For Quick Alerts
ALLOW NOTIFICATIONS  
For Daily Alerts

ಫಟಾಫಟ್ ತಯಾರಿಸಿ ಗರಿಗರಿಯಾದ ಮೊಟ್ಟೆಯ ರೆಸಿಪಿ!

By Super
|

ಮನೆಯಲ್ಲಿ ಚೈನೀಸ್ ಫುಡ್ ತಯಾರಿಸುವುದು ಯಾವಾಗಲು ಖುಷಿಯನ್ನು ನೀಡುವ ವಿಚಾರವಾಗಿರುತ್ತದೆ. ಇದು ಪ್ರತಿದಿನ ಮತ್ತೆ ಮತ್ತೆ ಅದನ್ನೆ ಸೇವಿಸುವ ಆಹಾರದ ಏಕತಾನತೆಯಿಂದ ಒಂದಷ್ಟು ವಿರಾಮವನ್ನು ಸಹ ನೀಡುತ್ತದೆ. ಅದರಲ್ಲೂ ಊಟ ಎಂದರೆ ಮೈಲು ದೂರ ಓಡುವಂತಹ ಮಕ್ಕಳು ಸಹ ಚೈನೀಸ್ ಆಹಾರಗಳೆಂದರೆ ಬಾಯಿಯಲ್ಲಿ ನೀರೂರಿಸಿಕೊಂಡು ಬಂದು ನಿಲ್ಲುತ್ತಾರೆ. ಹಾಗಾದರೆ ಏಕೆ ಇಂತಹ ಆಹಾರಗಳನ್ನು ನೀವು ತಯಾರಿಸಬಾರದು? ಬನ್ನಿ ಒಮ್ಮೆ ಒಂದು ಕೈ ನೋಡೇ ಬಿಡೋಣ.

ನಿಮ್ಮ ಮಕ್ಕಳಿಗೆ ಮತ್ತು ಮನೆಯವರಿಗೆ ಇಷ್ಟವಾಗುವುದಾದರೆ ಸ್ಪೆಷಲ್ ಚೈನೀಸ್ ಚಿಕನ್ ರೆಸಿಪಿಯನ್ನು ತಯಾರಿಸಿ. ಇಲ್ಲವಾದಲ್ಲಿ ನಾವು ನಿಮಗಾಗಿ ಇಲ್ಲಿ ಬಾಯಿಯಲ್ಲಿ ನೀರೂರಿಸುವಂತಹ ಮೊಟ್ಟೆಯ ಖಾದ್ಯವನ್ನು ತಿಳಿಸಿಕೊಡುತ್ತಿದ್ದೇವೆ. ಅದನ್ನು ತಯಾರಿಸಿ ಮನೆಯವರೊಂದಿಗೆ ಸವಿಯಿರಿ. ಇದರ ಹೆಸರು ಕ್ರಿಸ್ಪಿ ಹನಿ ಚಿಲ್ಲಿ ಎಗ್ಸ್ ಎಂದರೆ ಜೇನು ತುಪ್ಪ ಬೆರೆಸಿ ತಯಾರಿಸುವ ಗರಿಗರಿಯಾದ ಮೊಟ್ಟೆಯ ಖಾದ್ಯ. ಇದನ್ನು ಮಾಡುವುದು ಸುಲಭ. ಇದರಲ್ಲಿ ಮೊಟ್ಟೆಗಳ ತುಂಡನ್ನು ಕರಿದು, ನಂತರ ಮಸಾಲೆ ಹಾಕಿದ ಜೇನು ತುಪ್ಪದ ಸಾಸ್‌ನೊಂದಿಗೆ ಬೇಯಿಸಲಾಗುತ್ತದೆ.

Crispy Honey Chilli Eggs Recipe

ಮೊಟ್ಟೆಗಳೆಂದರೆ ಮಕ್ಕಳಿಗೆ ಮೊದಲೇ ಪ್ರಾಣ, ಅದರಲ್ಲೂ ಇಂತಹ ವಿಶೇಷ ಅಡುಗೆ ಮಾಡಿದರೆ ಅದನ್ನು ಅವರು ಸವಿಯದೆ ಬಿಡುವರೇ? ಜೊತೆಗೆ ಇದರಲ್ಲಿರುವ ಪೋಷಕಾಂಶಗಳು ಎಲ್ಲರಿಗು ಹೇಳಿ ಮಾಡಿಸಿದಂತಹದಾಗಿರುತ್ತದೆ. ಬನ್ನಿ ಇನ್ನು ತಡ ಮಾಡದೆ ಕ್ರಿಸ್ಪಿ ಹನಿ ಚಿಲ್ಲಿ ಎಗ್ಸ್ ತಯಾರಿಸುವ ಬಗೆಯನ್ನು ತಿಳಿದುಕೊಳ್ಳೋಣ. ಒಮ್ಮೆ ಪ್ರಯತ್ನಿಸೋಣ. 10 ಬಗೆಯ ಸ್ವಾದಿಷ್ಟಕರ ಮೊಟ್ಟೆಯ ರೆಸಿಪಿ

*ಮೂವರಿಗೆ ಬಡಿಸಬಹುದು.
*ತಯಾರಿಕೆಗೆ ತಗುಲುವ ಸಮಯ: 10 ನಿಮಿಷ
*ಅಡುಗೆಗೆ ತಗುಲುವ ಸಮಯ: 20 ನಿಮಿಷ

ಅಗತ್ಯವಾಗಿರುವ ಪದಾರ್ಥಗಳು
*ಮೊಟ್ಟೆಗಳು = 4 (ಬೇಯಿಸಿದ ಮತ್ತು ನಾಲ್ಕು ಭಾಗವಾಗಿ ಕತ್ತರಿಸಿದಂತಹುದು)
*ಹಸಿಮೆಣಸಿನಕಾಯಿ- 2
*ಶುಂಠಿ- 1 ಚಿಕ್ಕ ತುಂಡು (ಕತ್ತರಿಸಿದಂತಹುದು)
*ಬೆಳ್ಳುಳ್ಳಿ - 4
* ಜೋಳದ ಹಿಟ್ಟು (ಕಾರ್ನ್‌ಫ್ಲೋರ್)- 2 ಟೀ.ಚಮಚ + 2 ಟೀ.ಚಮಚ + 1 ಟೀ. ಚಮಚ
ಡ್ರೈ ರೆಡ್ -5 ತುಂಡುಗಳು (ಕತ್ತರಿಸಿದಂತಹುದು)
*ಸ್ಪ್ರಿಂಗ್ ಈರುಳ್ಳಿ - 4-5 ಕಡ್ಡಿ (ಕತ್ತರಿಸಿದಂತಹುದು)
*ಕೆಂಪು ಚಿಲ್ಲಿ ಸಾಸ್ - 2 ಟೀ.ಚಮಚ
*ಸೋಯಾ ಸಾಸ್ - 1/2 ಟೀ.ಚಮಚ

*ನಿಂಬೆ ರಸ - 1 ಟೀ.ಚಮಚ
*ಜೇನು ತುಪ್ಪ - 1 ಟೀ.ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ = ಡೀಪ್ ಫ್ರೈ ಮಾಡಲು + 2 ಟೀ.ಚಮಚ

ಮಾಡುವ ವಿಧಾನ
1. ಮೊದಲು ಡೀಪ್ ಫ್ರೈ ಮಾಡಲು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿ.
2. ಎರಡು ಟೇಬಲ್ ಚಮಚದಷ್ಟು ಕಾರ್ನ್‍ಫ್ಲೋರ್ ಅನ್ನು ಮೂರು ಟೇಬಲ್ ಚಮಚ ನೀರಿನೊಂದಿಗೆ ಸೇರಿಸಿ, ಗಟ್ಟಿಯಾಗಿ ಬಜ್ಜಿಗೆ ಕಲೆಸಿಕೊಳ್ಳುವಂತೆ ಕಲೆಸಿಕೊಳ್ಳಿ.
3. ನಾಲ್ಕು ಭಾಗಗಲನ್ನು ಮಾಡಿಕೊಂಡಿರುವ ಮೊಟ್ಟೆಗಳ ಮೇಲೆ ಕಾರ್ನ್‍ಫ್ಲೋರನ್ನು ಚಿಮುಕಿಸಿಕೊಳ್ಳಿ.
4. ಈಗ ಈ ಮೊಟ್ಟೆಯ ತುಂಡುಗಳನ್ನು ಕಾರ್ನ್‍ಫ್ಲೋರಿನ ಹಿಟ್ಟಿನಲ್ಲಿ ಅದ್ದಿ ಕುದಿಯುತ್ತಿರುವ ಎಣ್ಣೆಯಲ್ಲಿ ಹಾಕಿ, ಹೊಂಬಣ್ಣಕ್ಕೆ ಬರುವವರೆಗು ಚೆನ್ನಾಗಿ ಕರಿಯಿರಿ. ಉರಿ ಮಧ್ಯಮ ಗಾತ್ರದಲ್ಲಿರುವಂತೆ ನೋಡಿಕೊಳ್ಳಿ.

5. ಇದಾದ ಮೇಲೆ, ಕರಿದ ಮೊಟ್ಟೆಗಳನ್ನು ಪೇಪರ್ ಟಿಶ್ಯೂ ಮೇಲೆ ಹರಡಿಕೊಂಡು ಪಕ್ಕದಲ್ಲಿಡಿ.
6. ಈಗ ಎರಡು ಟೇಬಲ್ ಚಮಚದಷ್ಟು ಎಣ್ಣೆಯನ್ನು ಬೇರೆ ಪಾತ್ರೆಯಲ್ಲಿ ಹಾಕಿ, ಕಾಯಿಸಿಕೊಳ್ಳಿ. ಇದಕ್ಕೆ ಕೆಂಪು ಮೆಣಸಿನಕಾಯಿಗಳನ್ನು ಹಾಕಿ. ಒಂದು ನಿಮಿಷದವರೆಗೆ ಇದನ್ನು ಉರಿಯಿರಿ.
7. ನಂತರ ಇದಕ್ಕೆ ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿಗಳನ್ನು ಹಾಕಿ. ಒಂದು ನಿಮಿಷದ ಮಟ್ಟಿಗೆ ಉರಿಯಿರಿ.
8. ನಂತರ ಇದಕ್ಕೆ ಕತ್ತರಿಸಿದ ಸ್ಪ್ರಿಂಗ್ ಈರುಳ್ಳಿಗಳನ್ನು, ರೆಡ್ ಚಿಲ್ಲಿ ಸಾಸ್, ಸೋಯಾ ಸಾಸ್, ಉಪ್ಪು, ಜೇನು ತುಪ್ಪ ಮತ್ತು ನಿಂಬೆರಸವನ್ನು ಹಾಕಿ. ಇವುಗಳೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ, ನಂತರ ಮಧ್ಯಮ ಗಾತ್ರದ ಉರಿಯಲ್ಲಿ 3-4 ನಿಮಿಷಗಳ ಕಾಲ ಉರಿಯಿರಿ.

9. ಈಗ ಇದಕ್ಕೆ ಫ್ರೈ ಮಾಡಲಾದ ಮೊಟ್ಟೆ ತುಂಡುಗಳನ್ನು ಹಾಕಿ, ಆಗಾಗ ಮೃದುವಾಗಿ ಕಲೆಸಿ ಕೊಡಿ.
10. ನಂತರ ಒಂದು ಟೇಬಲ್ ಚಮಚದಷ್ಟು ಕಾರ್ನ್ ಫ್ಲೋರ್ ಹಿಟ್ಟನ್ನು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 2-3 ನಿಮಿಷಗಳ ಕಾಲ ಬೇಯಿಸಿ. ನಂತರ ಉರಿಯನ್ನು ಆರಿಸಿ.
11. ಇದಾದ ಮೇಲೆ, ಗರಿಗರಿಯಾದ ಹನಿ ಚಿಲ್ಲಿ ಎಗ್ಸ್ ಅನ್ನು ತಟ್ಟೆಗಳಿಗೆ ವರ್ಗಾಯಿಸಿ ಮತ್ತು ಕತ್ತರಿಸಿದ ಸ್ಪ್ರಿಂಗ್ ಈರುಳ್ಳಿಗಳಿಂದ ಅಲಂಕಾರ ಮಾಡಿ.
ಈಗ ನಿಮ್ಮ ಮುಂದೆ ಗರಿಗರಿಯಾದ ಹನಿ ಚಿಲ್ಲಿ ಎಗ್ಸ್ ತಯಾರಾಗಿದೆ. ಇವುಗಳನ್ನು ನೀವು ಒಂದು ಖಾದ್ಯವಾಗಿ ಅಥವಾ ಹೊಟ್ಟೆ ಹಸಿಯುವಂತೆ ಮಾಡುವ ಸ್ಟಾರ್ಟರ್ ಆಗಿ ಸಹ ಬಡಿಸಬಹುದು.

ಸಲಹೆ
ಇದೇ ಮಾದರಿಯಲ್ಲಿ ನಿಮಗೆ ಅನುಕೂಲವಾಗುವಂತಿದ್ದರೆ ಅಥವಾ ಇಷ್ಟವಾಗುವಂತಿದ್ದರೆ, ಮೊಟ್ಟೆಯ ಬದಲಿಗೆ ಪನ್ನೀರ್ ಅಥವಾ ಕೋಳಿ ಮಾಂಸವನ್ನು ಬಳಸಿ ಈ ಖಾದ್ಯವನ್ನು ತಯಾರಿಸಿಕೊಳ್ಳಬಹುದು. ಇದು ನಿಮ್ಮ ನಾಲಿಗೆಗೆ ಮತ್ತಷ್ಟು ರುಚಿಕರವಾಗಿರುತ್ತದೆ.

English summary

Crispy Honey Chilli Eggs Recipe

Preparing Chinese food at home is always exciting. It provides a delightful break from the everyday meal. Even the most picky eaters in the family such as kids are extremely fond of Chinese food.The recipe is fairly simple in which the egg pieces are fried and then cooked in a delicious sweet and spicy honey chilli sauce.
X
Desktop Bottom Promotion