ಖಾರ ಪ್ರಿಯರಿಗೆ ಚಿಕನ್ ಪೆಪ್ಪರ್ ಡ್ರೈ

By:
Subscribe to Boldsky

Chicken Pepper Dry
ಹೆಚ್ಚಿನವರು ನಾನ್ ವೆಜ್ ಆಹಾರ ಸ್ವಲ್ಪ ಖಾರ ಇರಬೇಕೆಂದು ಬಯಸುತ್ತಾರೆ. ಖಾರವಿದ್ದರೆ ಅಡುಗೆ ತುಂಬಾ ರುಚಿ ಅನಿಸುವುದು. ಚಿಕನ್ ಅಡುಗೆಯನ್ನು ಖಾರವಾಗಿ ತಿನ್ನಬೇಕೆಂದು ಬಯಸುವುದಾದರೆ ಚಿಕನ್ ಪೆಪ್ಪರ್ ಡ್ರೈ ಮಾಡಬಹುದು. ಇದರ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು
ಚಿಕನ್ 1 ಕೆಜಿ
ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಶುಂಠಿ ಪೇಸ್ಟ್ 1 ಚಮಚ
ಗರಂ ಮಸಾಲ ಅರ್ಧ ಚಮಚ
ಟೊಮಾಟೊ 2
ಚಿಕ್ಕ ಈರುಳ್ಳಿ 2
ಅರ್ಧ ಇಂಚಿನಷ್ಟು ದೊಡ್ಡದಿರುವ ಶುಂಠಿ (ಜಜ್ಜಿದ್ದು)
2-3 ಎಸಳು ಬೆಳ್ಳುಳ್ಳಿ
ಅರಿಶಿಣ ಪುಡಿ
ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು
ಪೆಪ್ಪರ್ ಪುಡಿ 3-4 ಚಮಚ
ಹಸಿಮೆಣಸಿನಕಾಯಿ 1-2
ಕರಿಬೇವಿನ ಎಲೆ
ಎಣ್ಣೆ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

1. ಮಾಂಸವನ್ನು ತೊಳೆದು ಅದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಅರ್ಧ ಗರಂ ಮಸಾಲ, ಪೆಪ್ಪರ್ ಪುಡಿ, ಅರಿಶಿಣ ಪುಡಿ ಉಪ್ಪು ಹಾಕಿ ಮಿಶ್ರ ಮಾಡಿ 1 ಗಂಟೆ ಕಾಲ ಇಡಬೇಕು.

2. ನಂತರ ಬಾಣಲೆಗೆ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಬೇಕು, ಕಾದ ಎಣ್ಣೆಗೆ ಮಸಾಲೆ ಜೊತೆ ಮಿಶ್ರಣ ಮಾಡಿಟ್ಟ ಚಿಕನ್ ಹಾಕಿ ಸ್ವಲ್ಪ ಕಂದು ಬಣ್ಣ ಬರುವಾಗ ತೆಗೆಯಬೇಕು.

3. ನಂತರ ಪಾತ್ರಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಜಜ್ಜಿದ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಈರುಳ್ಳಿ, ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಬಾಡಿಸಿ ನಂತರ ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾದ ಮೇಲೆ ಹುರಿದ ಮಾಂಸವನ್ನು ಹಾಕಿ ಅರ್ಧ ಲೋಟ ನೀರು ಹಾಕಿ ಸ್ವಲ್ಪ ಹೊತ್ತು ಬೇಯಿಸಿದರೆ ಡ್ರೈ ಪೆಪ್ಪರ್ ಚಿಕನ್ ರೆಡಿ. ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಡ್ರೈ ಚಿಕನ್ ಪೆಪ್ಪರ್ ರೆಡಿ.

ಇದನ್ನು ಪೂರಿ, ಚಪಾತಿ, ಪರೋಟ ಜೊತೆ ತಿನ್ನಲು ರುಚಿಕರವಾಗಿರುತ್ತದೆ.

Story first published: Saturday, September 8, 2012, 9:52 [IST]
English summary

Chicken Pepper Dry | Variety Of Chicken Recipe | ಚಿಕನ್ ಪೆಪ್ಪರ್ ಡ್ರೈ | ಅನೇಕ ಬಗೆಯ ಚಿಕನ್ ರೆಸಿಪಿ

If you want to prepare chicken in bit of spicy you can go for chicken pepper dry. If you have chicken pepper dry with poori or parota it will be very tasteful.
Please Wait while comments are loading...
Subscribe Newsletter