For Quick Alerts
ALLOW NOTIFICATIONS  
For Daily Alerts

ಮೀನಿನ ಕಟ್ಲೇಟ್ ರುಚಿಗೆ ಸಾಟಿಯೇ ಇಲ್ಲ

|

ಮೀನಿನಿಂದ ತಯಾರಿಸಿದ ಕಟ್ಲೇಟ್ ನ ರುಚಿ ನೋಡೊದ್ದೀರಾ? ಇದನ್ನು ಒಮ್ಮೆ ರುಚಿ ನೋಡಿದರೆ ನಾಲಗೆ ಮತ್ತೆ-ಮತ್ತೆ ಇದರ ರುಚಿ ಬಯಸುವುದು ಅಷ್ಟೊಂದು ಸ್ವಾದಿಷ್ಟಕರವಾಗಿರುತ್ತದೆ.

ಈ ಕಟ್ಲೇಟ್ ಗೆ ಸಾಧಾರಣ ಗಾತ್ರದ ಮೀನಿಗಿಂತ ಸ್ವಲ್ಪ ದೊಡ್ಡ ಗಾತ್ರದ ಮೀನನ್ನು ಬಳಸಲಾಗುವುದು. ಮೊದಲು ಮೀನನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು ನಂತರ ಕಟ್ಲೇಟ್ ಗೆ ತಟ್ಟಿ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಲಾಗುವುದು.

ಈ ಕಟ್ಲೇಟ್ ನ ಮಾಡುವ ವಿಧಾನ ಇತರ ಕಟ್ಲೇಟ್ ನಷ್ಟೇ ಸರಳವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

Canned Fish Cutlets

ಬೇಕಾಗುವ ಪದಾರ್ಥಗಳು
ದೊಡ್ಡ ಮೀನು 1 ಕೆಜಿ(tuna, ಅಂಜಲ್ ಮೀನಾದರೂ ಆಗಬಹುದು)
ಈರುಳ್ಳಿ 2
ಹಸಿ ಮೆಣಸಿನ ಕಾಯಿ 2-3
ಸ್ವಲ್ಪ ಕರಿಬೇವಿನ ಎಲೆ
ಶುಂಠಿ 2 ಚಮಚ (ಚಿಕ್ಕದಾಗಿ ಕತ್ತರಿಸಿದ್ದು)
ಬೆಳ್ಳುಳ್ಳಿ 1 ಚಮಚ (ಚಿಕ್ಕದಾಗಿ ಕತ್ತರಿಸಿದ್ದು)
ಅರಿಶಿಣ ಪುಡಿ 1/4 ಚಮಚ
ಕರಿ ಮೆಣಸಿನ ಪುಡಿ ಅರ್ಧ ಚಮಚ
ಗರಂ ಮಸಾಲ ಅರ್ಧ ಚಮಚ
ಬ್ರೆಡ್ ಚೂರು ಅರ್ಧ ಕಪ್
ಎಣ್ಣೆ
ಇತರ ಮಸಾಲೆ
ಲವಂಗ 2
ಏಲಕ್ಕಿ 1
ನಕ್ಷತ್ರ ಮೊಗ್ಗು 2
* ಆಲೂಗಡ್ಡೆ-2
* ಮೊಟ್ಟೆ 3

ಮಾಡುವ ವಿಧಾನ

* ಮಸಾಲೆ ಸಾಮಾಗ್ರಿಗಳನ್ನು 3-4 ನಿಮಿಷ ಹುರಿದು ನಂತರ ಅದನ್ನು ತಣ್ಣಗಾಗಲು ಇಡಬೇಕು. ತಣ್ಣಗಾದ ನಂತರ ನುಣ್ಣಗೆ ಪುಡಿ ಮಾಡಿ.

* ಮೀನನ್ನು ಶುದ್ಧ ಮಾಡಿ, ಅದರ ಮುಳ್ಳನ್ನು ಸಂಪೂರ್ಣವಾಗಿ ತೆಗೆಯಿರಿ, ನಂತರ ಮೀನನ್ನು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿ..( ಮುಳ್ಳು ದೊಡ್ಡ ಗಾತ್ರದಲ್ಲಿ ಇರುವುದರಿಂದ ಸುಲಭವಾಗಿ ತೆಗೆಯಬಹುದು).

* ನಂತರ ಮೀನಿನಲ್ಲಿರುವ ನೀರಿನಂಶ ಹೋಗಲು ಮೀನನ್ನು ನೀರು ಸೋರಿ ಹೋಗುವ ಪಾತ್ರೆಯಲ್ಲಿ ಹಾಕಿಡಿ.

* ಈಗ ಪಾತ್ರೆಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಶುಂಠಿ, ಬೆಳ್ಳುಳ್ಳಿ , ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ, ಕರಿ ಬೇವಿನ ಎಲೆ ಹಾಕಿ ಕಡಿಮೆ ಉರಿಯಲ್ಲಿ 3-4 ನಿಮಿಷ ಹುರಿಯಿರಿ.

* ಈಗ ಈರುಳ್ಳಿ ಹಾಕಿ ಅದು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಅರಿಶಿಣ, ಕರಿ ಮೆಣಸಿನ ಪುಡಿ, ಮಸಾಲೆ ಪುಡಿ ಹಾಕಿ ಮಿಕ್ಸ್ ಮಾಡಿ. ಈಗ ಮೀನನ್ನು ಹಾಕಿ, ನಂತರ ಉಪ್ಪು ಹಾಕಿ , ಮೀನಿನಲ್ಲಿರುವ ನೀರಿನಂಶ ಸಂಪೂರ್ಣ ಬತ್ತುವವರೆಗೆ ಹುರಿಯಿರಿ. ನಂತರ ಪಾತ್ರೆಯನ್ನು ಉರಿಯಿಂದ ಇಳಿಸಿ, ತಣ್ಣಗಾಗಲು ಇಡಿ.

* ಈಗ ಬೇಯಿಸಿದ ಆಲೂಗಡ್ಡೆಯನ್ನು ಒಂದು ಪಾತ್ರೆಗೆ ಹಾಕಿ ಹಿಸುಕಿ, ಅದಕ್ಕೆ ಫ್ರೈ ಮಾಡಿದ ಮೀನನ್ನು ಹಾಕಿ ಕಲೆಸಿ. ಕೈಯಿಂದ ಕಲೆಸಿದರೆ ಒಳ್ಳೆಯದು.

* ನಂತರ ಅವುಗಳಿಂದ ಮೊಟ್ಟೆಯಾಕಾರದ ಉಂಡೆ ಕಟ್ಟಿ.

* ಒಂದು ಪಾತ್ರೆಯಲ್ಲಿ ಮೊಟ್ಟೆಯನ್ನು ಹಾಕಿ ಅದಕ್ಕೆ ಚಿಟಕಿಯಷ್ಟು ಉಪ್ಪು ಹಾಕಿ ಚೆನ್ನಾಗಿ ಕದಡಿ ಇಡಿ.

* ಬಾಣಲೆಯಲ್ಲಿ ಅರ್ದದಷ್ಟು ಎಣ್ಣೆ ಹಾಕಿ ಕಾಯಿಸಿ.

*ಈಗ ಮೀನಿನ ಉಂಡೆಯನ್ನು ತಟ್ಟಿ ಅಥವಾ ಮೊಟ್ಟೆಯಾಕಾರದಲ್ಲಿಯೇ ಮೊಟ್ಟೆಗೆ ಅದ್ದಿ , ಬ್ರೆಡ್ ಚೂರ್ ನಲ್ಲಿ ಹೊರಳಾಡಿಸಿ, ಕಾದ ಎಣ್ಣೆಗೆ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಕರಿದರೆ ರುಚಿ-ರುಚಿಯಾದ ಮೀನಿನ ಕಟ್ಲೇಟ್ ರೆಡಿ.

English summary

Canned Fish Cutlets | Variety Of Fish Recipe | ಸ್ವಾದಿಷ್ಟಕರ ಮೀನಿನ ಕಟ್ಲೇಟ್ ರೆಸಿಪಿ | ಅನೇಕ ಬಗೆಯ ಮೀನಿನ ರೆಸಿಪಿ

This recipe involves the use of canned tuna fish in preparation of the cutlets. Canned tuna is not only rich in proteins but also have great taste.
X
Desktop Bottom Promotion