For Quick Alerts
ALLOW NOTIFICATIONS  
For Daily Alerts

ಬಾಯಿಯಲ್ಲಿ ನೀರೂರಿಸುವ ಬಂಗಾಳಿ ಖಾದ್ಯಗಳು

|

ಸಂಸ್ಕೃತಿ ಹಾಗೂ ಆಹಾರಕ್ಕೆ ಬಂಗಾಳ ಪ್ರಸಿದ್ಧವಾಗಿದೆ. ಬಂಗಾಳಿ ನಳಪಾಕವು ವಿವಿಧ ಮೀನು ಹಾಗೂ ಸಿಹಿ ಪಾಕ ವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಒಂದು ಮಾತಿದೆ ನಿಮಗೆ ಮೀನನ್ನು ಬೇಯಿಸುವುದು ತಿಳಿಯಬೇಕೆಂದಿದ್ದರೆ ಅದನ್ನು ಬಂಗಾಳಿಯಿಂದ ಕಲಿತಕೊಳ್ಳಿ ಎಂದು. ಆದ್ದರಿಂದ ನಿಮಗಾಗಿ ನಾವಿಂದು ತರುತ್ತಿದ್ದೇವೆ ಬಂಗಾಳಿ ಪಾಕ ವೈವಿಧ್ಯ. 20 ನೀರೂರಿಸುವ ಬಂಗಾಳಿ ಖಾದ್ಯಗಳು ಇಲ್ಲಿವೆ ನೋಟ ಹಾಯಿಸಿ.

1.ಮಿಶ್ರ ತರಕಾರಿ ಸಾಂಬಾರ್

1.ಮಿಶ್ರ ತರಕಾರಿ ಸಾಂಬಾರ್

ಎಲ್ಲಾ ತರಕಾರಿಗಳನ್ನು ಮಿಶ್ರ ಮಾಡಿಕೊಂಡು ಈ ಸಾಂಬಾರನ್ನು ತಯಾರಿಸಲಾಗುತ್ತದೆ. ಒಮ್ಮೆ ತಿಂದರೆ ಇದರ ರುಚಿಯನ್ನು ನಿಮ್ಮಿಂದ ಮರೆಯಲಾಗದು.

2.ಪುಶ್ಪಿತಾ ಬಾಳೆ ಕರ್ರಿ

2.ಪುಶ್ಪಿತಾ ಬಾಳೆ ಕರ್ರಿ

ಇದೊಂದು ಸ್ವಾದಿಷ್ಟ ನೀರೂರಿಸುವ ಕರ್ರಿಯಾಗಿದ್ದು, ಹಿತಕರವಾಗಿದೆ.

3.ಶುಕ್ತೊ

3.ಶುಕ್ತೊ

ತರಕಾರಿಗಳ ಸಂಮಿಶ್ರ ಕರ್ರಿ ಇದಾಗಿದೆ. ಅಂದರೆ ಆಲೂಗಡ್ಡೆ, ಹಾಗಲಕಾಯಿ, ಬಾಳೆಕಾಯಿ ಈ ಕರ್ರಿಯಲ್ಲಿದೆ. ಇದು ಪ್ರೊಟೀನ್ ಭರಿತವಾಗಿದ್ದು ಆರೋಗ್ಯಕ್ಕೆ ಹಿತಕರವಾಗಿದೆ.

4.ಪೋಸ್ಟೊ ಚಿಕನ್

4.ಪೋಸ್ಟೊ ಚಿಕನ್

ಪೋಪ್ಪಿ ಬೀಜಗಳಿಂದ ತಯಾರಿಸಲಾದ ಚಿಕನ್ ಪದಾರ್ಥ ಪೋಸ್ಟೊ ಚಿಕನ್ ಆಗಿದೆ.

5.ಕುಮ್ರೋರ್ ಚೆಂಚಿಕಿ

5.ಕುಮ್ರೋರ್ ಚೆಂಚಿಕಿ

ಭಾರತೀಯ ಸಾಂಬಾರು ಪದಾರ್ಥಗಳಿಂದ ತಯಾರಿಸಲಾದ ಖಾದ್ಯ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ಬಳಸುವ 5 ಬಗೆಯ ಸಾಂಬಾರು ಪದಾರ್ಥ ರುಚಿಕರ ಹಾಗೂ ಸ್ವಾದಿಷ್ಟವಾದುದು.

6.ಫಿಶ್ ಡು ಪ್ಯಾಝಾ

6.ಫಿಶ್ ಡು ಪ್ಯಾಝಾ

ದೈನಂದಿನ ಮಿನು ಪದಾರ್ಥಕ್ಕಿಂತ ಈ ಮೀನು ಕರ್ರಿ ಹೆಚ್ಚು ಈರುಳ್ಳಿ ಭರಿತವಾಗಿದೆ.

7.ಬೆಂಗಾಳಿ ಏಡಿ ಕರ್ರಿ

7.ಬೆಂಗಾಳಿ ಏಡಿ ಕರ್ರಿ

ಬೆಂಗಾಳಿ ಏಡಿ ಕರ್ರಿ ಸ್ವಾದಿಷ್ಟ ಹಾಗೂ ರಸಭರಿತವಾಗಿದೆ. ಇದಕ್ಕೆ ಹೆಚ್ಚಿನ ಸಾಮಾಗ್ರಿಗಳ ಅವಶ್ಯಕತೆ ಇರುವುದಿಲ್ಲ ಸುಲಭವಾಗಿ ನಿಮಗಿದನ್ನು ತಯಾರಿಸಬಹುದಾಗಿದೆ.

8.ಭೂನಿ ಕಿಚಡಿ

8.ಭೂನಿ ಕಿಚಡಿ

ಇದಕ್ಕೆ ಬಳಸಲಾಗುವ ಒಂದು ಸಾಂಬಾರು ಪದಾರ್ಥ ಕಿಚಡಿಯ ರುಚಿಯನ್ನು ಹೆಚ್ಚಿಸುತ್ತದೆ.

9.ಸಿಹಿ ಟೊಮೇಟೊ ಚಟ್ನಿ

9.ಸಿಹಿ ಟೊಮೇಟೊ ಚಟ್ನಿ

ಇದಕ್ಕೆ ಬಳಸಲಾಗುವ ಪ್ರಮುಖ ತರಕಾರಿ ಟೊಮೇಟೊ ಆಗಿದೆ. ವಿವಿಧ ಸಾಮಾಗ್ರಿಗಳಿಂದ ಟೊಮೇಟೊ ಚಟ್ನಿಯನ್ನು ತಯಾರಿಸಲಾಗುತ್ತದೆ.

10.ಮೀನು ಫ್ರೈ

10.ಮೀನು ಫ್ರೈ

ರಸ್ತೆಬದಿಯಿಂದ ಹಿಡಿದು ಪಂಚತಾರಾ ಹೋಟೆಲ್‌ಗಳಲ್ಲಿ ಸಹ ಮೀನು ಫ್ರೈಗೆ ಬೇಡಿಕೆ ಹೆಚ್ಚು.

11.ಮುರಿ ಗೋಂಟೋ

11.ಮುರಿ ಗೋಂಟೋ

ಹುರಿದ ಮೀನಿನ ತಲೆಯಿಂದ ಈ ಖಾದ್ಯವನ್ನು ತಯಾರಿಸಲಾಗುತ್ತದೆ. ಬಂಗಾಳಿಯಲ್ಲಿ 'ಮುರಿ' ಅಂದರೆ ತಲೆ ಮತ್ತು 'ಗೋಂಟೋ' ಅಂದರೆ ಕರ್ರಿ ಆಗಿದೆ.

12.ಕೋಶಾ ಮಂಗ್ಶೋ

12.ಕೋಶಾ ಮಂಗ್ಶೋ

ನಿಧಾನವಾಗಿ ಬೇಯಿಸಿದ ಚಿಕನ್ ಅಂದರೆ ಕೋಶಾ ಮಂಗ್ಶೋ. ಈ ರೆಸಿಪಿಯನ್ನು ತಯಾರಿಸಲು ನಿಮಗೆ ಸಾಕಷ್ಟು ತಾಳ್ಮೆ ಅಗತ್ಯ.

13.ಬೆಂಗಾಳಿ ಮಿಶ್ಟಿ ಪುಲಾವ್

13.ಬೆಂಗಾಳಿ ಮಿಶ್ಟಿ ಪುಲಾವ್

ಬೆಂಗಾಳಿ ಮಿಶ್ಟಿ ಪುಲಾವ್ ಸ್ವಲ್ಪ ಸಿಹಿಯಾಗಿದ್ದು, ಸುಗಂಧಭರಿತವಾಗಿದೆ. ವಿಶೇಷ ಸಂದರ್ಭಗಳಲ್ಲಿ ಈ ಖಾದ್ಯವನ್ನು ತಯಾರಿಸಲಾಗುತ್ತದೆ.

14.ಗುಗ್ನಿ

14.ಗುಗ್ನಿ

ಕಲ್ಕತ್ತಾ ಮತ್ತು ಬಂಗಾಳದ ಇತರ ಪ್ರದೇಶಗಳಲ್ಲಿ ಸಿಗುವ ಜನಪ್ರಿಯ ಆಹಾರ ಗುಗ್ನಿ ಆಗಿದೆ.

15.ಶೋರ್ಶೆ ಐಲಿಶ್

15.ಶೋರ್ಶೆ ಐಲಿಶ್

ಶೋರ್ಶೆ ಐಲಿಶ್ ಅಥವಾ ಸಾಸಿವೆ ಭರಿತ ಮೀನು ಬಂಗಾಳಿ ಖಾದ್ಯದ ಟ್ರೇಡ್ ಮಾರ್ಕ್ ಆಗಿದೆ.

16.ಕೋಲ್ಕತ್ತಾ ಬಿರಿಯಾನಿ

16.ಕೋಲ್ಕತ್ತಾ ಬಿರಿಯಾನಿ

ಕೋಲ್ಕತ್ತಾ ಬಿರಿಯಾನಿಯಲ್ಲಿರುವ ಆಲೂಗಡ್ಡೆಯನ್ನು ನಿಮಗೆ ಮರೆಯಲು ಸಾಧ್ಯವೇ? ಹೌದು ಈ ಬಿರಿಯಾನಿ ಖಾದ್ಯದ ವಿಶೇಷತೆಯೇ ಆಲೂಗಡ್ಡೆ ಆಗಿದೆ.

17.ಹಿಲ್ಸಾ ಮೀನು ಬದನೆಯೊಂದಿಗೆ

17.ಹಿಲ್ಸಾ ಮೀನು ಬದನೆಯೊಂದಿಗೆ

ಬಂಗಾಳಿ ಖಾದ್ಯದಲ್ಲಿ ಹೆಚ್ಚು ರುಚಿಕರ ಹಿಲ್ಸಾ ಮೀನು ಕರ್ರಿಯಾಗಿದೆ. ಬದನೆಯನ್ನು ಮಿಶ್ರ ಮಾಡಿಕೊಂಡು ಸಿದ್ಧಪಡಿಸುವ ಈ ಕರ್ರಿ ಬಾಯಲ್ಲಿ ನೀರೂರಿಸುವಂತೆ ಮಾಡುತ್ತದೆ.

18. ಡಾಬ್ ಚಿಂಗ್ರಿ

18. ಡಾಬ್ ಚಿಂಗ್ರಿ

ಡಾಬ್ ಚಿಂಗ್ರಿಯನ್ನು ತೆಂಗಿನ ಹಾಲಿನೊಂದಿಗೆ ತಯಾರಿಸಲಾಗುತ್ತದೆ. ಇದೊಂದು ದೇಸೀ ಅಡುಗೆಯಾಗಿದೆ.

19.ಪಟಿಶಪ್ತಾ

19.ಪಟಿಶಪ್ತಾ

ಅಕ್ಕಿ ಹುಡಿಯ ರೋಲ್‌ನ ಒಳಗಡೆ ತೆಂಗಿನ ತುರಿಯನ್ನು ಇರಿಸಿ ಈ ಖಾದ್ಯವನ್ನು ತಯಾರಿಸಲಾಗುತ್ತದೆ.

20.ಭಾಪಾ ಪಿತಾ

20.ಭಾಪಾ ಪಿತಾ

ಸ್ಟೀಮ್ ಮಾಡಿದ ಸಿಹಿತಿಂಡಿ ಇದಾಗಿದ್ದು ಸ್ವಾದಿಷ್ಟವಾಗಿದೆ.

Read more about: fish curry ಮೀನು ಸಾರು
English summary

Bengal is famous for its Culture and food. Bengali cuisine is mostly known for its variety of fish and sweet recipes
X
Desktop Bottom Promotion