For Quick Alerts
ALLOW NOTIFICATIONS  
For Daily Alerts

ಚಿಕನ್ ಮಸಾಲದಲ್ಲಿ ಹೊಸ ರುಚಿ

|

ಚಿಕನ್ ಮಸಾಲವನ್ನು ಸಾಮಾನ್ಯವಾಗಿ ಬರೀ ಮಸಾಲೆ ಹಾಕಿ ಅಥವಾ ತೆಂಗಿನ ಕಾಯಿ ಹಾಕಿ ಮಾಡುತ್ತೇವೆ. ಇಲ್ಲಿ ನಾವು ಮೊಸರು ಹಾಕಿ ತಯಾರಿಸುವ ಚಿಕನ್ ಮಸಾಲೆಯ ರೆಸಿಪಿ ನೀಡಿದ್ದೇವೆ.

ಮೊಸರು ಹಾಕಿ ತಯಾರಿಸುವ ಚಿಕನ್ ಮಸಾಲೆ ಚಿಕನ್ ಪ್ರಿಯರಿಗೆ ಇಷ್ಟವಾಗುವುದು ಖಂಡಿತ. ಹುಳಿ, ಖಾರ ಮಿಶ್ರಿತವಾದ ಈ ಚಿಕನ್ ಗ್ರೇವಿಯನ್ನು ತುಪ್ಪದನ್ನ, ಅನ್ನ, ಬಿರಿಯಾನಿ ಅನ್ನದ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

Chicken Masala Recipe

ಬೇಕಾಗುವ ಸಾಮಾನುಗಳು:
1 ಕೆಜಿ ಚಿಕನ್
2 ಈರುಳ್ಳಿ ಈರುಳ್ಳಿ
2 ಟೊಮ್ಯಾಟೊ
ಹಸಿ ಮೆಣಸಿನ ಕಾಯಿ 1
2 ಚಮಚ ಜೀರಿಗೆ
2 ಚಮಚ ಎಣ್ಣೆ
1/4 ಚಮಚ ಅರಿಶಿಣ
2 ಚಮಚ ಗರಂ ಮಸಾ
ಮೆಣಸಿನ ಪುಡಿ (ಖಾರಕ್ಕೆ ತಕ್ಕಷ್ಟು)
ಉಪ್ಪು ರುಚಿಗೆ,
1/2 ಕಪ್ ಮೊಸರು.
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:

1. ಮೊಸರನ್ನು ಚೆನ್ನಾಗಿ ಕದಡಿಡಬೇಕು.

2.ಒಂದು ಕಡಾಯಿ ಗೆ ಎಣ್ಣೆ ಯನ್ನು ಹಾಕಿ ಒಲೆಯ ಮೇಲೆ ಇಡಬೇಕು,ಎಣ್ಣೆ ಬಿಸಿ ಆದ ಮೇಲೆ, ಜೀರಿಗೆ ಮತ್ತು ಈರುಳ್ಳಿ ಯನ್ನು ಹಾಕಬೇಕು. ಚೆನ್ನಾಗಿ ಫ್ರೈ ಮಾಡಿದ ನಂತರ ಟೊಮೆಟೊ, ಅರಿಶಿಣ ಪುಡಿ, ಗರಂ ಮಸಾಲ, ಮೆಣಸಿನ ಪುಡಿ ಹಾಕಬೇಕು.

3. ನಂತರ ಚೆನ್ನಾಗಿ ತೊಳೆದ ಚಿಕ್ಕದಾಗಿ ಕತ್ತರಿಸಿದ ಚಿಕನ್ ಅನ್ನು ಹಾಕಿ ಚೆನ್ನಾಗಿ ಫ್ರೈ ಮಾಡಬೇಕು. ಈಗ ಮೊಸರನ್ನು ಚೆನ್ನಾಗಿ ಕಡೆದು ಹಾಕಬೇಕು,ನಂತರ ರುಚಿಗೆ ತಕ್ಕಸ್ಟು ಉಪ್ಪು ಹಾಕಿ 10 ರಿಂದ 12 ನಿಮಿಷ ಬೇಯಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ ಮೊಸರು ಮಸಾಲ ರೆಡಿ.

English summary

Chicken Masala Recipe | Variety Of Chicken Recipe | ಚಿಕನ್ ಮಸಾಲ ರೆಸಿಪಿ | ಅನೇಕ ಬಗೆಯ ಚಿಕನ್ ರೆಸಿಪಿ

You are always preparing chicken by using masala or choconet and masal, today you want to try chicken masala in new taste? Then you can try this chicken masala.
Story first published: Friday, January 25, 2013, 16:46 [IST]
X
Desktop Bottom Promotion