For Quick Alerts
ALLOW NOTIFICATIONS  
For Daily Alerts

ಕಾಲಾ ಮಸಾಲೆಯ ಚಿಕನ್ ಸಾರು

|

ಕಾಲಾ ಮಸಾಲ ಅನ್ನುವುದು ಸ್ಪೆಷಲ್ ಚಿಕನ್ ಮಸಾಲ. ಮರಾಠಿ ಶೈಲಿಯ ಚಿಕನ್ ಅಡುಗೆಯಲ್ಲಿ ಈ ಸ್ಪೆಷಲ್ ಮಸಾಲೆಯನ್ನು ಬಳಸಿ ಮಾಡಲಾಗುವುದು. ಇಲ್ಲಿ ನಾವು ಕಾಲಾ ಮಸಾಲೆಯ ರೆಸಿಪಿ ನೀಡಿದ್ದೇವೆ. ಹೊಸ ರುಚಿಯ ಚಿಕನ್ ಅಡುಗೆಯಲ್ಲಿ ಆಸಕ್ತಿ ಇರುವವರು ಇದನ್ನು ಟ್ರೈ ಮಾಡಬಹುದು.

ಈ ಅಡುಗೆ ಮಾಡಲು ಸುಲಭವಾಗಿದ್ದು, ಇದರ ಪ್ರಮುಖ ರುಚಿ ಅಡಗಿರುವುದು ಕಾಲಾ ಮಸಾಲದಲ್ಲಿ, ಬನ್ನಿ ಈ ಕಾಲಾ ಮಸಾಲ ಚಿಕನ್ ಮಾಡುವುದು ಹೇಗೆ ಎಂದು ನೋಡೋಣ:

Chicken Curry With Kala Masala

ಬೇಕಾಗುವ ಸಾಮಾಗ್ರಿಗಳು
ಚಿಕನ್ ಅರ್ಧ ಕೆಜಿ
ಈರುಳ್ಳಿ 2
ಟೊಮೆಟೊ1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಕೊತ್ತಂಬರಿ ಸೊಪ್ಪು 1 ಕಪ್
ಅರಿಶಿಣ ಪುಡಿ 1 ಚಮಚ
ಖಾರದ ಪುಡಿ 1 ಚಮಚ
ಎಣ್ಣೆ 3 ಚಮಚ

ಕಾಲಾ ಮಸಾಲೆಗೆ ಪದಾರ್ಥಗಳು
ಸೂಚನೆ: ಈ ಮಸಾಲೆ ಪುಡಿ ತಯಾರಿಸಿದರೆ ಅರ್ಧ ಕೆಜಿ ಚಿಕನ್ ಗೆ 1 ಚಮಚ ಪುಡಿ ಸಾಕು. ಉಳಿದ ಪುಡಿಯನ್ನು ಮತ್ತೆ ಚಿಕನ್ ಅಡುಗೆ ಮಾಡುವಾಗ ಬಳಸಬಹುದು.

ಕಾಲಾ ಒಣ ಕೊಬ್ಬರಿ 3 ಚಮಚ
ಜೀರಿಗೆ 2 ಚಮಚ
ಲವಂಗ 10-15
ಒಣ ಮೆಣಸು 4-5
ಕರಿ ಜೀರಿಗೆ 1 ಚಮಚ
ಗಸೆಗಸೆ 3 ಚಮಚ
ಕರಿ ಮೆಣಸು 10-15
ಚಕ್ಕೆ 3
ಏಲಕ್ಕಿ2
ಪಲಾವ್ ಎಲೆ 2

ತಯಾರಿಸುವ ವಿಧಾನ

* ಬಾಣಲೆಯಲ್ಲಿ ಮಸಾಲೆಗೆ ಹೇಳಿರುವ ಪದಾರ್ಥಗಳನ್ನು ಹಾಕಿ 3-4 ನಿಮಿಷ ಬಿಸಿ ಮಾಡಿ. ನಂತರ ಉರಿಯಿಂದ ಇಳಿಸಿ, ಬಿಸಿ ಆರಿದ ಬಳಿಕ ಮಿಕ್ಸ್ ಯಲ್ಲಿ ಹಾಕಿ ಪುಡಿ ಮಾಡಿ ಇಡಿ.

* ಈಗ ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದು, ಅದರಲ್ಲಿ ಉಪ್ಪು, ಅರಿಶಿಣ ಪುಡಿ ಹಾಕಿ ಮಿಕ್ಸ್ ಮಾಡಿ 15 ನಿಮಿಷ ಇಡಿ.

* ಈಗ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಕತ್ತರಿಸಿದ ಈರುಳ್ಳಿ ಹಾಕಿ 4-5 ನಿಮಿಷ ಸಾಧಾರಣ ಉರಿಯಲ್ಲಿ ಫ್ರೈ ಮಾಡಿ, ನಂತರ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ, ಕಾಲಾ 1 ಚಮಚ ಹಾಕಿ 2-3 ನಿಮಿಷ ಬೇಯಿಸಿ.

* ಈಗ ಕತ್ತರಿಸಿದ ಟೊಮೆಟೊ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ 3-4 ನಿಮಿಷ ಬೇಯಿಸಿ. ನಂತರ ಚಿಕನ್ ತುಂಡುಗಳನ್ನು ಹಾಕಿ 1 ಕಪ್ ನೀರು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ, ಕಡಿಮೆ ಉರಿಯಲ್ಲಿ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ. ಈ ರೀತಿ ಬೇಯಿಸುವಾಗ ಆಗಾಗ ಸೌಟ್ ನಿಂದ ಆಡಿಸಲು ಮರೆಯಬೇಡಿ.

* ಚಿಕನ್ ಬೆಂದ ನಂತರ ಉರಿಯಿಂದ ಇಳಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಕಾಲಾ ಮಸಾಲ ಚಿಕನ್ ರೆಡಿ.

English summary

Chicken Curry With Kala Masala

Kala masala is a special blend of roasted spices and coconut which gives this dish a unique flavour and a brownish colour. The recipe for this chicken curry is very simple and does not require too much of effort to prepare.
 
X
Desktop Bottom Promotion