದರೆ 1 ಸಾಕು)
ಮೊಸರು 1 ಕಪ್
ಈರುಳ್ಳಿ2
ಟೊಮೆಟೊ 1
ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
3-4 ಎಸಳು ಬೆಳ್ಳುಳ್ಳಿ
ರುಚಿಗೆ ತಕ್ಕ ಉಪ್ಪು
ಏಲಕ್ಕಿ2
ಒಂದೂವರೆ ಇಂಚಿನಷ್ಟು ದೊಡ್ಡದಿರುವ ಚಕ್ಕೆ ( ಪುಡಿ ಮಾಡಿದ್ದು)
ಕ್ಯಾಪ್ಸಿಕಂ1
ಟೊಮೆಟೊ 1
ಅರಿಶಿಣ ಪುಡಿ -ಅರ್ಧ ಚಮಚ ಮಿಕ್ಸ್ ಮಾಡಲು, ಮತ್ತೆ ಅರ್ಧ ಚಮಚ ಸಾರಿಗೆ ಹಾಕಲು
ಖಾರದ ಪುಡಿ-ಅರ್ಧ ಚಮಚ ಮಿಕ್ಸ್ ಮಾಡಲು, ಮತ್ತೆ ಅರ್ಧ ಚಮಚ ಸಾರಿಗೆ ಹಾಕಲು
ಕೊತ್ತಂಬರಿ ಪುಡಿ-ಅರ್ಧ ಚಮಚ ಮಿಕ್ಸ್ ಮಾಡಲು, ಮತ್ತೆ ಅರ್ಧ ಚಮಚ ಸಾರಿಗೆ ಹಾಕಲು
ಜೀರಿಗೆ ಪುಡಿ-ಅರ್ಧ ಚಮಚ ಮಿಕ್ಸ್ ಮಾಡಲು, ಮತ್ತೆ ಅರ್ಧ ಚಮಚ ಸಾರಿಗೆ ಹಾಕಲು
ಚಿಕನ್ ಮಸಾಲ ಪುಡಿ 1 ಚಮಚ
ಹಸಿ ಮೆಣಸು 2-3(ಮಧ್ಯದಲ್ಲಿ ಎರಡು ಭಾಗ ಮಾಡಿದ್ದು)
ಎಣ್ಣೆ 2 ಚಮಚ (ಸಾಸಿವೆ ಎಣ್ಣೆ ಬೆಸ್ಟ್)

ತಯಾರಿಸುವ ವಿಧಾನ:

*ಚಿಕನ್ ಅನ್ನು ಸ್ವಚ್ಛ ಮಾಡಿ ಮೊಸರು, ಸೌತೆಕಾಯಿ, ಉಪ್ಪು, ಅರಿಶಿಣ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ 2 ಗಂಟೆ ಕಾಲ ಇಡಬೇಕು.

* ಈಗ ಕ್ಯಾಪ್ಸಿಕಂ, ಈರುಳ್ಳಿ, ಟೊಮೆಟೊ, ಶುಂಠಿ, ಬೆಳ್ಳುಳ್ಳಿಯನ್ನು ಗಟ್ಟಿಯಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ.

* ಪಾತ್ರೆಗೆ 1ಚಮಚ ಎಣ್ಣೆ ಅದರಲ್ಲಿ ಆಲೂಗಡ್ಡೆಯ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ಒಂದು ಬಟ್ಟಲಿನಲ್ಲಿ ಹಾಕಿಡಿ.

* ಈಗ ಆಲೂಗಡ್ಡೆ ಫ್ರೈ ಮಾಡಿದ ಪಾತ್ರೆಗೆ ಮತ್ತೊಂದು ಚಮಚ ಎಣ್ಣೆ ಹಾಕಿ ಅದರಲ್ಲಿ ರುಬ್ಬಿದ ಪೇಸ್ಟ್ ಹಾಕಿ ಫ್ರೈ ಮಾಡಿ, ಎಣ್ಣೆ ಮೇಲೆ ತೇಲುವವರೆಗೆ ಫ್ರೈ ಮಾಡಿ.

* ಈಗ ಅರಿಶಿಣ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ, ಮಸಾಲೆ ಮಿಕ್ಸ್ ಮಾಡಿಟ್ಟ ಚಿಕನ್ ಹಾಕಿ, ಚಿಕನ್ ಮಸಾಲ ಪುಡಿ, ಫ್ರೈ ಮಾಡಿದ ಆಲೂಗಡ್ಡೆ, ಹಸಿ ಮೆಣಸಿನಕಾಯಿ ಹಾಕಿ ಚಿಕನ್ ಬೇಯುವವರೆಗೆ ಬೇಯಿಸಿ, ನಂತರ ಏಲಕ್ಕಿ ಮತ್ತು ಸೌತೆಕಾಯಿಂದ ಅಲಂಕರಿಸಿ.

ಬಿಸಿಬಿಸಿಯಾದ ಚಿಕನ್ ಸಾರನ್ನು ಅನ್ನ/ಚಪಾತಿ/ರೊಟ್ಟಿ ಜೊತೆ ಸರ್ವ್ ಮಾಡಿ.

English summary

Cucumber Chicken Recipe

Adding cucumber in this chicken recipe adds a unique flavour to the dish. This is also an excellent recipe for kids since this chicken recipe is not very spicy and tastes extremely delicious. This unique dish goes very well with steamed rice and chapatis.
X
Desktop Bottom Promotion