For Quick Alerts
ALLOW NOTIFICATIONS  
For Daily Alerts

ಯಮ್ಮೀ ಬಾಯಿಯ ರುಚಿ ತಣಿಸುವ 12 ಸ್ಪೆಶಲ್ ಪರಾಟ!

|

ಪರೋಟಾ ಒಂದು ಜನಪ್ರಿಯ ಮತ್ತು ಹೆಚ್ಚು ಇಷ್ಟಪಡುವ ಬೆಳಗ್ಗಿನ ಉಪಹಾರವಾಗಿದೆ. ಉತ್ತರ ಭಾರತದ ಕ್ರಿಸ್ಪಿ ಬ್ರೆಡ್ ವಿಧ ವಿಧದ ಫಿಲ್ಲಿಂಗ್‌ನೊಂದಿಗೆ ಸ್ವಾದಿಷ್ಟಪೂರ್ಣವಾಗಿ ಮೂಡಿ ಬರುತ್ತದೆ. ಸ್ಟಫ್‌ಡ್ ಪರೋಟಾವನ್ನು ತರಕಾರಿ, ಚೀಸ್, ಬೆಣ್ಣೆ ಮೊದಲಾದ ವಸ್ತುಗಳಿಂದ ತಯಾರಿಸಲಾಗುತ್ತದೆ.

ಸ್ಟಫ್‌ಡ್ ಪರೋಟಾಗಳ ಪಟ್ಟಿಯಲ್ಲಿ ಮೊದಲು ನಮ್ಮ ಕಣ್ಣಿಗೆ ಬೀಳುವುದೇ, ಆಲೂ ಪರೋಟಾ, ಗೋಭಿ ಪರೋಟಾ, ಚೀಸ್ ಪರೋಟಾ, ಈರುಳ್ಳಿ ಪರೋಟಾ ಇತ್ಯಾದಿ. ಈ ಪರೋಟಾಗಳನ್ನು ತಿಂದ ನಂತರ ನಮಗೆ ಹೆಚ್ಚು ಹಸಿವಾಗುವುದಿಲ್ಲ. ಇವುಗಳು ಪೋಷಕಾಂಶವನ್ನು ಒದಗಿಸುವುದರೊಂದಿಗೆ ದೇಹಕ್ಕೆ ಆರೋಗ್ಯವನ್ನೂ ನೀಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕೋಸು ಪರಾಟ ಮಾಡೋದು ಹೀಗೆ

ಸಾಂಪ್ರದಾಯಿಕ ಸ್ಟಫ್ಫಿಂಗ್‌ಗಳನ್ನು ಹೊರತುಪಡಿಸಿ ನೀವು ಆಲೋಚಿಸಿರದ ಕೆಲವೊಂದು ಸ್ಟಫಿಂಗ್‌ಗಳು ನಿಮ್ಮ ಪರೋಟಾದ ರುಚಿಯನ್ನು ಹೆಚ್ಚಿಸುತ್ತವೆ. ಈ ಸ್ಟಫಿಂಗ್‌ಗಳು ಭಾರತೀಯ ಸಿಜ್ವನ್‌ಗಳಲ್ಲಿ ಹೆಚ್ಚು ಕಾಣಸಿಗುವಂಥದ್ದು ಮತ್ತು ಸರಳವಾಗಿ ಮನೆಯಲ್ಲೂ ಮಾಡಿ ಇವುಗಳನ್ನು ಸೇವಿಸಬಹುದು.

ಆದ್ದರಿಂದ ಈ ವೀಕೆಂಡನ್ನು ಇನ್ನಷ್ಟು ಸ್ವಾದಿಷ್ಟಗೊಳಿಸಲು ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ವಿಧ ವಿಧದ ಸ್ಟಪ್ಪಿಂಗ್ ಪರೋಟಾ ರೆಸಿಪಿಯನ್ನು ನಿಮ್ಮ ಮುಂದಿಡುತ್ತಿದೆ. ಖಂಡಿತ ಟ್ರೈ ಮಾಡಿ ಅನುಭವವನ್ನು ಮನೆಮಂದಿಯೊಂದಿಗೆ ಹಂಚಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆಲೂ ಪ್ಯಾಜ್ ಪರಾಟ

ಹಸಿರು ಬಟಾಣಿ ಪರೋಟ:

ಹಸಿರು ಬಟಾಣಿ ಪರೋಟ:

ಇದೊಂದು ಸರಳವಾಗಿ ತಯಾರಿಸಬಹುದಾದ ಪರೋಟವಾಗಿದ್ದು ಹೊಟ್ಟೆಯನ್ನು ತುಂಬಿಸಿ ಹಸಿವುಂಟಾಗದಂತೆ ಮಾಡುತ್ತದೆ. ತಾಜಾ ಅಥವಾ ನೆನೆಸಿದ ಬಟಾಣಿಗಳನ್ನು ಪರಿಮಳಯುಕ್ತ ಮಸಾಲೆಗಳು, ಮೆಣಸು ಹಾಗೂ ಶುಂಠಿಯೊಂದಿಗೆ ಅರೆದು ಚಪಾತಿಯ ಒಳಗೆ ಇರಿಸಲಾಗುತ್ತದೆ.

ಕ್ಯಾಪ್ಸಿಕಂ ಮತ್ತು ಚೀಸ್ ಪರೋಟಾ:

ಕ್ಯಾಪ್ಸಿಕಂ ಮತ್ತು ಚೀಸ್ ಪರೋಟಾ:

ಅಗತ್ಯವಾಗಿರುವ ಪ್ರೊಟೀನ್ ನ್ಯೂಟ್ರಿನ್‌ಗಳನ್ನು ಒದಗಿಸುವ ಈ ಕ್ಯಾಪ್ಸಿಕಂ ಮತ್ತು ಚೀಸ್ ಪರೋಟಾ ಆರೋಗ್ಯಕ್ಕೆ ಉತ್ತಮವಾದುದು.

ಆಲೂಗಡ್ಡೆ ಈರುಳ್ಳಿ ಪರೋಟಾ:

ಆಲೂಗಡ್ಡೆ ಈರುಳ್ಳಿ ಪರೋಟಾ:

ಈರುಳ್ಳಿ ಬಳಸದೇ ಆಲೂಗಡ್ಡೆಯಿಂದ ಮಾತ್ರ ಪರೋಟಾ ತಯಾರಿಸಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ನಾವಿಂದು ಸ್ವಲ್ಪ ವಿಭಿನ್ನವಾಗಿರುವ ರೆಸಿಪಿಯನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ. ಈರುಳ್ಳಿ ಮತ್ತು ಆಲೂಗಡ್ಡೆ ಬೆರೆತ ಈ ಪರೋಟಾ ತಯಾರಿಸಲು ಸರಳವಾಗಿದೆ.

ಸ್ಟಫ್ಡ್‌ಡ್ ಕ್ಯಾಬೇಜ್ ಪರೋಟಾ:

ಸ್ಟಫ್ಡ್‌ಡ್ ಕ್ಯಾಬೇಜ್ ಪರೋಟಾ:

ಈ ಸೀಸನ್‌ ಬೆಳೆಯಾದ ಕ್ಯಾಬೇಜ್‌ನ ಹೆಚ್ಚಿನ ಉಪಯೋಗವನ್ನು ಮಾಡಿ. ಈ ರುಚಿಯಾದ ಪರೋಟಾ ರೆಸಿಪಿ ನಿಮ್ಮ ನಾಲಗೆಯ ರುಚಿಯನ್ನು ತಣಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಸಾಟು ಪರೋಟಾ:

ಸಾಟು ಪರೋಟಾ:

ಸಾಟು ಪರೋಟಾ ಅನನ್ಯ ಮತ್ತು ನಾಲಗೆ ಸವರಿಕೊಳ್ಳುವ ಡಿಶ್ ಆಗಿದೆ. ಸಾಟು ಹಿಟ್ಟನ್ನು ಬಳಸಿಕೊಂಡು ಈ ಪರೋಟಾವನ್ನು ತಯಾರಿಸಾಗುತ್ತದೆ ಎಂಬುದು ಇದರಲ್ಲಿರುವ ವಿಶೇಷತೆಯಾಗಿದೆ.

ಕ್ಯಾರೆಟ್ ಪರೋಟಾ:

ಕ್ಯಾರೆಟ್ ಪರೋಟಾ:

ಹೆಸರೇ ಹೇಳುವಂತೆ, ಈ ಪರೋಟಾದ ಸ್ಟಫಿಂಗ್ ಅನ್ನು ಕ್ಯಾರೇಟ್ ಬಳಸಿ ತಯಾರಿಸಲಾಗುತ್ತದೆ. ಇದನ್ನು ತಯಾರಿಸುವುದು ತುಂಬಾ ಸುಲಭ ಮತ್ತು ಫಿಲ್ಲಿಂಗ್ ಕೂಡ ಸರಳವಾಗಿದೆ. ಮಧ್ಯಾಹ್ನದೂಟಕ್ಕೂ ಇದು ಹೇಳಿ ಮಾಡಿಸಿದ ಪರೋಟವಾಗಿದೆ.

ಮುಘಲಯ್ ಪರೋಟಾ:

ಮುಘಲಯ್ ಪರೋಟಾ:

ಬೆಂಗಾಳಿ ಸಿಜ್ವನ್‌ನಲ್ಲಿ ನೀವು ಎಂದಿಗೂ ಸವಿ ನೋಡಬಹುದಾದ ರುಚಿಯಾದ ಪರೋಟಾ ಮುಘಲಯ್ ಪರೋಟವಾಗಿದೆ. ಮೊಟ್ಟೆ ಹಾಗೂ ಆಲೂಗಡ್ಡೆಯನ್ನು ಬಳಸಿಕೊಂಡು ಈ ಕ್ರಿಸ್ಪಿ ಪರೋಟಾವನ್ನು ತಯಾರಿಸಲಾಗುತ್ತದೆ.

ಸ್ಟಫ್‌ಡ್ ಚಿಕನ್ ಪರೋಟಾ:

ಸ್ಟಫ್‌ಡ್ ಚಿಕನ್ ಪರೋಟಾ:

ವೀಕೆಂಡ್‌ನಲ್ಲಿ ನೀವು ಸುಲಭವಾಗಿ ತಯಾರಿಸಬಹುದಾದ ಸ್ಟ‌ಫ್ಡ್ ಚಿಕನ್ ಪರೋಟಾ ಆರೋಗ್ಯಕರ ಮತ್ತು ರುಚಿಕರ. ಚಿಕನ್‌ ಅನ್ನು ಮೊಸರಿನಲ್ಲಿ ನೆನೆಸಿ ಸ್ಪೈಸಿ ಮಸಾಲೆಗಳನ್ನು ಬೆರೆಸಿ ಈ ರುಚಿಕರ ಪರೋಟಾವನ್ನು ತಯಾರಿಸಲಾಗುತ್ತದೆ.

ಹೆಸರುಬೇಳೆ ಪರೋಟಾ:

ಹೆಸರುಬೇಳೆ ಪರೋಟಾ:

ಹೆಸರುಬೇಳೆ ಪರೋಟಾ ರುಚಿಕರ ಮತ್ತು ಆರೋಗ್ಯಪೂರ್ಣವಾಗಿದೆ. ಇದನ್ನು ಹೆಸರು ಬೇಳೆ ಮತ್ತು ಬೇಯಿಸಿದ ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ.

ಸೋಯಾ ಪರೋಟಾ:

ಸೋಯಾ ಪರೋಟಾ:

ಸೋಯಾಬೀನ್‌ನಲ್ಲಿ ಹೆಚ್ಚುವರಿ ಆರೋಗ್ಯ ಪ್ರಯೋಜನಗಳಿದ್ದು ಇದು ಪ್ರೊಟೀನ್ ಮತ್ತು ಅಗತ್ಯವಾಗಿರುವ ಅಮಿನೋ ಏಸಿಡ್ ಅನ್ನು ಒಳಗೊಂಡಿದೆ. ನಿಮ್ಮ ತ್ವಚೆಯ ಮೇಲೂ ಇದು ಜಾದುವನ್ನುಂಟು ಮಾಡುತ್ತದೆ.

ಮೂಲಂಗಿ ಪರೋಟಾ:

ಮೂಲಂಗಿ ಪರೋಟಾ:

ಮೂಲಂಗಿ ಪರೋಟಾ ಭಾರತೀಯ ಉಪಹಾರಕ್ಕೆ ಹೇಳಿ ಮಾಡಿಸಿದ ಆಹಾರವಾಗಿದೆ. ಇದು ಪಂಜಾಬ್‌ನಲ್ಲಿ ಅತಿ ಜನಪ್ರಿಯವಾಗಿರುವ ಡಿಶ್ ಆಗಿದ್ದು ಮೂಲಂಗಿಯನ್ನು ಸ್ಟಫಿಂಗ್‌ಗಾಗಿ ಇದರಲ್ಲಿ ಬಳಸಲಾಗುತ್ತದೆ.

ಪಾಲಕ್ ಪನ್ನೀರ್ ಪರೋಟಾ:

ಪಾಲಕ್ ಪನ್ನೀರ್ ಪರೋಟಾ:

ಪಾಲಕ್ ಪನ್ನೀರ್ ಪರೋಟಾ ನಿಮ್ಮ ವೀಕೆಂಡ್ ಅಡುಗೆಯನ್ನು ಇನ್ನಷ್ಟು ಆರೋಗ್ಯಪೂರ್ಣಗೊಳಿಸುತ್ತದೆ. ಪಾಲಕ್ ಪನ್ನೀರ್ ಪರೋಟಾವನ್ನು ಮೊಸರಿನ ಸೈಡ್‌ಡಿಶ್‌ನೊಂದಿಗೆ ಸವಿಯಬೇಕು. ಇದನ್ನು ಸರಳವಾಗಿ ತಯಾರಿಸಬಹುದಾಗಿದೆ.


Read more about: cookery ಅಡುಗೆ
English summary

12 special Stuffed Paratha Recipes

Stuffed parathas are a favourite among most of us. The crispy North Indian bread stuffed with various kinds of stuffings make the stuffed parathas the most preferred food among many of us.
Story first published: Monday, February 24, 2014, 10:54 [IST]
X
Desktop Bottom Promotion