For Quick Alerts
ALLOW NOTIFICATIONS  
For Daily Alerts

ಆಂಧ್ರ ಶೈಲಿಯಲ್ಲಿ ಬೊಂಬಾಟ್ ಚಿಕನ್ ಕರಿ ರೆಸಿಪಿ

By Super
|

ಆಂಧ್ರ ಶೈಲಿಯ ಸಸ್ಯಾಹಾರಿ ಅಡುಗೆ, ಅದರಲ್ಲೂ ಪಾಲಕ್ ಸೊಪ್ಪಿನ ದಾಲ್ (ಅಥವಾ ತೊವ್ವೆ) ಅತ್ಯಂತ ಸ್ವಾದಿಷ್ಟವಾಗಿದೆ. ಇದೇ ರೀತಿ ಆಂಧ್ರ ಶೈಲಿಯ ಮಾಂಸಾಹಾರದಲ್ಲಿ ಖಾರವಾದ ಕೋಳಿ ಸಾರು ಅತ್ಯಂತ ಜನಪ್ರಿಯವಾಗಿದೆ. ಈ ರುಚಿಯನ್ನು ಮನೆಯಲ್ಲಿಯೇ ಸವಿಯಲು ಸುಲಭವಾದ ವಿಧಾನವನ್ನು ಇಲ್ಲಿ ನೀಡಲಾಗಿದೆ. ಮ೦ಗಳೂರು ಶೈಲಿಯ ತುಪ್ಪದಲ್ಲಿ ಕರಿದ ಚಿಕನ್ ರೆಸಿಪಿ!

ತಯಾರಿಕಾ ಸಮಯ: ಮೂವತ್ತೈದು ನಿಮಿಷಗಳು
ಬೇಯಲು ಅಗತ್ಯವಿರುವ ಸಮಯ: ನಲವತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:
*ಒಂದು ಇಡಿಯ ತಾಜಾ ಕೋಳಿ (ಮೂಳೆ ಸಹಿತ, ಆದರೆ ಚರ್ಮ ರಹಿತವಾದದ್ದು)
*2 ಮಧ್ಯಮ ಗಾತ್ರದ ಈರುಳ್ಳಿ, ಚಿಕ್ಕದಾಗಿ ಹೆಚ್ಚಿದ್ದು
*2 ಮಧ್ಯಮ ಗಾತ್ರದ ಟೊಮೇಟೊ, ಚಿಕ್ಕದಾಗಿ ಕತ್ತರಿಸಿದ್ದು.

Andhra Spicy Chicken Curry Recipe

*¼ ಕಪ್ ಕೊತ್ತಂಬರಿ ಸೊಪ್ಪಿ, ಚಿಕ್ಕದಾಗಿ ಹೆಚ್ಚಿದ್ದು
*5 ಹಸಿರು ಮೆಣಸಿನ ಕಾಯಿ, ಉದ್ದಕ್ಕೆ ಸೀಳಿದ್ದು
* ಸಾಸಿವೆ- ಎರಡು ಟೀ ಚಮಚ
* ಗೋಡಂಬಿ - ಸ್ವಲ್ಪ
*3 ದೊಡ್ಡ ಚಮಚ ಹಸಿಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್
*3 ದೊಡ್ಡ ಚಮಚ ಕೆಂಪುಮೆಣಸಿನ ಪುಡಿ
* 2 ಲವಂಗ
*1 ಏಲಕ್ಕಿ
*3 ದೊಡ್ಡಚಮಚ ಮೊಸರು
*¼ ಚಿಕ್ಕ ಚಮಚ ಹಳದಿಪುಡಿ
*1 ಚಿಕ್ಕ ಚಮಚ ಗರಂ ಮಸಾಲಾ ಪುಡಿ
*5 ದೊಡ್ಡಚಮಚ ಅಡುಗೆ ಎಣ್ಣೆ
*1 ಕಪ್ ನೀರು
*ಉಪ್ಪು ರುಚಿಗನುಸಾರ ಸುಲಭವಾದ ಮತ್ತು ಗರಿಗರಿಯಾದ ಕೇರಳ ಚಿಕನ್ ಫ್ರೈ ರೆಸಿಪಿ

ಮಾಡುವ ವಿಧಾನ:
1)ಮೊದಲು ಕೋಳಿಯನ್ನು ಚೆನ್ನಾಗಿ ತೊಳೆದು ಕೊಬ್ಬಿನ ಅಂಶವನ್ನು ನಿವಾರಿಸಿ. ನೀರೆಲ್ಲಾ ಇಳಿದ ನಂತರ ನಿಮಗೆ ಸೂಕ್ತವೆನಿಸಿದ ಗಾತ್ರದಲ್ಲಿ ತುಂಡು ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಈ ತುಂಡುಗಳನ್ನು ಹಾಕಿ ಮೇಲಿನಿಂದ ಮೊಸರು, ಹಸಿಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್, ಅರಿಶಿನ, ಉಪ್ಪು, ಕೆಂಪು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಕಿ. ಎಲ್ಲಾ ತುಂಡುಗಳು ಈ ಮಿಶ್ರಣದಿಂದ ಆವೃತವಾಗಬೇಕು. ಈ ಪಾತ್ರೆಯನ್ನು ಸುಮಾರು ಒಂದು ಗಂಟೆ ಕಾಲ ಮುಚ್ಚಿಡಿ.
2)ಒಂದು ಬಾಣಲೆಯನ್ನು ಚಿಕ್ಕ ಉರಿಯ ಮೇಲಿರಿಸಿ ಸಾಸಿವೆಯನ್ನು ಕಂದುಬಣ್ಣಬರುವವರೆಗೆ ಹುರಿಯಿರಿ.
3) ಹುರಿದ ಸಾಸಿವೆಯನ್ನು ಮಿಕ್ಸಿಯಲ್ಲಿ ಒಣದಾಗಿಯೇ ಇರುವಂತೆ ಪುಡಿಮಾಡಿಕೊಳ್ಳಿ. ಈಗ ಗೋಡಂಬಿಯನ್ನು ಸೇರಿಸಿ ನುಣ್ಣನೆ ಪುಡಿಮಾಡಿ.
4) ಒಂದು ದೊಡ್ಡ ಬಾಣಲೆ ಅಥವಾ ದಪ್ಪತಳದ ಪಾತ್ರೆಯಲ್ಲಿ (ತಳ ದಪ್ಪಗ್ಗಿದ್ದಷ್ಟೂ ಅಡುಗೆ ಸುಟ್ಟುಹೋಗುವ ಸಂಭವ ಕಡಿಮೆಯಾಗುತ್ತದೆ) ಎಣ್ಣೆ ಬಿಸಿಮಾಡಿ ಲವಂಗ ಮತ್ತು ಏಲಕ್ಕೆ ಸೇರಿಸಿ.
5) ಈಗ ಈರುಳ್ಳಿ ಸೇರಿಸಿ ಮಧ್ಯಮ ಉರಿಯಲ್ಲಿ ಚಿನ್ನದ ಬಣ್ಣ ಬರುವಷ್ಟು ಹುರಿಯಿರಿ.
6) ಬಳಿಕ ಟೊಮೇಟೋ ಸೇರಿಸಿ ಅಲುಗಾಡಿಸುತ್ತಾ ಈರುಳ್ಳಿಯೊಡನೆ ಪೂರ್ಣವಾಗಿ ಬೇಯುವಷ್ಟು ಹುರಿಯಿರಿ.
7) ಈಗ ಹಸಿಮೆಣಸು, ಗೋಡಂಬಿ ಮತ್ತು ಸಾಸಿವೆ ಪುಡಿ ಸೇರಿಸಿ ಹುರಿಯುವುದನ್ನು ಎಣ್ಣೆ ಬೇರ್ಪಡುವವರೆಗೆ ಮುಂದುವರೆಸಿ.
8) ಈಗ ಮುಚ್ಚಿಟ್ಟಿದ್ದ ಪಾತ್ರೆಯಿಂದ ಕೋಳಿಯ ತುಂಡುಗಳನ್ನು ಸೇರಿಸಿ ಸುಮಾರು ಐದು ನಿಮಿಷಗಳ ವರೆಗೆ ಹುರಿಯಿರಿ. ನಡುನಡುವೆ ಸೌಟಿನಿಂದ ತಳಹಿಡಿಯದಂತೆ ಅಲುಗಾಡಿಸುತ್ತಿರಿ.
9) ಈಗ ಒಂದು ಕಪ್ ನೀರು ಹಾಕಿ ಚೆನ್ನಾಗಿ ಕಲಕಿ ಪಾತ್ರೆಯನ್ನು ಗಟ್ಟಿಯಾಗಿ ಮುಚ್ಚಿ ಸುಮಾರು ಹತ್ತು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿಯೇ ಬೇಯಲು ಬಿಡಿ.
10) ಕೋಳಿಯ ತುಂಡುಗಳು ಬೆಂದಿದೆ ಎಂದು ಪ್ರಮಾಣಿಸಿಕೊಂಡ ಬಳಿಕ ಗರಂ ಮಸಾಲಾ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ. ಪಾತ್ರೆಯ ಮುಚ್ಚಳ ಮುಚ್ಚಿದ್ದಂತೆ ಕೊಂಚ ಕಾಲ ಇಡಿ. ಈ ಸಾರನ್ನು ಅನ್ನ, ಚಪಾತಿ, ರೋಟಿ ಕುಲ್ಛಾ ಮೊದಲಾದವುಗಳ ಜೊತೆಗೆ ಸೇವಿಸಲು ರುಚಿಯಾಗಿರುತ್ತದೆ.

ವಿಶೇಷ ಸೂಚನೆ:
1) ಈ ಖಾದ್ಯದಲ್ಲಿ ಹಸಿ ಮತ್ತು ಒಣ ಮೆಣಸನ್ನು ಬಳಸಿರುವುದರಿಂದ ಊಟದ ಬಳಿಕ ಮೊಸರು ಅಥವಾ ಮಜ್ಜಿಗೆ ಕುಡಿಯುವುದು ಅತೀ ಅಗತ್ಯ. ಇಲ್ಲದಿದ್ದರೆ ಮರುದಿನದ ಬಹಿರ್ದೆಶೆಯ ಸಮಯದಲ್ಲಿ ಭಾರೀ ಉರಿ ಉಂಟಾಗುತ್ತದೆ.
2) ಒಂದು ವೇಳೆ ನಿಮಗೆ ವಾಯುಪ್ರಕೋಪದ ತೊಂದರೆ ಇದ್ದಲ್ಲಿ ಹುರಿಯುವ ಸಮಯದಲ್ಲಿ ಚಿಟಿಕೆ ಇಂಗು ಸೇರಿಸಿ.

English summary

Andhra Spicy Chicken Curry Recipe

Andhra Spicy Chicken Curry is a very popular recipe. Learn how to make/prepare Andhra Spicy Chicken Curry by following this easy
Story first published: Saturday, March 28, 2015, 12:29 [IST]
X
Desktop Bottom Promotion