For Quick Alerts
ALLOW NOTIFICATIONS  
For Daily Alerts

ರುಚಿರುಚಿಯಾದ ಖಾರ ಚಿಕನ್ ಪೆಪ್ಪರ್ ಫ್ರೈ

|

ಚಿಕನ್ ಪೆಪ್ಪರ್ ಫ್ರೈ ಖಾರವಾದ ಅಡುಗೆಯಾಗಿದೆ. ಆದ್ದರಿಂದ ಖಾರ ಇಷ್ಟ ಪಡುವವರು ಮಾತ್ರ ಈ ಅಡುಗೆಯನ್ನು ಡ್ರೈ ಮಾಡಬಹುದು. ಈ ಚಿಕನ್ ಪೆಪ್ಪರ್ ಫ್ರೈ ಯಲ್ಲಿ ಕರಿ ಮೆಣಸಿನ ವಾಸನೆ ಮೂಗಿಗೆ ಬಡೆಯುವಂತೆ ಇರುತ್ತದೆ.

ಇದನ್ನು ನೀರು ಹಾಕದೆ ತಯಾರಿಸಬೇಕು. ಈ ಚಿಕನ್ ಪೆಪ್ಪರ್ ಫ್ರೈ ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ.

Chicken Pepper Fry

ಬೇಕಾಗುವ ಪದಾರ್ಥಗಳು
ಚಿಕನ್ 1 ಕೆಜಿ (ಬೋನ್ ಲೆಸ್)
ಕರಿ ಮೆಣಸಿನ ಪುಡಿ 2 ಚಮಚ
ಹಸಿ ಮೆಣಸಿನ ಕಾಯಿ 2 (ಚಕ್ಕದಾಗಿ ಕತ್ತರಿಸಿದ್ದು)
ಒಣ ಮೆಣಸು 2
ಕರಿ ಬೇವಿನ ಎಲೆ 8-10
ಈರುಳ್ಳಿ 2 (ಪೇಸ್ಟ್ ಮಾಡಬೇಕು)
ಶುಂಠಿ, ಬೆಳ್ಳುಳ್ಳಿ ಪೇಸ್ಟ್ 2 ಚಮಚ
ವಿನಿಗರ್ 2 ಚಮಚ
ಎಣ್ಣೆ 2 ಚಮಚ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಚಿಕನ್ ಅನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ, ಚೆನ್ನಾಗಿ ತೊಳೆದು ಅದಕ್ಕೆ ವಿನಿಗರ್, ಈರುಳ್ಳಿ ಪೇಸ್ಟ್ (ಈರುಳ್ಳಿ ಪೇಸ್ಟ್ ಸ್ವಲ್ಪ ನೀರು ರೀತಿಯಲ್ಲಿರಲಿ), ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಗೂ ಸ್ವಲ್ಪ ಉಪ್ಪು 1 ಚಮಚ ಕರಿ ಮೆಣಸಿನ ಪುಡಿ ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ಇಡಬೇಕು.

* ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಬೇಕು. ಎಣ್ಣೆ ಬಿಸಿಯಾದಾಗ ಕರಿ ಬೇವಿನ ಎಲೆ, ಹಸಿ ಮೆಣಸು, ಒಣ ಮೆಣಸನ್ನು ಕತ್ತರಿಸಿ ಹಾಕಿ2 ನಿಮಿಷ ಸೌಟ್ ನಿಂದ ಆಡಿಸಬೇಕು.

* ನಂತರ ಮಿಶ್ರಣ ಮಾಡಿಟ್ಟ ಚಿಕನ್ ಹಾಕಿ 1 ಚಮಚ ಕರಿ ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು, ನೀರು ಹಾಕದೆ ಸೌಟ್ ನಿಂದ ತಿರುಗಿಸುತ್ತಾ ಬೇಯಿಸಿ. ಇದು ಡ್ರೈ ರೀತಿಯಲ್ಲಿರಲಿ.

ಇಷ್ಟು ಮಾಡಿದರೆ ಚಿಕನ್ ಪೆಪ್ಪರ್ ಫ್ರೈ ರೆಡಿ.

English summary

Chicken Pepper Fry | Variety Of Chicken Recipe | ಚಿಕನ್ ಪೆಪ್ಪರ್ ಫ್ರೈ ರೆಸಿಪಿ | ಅನೇಕ ಬಗೆಯ ಚಿಕನ್ ರೆಸಿಪಿ

Chicken pepper fry is a spicy Indian chicken recipe that will make your eyes water with its stinging taste. It is an easy chicken recipe
Story first published: Wednesday, January 2, 2013, 13:03 [IST]
X
Desktop Bottom Promotion