For Quick Alerts
ALLOW NOTIFICATIONS  
For Daily Alerts

ರೆಸ್ಟೋರೆಂಟ್ ಶೈಲಿಯ ರುಚಿಕರ ಚಿಕನ್ ನೂಡಲ್ಸ್ ರೆಸಿಪಿ

|

ನೀವು ಉಪಹಾರಮಂದಿರಕ್ಕೆ ಹೋದಾಗಲೆಲ್ಲ ಮೊದಲು ನೀವು ಮಾಡುವ ಕೆಲಸ ಮೆನು ಕಾರ್ಡ್ ತೆಗೆದುಕೊಳ್ಳುತ್ತಿರಲ್ಲವೆ? ಒಂದು ವೇಳೆ ನೀವು ಚೈನೀಸ್ ಆಹಾರ ಪ್ರಿಯರಾಗಿದ್ದಲ್ಲಿ ಮತ್ತು ನಿಮಗೆ ರೆಸ್ಟೋರೆಂಟ್ ಶೈಲಿಯು ಇಷ್ಟವಾಗಿದ್ದಲ್ಲಿ, ನಾವು ನಿಮಗಾಗಿ ಒಂದು ಸರ್‌‍ಪ್ರೈಸ್ ನೀಡುತ್ತಿದ್ದೇವೆ. ನಾವು ಇಂದು ನಿಮ್ಮೊಂದಿಗೆ ಒಂದು ಸುಲಭವಾದ ಚಿಕನ್ ನೂಡಲ್ ರೆಸಿಪಿಯನ್ನು ಹಂಚಿಕೊಳ್ಳುತ್ತಿದ್ದೇವೆ.

ಇದು ಸಂಪೂರ್ಣವಾಗಿ ಹೊಟೇಲ್‌ ಶೈಲಿಯಲ್ಲಿರುತ್ತದೆ. ಇದನ್ನು ಮಾಡಿ ಅದರ ರುಚಿ ನೋಡಿದಾಗ ನೀವೇ ವಿಸ್ಮಯಗೊಳ್ಳುತ್ತೀರಿ. ಒಂದು ವಿಚಾರ ನೆನಪಿನಲ್ಲಿಡಬೇಕು.ಈ ಚಿಕನ್ ನೂಡಲ್ಸ್ ಮಾಡುವಾಗ ಎಲ್ಲಾ ಮಸಾಲೆ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಬೇಕು. ಒಂದು ವೇಳೆ ನೀವು ಇವುಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಸಿಕೊಳ್ಳದಿದ್ದಲ್ಲಿ, ನಿಮಗೆ ನೀವು ಬಯಸುವ ಹೊಟೇಲ್‌ ರುಚಿಯು ಸಿಗುವುದಿಲ್ಲ.

ಈ ಸುಲಭವಾದ ನೂಡಲ್ಸ್ ರೆಸಿಪಿಯನ್ನು ನಾವು ನಿಮಗೆ ತಿಳಿಸಿದ ಕೂಡಲೆ ನಿಮ್ಮ ಬಾಯಿಯಲ್ಲಿ ನೀರೂರುವುದು ಸತ್ಯ ಎಂದು ನಾವು ಭಾವಿಸುತ್ತೇವೆ. ಬನ್ನಿ ಇನ್ನು ತಡಮಾಡದೆ ಈ ಹೊಟೇಲ್‌ ಶೈಲಿಯ ಚಿಕನ್ ನೂಡಲ್ಸ್ ರೆಸಿಪಿಯನ್ನು ತಿಳಿದುಕೊಳ್ಳೋಣ. ರುಚಿಯಾದ ಅಣಬೆ ನೂಡಲ್ಸ್ ಫ್ರೈ

Chicken Noodles Recipe: Restaurant Style

ಪ್ರಮಾಣ: 4 ಜನರಿಗೆ ಬಡಿಸಬಹುದು
ತಯಾರಿಕೆಗೆ ತಗುಲುವ ಸಮಯ: 15 ನಿಮಿಷಗಳು
ಅಡುಗೆ ಮಾಡಲು ತಗುಲುವ ಸಮಯ: 10 ನಿಮಿಷಗಳು

ಬೇಕಾಗುವ ಪದಾರ್ಥಗಳು
*ಬೋನ್‍ಲೆಸ್ ಚಿಕನ್ - 1 ಕಪ್ (ಎರಡು ಭಾಗಗಳಾಗಿ ಕತ್ತರಿಸಿ)
*ಚಿಕನ್ ಹಕ್ಕಾ ನೂಡಲ್ಸ್ - 2 ಕಪ್‍ಗಳು
*ಕ್ಯಾರೆಟ್‍ಗಳು - 1 ಕಪ್ (ಕತ್ತರಿಸಿದಂತಹುದು)
*ಪೆಪ್ಪರ್ - ಒಂದು ಚಿಟಿಕೆಯಷ್ಟು
*ಹಸಿರು ಸ್ಪ್ರಿಂಗ್ ಈರುಳ್ಳಿ - 1 ಕಪ್ (ಕತ್ತರಿಸಿದಂತಹುದು)
*ಲವಂಗ - 1 ಕಪ್ (ಕತ್ತರಿಸಿದಂತಹುದು)
*ಹಸಿ ಮೆಣಸಿನಕಾಯಿ - 1 ಕಪ್ (ಉದ್ದಕ್ಕೆ ಕತ್ತರಿಸಿದಂತಹುದು)
*ಸೋಯಾ ಸಾಸ್ - 1/2 ಟೀ.ಚಮಚ
*ರೆಡ್ ಚಿಲ್ಲಿ ಸಾಸ್ - 1/4 ಟೀ.ಚಮಚ
*ವಿನೇಗರ್ - 1 ಟೀ.ಚಮಚ
*ಟೊಮೇಟೊ ಸಾಸ್ - 1 ಟೀ.ಚಮಚ
*ಒಂದು ಚಿಟಿಕೆ ಮೆಣಸು ಪುಡಿ
*ರುಚಿಗೆ ತಕ್ಕಷ್ಟು ಉಪ್ಪು
*ಎಣ್ಣೆ - 2 ಟೀ.ಚಮಚ
ಹಕ್ಕಾ ರೈಸ್ ನೂಡಲ್ಸ್: ಚೈನೀಸ್ ರೆಸಿಪಿ

ತಯಾರಿಸುವ ವಿಧಾನ
1. ಮೊದಲು ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದುಕೊಳ್ಳಿ. ಅದು ಮುಗಿದ ಮೇಲೆ ಇದನ್ನು ಅಗತ್ಯವಾದಷ್ಟು ನೀರು ಹಾಕಿ 6-7 ನಿಮಿಷಗಳ ಕಾಲ ಬೇಯಿಸಿ.
2. ಇನ್ನು ನಂತರ ನೀರನ್ನು ಬಸಿದು ಪಕ್ಕದಲ್ಲಿಡಿ.
3. ಈಗ ನೂಡಲ್ಸ್ ಅನ್ನು ನೀರಿನಲ್ಲಿ ಬೇಯಿಸಿ, ನೋಡಲ್ಸ್ ಬೆಂದನಂತರ ನೀರನ್ನು ಬಸಿದು ಪಕ್ಕದಲ್ಲಿಡಿ.
4. ಈಗ ಒಂದು ದೊಡ್ಡ ನಾನ್-ಸ್ಟಿಕ್ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ.
5. ಕಾದ ಎಣ್ಣೆಗೆ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿಗಳನ್ನು ಹಾಕಿ. ಕೆಲವು ಕ್ಷಣದವರೆಗೆ ಇವುಗಳನ್ನು ಚೆನ್ನಾಗಿ ತಿರುವಿಕೊಡಿ.
6. ಇದಕ್ಕೆ ಈರುಳ್ಳಿ, ಕ್ಯಾರೆಟ್ ಮತ್ತು ಮೆಣಸನ್ನು ಹಾಕಿ ಉರಿಯಿರಿ.
7. ಈಗ ಈ ಪದಾರ್ಥಗಳನ್ನು ಮಧ್ಯಮ ಗಾತ್ರದ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ.
8. ಇದಾದ ಮೇಲೆ ಈ ಪದಾರ್ಥಗಳಿಗೆ ಉಪ್ಪು ಮತ್ತು ವೈಟ್ ಪೆಪ್ಪರ್ ಪುಡಿಯನ್ನು ಹಾಕಿ. ಚೆನ್ನಾಗಿ ಕಲೆಸಿ ಕೊಡಿ.
9. ನಂತರ ಇದಕ್ಕೆ ಬೆಂದ ಕೋಳಿ ಮಾಂಸ, ಸೋಯಾ ಸಾಸ್, ಚಿಲ್ಲಿ ಸಾಸ್ ಮತ್ತು ಟೊಮೇಟೊ ಸಾಸ್ ಹಾಕಿ ಚೆನ್ನಾಗಿ ಕಲೆಸಿಕೊಡಿ.
10. ಕೋಳಿ ಮಾಂಸವನ್ನು ತರಕಾರಿಗಳ ಜೊತೆಗೆ ಬೆರೆಸಿ.
11. ಯಾವಾಗ ತರಕಾರಿಗಳು ಅರ್ಧ ಬೆಂದಿವೆ ಎಂದು ತೋರುತ್ತದೆಯೋ, ಆಗ ಅದಕ್ಕೆ ಬೆಂದ ನೂಡಲ್ಸ್ ಬೆರೆಸಿ.
12. ಚೆನ್ನಾಗಿ ಕಲೆಸಿ ಕೊಡಿ. ಕೊನೆಯದಾಗಿ ಇದಕ್ಕೆ ಹಸಿರು ಸ್ಪ್ರಿಂಗ್ ಈರುಳ್ಳಿಗಳನ್ನು ಬೆರೆಸಿ, ನಂತರ ನೂಡಲ್ಸ್ ಅನ್ನು ಬೆರೆಸಿ

English summary

Chicken Noodles Recipe: Restaurant Style

Whenever you head to a restaurant, the first thing you take a look at is the menu card. Right? If you happen to love Chinese food and want to try out a restaurant style, then we have a surprise for you. Today, we are going to share with you an easy chicken noodles recipe which is completely restaurant style.
Story first published: Friday, November 7, 2014, 17:27 [IST]
X
Desktop Bottom Promotion