For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಡಯಟ್ -ಚಿಕನ್ ಸೂಪ್

|
Chicken Soup Recipe,
ಚಿಕನ್ ನಲ್ಲಿ ಪ್ರೊಟೀನ್ ಅಂಶ ಅಧಿಕವಿರುವುದರಿಂದ ಚಿಕನ್ ಸೂಪ್ ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಮತೂಕದ ಮೈಕಟ್ಟನ್ನು ಪಡೆಯಲು ತುಂಬಾ ಜನ ಚಿಕನ್ ಸೂಪ್ ಡಯಟ್ ಮಾಡುತ್ತಾರೆ. ಚಿಕನ್ ಸೂಪ್ ಅನ್ನು ಸುಲಭವಾಗಿ ಮಾಡಬಹುದಾಗಿದ್ದು, ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

* 2 ಆಲೂಗೆಡ್ಡೆ
* ಅರ್ಧ ಕೆಜಿ ಚಿಕನ್
* 2 ಕ್ಯಾರೆಟ್
* 3 ಕಡ್ಡಿ ಸಿಲೆರಿ
* 2 ಈರುಳ್ಳಿ
* 10 ಕಪ್ ನೀರು
* 2 ಪಲಾವ್ ಎಲೆ
* ಒಂದು ಚಮಚ ಕರಿಮೆಣಸಿನ ಪುಡಿ
* ಅರ್ಧ ಕಪ್ ಜೋಳದ ಪುಡಿ
* 2 ಚಮಚ ಉಪ್ಪು
* ನಿಂಬೆ ಹಣ್ಣಿನ ರಸ
* ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

1. 10 ಲೋಟ ನೀರಿಗೆ ಸ್ವಲ್ಪ ದೊಡ್ಡ ದುಂಡುಗಳಾಗಿ ಮಾಡಿದ ಚಿಕನ್, ಸಿಪ್ಪೆ ಸುಲಿದು ಕತ್ತರಿಸಿದ ಆಲೂಗೆಡ್ಡೆ, ಕ್ಯಾರೆಟ್, ಈರುಳ್ಳಿ, ನೀರು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಪಲಾವ್ ಎಲೆ ಮತ್ತು ಕರಿಮೆಣಸಿನ ಪುಡಿ, ಉಪ್ಪು ಹಾಕಿ ಚೆನ್ನಾಗಿ ಬೇಯಿಸಬೇಕು.

2. ನಂತರ ರಸ ಮತ್ತು ತರಕಾರಿಗಳನ್ನು ಪ್ರತ್ಯೇಕ ಮಾಡಬೇಕು. ಆಲೂಗೆಡ್ಡೆಯನ್ನು ಚೆನ್ನಾಗಿ ಹಿಸುಕಿ ಸೂಪಿನ ರಸಕ್ಕೆ ಹಾಕಿ ಜೋಳದ ಹಿಟ್ಟನ್ನು ಹಾಕಿ , ಚಿಕನ್ ಅನ್ನು ಚಿಕ್ಕ ತುಂಡುಗಳಾಗಿ ಮಾಡಿ ಹಾಕಿ, ಮೂಳೆಯನ್ನು ಬಿಸಾಡಿ ಚೆನ್ನಾಗಿ ತಿರುಗಿಸಿ ಪುನಃ ಚೆನ್ನಾಗಿ ಕುದಿಸಬೇಕು.

3. ಉಪ್ಪು ಮತ್ತು ಖಾರ ಸರಿಯಾಗಿದೆಯೇ ಎಂದು ನೋಡಿಕೊಂಡು ಸರ್ವ್ ಮಾಡುವ ಮುನ್ನ ನಿಂಬೆ ಹಣ್ಣಿನ ರಸ ಹಿಂಡಿದರೆ ಸವೆಯಲು ರುಚಿಕರವಾದ 5 ಗ್ಲಾಸ್ ಚಿಕನ್ ಸೂಪ್ ರೆಡಿ.

English summary

Chicken Soup Recipe | Variety Of Chicken Recipe | ಚಿಕನ್ ಸೂಪ್ ರೆಸಿಪಿ | ಅನೇಕ ಬಗೆಯ ಚಿಕನ್ ರೆಸಿಪಿ

Having chicken soup is really healthy for body. It has proteins, carbohydrates, fat, vitamins and minerals that your body needs. If you want to prepare this soup here is the recipe.
X
Desktop Bottom Promotion