For Quick Alerts
ALLOW NOTIFICATIONS  
For Daily Alerts

ಚಿಕನ್ ಗ್ರೇವಿ- ಈರುಳ್ಳಿ ಹಾಕದ ರೆಸಿಪಿ

|

ಈರುಳ್ಳಿ ರೇಟ್ ಅಧಿಕವಾದ ಕಾರಣ ಹೆಚ್ಚಿನವರಿಗೆ ಅಡುಗೆ ಮಾಡುವುದೇ ಒಂದು ಸಮಸ್ಯೆಯಾಗಿದೆ. ಅದರಲ್ಲಂತೂ ನಾನ್ ವೆಜ್ ಗೆ ಈರುಳ್ಳಿಯನ್ನು 2-3 ಬಳಸುತ್ತೇವೆ. ಅಂಥದ್ದರಲ್ಲಿ ಈರುಳ್ಳಿ ಹಾಕದೆ ನಾನ್ ವೆಜ್ ಮಾಡುವುದೆಂದರೆ? ಚಿಂತಿಸಬೇಡಿ ಈರುಳ್ಳಿ ಹಾಕದೆಯೂ ಬಾಯಲ್ಲಿ ನೀರೂರಿಸುವ ರುಚಿಯ ನಾನ್ ವೆಜ್ ಅಡುಗೆ ಮಾಡಬಹುದು.

ಇಲ್ಲಿ ನಾವು ಈರುಳ್ಳಿ ಹಾಕದೆ ಮಾಡಬಹುದಾದ ಚಿಕನ್ ಅಡುಗೆಯ ಬಗ್ಗೆ ಹೇಳಿದ್ದೇವೆ ನೋಡಿ:

Chicken Gravy: A Recipe Without Onions

ಬೇಕಾಗುವ ಸಾಮಾಗ್ರಿಗಳು
ಚಿಕನ್ 1 ಕೆಜಿ
ಮೊಸರು1 ಕಪ್
ಟೊಮೆಟೊ 5(ಪೇಸ್ಟ್ ಮಾಡಿ)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ
ಹಸಿ ಮೆಣಸಿನಕಾಯಿ 2
ಗಸೆಗಸೆ 2 ಚಮಚ
ಅರಿಶಿಣ ಪುಡಿ 1 ಚಮಚ
ಕರಿ ಮೆಣಸಿನ ಪುಡಿ 1 ಚಮಚ
ಜೀರಿಗೆ ಪುಡಿ 1 ಚಮಚ
ಕೊತ್ತಂಬರಿ ಪುಡಿ 1 ಚಮಚ
ನಿಂಬೆ ರಸ 1 ಚಮಚ
ಎಣ್ಣೆ 2 ಚಮಚ
ನೀರು 1 ಕಪ್
ಕೊತ್ತಂಬರಿ ಸೊಪ್ಪು 2 ಚಮಚ

ತಯಾರಿಸುವ ವಿಧಾನ:

* ಚಿಕನ್ ಅನ್ನು ಸ್ವಚ್ಛ ಮಾಡಿ, ಅದಕ್ಕೆ ನಿಂಬೆ ರಸ, ಉಪ್ಪು, ಮೊಸರು, ರುಚಿಗೆ ತಕ್ಕ ಉಪ್ಪು, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ಒಂದು ಗಂಟೆ ಇಡಿ.

* ಗಸೆ ಗಸೆ ಮತ್ತು ಹಸಿ ಮೆಣಸಿನ ಕಾಯಿ, 2-3 ಚಮಚ ನೀರು ಹಾಕಿ ನುಣ್ಣಗೆ ರುಬ್ಬಿ ಒಂದು ಬದಿಯಲ್ಲಿ ತೆಗೆದಿಡಿ.

* ಒಂದು ಗಂಟೆಯ ಬಳಿಕ ಪ್ಯಾನ್ ಅನ್ನು ಬಿಸಿ ಅದರಲ್ಲಿ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಮಿಕ್ಸ್ ಮಾಡಿಟ್ಟ ಚಿಕನ್ ಹಾಕಿ 7-10 ನಿಮಿಷ ಸಾಧಾರಣ ಉರಿಯಲ್ಲಿ ಫ್ರೈ ಮಾಡಿ.

* ನಂತರ ಪೇಸ್ಟ್ ಮಾಡಿದ ಟೊಮೆಟೊ, ಉಪ್ಪು, ಅರಿಶಿಣ ಪುಡಿ ಹಾಕಿ ಮತ್ತೆ 5 ನಿಮಿಷ ಬೇಯಿಸಿ, ನಂತರ ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಕರಿ ಮೆಣಸಿನ ಪುಡಿ, ಗಸೆ ಗಸೆ ಪೇಸ್ಟ್ ಹಾಕಿ ಮಿಕ್ಸ್ ಮಾಡಿ 2 ನಿಮಿಷ ಫ್ರೈ ಮಾಡಿ, ಸ್ವಲ್ಪ ನೀರು ಸೇರಿಸಿ, ಪಾತ್ರೆಯ ಬಾಯಿ ಮುಚ್ಚಿ ಸಾಧಾರಣ ಉರಿಯಲ್ಲಿ 20 ನಿಮಿಷ ಬೇಯಿಸಿ. ತಳ ಹಿಡಿಯದಿರಲು ಆಗಾಗ ಸೌಟ್ ನಿಂದ ತಿರುಗಿಸುತ್ತಾ ಇರಿ.

* ಚಿಕನ್ ಬೆಂದ ನಂತರ ಗರಂ ಮಸಾಲ ಹಾಕಿ ಮಿಕ್ಸ್ ಮಾಡಿ ಮತ್ತೆ 2 ನಿಮಿಷ ಬೇಯಿಸಿ, ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಚಿಕನ್ ಗ್ರೇವಿ ರೆಡಿ.

English summary

Chicken Gravy: A Recipe Without Onions

Worrying about onion rate? However you can still prepare some delicious Indian recipes without using onions in any form. Here we bring you one of simplest and lip-smacking chicken recipes without onions.
X
Desktop Bottom Promotion