For Quick Alerts
ALLOW NOTIFICATIONS  
For Daily Alerts

ರೆಡ್ ಅಂಡ್ ಹಾಟ್-ಚಿಕನ್ ರೈಸ್

|

Schezwan ರೈಸ್ ಚೈನೀಸ್ ಪ್ಯೂರ್ ಅಡುಗೆ, ಆದರೆ ಇಲ್ಲಿ ನಾವು ಇಂಡೋ-ಚೈನೀಸ್ ಮಿಕ್ಸ್ ರೆಸಿಪಿ ನೀಡಿದ್ದೇವೆ. ಚಿಕನ್ ಹಾಕಿ ಮಾಡುವ ಏನಾದರೂ ಡಿನ್ನರ್ ಐಟಂ ಮಾಡಬಯಸುವುದಾದರೆ ಇಲ್ಲಿದೆ ನೋಡಿ ರೆಸಿಪಿ.

ಈ ರೈಸ್ ಗೆ ಪ್ರಮುಖವಾಗಿ ಬೇಕಾಗುವ ಪದಾರ್ಥವೆಂದರೆ schezwan ಸಾಸ್. ಇದನ್ನು ಹಾಕದಿದ್ದರೆ ಇದರ ಮೂಲ ರುಚಿ ಇರುವುದಿಲ್ಲ, ಆದ್ದರಿಂದ ಇದನ್ನೊಂದು ಅಂಗಡಿಯಿಂದ ಕೊಂಡು ತನ್ನಿ, ಉಳಿದೆಲ್ಲಾ ಸಾಮಾಗ್ರಿಗಳು ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಇರುವ ಪದಾರ್ಥಗಳಾದ ಕಾರಣ ಹೆಚ್ಚಿನ ತಲೆ ಬಿಸಿಯಿಲ್ಲದೆ ಈ ಅಡುಗೆ ಮಾಡಬಹುದು.

ಬನ್ನಿ ಚಿಕನ್ ರೈಸ್ ಮಾಡುವುದು ಹೇಗೆ ಎಂದು ನೋಡೋಣ:

Chicken Schezwan Rice

ಬೇಕಾಗುವ ಸಾಮಾಗ್ರಿಗಳು
ಚಿಕನ್ 100ಗ್ರಾಂ
ಅಕ್ಕಿ 2 ಕಪ್
ಈರುಳ್ಳಿ 1
ಬೆಳ್ಳುಳ್ಳಿ ಎಸಳು 8
ಕ್ಯಾರೆಟ್ 1
ಬೀನ್ಸ್ 4
ಕ್ಯಾಪ್ಸಿಕಂ 1
ಹಸಿ ಮೆಣಸಿನಕಾಯಿ 2
ಟೊಮೆಟೊ ಸಾಸ್ 1 ಚಮಚ
Schezwan ಸಾಸ್ 1 ಚಮಚ
ಎಣ್ಣೆ 1 ಚಮಚ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಚಿಕನ್ ಅನ್ನು 2 ಕಪ್ ನೀರು ಮತ್ತು ಸ್ವಲ್ಪ ಉಪ್ಪು ಹಾಕಿ 2 ವಿಶಲ್ ಬರುವವರೆಗೆ ಬೇಯಿಸಿ.

* ಈಗ ಚಿಕನ್ ತುಂಡುಗಳನ್ನು ನೀರಿನಿಂದ ತತೆಗಿಯಿರಿ. ಈಗ ಚಿಕನ್ ಬೇಯಿಸಿದ ನೀರು, ಹಾಗೂ ಮತ್ತೆ ಸ್ವಲ್ಪ ನೀರು ಹಾಕಿ ಅಕ್ಕಿಯನ್ನು ತೊಳೆದು ಅದರಲ್ಲಿ ಹಾಕಿ ಬೇಯಿಸಿ (2 ಕಪ್ ಅಕ್ಕಿಗೆ ನಾಲ್ಕು ಕಪ್ ನೀರು ಬೇಕಾಗುವುದು).

* ಈಗ ತಳ ಅಗಲವಿರುವ ಪಾತ್ರೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ನಂತರ ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿ, ನಂತರ ಕತ್ತರಿಸಿದ ತರಕಾರಿ ಹಾಕಿ 5 ನಿಮಿಷ ಫ್ರೈ ಮಾಡಿ.

* ಈಗ ಟೊಮೆಟೊ ಸಾಸ್, Schezwan ಸಾಸ್ ಹಾಕಿ ಮಿಕ್ಸ್ ಮಾಡಿ, ಚಿಕನ್ ಅನ್ನು ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಈಗ ಬೇಯಿಸಿದ ಅನ್ನವನ್ನು ಹಾಕಿ ಮಿಕ್ಸ್ ಮಾಡಿದರೆ ಪಾತ್ರೆಯನ್ನು ಮುಚ್ಚಿ ಕಡಿಮೆ ಉರಿಯಲ್ಲಿ 2-3 ನಿಮಿಷ ಬೇಯಿಸಿದರೆ ಚಿಕನ್ ರೈಸ್ ರೆಡಿ.

English summary

Chicken Schezwan Rice: Red Hot Treat

Chicken schezwan rice is not strictly a Chinese recipe. It is part of the cuisine we now define as Indo-Chinese. This fried rice recipe is prepared with lots of schezwan sauce and thus has a bright red colour. Mind you, chicken schezwan rice can be very spicy so try it with a bland gravy.
X
Desktop Bottom Promotion