For Quick Alerts
ALLOW NOTIFICATIONS  
For Daily Alerts

ಚಿಕನ್ ರೈಸ್ ಸೂಪ್ - ಸ್ಪೆಷೆಲ್ ರೆಸಿಪಿ

|

ಚಿಕನ್ ಸೂಪ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಾಯಿಲೆಯಾದಾಗ ಇದನ್ನು ಮಾಡಿ ಕುಡಿದರೆ ಸುಸ್ತು ಬೇಗನೆ ನಿವಾರಣೆಯಾಗುತ್ತದೆ. ಈ ಚಿಕನ್ ಸೂಪ್ ಅನ್ನು ಅನೇಕ ರೀತಿಯಲ್ಲಿ ತಯಾರಿಸಬಹುದ.

, ಚಿಕನ್ ಜೊತೆ ತರಕಾರಿ ಹಾಗೂ ಜೋಳದ ಹಿಟ್ಟು ಹಾಕಿ ಸಾಮಾನ್ಯವಾಗಿ ಸೂಪ್ ತಯಾರಿಸಲಾಗುವುದು. ಇಲ್ಲಿ ನಾವು ಬಾಸುಮತಿ ಅಕ್ಕಿ ಜೊತೆ ಚಿಕನ್ ಹಾಕಿ ತಯಾರಿಸುವ ಸ್ಪೆಷೆಲ್ ಸೂಪ್ ರೆಸಿಪಿ ನೀಡಲಾಗಿದೆ ನೋಡಿ:

Chicken Rice Soup Recipe

ಬೇಕಾಗುವ ಸಾಮಾಗ್ರಿಗಳು:
* ಚಿಕನ್ ಅರ್ಧ ಕೆಜಿ (ಬೋನ್ ಲೆಸ್)
* ಬಾಸುಮತಿ ಅಕ್ಕಿ ಅರ್ಧ ಕಪ್
* ಈರುಳ್ಳಿ ಅರ್ಧ ಕಪ್ (ಕತ್ತರಿಸಿದ್ದು)
* ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ(ಚಿಕ್ಕದಾಗಿ ಕತ್ತರಿಸಿದ್ದು)
* ಸೆಲರಿ 1ಕಪ್ (ಕತ್ತರಿಸಿದ್ದು)
* ನಿಂಬೆ ರಸ 1 ಚಮಚ
* ರುಚಿಗೆ ತಕ್ಕ ಉಪ್ಪು
* ಬೆಣ್ಣೆ 2 ಚಮಚ

ತಯಾರಿಸುವ ವಿಧಾನ:

1. ಚಿಕನ್ ಪೀಸ್ ಹಾಗೂ ಬಾಸುಮತಿ ನೀರನ್ನು ಕುಕ್ಕರ್ ನಲ್ಲಿ ಹಾಕಿ ಅದಕ್ಕೆ ಸಾಕಾಗುವಷ್ಟು ನೀರು ಹಾಕಿ, ಗ್ಯಾಸ್ ಅನ್ನು ಸ್ವಲ್ಪ ಕಡಿಮೆ ಉರಿಯಲ್ಲಿಟ್ಟು 3 ವಿಶಲ್ ಬರುವವರೆಗೆ ಬೇಯಿಸಬೇಕು. ನಂತರ ಕುಕ್ಕರ್ ನಿಂದ ಆವಿಯನ್ನು ತೆಗೆಯಬೇಕು.

2. ಈಗ ಸ್ವಲ್ಪ ಅಗಲವಿರುವ ಬಾಣಲಿಯನ್ನು ತೆಗೆದುಕೊಂಡು ಅದನ್ನು ಉರಿಯಲ್ಲಿಟ್ಟು ಅದಕ್ಕೆ ಬೆಣ್ಣೆ ಹಾಕಿ, ಬೆಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಶುಂಠಿ, ಸೆಲರಿ ಹಾಗೂ ನಿಂಬೆರಸ ಹಾಕಿ 2 ನಿಮಿಷ ಹುರಿಯಬೇಕು.

3. ಈಗ ಸಕ್ಕರೆ, ಕರಿಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕ ಉಪ್ಪು ಹಕಿ ನಂತರ ಬೇಯಿಸಿದ ಚಿಕನ್ ಹಾಗೂ ಅನ್ನವನ್ನು ಹಾಕಿ, ನೀರು ಹಾಕಿ ಬೇಯಿಸಬೇಕು.

4. ಈ ಮಿಶ್ರಣ ಸ್ವಲ್ಪ ಗಟ್ಟಿಯಾಗುವವರೆಗೆ ಬೇಯಿಸಬೇಕು. ನಂತರ ಉಳಿದ ಬೆಣ್ಣೆಯನ್ನು ಅದರಲ್ಲಿ ಹಾಕಿ ಮಿಶ್ರಣವನ್ನು ಉರಿಯಿಂದ ತೆಗೆದರೆ ಸವೆಯಲು ರುಚಿಕರವಾದ ಚಿಕನ್ ಸೂಪ್ ರೆಡಿ.

English summary

Chicken Rice Soup Recipe | Variety Of Soup Recipe | ಚಿಕನ್ ರೈಸ್ ಸೂಪ್ ರೆಸಿಪಿ | ಅನೇಕ ಬಗೆಯ ಸೂಪ್ ರೆಸಿಪಿ

If you have lost the taste and appetite for foods due to illness, then a chicken rice soup will give you much delight. You can also add vegetables to this chicken soup. Here is the recipe for making chicken rice soup.
X
Desktop Bottom Promotion