For Quick Alerts
ALLOW NOTIFICATIONS  
For Daily Alerts

ಮೊಟ್ಟೆ ಪ್ರಿಯರಿಗಾಗಿ ಸ್ಪೆಷಲ್ ಎಗ್ ರೆಸಿಪಿ

|

ಮೊಟ್ಟೆಯನ್ನು ಬಗೆ-ಬಗೆಯ ರುಚಿಯಲ್ಲಿ ತಯಾರಿಸಬಹುದು. ಮೊಟ್ಟೆ ಸಾರನ್ನೇ ನೂರಕ್ಕೂ ಅಧಿಕ ರುಚಿಯಲ್ಲಿ ತಯಾರಿಸಬಹುದು. ಇಲ್ಲಿ ನಾವು ಹೇಳಿರುವ ಮೊಟ್ಟೆ ಸಾರು ಸ್ವಲ್ಪ ಖಾರವಾಗಿದ್ದು, ಖಾರಪ್ರಿಯರಿಗೆ ಖಂಡಿತ ಇಷ್ಟವಾಗುವುದು.

ಈ ಸ್ಪೆಷಲ್ ರೆಸಿಪಿಯನ್ನು ಎಗ್ ಬಗಾರ ಎಂದು ಕರೆಯುತ್ತಾರೆ. ಬನ್ನಿ ಇದನ್ನು ಮಾಡುವ ವಿಧಾನ ತಿಳಿಯೋಣ:

ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ 4(ಬೇಯಿಸಿದ್ದು)
ರೋಸ್ಟ್ ಮಾಡಿದ ನೆಲಗಡಲೆ 2 ಚಮಚ
ತುರಿದ ಕೊಬ್ಬರಿ ಅರ್ಧ ಕಪ್
ಎಳ್ಳು 2 ಚಮಚ
ಜೀರಿಗೆ 1 ಚಮಚ
ಮೆಂತೆ ಅರ್ಧ ಚಮಚ
ಒಣ ಮೆಣಸು 2, ಹಸಿ ಮೆಣಸು 2
ಕೊತ್ತಂಬರಿ ಪುಡಿ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಗರಂ ಮಸಾಲ 1 ಚಮಚ
ಹುಣಸೆ ರಸ 2 ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ
ನೀರು 1 ಕಪ್

ತಯಾರಿಸುವ ವಿಧಾನ:
* ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಮೊಟ್ಟೆ ಹಾಕಿ 2 ನಿಮಿಷ ಫ್ರೈ ಮಾಡಿ. ನಂತರ ಅವುಗಳನ್ನು ಉರಿಯಿಂದ ತೆಗೆದು ಒಂದು ಪಾತ್ರೆಯಲ್ಲಿ ಹಾಕಿಡಿ.

* ಈಗ ನೆಲಗಡಲೆ, ಎಳ್ಳು, ತೆಂಗಿನ ತುರಿ ಇವುಗಳಿಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ.

* ಈಗ ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಜೀರಿಗೆ, ಮೆಂತೆ ಹಾಕಿ ಹುರಿದು ನಂತರ ಕರಿ ಬೇವಿನ ಎಲೆ, ಬೆಳ್ಳುಳ್ಳಿ, ಒಣ ಮೆಣಸು, ಹಸಿ ಮೆಣಸಿನಕಾಯಿಯನ್ನು ಹಾಕಿ.

* ಈಗ ಅರಿಶಿಣ ಪುಡಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ.

* ನೀರು ಹಾಕಿ ಅದರಲ್ಲಿ ಮೊಟ್ಟೆ ಮತ್ತು ಹುಣಸೆ ಹಣ್ಣಿನ ರಸ ಹಾಕಿ ಮಿಕ್ಸ್ ಮಾಡಿ, ಕೊನೆಗೆ ರುಬ್ಬಿದ ಮಸಾಲೆ ಹಾಕಿ.

* ನಂತರ ಸಾರನ್ನು ಕುದಿ ಬರಿಸಿ, ನಂತರ ಉರಿಯಿಂದ ಇಳಿಸಿದರೆ ಮೊಟ್ಟೆ ಸಾರು ರೆಡಿ.

English summary

Bagara Egg Masala: Spicy Egg Recipe

Egg is a versatile item. It can be cooked in a variety of ways. However egg curry is a favourite among most eggetarians. Egg curry in India is made in different ways depending on the region. But all of them taste equally delicious.
X
Desktop Bottom Promotion