For Quick Alerts
ALLOW NOTIFICATIONS  
For Daily Alerts

ಆಲೂ ಖೀಮಾ ರೆಸಿಪಿ, ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

By Super
|

ಸಾಮಾನ್ಯವಾಗಿ ಬೆಳಗ್ಗಿನ ಉಪಾಹಾರದಲ್ಲಿ ಪರೋಟ ಅಥವಾ ರೊಟ್ಟಿಯೊಂದಿಗೆ ಆಲು ಖೀಮಾ ಇದ್ದರೆ ಇಡಿಯ ದಿನದ ಚಟುವಟಿಕೆಯಲ್ಲಿ ಶಕ್ತಿಯ ಕೊರತೆ ಉಂಟಾಗದು. ಏಕೆಂದರೆ ಖೀಮಾದಲ್ಲಿ ಅಧಿಕ ಪ್ರಮಾಣದಲ್ಲಿರುವ ಪ್ರೋಟೀನುಗಳು ನಿಧಾನವಾಗಿ ಜೀರ್ಣವಾಗುತ್ತಾ ದಿನದ ಚಟುವಟಿಕೆಗಳಲ್ಲಿ ಸಹಕರಿಸುತ್ತದೆ. ಅಲ್ಲದೇ ಇದರಲ್ಲಿ ಆಲುಗಡ್ಡೆಯನ್ನು ಪ್ರಮುಖವಾಗಿ ಬಳಸಿರುವುದರಿಂದ ಉತ್ತಮ ಪ್ರಮಾಣದ ಪಿಷ್ಟವೂ ದೊರಕುತ್ತದೆ.

ಉಪಾಹಾರದ ಹೊರತಾಗಿ ಮಧ್ಯಾಹ್ನದ ಮತ್ತು ರಾತ್ರಿಯೂಟದಲ್ಲಿಯೂ ಒಂದು ಪಲ್ಯದ ರೂಪದಲ್ಲಿ ಬಳಸಬಹುದಾದುದರಿಂದ ಎಲ್ಲರ ಮೆಚ್ಚುಗೆಯ ಖಾದ್ಯವಾಗಿದೆ. ಇಂದು ಇದನ್ನು ತಯಾರಿಸುವ ಸುಲಭ ವಿಧಾನವನ್ನು ಇಲ್ಲಿ ನೀಡಲಾಗಿದೆ.

*ಪ್ರಮಾಣ: ನಾಲ್ವರಿಗಾಗಿ
*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಕಾ ಸಮಯ: ಮೂವತ್ತು ನಿಮಿಷಗಳು ಘಮಘಮಿಸುವ ಚಿಕನ್ ಕರಿ: ಬರೀ 20 ನಿಮಿಷ ಸಾಕು!

Aloo Keema Recipe

ಅಗತ್ಯವಿರುವ ಸಾಮಾಗ್ರಿಗಳು:
*ಈರುಳ್ಳಿ - 2
*ಖೀಮಾ 500 ಗ್ರಾಂ (ಕೋಳಿಮಾಂಸ/ಕುರಿಮಾಂಸ ಅಥವಾ ಬೀಫ್)
*ಆಲುಗಡ್ಡೆ - 300 ಗ್ರಾಮ್
*ಹಸಿಶುಂಠಿ ಪೇಸ್ಟ್ - 1 ಚಿಕ್ಕಚಮಚ
*ಬೆಳ್ಳುಳ್ಳಿ ಪೇಸ್ಟ್ - 1 ಚಿಕ್ಕಚಮಚ
*ಒಣಮೆಣಸಿನ ಪುಡಿ - 2 ಚಿಕ್ಕಚಮಚ
*ಕೊತ್ತೊಂಬರಿ ಪುಡಿ - 1 ಚಿಕ್ಕಚಮಚ
*ಅರಿಶಿನ ಪುಡಿ - ½ ಚಿಕ್ಕಚಮಚ
*ಮೊಸರು - 2 ಚಿಕ್ಕಚಮಚ
*ಟೊಮೇಟೊ - 1 ಕಪ್ (ಚಿಕ್ಕದಾಗಿ ತುಂಡುಮಾಡಿದ್ದು)
*ಗರಂ ಮಸಾಲಾ ಪುಡಿ - 1 ಚಿಕ್ಕಚಮಚ
*ಹಸಿ ಮೆಣಸು - 1
*ಕೊತ್ತಂಬರಿ ಸೊಪ್ಪು -ಅರ್ಧ ಕಟ್ಟು (ಚಿಕ್ಕದಾಗಿ ಹೆಚ್ಚಿದ್ದು)
*ಉಪ್ಪು - ರುಚಿಗನುಸಾರ
*ಅಡುಗೆ ಎಣ್ಣೆ - ಎರಡರಿಂದ ಮೂರು ದೊಡ್ಡ ಚಮಚ

ವಿಧಾನ:
1) ಒಂದು ದಪ್ಪತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ ಈರುಳ್ಳಿ ಹಾಕಿ ಕೊಂಚ ಕಂದು ಬಣ್ಣ ಬರುವವರೆಗೆ ಹುರಿಯಿರಿ
2) ಇದಕ್ಕೆ ಖೀಮಾ ಹಾಕಿ ಎರಡು ನಿಮಿಷ ಹುರಿಯಿರಿ.
3) ಇದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿಯ ಪೇಸ್ಟ್ ಹಾಕಿ ಮಧ್ಯಮ ಉರಿಯಲ್ಲಿ ಐದು ನಿಮಿಷ ತಿರುವಿ.
4) ಇದಕ್ಕೆ ಉಳಿದ ಎಲ್ಲಾ ಸಾಮಾಗ್ರಿ ಮತ್ತು ಉಪ್ಪು ಹಾಕಿ ತಿರುವಿ ಚೆನ್ನಾಗಿ ಮಿಶ್ರಣ ಮಾಡಿ
5) ಒಂದು ಕಪ್ ನೀರು ಹಾಕಿ ಸುಮಾರು ಐದು ನಿಮಿಷ ಮದ್ಯಮ ಉರಿಯಲ್ಲಿ ಬೇಯಿಸಿ
6) ನೀರು ಪೂರ್ಣವಾಗಿ ಇಂಗುವವರೆಗೆ ತಿರುವಿದ ಬಳಿಕ ಟೊಮೇಟೊ ಮತ್ತು ಮೊಸರು ಹಾಕಿ ಹತ್ತು ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ.
7) ಈಗ ಆಲುಗಡ್ಡೆ ಹಾಕಿ ತಿರುವಿ ಒಂದೂವರೆ ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ಹದಿನೈದು ನಿಮಿಷ ಅಥವಾ ಆಲುಗಡ್ಡೆ ಬೇಯುವವರೆಗೆ ಬೇಯಿಸಿ.
8) ಈಗ ಗರಂ ಮಸಾಲಾ ಪುಡಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ತಿರುವಿ ಒಲೆ ನಂದಿಸಿ.
9) ಬಿಸಿ ಬಿಸಿ ಇದ್ದಂತೆಯೇ ರೊಟ್ಟಿ, ಪರೋಟ, ನಾನ್ ಅಥವಾ ಅನ್ನದೊಂದಿಗೆ ಬಡಿಸಿ.

ಸಲಹೆ
1) ಇದರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪೋಷಕಾಂಶಗಳಿರುವುದರಿಂದ ತೂಕ ಇಳಿಸುವವರಿಗೆ ಇದು ಸೂಕ್ತವಲ್ಲ.
2) ಬಡಿಸುವ ವೇಳೆ ಇದರ ಮೇಲೆ ಒಂದು ಚಮಚ ಕ್ರೀಂ ಹಾಕಿದರೆ ಇನ್ನಷ್ಟು ರುಚಿಯಾಗುತ್ತದೆ.

English summary

Aloo Keema Recipe

Today, we are here to present a delicious recipe of aloo keema. This keema recipe can be made using any of the meats and a good amount of potatoes in it. This aloo keema recipe is very easy to make and is best enjoyed as a side dish or as sabzi along with some roti. Check our delicious recipe of aloo keema and enjoy this meal for your lunch.
Story first published: Saturday, July 25, 2015, 10:09 [IST]
X
Desktop Bottom Promotion