For Quick Alerts
ALLOW NOTIFICATIONS  
For Daily Alerts

ಚೆಟ್ಟಿನಾಡ್ ಶೈಲಿಯ ಚಿಕನ್ ಸಾರು

|

ದಕ್ಷಿಣ ಭಾರತದ ಪ್ರಸಿದ್ಧ ಅಡುಗೆಗಳಲ್ಲಿ ಚೆಟ್ಟಿನಾಡ್ ಶೈಲಿಯ ಅಡುಗೆ ಕೂಡ ಒಂದು. ಚೆಟ್ಟಿನಾಡ್ ಶೈಲಿಯ ಅಡುಗೆಗಳನ್ನು ನಾಟಿ ಶೈಲಿಯಲ್ಲಿ ಮಾಡುವುದರಿಂದ ಈ ಶೈಲಿಯ ಅಡುಗೆಗಳು ತುಂಬಾ ರುಚಿಯಾಗಿರುತ್ತದೆ.

ಇಲ್ಲಿ ನಾವು ಚೆಟ್ಟಿನಾಡ್ ಶೈಲಿಯ ಚಿಕನ್ ಸಾರು ಮಾಡುವ ರೆಸಿಪಿ ನೀಡಿದ್ದೇವೆ ನೋಡಿ:

Chettinad Style Chicken Recipe

ಬೇಕಾಗುವ ಸಾಮಾಗ್ರಿಗಳು
ಚಿಕನ್ ಅರ್ಧ ಕೆಜಿ(ಚಿಕ್ಕದಾಗಿ ಕತ್ತರಿಸಿದ್ದು)
ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಹಸಿ ಮೆಣಸಿನಕಾಯಿ 2-3 (ಖಾರಕ್ಕೆ ತಕ್ಕಂತೆ)
ಈರುಳ್ಳಿ 1
ಟೊಮೆಟೊ 2 (ಕತ್ತರಿಸಿದ್ದು)
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ
ಲವಂಗ 2
ಕೊತ್ತಂಬರಿ ಪುಡಿ 1 ಚಮಚ
ಖಾರದ ಪುಡಿ ಅರ್ಧ ಚಮಚ
ಜೀರಿಗೆ 1 ಚಮಚ
ಏಲಕ್ಕಿ 2
ಕರಿಮೆಣಸು2-3( ತರ-ತರಿಯಾಗಿ ಪುಡಿ ಮಾಡಿದ್ದು)
ಜೀರಿಗೆ ಅರ್ಧ ಚಮಚ
ಸಾಸಿವೆ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ
ಕರಿ ಬೇವಿನ ಎಲೆ

ತಯಾರಿಸುವ ವಿಧಾನ

* ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಬೇಕು, ನಂತರ ಸಾಸಿವೆ, ಜೀರಿಗೆ ಹಾಕಿ ಜೀರಿಗೆ ಚಟಾಪಟ ಶಬ್ದ ಬರುವಾಗ ಚಕ್ಕೆ, ಲವಂಗ ಹಾಕಿ, ಕರಿ ಬೇವಿನ ಎಲೆ ಹಾಕಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಏಲಕ್ಕಿ ಹಾಕಿ ಕತ್ತರಿಸಿ ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು, ನಂತರ ಹಸಿ ಮೆಣಸಿನಕಾಯಿ ಹಾಗೂ ಟೊಮೆಟೊ ಹಾಕಿ ಸೌಟ್ ನಿಂದ ಆಡಿಸಬೇಕು.

* ನಂತರ ಚಿಕನ್ ಹಾಕಿ 2 ನಿಮಿಷ ಸೌಟ್ ನಿಂದ ಆಡಿಸಿ, ಅರಿಶಿಣ ಹಾಗೂ ಸ್ವಲ್ಪ ಖಾರದ ಪುಡಿ, ಕೊತ್ತಂಬರಿ ಪುಡಿ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ, ಬೇಯಲು ತಕ್ಕ ನೀರು ಹಾಕಿ(ತುಂಬಾ ನೀರು ಹಾಕಬಾರದು) ಬೇಯಿಸಿ.

* ಆಗಾಗ ಸೌಟ್ ನಿಂದ ಆಡಿಸುತ್ತಾ ಇರಿ. ಚಿಕನ್ ಬೆಂದ ನಂತರ ಉರಿಯಿಂದ ಇಳಿಸಿ, ಅದರ ಮೇಲೆ ಕರಿ ಮೆಣಸಿನ ಪುಡಿ ಉದುರಿಸಿದರೆ ಚೆಟ್ಟಿನಾಡ್ ಶೈಲಿಯ ಚಿಕನ್ ಸಾರು ರೆಡಿ.

English summary

Chettinad Style Chicken Recipe | Variety Of Chicken Recipe | ಚೆಟ್ಟಿ ನಾಡ್ ಶೈಲಿಯ ಚಿಕನ್ ರೆಸಿಪಿ | ಅನೇಕ ಬಗೆಯ ಚಿಕನ್ ರೆಸಿಪಿ

Many dishes have been renamed as Chettinad recipes simply because of the excellent taste and aroma. You can easily cook both vegetarian as well as non-vegetarian Chettinad recipes at home.
X
Desktop Bottom Promotion