For Quick Alerts
ALLOW NOTIFICATIONS  
For Daily Alerts

ಚಿಕನ್ ಚಾಪ್-ಬೆಂಗಾಳಿ ಶೈಲಿಯ ರೆಸಿಪಿ

|

ಚಿಕನ್ ಚಾಪ್ ಬೆಂಗಾಳಿ ಶೈಲಿಯ ಅಡುಗೆಯಾಗಿದೆ. ಇದನ್ನು ಚಿಕನ್ ನ ಲೆಗ್ ಪೀಸ್ ಮತ್ತು ಎದೆ ಭಾಗವನ್ನು ಹಾಕಿ ತಯಾರಿಸಿದರೆ ಮಾತ್ರ ಇದರ ರುಚಿ ಹೆಚ್ಚುವುದು.

ಇದನ್ನು ಗ್ರೇವಿ ರೀ ತಿಯಲ್ಲಿ ತಯಾರಿಸಿ. ಇದನ್ನು ತಯಾರಿಸುವುದು ದೊಡ್ಡ ಕಷ್ಟವೇನಿಲ್ಲ. ಈ ಚಿಕನ್ ಚಾಪ್ ಅನ್ನು ಬಿರಿಯಾನಿ, ತುಪ್ಪದನ್ನ, ಅನ್ನ ಇವುಗಳ ಜೊತೆ ತಿನ್ನಲು ರುಚಿಕರವಾಗಿರುತ್ತದೆ.

Chicken Chaap: Recipe From Bengal

ಬೇಕಾಗುವ ಸಾಮಾಗ್ರಿಗಳು

ಚಿಕನ್ ಒಂದು ಕೆಜಿ
ಈರುಳ್ಳಿ4
ಬೆಳ್ಳುಳ್ಳಿ 8-1 ಎಸಳು
ಸ್ವಲ್ಪ ಶುಂಠಿ
ಹಸಿ ಮೆಣಸಿನಕಾಯಿ 2
ಮೊಸರು 1 ಕಪ್
ಖಾರದ ಪುಡಿ (ಖಾರಕ್ಕೆ ತಕ್ಕಷ್ಟು)
ಗರಂ ಮಸಾಲ 1 ಚಮಚ
ನಟ್ ಮಗ್ ಪುಡಿ 1 ಚಮಚ
ತೆಂಗಿನ ತುರಿ 1/4 ಕಪ್
ಸಾಸಿವೆ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಚಿಕನ್ ಅನ್ನು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿ ತೊಳೆಯಿರಿ.

* ತೆಂಗಿನ ತುರಿಗೆ ಖಾರದ ಪುಡಿ, ಅಡಿಶಿಣ ಪುಡಿ, ಶುಂಠಿ, ಬೆಳ್ಳುಳ್ಳಿ, ನಟ್ ಮಗ್ ಪುಡಿ ಹಾಕಿ ರುಬ್ಬಿ.

* ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಮಿಶ್ರಣ ಮಾಡಿ 1 ಒಂದು ಗಂಟೆಕಾಲ ಇಡಿ.

* ಈಗ ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ , ಎಣ್ಣೆ ಬಿಸಿಯಾದಾಗ ಕತ್ತರಿಸಿದ, ಸಾಸಿವೆ ಪುಡಿ, ಈರುಳ್ಳಿ ಮತ್ತು ಹಸಿ ಮೆಣಸಿಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಮಸಾಲೆಯಲ್ಲಿ ಮಿಶ್ರಣ ಮಾಡಿರುವ ಚಿಕನ್ ಹಾಕಿ 2-3 ನಿಮಿಷ ಸೌಟ್ ನಿಂದ ಆಡಿಸಿ.

* ನಂತರ ಮೊಸರು ಹಾಕಿ ಗರಂ ಮಸಾಲ ಹಾಕಿ . ರುಚಿಗೆ ತಕ್ಕ ಉಪ್ಪು ಸೇರಿಸಿ.

* ಕಡಿಮೆ ಉರಿಯಲ್ಲಿ ಬೇಯಿಸಿ. ಇದು ಸ್ವಲ್ಪ ಗ್ರೇವಿ ರೀತಿಯಲ್ಲಿ ಆದ ನಂತರ ಉರಿಯಿಂದ ಇಳಿಸಿದರೆ ರುಚಿಕರವಾದ ಚಿಕನ್ ಚಾಪ್ ರೆಡಿ.

ಸಲಹೆ: ಬೇಕಿದ್ದರೆ ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಬಹುದು.

English summary

Chicken Chaap: Recipe From Bengal | variety Of Chicken Recipe | ಬೆಂಗಾಳಿ ಶೈಲಿಯಲ್ಲಿ ಚಿಕನ್ ಚಾಪ್ ರೆಸಿಪಿ | ಅನೇಕ ಬಗೆಯ ಚಿಕನ್ ರೆಸಿಪಿ

The solid meat of leg pieces or breast pieces is used to make Chicken chaap. If you are trying this Indian food recipe then you must make sure that you get the portions right or else this dish will loose its charm.
X
Desktop Bottom Promotion